
ಕರ್ನಾಟಕದ ಸರ್ಕಾರ ಮುಂದಿನ ಬಜೆಟ್ಟಿನಲ್ಲಿ ಚಿನ್ನರಬಂಬದ ಸೇವಾಕಾರಿಗಳಿಗೆ 25ಕ್ಕೂ ಲಕ್ಷಕ್ಕೂ ಮಿಕ್ಕಿ ಶಾಶ್ವತ ಅನುದಾನ ನೀಡಲು ಪ್ರಯತ್ನಿಸುತ್ತೇವೆ: ಕರ್ನಾಟಕ ಸರಕಾರದ ಗೃಹಮಂತ್ರಿ ಜಿ. ಪರಮೇಶ್ವರ್
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ, ಜ. ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡಿಗರು ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸುವಲ್ಲಿ ಅಪಾರವಾದ ಸೇವೆಯನ್ನು ಮಾಡುತ್ತಿರುವ ಚಿನ್ನರ ಬಿಂಬ ಸಂಸ್ಥೆಯ ಕಾರ್ಯಕ್ರಮವನ್ನು ನೋಡಿದಾಗ ನಾನು ಬೆಂಗಳೂರಿನಲ್ಲಿ ಇದ್ದೇನೆ ಎಂದು ಬಾಸವಾಗುತ್ತಿದೆ.ಮಕ್ಕಳ ಪ್ರತಿಭೆ ಹೊರಹಾಕುವ ಕೆಲಸವನ್ನು ತಾವು ಯಶಸ್ವಿಯಾಗಿ ಮಾಡಿದಿರಿ, ಅದಕ್ಕಾಗಿ ಅಭಿನಂದನೆಗಳು. ಕರ್ನಾಟಕ ಬರಿ ನೆಲ ಅಲ್ಲ, ಅದು ಒಂದು ಭಾವನೆ,ಅದು ಒಂದು ಪಲ್ಲವಿ ಎಂದು ನಾನು ಭಾವಿಸುತ್ತೇನೆ. ನೀವು ರಾಜ್ಯದಿಂದ ಹೊರಗಡೆಯಿದ್ದು, ಸಂಸ್ಕ್ರತಿ, ಭಾಷೆಯನ್ನು ರಕ್ಷಣೆ ಮಾಡಿ ಮುಂದಿನ ಪೀಳಿಗೆಗೆ ಅದನ್ನು ಮುಂದುವರಿಸುವ ಕೆಲಸ ಮಾಡಿದ್ದು ,ಅದಕ್ಕೆ ಎಷ್ಟೊಂದು ಶ್ಲಾಘನೆ ಮಾಡಿದರೂ ಸಾಲದು ಮುಂದಿನ ಬಜೆಟ್ಟಿನಲ್ಲಿ ಚಿನ್ನರ ಬಿಂಬದ ಸೇವಾ ಕಾರ್ಯಗಳಿಗೆ 25 ಲಕ್ಷಕ್ಕೂ ಮಿಕ್ಕಿ ಅನುದಾನವನ್ನು ಶಾಶ್ವತವಾಗಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದು ಕರ್ನಾಟಕ ಸರಕಾರದ ಗೃಹಮಂತ್ರಿ ಡಾ ಜಿ. ಪರಮೇಶ್ವರ್ ತಿಳಿಸಿದರು ಅವರು ಜ 7 ರ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಂಗಣದಲ್ಲಿ ಚಿಣ್ಣರಬಿಂಬದ ಇಪ್ಪತ್ತೊಂದನೆಯ ವರ್ಷದ ಮಕ್ಕಳ ಉತ್ಸವದ ಸಮಾರೋಪ ಸಮಾರಂಭವು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.




ಈ ಕಾರ್ಯಕ್ರಮದ ಮೂಲಕ ಒಂದು ದಿನ ಕನ್ನಡಿಗರು ಒಟ್ಟು ಸೇರುತಿರಲ್ಲ ಅದು ಬಹಳ ಮುಖ್ಯ.ಬಿಡುವಿಲ್ಲದ ಸಮಯದಲ್ಲಿ ನೀವು ಮಾಡುತಿರುವ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಮಕ್ಕಳು ಪ್ರಸ್ತುತ ಪಡಿಸಿದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮ ಉನ್ನತ ಮಟ್ಟದಲಿತ್ತು.ನಿಮ್ಮ ಸಂಸ್ಥೆಗೆ ಸರಕಾರದಿಂದ ಮತಷ್ಟು ಅನುದಾನ ಸಿಗುವಂತೆ ಪ್ರಯತ್ನಮಾಡುತೇನೆ. ನನ್ನ ಸುದೀರ್ಘಕಾಲದ ರಾಜಕೀಯ ಜೀವನದಲ್ಲಿ ಚಿನ್ನರ ಬಿಂಬದ ಸಂಸ್ಥೆ ನನಗೆ ಇಂದಿನ ತನಕ ನೋಡಲು ಸಿಗದಿದ್ದರೂ ಬಹಳ ದುಃಖವಾಗುತ್ತಿದೆ. ಮುಂದೆ ಈ ಸಂಸ್ಥೆಯ ಎಲ್ಲಾ ಕಾರ್ಯಗಳಿಗೆ ಸರಕಾರ ಮತ್ತು ನಮ್ಮ ಪಕ್ಷ ಎಲ್ಲಾ ರೀತಿಯ ಬೆಂಬಲವನ್ನು ನೀಡುತ್ತೇವೆ. ಪ್ರಕಾಶ್ ಭಂಡಾರಿ ಅಂತ ಪೊಲೀಸ್ ಅಧಿಕಾರಿ ತನ್ನ ವೃತ್ತಿ ಬದುಕಿನೊಂದಿಗೆ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಕಾಯಕದಲ್ಲಿ ತೊಡಗಿರುವುದು ಅಭಿನಂದನೆಯ ಎಂದು ನುಡಿದರು

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಎಂ.ಆರ್.ಜಿ ಗ್ರೂಪ್‌ನ ಸ್ಥಾಪಕ, ಹೆಸರಾಂತ ಉದ್ಯಮಿ ಪ್ರಕಾಶ್ ಶೆಟ್ಟಿ ಮಾತನಾಡುತ್ತಾ ಮಹಾರಾಷ್ಟ್ರದ ಮಣ್ಣಿನಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಚಿಣ್ಣರ ಬಿಂಬವು ಕಳೆದ ಇಪ್ಪತ್ತೊಂದು ವರ್ಷಗಳಿಂದ ಮಾಡುತ್ತಾ ಬಂದಿದೆ. ಇಂದು ಮಕ್ಕಳ ಕಾರ್ಯಕ್ರಮವನ್ನುಕಂಡುಮೈರೋಮಾಂಚನಗೊಂಡಿತು.ಚಿಣ್ಣರ ಬಿಂಬದ ಪ್ರಾಮಾಣಿಕ ಪರಿಶ್ರಮಕ್ಕೆ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವುದು ತುಂಬಾ ಸಂತೋಷದ ವಿಷಯ. ಈ ಪ್ರಶಸ್ತಿಗಾಗಿ ಬಹಳ ವರ್ಷಗಳಿಂದ ನಾನು ಕೂಡ ವಯಕ್ತಿಕವಾಗಿ ಪ್ರಯತ್ನಿಸಿದ್ದೆ ಆದರೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ದಿಂದ ಕೊಡುವಂತೆ ವಾಯಿತು. ಹಾಗೆಯೇ ಇಂತಹ ಒಂದು ಮಹತ್ಕಾರ್ಯವನ್ನು ಮಾಡುತ್ತಿರುವ ಚಿಣ್ಣರ ಬಿಂಬಕ್ಕೆ ಕರ್ನಾಟಕ ಸರಕಾರವು ಶಾಶ್ವತವಾದ ಅನುದಾನವನ್ನು ನೀಡುವ ಕೆಲಸವನ್ನು ಸರಕಾರ ಮಾಡಬೇಕಾಗಿ ನನ್ನ ವಯಕ್ತಿಕವಾದ ಬೇಡಿಕೆ . ಚಿಣ್ಣರ ಬಿಂಬದ ಯಶಸ್ವಿಗಾಗಿ ನನ್ನ ಸಹಕಾರ ಸದಾ ಇದೆ ಎಂದು ಆಶ್ವಾಸನೆ ನೀಡಿದರು.
ಗೌರವಾನ್ವಿತ ಅಥಿತಿಗಳಾಗಿ ಕೆ.ಪಿ.ಸಿ.ಸಿ ಗೌರವ ಕಾರ್ಯದರ್ಶಿ ಮಿಥುನ್ ರೈ ಮಾತನಾಡುತ್ತಾ ಒಂದು ಅರ್ಥಪೂರ್ಣ ಕಾರ್ಯಕ್ರಮ ,ಈ ಕಾರ್ಯಕ್ರಮ ದ ಮುಖಾಂತರ ಒಂದು ಮಾತು ಸತ್ಯ, ಪ್ರಕಾಶ್ ಭಂಡಾರಿಯವರು ಕೇವಲ ಎನ್ಕೌಂಟರ್ ಸ್ಪೆಶಾಲಿಸ್ಟ್ ಮಾತ್ರವಲ್ಲ, ಅವರು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಕೂಡ ಆಗಿದ್ದಾರೆ ಎಂದು ಹೇಳ ಬಯಸುತೇನೆ. ಒಂದು ಅದ್ಭುತ ಕಾರ್ಯಕ್ರಮ ,ಪ್ರತಿ ವರ್ಷ ಪ್ರಕಾಶಣ್ಣ ನನ್ನನ್ನು ಕರೆಯದಿದ್ದರೂ, ಒಬ್ಬ ಅಭಿಮಾನಿಯಾಗಿ ನಾನು ಬರುತೇನೆ.ಈ ವೇದಿಕೆಯಲ್ಲಿರುವ ಎಲ್ಲಾ ಗಣ್ಯರ ಆಸೆ ಎಂದರೆ ಮುಂಬರುವ ಕಾರ್ಯಕ್ರಮದಲ್ಲಿ, ಮಕ್ಕಳೇ ಇದನ್ನು ಉದ್ಗಾಟಿಸುವಂತ್ತಾಗಬೇಕು.ಗ್ರಹಸಚಿವ ಜ .ಪರಮೇಶ್ವರ್ ಬಹಳ ಸರಳತೆಯಿಂದ ಮಾತನಾಡಿದರು, ದುಬೈ ಕನ್ನಡ ಸಂಘದವರು ನಮ್ಮ ಸಂಸ್ಜ್ರತಿಯನ್ನು ಬೆಳೆಸುವ ಪ್ರಯತ್ನ ನೋಡಿ , 1 ಕೋಟಿ ರೂಪಾಯಿ ಅನುದಾನ ನೀಡಿದ ಓರ್ವ ಧೀಮಂತ ನಾಯಕ ,ಇದು ಕರ್ನಾಟಕದ ಕನ್ನಡಿಗರ ಮೇಲಿರುವ ಪ್ರೀತಿ. ಪ್ರಕಾಶ ಅಣ್ಣ ಚಿಣ್ಣರ ಬಿಂಬದ ಮಕ್ಕಳಲ್ಲಿ ,ಮಕ್ಕಳ ಪೋಷಕರಲ್ಲಿ ಸಹಾಯ ಧನ ಕೇಳಲಿಲ್ಲ , ಅವರು ಕೇಳಿದ್ದು ಆಶೀರ್ವಾದ ಮಾತ್ರ, ಅವರಿಗೆ ಖಂಡಿತ ಎಲ್ಲರೂ ಪ್ರೋತ್ಸಾಹ ನೀಡಬೇಕು. ಇಂದು ನನಗೆ ಕಾರ್ಯಕ್ರಮದ ಅಧ್ಯಕ್ಷತೆ ಅನಿರೀಕ್ಷಿತವಾಗಿ ಲಭಿಸಿದೆ ಮುಂದೆ ರಾಜಕೀಯದಲ್ಲೂ ಕೂಡ ನನಗೆ ಒಳ್ಳೆಯ ಅವಕಾಶ ಲಭಿಸುವಂತಾಗಲಿ ಎಂದು ನುಡಿದರು.
ಗೌರವ ಅತಿಥಿ ಕೆ.ಪಿ.ಸಿ.ಸಿ ಗೌರವ ಕಾರ್ಯದರ್ಶಿ ಪೊಲೀಸ್ ಅಧಿಕಾರಿ ಜಿ. ಎ. ಭಾವ ಮಾತನಾಡುತ್ತಾ ಪೊಲೀಸ್ ಇಲಾಖೆಯಲ್ಲಿ ಸುದೀರ್ಘಕಾಲದಲ್ಲಿ ಸೇವೆಯನ್ನು ಸಲ್ಲಿಸಿದ್ದೇನೆ ನನ್ನ ಸೇವಾ ಅವಧಿಯಲ್ಲಿ ಪ್ರಕಾಶ್ ಭಂಡಾರಿ ಅಂತ ನಿಷ್ಠಾವಂತ ಅಧಿಕಾರಿಯನ್ನು ನೋಡಿಲ್ಲ ಕರ್ನಾಟಕದಲ್ಲಿ ಕ್ರೈಂ ಗಳು ನಡೆಯದಂತೆ ಪ್ರಕಾಶ್ ಭಂಡಾರಿ ಕರ್ನಾಟಕ ಪೊಲೀಸ್ ಇಲಾಖೆಗೆ ವಿಶೇಷವಾದ ಸಾಕಾರವನ್ನು ನೀಡುತ್ತಾ ಬಂದಿದ್ದಾರೆ ಆದ್ದರಿಂದ ಕರ್ನಾಟಕದ ಪೊಲೀಸ್ ಇಲಾಖೆಗೆ ಬಹಳಷ್ಟು ಸಹಕಾರವಾಗಿದೆ. ತುಳುನಾಡಿನ ಜನರಲ್ಲಿ ಪ್ರೀತಿ ವಾತ್ಸಲ್ಯದ ನಂಟು ಇದೆ ತುಳು ಭಾಷೆಯಲ್ಲಿ ಸಂಸ್ಕೃತಿ ಇದೆ ಆದ್ದರಿಂದ ಅವರು ಸಂಘಟಿಕರಾಗಿ ಬದುಕು ಕಟ್ಟುತ್ತಾರೆ. ಸರಕಾರ ನಡೆಸುವ ಕೆಲಸಗಳನ್ನು ಪ್ರಕಾಶ್ ಬಂಡಾರಿಯವರ ಪರಿವಾರ ಚಿನ್ನರ ಬಿಂಬದ ಸಂಸ್ಥೆ ಮುಂಬೈಯಲ್ಲಿ ನಡೆಸುತ್ತಿದೆ ಇದನ್ನು ಸರಕಾರ ಗಮನಹರಿಸಬೇಕು ಸರ್ಕಾರದಿಂದ ಎಲ್ಲಾ ರೀತಿಯ ಸಹಕಾರವನ್ನು ನೀಡಬೇಕು ಎಂದು ನುಡಿದರು.

ಚಿನ್ನರ ಬಿಂಬದ ಮುಖ್ಯಸ್ಥೆ ಗೀತಾ ಹೇರಳ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು ಕಾರ್ಯಕ್ರಮವನ್ನುಡಾ.ಪೂರ್ಣಿಮಾ ಶೆಟ್ಟಿ. ಕರ್ನೂರು ಮೋಹನ್ ರೈ. ನಿರೂಪಿಸಿದರು ಸಭಾ ಕಾರ್ಯಕ್ರಮವನ್ನು ಚಿನ್ನರ ಬಿಂಬದ ಚಿನ್ನರುಗಳಾದ ಅಪೇಕ್ಷಾ ಶೆಟ್ಟಿ.ಅನ್ವಿ ಶೆಟ್ಟಿ ಮತ್ತು ಅಶೋಕ್ ಪಕ್ಕ ಳ ನಿರ್ವಹಿಸಿದರು ಅತಿಥಿಗಳನ್ನು
ಸುಚಿತ್ ಶೆಟ್ಟಿ, ಸಾಕ್ಷತ್ ಶೆಟ್ಟಿ, ವೀಕ್ಷಾ ಶೆಟ್ಟಿ, ವರುಣ್ ದೇವಾಡಿಗ ಪರಿಚಯಿಸಿದರು.
ಸಮಾರಂಭದ ವೇದಿಕೆಯಲ್ಲಿ ಬಂಟರ ಸಂಘ, ಮುಂಬಯಿ ಅಧ್ಯಕ್ಷರಾಗಿರುವ ಪ್ರವೀಣ್ ಬೋಜ ಶೆಟ್ಟಿ. ಇಸ್ಸಾರ್ ಫೈನಾನ್ಸಿ ಯಲ್ ಸರ್ವೀಸಸ್ ಪ್ರೈವೇಟ್. ಲಿಮಿಟೆಡ್ ನಿರ್ದೇಶಕರಾಗಿರುವ ಡಾ.ಆರ್.ಕೆ.ಶೆಟ್ಟಿ . , ಕರ್ನಾಟಕ ಮಲ್ಲ ಪತ್ರಿಕೆಯ ಸಂಪಾದಕರಾಗಿರುವ ಚಂದ್ರಶೇಖರ ಪಾಲೆತ್ತಾಡಿ . ಚಿಣ್ಣರಬಿಂಬದ ರೂವಾರಿಗಳದ ಪ್ರಕಾಶ್ ಭಂಡಾರಿ, ಡಾ. ಸುರೇಂದ್ರ ಕುಮಾರ್. ರೇಣುಕಾ ಪ್ರಕಾಶ್ ಭಂಡಾರಿ ಸ್ಥಾಪ ಕಾಧ್ಯಕ್ಷೆ ಪೂಜಾ ಪ್ರಕಾಶ್ ಭಂಡಾರಿ, ಕಾರ್ಯಾಧ್ಯಕ್ಷೆ ನಯನಾ ಪ್ರಕಾಶ್ ಭಂಡಾರಿ, ಚಿಣ್ಣರಬಿಂಬದ ದ ಭಾಸ್ಕರ್ ಶೆಟ್ಟಿ ತಾಳಿಪಾಡಿ ಗುತ್ತು . ರಮೇಶ್ ರೈ. ವಿಜಯ್ ಕೋಟ್ಯಾನ್. ಸಂಜೀವ ಪೂಜಾರಿ ತೋನ್ಸೆ. ಮತ್ತಿತರರು ಉಪಸ್ತರಿದ್ದರು
ವೇದಿಕೆಯ ಗಣ್ಯರ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಸ್ವೀಕರಿಸಿದ ಸಂಭ್ರಮಕ್ಕಾಗಿ ಪ್ರಕಾಶ್ ಭಂಡಾರಿ ಮತ್ತು ಅವರ ಪರಿವಾರವನ್ನು ಅರ್ಥಪೂರ್ಣವಾಗಿ ವಿಶಿಷ್ಟ ರೀತಿಯಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಯಶಸ್ವಿಗೆ ಚಿನ್ನರ ಬಿಂಬದ ವಿಶ್ವಾಸರು , ಪದಾಧಿಕಾರಿಗಳು, ಕನ್ನಡ ಶಿಕ್ಷಕಿಯರು , ಭಜನೆ ಶಿಕ್ಷಕಿಯರು, ಸ್ವಯಂ ಸೇವಕರು, ಪಾಲಕರು ಚಿಣ್ಣರಬಿಂಬದ ವಲಯದ ಮುಖ್ಯಸ್ಥರು ಶ್ರಮಿಸಿದರು.
————-
ಕರ್ನಾಟಕ ಸರಕಾರದಿಂದ ಪ್ರತಿ ವರ್ಷ 25 ಲಕ್ಷ ರೂಪಾಯಿ ಅನುದಾನ ನೀಡುವ ಪ್ರಯತ್ನ ನಮ್ಮದು: ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ
ಕರ್ನಾಟಕ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಅವರು ಕಾರ್ಯಕ್ರಮವನ್ನುದೀಪ ಬೆಳಗಿಸಿ ಬಳಿಕ ಮಾತನಾಡುತ್ತಾ ಒಂದು ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಶವಾಯಿತು.ಹೊರನಾದಡಿನಲ್ಲಿ ಕನ್ನಡ ಉಳಿಸುವ ಕೆಲಸ ಮಾಡುತ್ತಿದ್ದೀರಿ. ನೀವು ಎಲ್ಲರೂ ಸಹಕಾರ ಮಾಡಿ ಈ ಸಂಸ್ಥೆಯನ್ನು ಬೆಳೆಸಿದ್ದೀರಿ ,ನಿಮಗೆಲ್ಲಾ ನನ್ನ ಅಭಿನಂದನೆಗಳು. ಕರ್ನಾಟಕ ಸರಕಾರ ಪ್ರತಿ ವರ್ಷ 68 ರಾಜ್ಯೋತ್ಸವ ಪ್ರಶಸ್ತಿ ಕೊಡುತೇವೆ, ಈ ಬಾರಿ ಕರ್ನಾಟಕಕ್ಕೆ 50 ವರ್ಷ ಅದ ನೆನಪಿನಲ್ಲಿ ಸಂಘ ,ಸಂಸ್ಥೆಗಳಿಗೆ ಪ್ರಶಸ್ತಿ ಕೊಡಬೇಕು ಎಂದು ನಿರ್ಧರಿಸಿ, 10 ಸಂಸ್ಥೆಗಳಿಗೆ ಕೊಟ್ಟಿದ್ದೇವೆ.ನಾವು ಪ್ರತಿ ಒಂದನ್ನೂ ವಿಚಾರ ಮಾಡಿ ಕೊಟ್ಟಿದ್ದೇವೆ.ಯಾವ ಸಂಸ್ಥೆ ಕನ್ನಡಕ್ಕಾಗಿ ಕೆಲಸ ಮಾಡುತ್ತೆ, ಯಾವ ಸಂಸ್ಥೆ ಹೊರನಾಡಿನಲ್ಲಿ ಕನ್ನಡ ಕಟ್ಟುವ ಕೆಲಸ ಮಾಡುತ್ತೆ, ಎಂದು ಅವಲೋಕಿಸಿದಾಗ ಚಿಣ್ಣರ ಬಿಂಬದ ಹೆಸರು ಬಂದಿತ್ತು, ನಾನು ಚಿಣ್ಣರ ಬಿಂಬದ ಹೆಸರು ಕೇಳಿದ್ದೆ, ಪ್ರಕಾಶ್ ಭಂಡಾರಿ ಅವರ ಹೆಸರೂ ಕೇಳಿದ್ದೆ, ಓರ್ವ ಪೊಲೀಸ್ ಅಧಿಕಾರಿ ಆಗಿ ಮಹಾರಾಷ್ಟ್ರದಲ್ಲಿ ಕನ್ನಡ ಉಳಿಸುವ ಕೆಲಸ ಮಾಡುತಿದ್ದಾರೆ ಎಂದೂ ಕೇಳಿದ್ದೆ.
ಬೇರೆ ರಾಜ್ಯದಲ್ಲಿ ಈ ಕೆಲಸ ಮಾಡುವುದು ಬಹು ದೊಡ್ಡ ಕಾರ್ಯ, ಇದನ್ನು ಪರಿಗಣಿಸಿ ಚಿಣ್ಣರ ಬಿಂಬಕ್ಕೆ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿದ್ದೇವೆ.ಅಂದು ನಾನು ಕೇಳಿದ್ದೆ, ಇಂದು ಕಣ್ಣಾರೆ ಚಿಣ್ಣರ ಬಿಂಬ ಯಾವ ರೀತಿ ಕೆಲಸ ಮಾಡುತ್ತದೆ ಎಂದು ತಿಳಿದು ನಿಜಕ್ಕೂ ಬಹಳ ಸಂತಸವಾಯಿತು. ಇಂದಿನ ದಿನ ಕೆಲವು ಸಂಸ್ಥೆಗಳು ಕಾರ್ಯಕ್ರಮಕ್ಕೆ ಮಾತ್ರ ಸೀಮಿತವಾಗಿ ಕೆಲಸ ಮಾಡುತ್ತದೆ, ಕೆಲವು ಸಂಘಟನೆ ಪ್ರಶಸ್ತಿಗಾಗಿಯೇ ಹುಟ್ಟಿ ಕೊಳ್ಳುತದೆ, ಆದರೆ ಚಿಣ್ಣರ ಬಿಂಬಕ್ಕೆ ಪ್ರಶಸ್ತಿ ನೀಡಿದ್ದು ಸಾರ್ಥಕ ಆಯಿತು ಎಂದು ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ.ಓರ್ವ ದಕ್ಷ ಅಧಿಕಾರಿಯಾಗಿ ಕನ್ನಡದ ಕೆಲಸ ಮಾಡಿದ ಪ್ರಕಾಶ್ ಭಂಡಾರಿ ಮತ್ತು ಅವರ ಪರಿವಾರಕ್ಕೆ ಅಭಿನಂದನೆಗಳು. ನಮ್ಮ ಸಂಸ್ಕೃತಿ ಇಲಾಖೆಯಿಂದ ಸೀಮಿತವಾದ ಅನುದಾನ ಕೊಡುವ ಕ್ರಮವಿದೆ ಆದರೂ ನಮ್ಮ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿ ಚಿನ್ನರ ಬಿಂಬಕ್ಕೆ ಪ್ರತಿ ವರ್ಷ 25 ಲಕ್ಷ ರೂಪಾಯಿ ಅನುದಾನ ನೀಡಬೇಕೆನ್ನುವ ದಕ್ಕೆ ನಾನು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತೇನೆ. ಎಂದು ನುಡಿದರು.
———————————-
ಸರಕಾರದ ಮೂಲಕ ಅನುದಾನ ನೀಡುವ ಭರವಸೆಯ ಮಾತುಗಳು ಫಲ ಪ್ರಾಪ್ತವಾಗಲಿ : ಪ್ರಕಾಶ್ ಭಂಡಾರಿ.
ರಾಜ್ಯೋತ್ಸವ ಪ್ರಶಸ್ತಿ ಯ ಸಂಭ್ರಮಾಚರಣೆಯ ಅಂಗವಾಗಿ ಸಮಸ್ತ ಚಿನ್ನರು ಪಾಲಕರು ವಿಶ್ವಸ್ಥರು ಮತ್ತು ಹಿತೈಷಿಗಳು ನೀಡಿರುವ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಚಿನ್ನರ ಬಿಂಬದ ರೂವಾರಿ ನಿವೃತ್ತ ಪೊಲೀಸ ಅಧಿಕಾರಿ ಪ್ರಕಾಶ್ ಭಂಡಾರಿ ಅವರು 21 ವರ್ಷಗಳ ಚಿಣ್ಣರ ಬಿಂಬದ ಪ್ರಯಾಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ಸಂಸ್ಕೃತಿ ಸಂಸ್ಕಾರವನ್ನು ಅರಿತುಕೊಂಡಿದ್ದಾರೆ ಉನ್ನತ ಉದ್ಯೋಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಸಂಸ್ಕಾರವಂತರಾಗಿ ಬದುಕು ಕಟ್ಟುತ್ತಿದ್ದಾರೆ ಅದರೊಟ್ಟಿಗೆ ಈ ನಮ್ಮ ಸಂಸ್ಥೆಗೆ ಅವರ ಉದ್ಯೋಗದ ಒಂದು ಅಂಶವನ್ನು ನೀಡುವ ಸಂಕಲ್ಪವನ್ನು ಕೂಡ ಮಾಡಿದ್ದಾರೆ ಇದು ನಮ್ಮ ಸಂಸ್ಥೆಗೆ ನೀಡಿದ ಸಂಸ್ಕಾರಕ್ಕೆ ಗೌರವದ ಪ್ರತಿರೂಪವಾಗಿದೆ. ಪ್ರತಿ ವರ್ಷ ಕಾರ್ಯಕ್ರಮ ಮಾಡುವಾಗ ನಮ್ಮ ಸಂಸ್ಥೆ ಹಿತೈಷಿಗಳು ದಾನಿಗಳು ಸಹಕಾರವನ್ನು ನೀಡುತ್ತಾ ಬಂದಿದ್ದಾರೆ ಅಲ್ಲದೆ ಸರಕಾರ ಕೂಡ ಒಂದೆರಡು ಬಾರಿ ಅನುದಾನವನ್ನು ನೀಡಿದೆ ಆದರೆ ಶಾಶ್ವತವಾಗಿ ಕರ್ನಾಟಕ ಸರಕಾರ ಯಾವುದೇ ರೀತಿಯ ಅನುದಾನವನ್ನು ನೀಡುತ್ತಿಲ್ಲ ರಾಜಕೀಯ ನಾಯಕರು ಈ ಕಾರ್ಯಕ್ರಮದಲ್ಲಿ ಬಂದು ಭರವಸೆಯ ಮಾತುಗಳನ್ನು ನೀಡಿ ನಮ್ಮನ್ನು ಸಂತೋಷಗೊಳಿಸುತ್ತಾರೆ ಆದರೆ ನಮಗೆ ಅನುದಾನ ಮಾತ್ರ ನೀಡುವುದಕ್ಕೆ ಆಗುತ್ತಿಲ್ಲ ಆದ್ದರಿಂದ ಇಂದು ನಮ್ಮನ್ನು ಅಭಿಮಾನದಿಂದ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಸಚಿವರುಗಳು ಚಿನ್ನರ ಬಿಂಬ ಸಂಸ್ಥೆಗೆ ಮುಂದಿನ ಬಜೆಟ್ಟಿನಲ್ಲಿ ಶಾಶ್ವತವಾದ ಅನುದಾನ ನೀಡುವ ಮಾತುಗಳನ್ನು ನೀಡಿದ್ದಾರೆ ಈ ಮಾತುಗಳು ಫಲ ಪ್ರಾಪ್ತಿಯಾಗಲಿ. ಚಿನ್ನರ ಬಿಂಬ ಎತ್ತರವಾಗಿ ಬೆಳೆದು ನಿಲ್ಲುವುದಕ್ಕೆ ಚಿನ್ನರ ಪಾಲಕರು ಮಹತ್ವವಾದ ಕೊಡುಗೆಯನ್ನು ನೀಡಿದ್ದಾರೆ ಅವರೆಲ್ಲರ ಪ್ರೋತ್ಸಾ ದಿಂದ ಈ ಸಂಸ್ಥೆಯಲ್ಲಿ ಏಳು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಸಂಸ್ಕಾರವಂತರಾಗಿ ಬೆಳೆಯುತ್ತಿದ್ದಾರೆ. ಈ ಕಾರ್ಯಕ್ರಮದ ಮೂಲಕ ನಮ್ಮ ಸಂಸ್ಥೆಗೆ ಐದು ಜನ ಐದು ಜನ ವಿಶ್ವಾಸ್ತರನ್ನು ವಿಶ್ವಾಸರನ್ನಾಗಿ ನೇಮಿಸಿಕೊಂಡಿದ್ದೇವೆ ಆ ಮೂಲಕ ಚಿಣ್ಣರ ಬಿಂಬ ಮತ್ತಷ್ಟು ಬಲಿಷ್ಠ ಗೊಳ್ಳಲಿದೆ . ನಮ್ಮ ಸಂಸ್ಥೆಗೆ ಸ್ವಂತ ಜಾಗದಲ್ಲಿ ಎಲ್ಲಾ ಕಾರ್ಯಕ್ರಮನು ಮಾಡುವುದಕ್ಕಾಗಿ ಸ್ವಂತ ಜಾಗ ಪಡುವ ಕಾರ್ಯದಲ್ಲಿ ನಾವೆಲ್ಲರೂ ತೊಡಗಿದ್ದೇವೆ ನಿಮ್ಮೆಲ್ಲರ ಸಹಕಾರವಿರಲಿ ಎಂದು ನುಡಿದರು