
ಚಿತ್ರ, ವರದಿ: ರಮೇಶ್ ಉದ್ಯಾವರ
ಜನ್ಮ ಭೂಮಿಯ ಸಂಸ್ಕಾರ, ಸಂಸ್ಕೃತಿ ಕರ್ಮ ಭೂಮಿಯಲ್ಲಿ ಮೇಳೈಸಿದೆ: ಹರೀಶ್ ಡಿ. ಸಾಲ್ಯಾನ್.
ಥಾಣೆ. ಜ. 7: ಥಾಣೆ ಪರಿಸರದ ಅಲ್ಲಿರುವ ಕನ್ನಡ ಮನಸುಗಳನ್ನು ಒಗ್ಗೂಡಿಸಿ ಘೋಡ್ ಬಂದರ್ ಕನ್ನಡ ಅಸೋಸಿಯೇಷನ್ ಸ್ಥಾಪಿಸುವ ಮೂಲಕ ಕನ್ನಡ ಪರ ಸೇವೆಯು ಈ ಸಂಘದ ಮುಖೇನ ನಡೆದಿದೆ. ಜನ್ಮ ಭೂಮಿಯ ಭಾಷೆ ಸಂಸ್ಕೃತಿ ಸಂಸ್ಕಾರವನ್ನು ಕರ್ಮ ಭೂಮಿ ಮೇಲೆ ಸಾದರಪಡಿಸುವ ಮಹೋನ್ನತ ಕಾರ್ಯ ಈ ಸಂಘದ ವತಿಯಿಂದ ನಡೆದಿದೆ.ಶ 10 ವರ್ಷಗಳ ಹಿಂದೆ ಸ್ಥಾಪಕರು ಪಟ್ಟ ಶ್ರಮ ಶ್ರದ್ಧೆ ಸಂಘಟನೆಯು ಇಂದು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವಾಗಿದೆ ಎಂದು ಸಂಘದ ಅಧ್ಯಕ್ಷ ಹರೀಶ್ ಡಿ. ಸಾಲ್ಯಾನ್ ಹೇಳಿದರು.

ಥಾಣೆ ಪಶ್ಚಿಮದ ಡಾಕ್ಟರ್ ಕಾಶೀನಾಥ್ ಘಾಣೇಕರ್ ನಾಟ್ಯ ಸಭಾಗ್ರಹದಲ್ಲಿ ಜನವರಿ 6ರಂದು ನಡೆದ ಘೋಡ್ ಬಂದರ್ ರೋಡ್ ಕನ್ನಡ ಅಸೋಸಿಯೇಷನ್ ಇದರ ದಶಮಾನೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಮಾಜಿಕ ಸೇವೆಯನ್ನು ಧ್ಯೇಯವನ್ನು ಮುಂದಿಟ್ಟುಕೊಂಡು ಸಾಗಿದ ಈ ಸಂಸ್ಥೆಯು ಕೋವಿಡ್ ಸಂದರ್ಭದಲ್ಲಿ ಪರಿಸರದ ತುಳು ಕನ್ನಡಿಗರ ಮನೆಗಳಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಸಹಿತ ಶೈಕ್ಷಣಿಕ ವೈದ್ಯಕೀಯ ಸಾಂಸ್ಕೃತಿಕವಾಗಿಯೂ ಹಲವಾರು ಕೊಡಗೆಯನ್ನು ನೀಡಿದೆ. ಸಂಸ್ಥೆಯ ಬೆನ್ನೆಲುಬಾಗಿ ಮಹಿಳಾ ವಿಭಾಗ ಶ್ರಮಿಸುತ್ತಿದ್ದು ಸಂಸ್ಥೆಯ ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ನಡೆಸುತ್ತಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಥಾಣೆ ಪರಿಸರದ ಖ್ಯಾತ ನೇತ್ರ ತಜ್ಞೆ ಕನ್ನಡತಿ ಡಾI. ಅನಘಾ ಹೇರೂರು ಅವರು ಕಳೆದ ಹತ್ತು ವರ್ಷಗಳಿಂದ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಪಟ್ಟ ಶ್ರಮವು ಇಂದಿನ ದಶಮಾನೋತ್ಸವದಲ್ಲಿ ಕಂಡುಬಂದಿದೆ ಪ್ರತಿಯೊಬ್ಬ ಸದಸ್ಯರಿಗೂ ಸಮಾಜ ಸೇವೆ ಮಾಡುವ ಅವಕಾಶ ಈ ಸಂಸ್ಥೆ ನೀಡಿದೆ ಇಲ್ಲಿ ಮಹಿಳೆಯರು ಸಂಘದ ಕಾರ್ಯಕ್ರಮ ದಲ್ಲಿ ತಮ್ಮ ನ್ನು ತೊಡಗಿಸಿ ಕೊಳ್ಳುವ ಮೂಲಕ ಸಂಸ್ಥೆಯ ಸದಸ್ಯರಿಗೆ ಮಾದರಿ ಯಾಗಿದ್ದಾರೆ. ಈ ಸಂಸ್ಥೆ ಇನ್ನಷ್ಟು ಜನಪರ ಕಾರ್ಯಕ್ರಮಗಳು ನಡೆಯಲಿ ಆ ಮೂಲಕ ಸಂಸ್ಥೆಯು ಉನ್ನತ ಮಟ್ಟದ ಬೆಳವಣಿಗೆಯತ್ತ ಬೆಳೆಯಲಿ ಎಂದು ಹೇಳಿ ಕಣ್ಣಿನ ಆರೋಗ್ಯ ಕಾಪಾಡುವ ಕುರಿತು ಸಲಹೆ ನೀಡಿದರು.

ಇನ್ನೋರ್ವ ಅತಿಥಿ ಖ್ಯಾತ ವೇದ್ಯ ಡಾ. ರಿಷಿಕೇಶ್ ವೈದ್ಯ ಸಂಘವು ಕಳೆದ ಹತ್ತು ವರ್ಷಗಳ ಕಾರ್ಯಕಲಾಪಗಳನ್ನು ಪ್ರಶಂಶಿಸಿ ಸಂಘದ ಬೆಳವಣಿಗೆ ಕಾರಣಕರ್ತರಾಗಿ ಪರಿಸರದ ತುಳುಕನ್ನಡಿಗರಿಗೆ ಸೇವೆಯನ್ನು ಒದಗಿಸಿದ ಸಂಘದ ಕೊಡುಗೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.

ಅಥಿತಿಯಾಗಿ ಉಪಸ್ಥಿತರಿದ್ದ ಥಾಣೆ ಪರಿಸರದ ಖ್ಯಾತ ಸಮಾಜಸೇವಕ ಉದ್ಯಮಿ ಏಷ್ಯಾಟಿಕ್ ಕ್ರೇನ್ ಸರ್ವಿಸಸ್ ಮಾಲೀಕರಾದ ಗಣೇಶ್ ಪೂಜಾರಿ ಪರಶುರಾಮ ಸೃಷ್ಟಿಯ ತುಳುನಾಡಿನ ಮಣ್ಣಿನ ಗುಣವನ್ನು ಪರಿಸರದ ತುಳು ಕನ್ನಡಿಗರನ್ನು ಒಗ್ಗೂಡಿಸುವ ಮೂಲಕ ಇಲ್ಲಿನ ತುಳುಕನ್ನಡಿಗರಿಗೆ ಆಸರೆಯ ವೇದಿಕೆಯನ್ನು ಸೃಷ್ಟಿಸಿ ಆ ಮೂಲಕ ಸಮಾಜ ಸೇವೆಗೈಯುತ್ತಿರುವ ಸಂಸ್ಥೆಯ ಸಾಧನೆ ಸ್ತುತ್ಯಾರ್ಹ. ಅತ್ಯಂತ ಪರಿಶ್ರಮದಾಹಿ ಸಾಧಕರು ಈ ಸಂಸ್ಥೆಯ ಉನ್ನತಿಗೆ ದುಡಿದಿದ್ದಾರೆ. ಸಂಸ್ಥೆಯ ಮುಂದಿನ ಬೆಳವಣಿಗೆಯಲ್ಲಿ ಯುವಜನಾಂಗವನ್ನು ಸಂಘದ ಮುಖ್ಯ ವಾಹಿನಿಯಲ್ಲಿ ತರುವ ಮೂಲಕ ನಮ್ಮ ಹಿರಿಯರ ಚಿಂತನೆ ಧರ್ಮ ಸಂಸ್ಕಾರ ಜೊತೆಗೆ ಕನ್ನಡ ಅಭಿಮಾನದ ಮೂಲಕ ಭಾಷೆ ಸಂಸ್ಕೃತಿಯನ್ನು ಬೆಳೆಸುವ ಕೆಲಸ ಈ ಸಂಸ್ಥೆಯ ವತಿಯಿಂದ ಆಗಬೇಕಾಗಿದೆ. ಗುರು ವಿದ್ಯೆ ಭಗವದ್ಗೀತೆಯ ಶ್ಲೋಕ ಮುಂತಾದ ಧರ್ಮದ ಧನಾತ್ಮಕ ಚಿಂತನೆ ಕಾರ್ಯಕ್ರಮಗಳು ಸನಾತನ ಧರ್ಮ ಬೆಳೆಯಲು ಕಾರಣವಾಗಲಿ ಎಂದು ಹೇಳಿ ದಶಮಾನೋತ್ಸವದ ಯಶಸ್ವಿಗೆ ಶ್ರಮಿಸಿದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ದಶಮಾನೋತ್ಸವದ ಅಂಗವಾಗಿ ಮಧ್ಯಾಹ್ನ ಸಂಘದ ಅಧ್ಯಕ್ಷ ಹರೀಶ್ ಡಿ ಸಾಲ್ಯಾನ್ ಜೊತೆಗೆ ಪರಿಸರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದ ಸದಸ್ಯರಾದ ಮಾಯ, ರೂಪ ಮತ್ತು ಬಳಗದವರು ಪ್ರಾರ್ಥನೆಗೈದರು. ಉದ್ಘಾಟನೆಯ ಬಳಿಕ ಪರಿಸರದ ವಿವಿಧ ತುಳು ಕನ್ನಡಿಗರ ಸಂಘ ಸಂಸ್ಥೆಗಳು ಸದಸ್ಯರು ಕೂಡುವಿಕೆಯಲ್ಲಿ ಸಮೂಹ ನೃತ್ಯ ಸಂಘದ ಸದಸ್ಯರಿಂದ ಮತ್ತು ಮಕ್ಕಳಿಂದ ವಿವಿಧ ಮನೋರಂಜನೆ ಕಾರ್ಯಕ್ರಮಗಳು ನಿತ್ಯಾನಂದ ಬೆಳುವಾಯಿ ನಿರ್ದೇಶನದಲ್ಲಿ ಈಸೂರು ಸ್ವತಂತ್ರ ಗ್ರಾಮ ಕಿರು ನಾಟಕ ಮಹಿಳಾ ಸದಸ್ಯರಿಂದ ನಂದಳಿಕೆ ನಾರಾಯಣಶೆಟ್ಟಿ ವಿರಚಿತ ಕಥೆ ಎನ್ನ ಮರ್ಮಾಲು ಕಿರು ನಾಟಕ ಹಾಗೂ ಚಂದ್ರ ಕಾಂತ್ ಸಾಲ್ಯಾನ್ ಸಸಿಹಿತ್ಲು ನಿರ್ದೇಶನದಲ್ಲಿ ನವೋದಯ ಕಲಾರಂಗ ಸದಸ್ಯರ ಕೂಡುವಿಕೆಯಲ್ಲಿ ಮನೋಹರ್ ಶೆಟ್ಟಿ ನಂದಳಿಕೆ ಅಭಿನಯದ ಊರೇ ಗತಿ ನಾಟಕ ಪ್ರದರ್ಶನಗೊಂಡಿತು.

ಸಭಾ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ಸಂಘದ ಸದಸ್ಯರಾದ ವಂದನಾ ಶೆಟ್ಟಿ ಜಯ ಪೂಜಾರಿ ಮೋಹಿನಿ ಕೊಠಾರಿ ವಿಕ್ರಂ ಶೆಟ್ಟಿ ಹರೀಶ್ ಡಿ ಸಾಲ್ಯಾನ್ ಅವರು ಶಾಲು ಹೊದೆಸಿ ಸ್ಮರಣಿಕೆ ಯಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಲಕ್ಷ್ಮಣ್ ಮಣಿಯಾಣಿ ಚಂದ್ರಶೇಖರ್ ಶೆಟ್ಟಿ ಶ್ರೀನಾಥ್ ಶೆಟ್ಟಿ ರವಿ ಕೋಟ್ಯಾನ್ ಸದಾಶಿವ ಮೊಯ್ಲಿ ಮಹಿಳಾ ಕಾರ್ಯಾಧ್ಯಕ್ಷೆ ಸೀಮಾ ಆರ್ ಶೆಟ್ಟಿ ಸಂಘದ ಅಧ್ಯಕ್ಷರು ಗೌರವಿಸಿದರು.
ಸಂಘದ ಗೌರವ ಕಾರ್ಯದರ್ಶಿ, ಚಂದ್ರಶೇಖರ್ ಶೆಟ್ಟಿ ಥಾಣೆ ಘೋಡ್ಬಂದರ್ ಪರಿಸರದಲ್ಲಿ ಕಳೆದ ಹತ್ತು ವರ್ಷಗಳ ಸಂಘದ ಕಾರ್ಯಕ್ರಮಗಳು ಹಾಗೂ ಸಂಘ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದ್ದರು. ಮಹಿಳೆ ವಿವಾದ ಕಾರ್ಯದರ್ಶಿ ಸೀಮಾ ಆರ್ ಶೆಟ್ಟಿ ಮಹಿಳಾ ವಿಭಾಗದ ಕಾರ್ಯಕ್ರಮಗಳ ವಿವರ ನೀಡಿದರು.

ಈ ಸಂದರ್ಭದಲ್ಲಿ ಥಾಣೆ ಪರಿಸರದ ಹೆಸರಾಂತ ಉದ್ಯಮಿ ಕೊಡುಗೆದಾನಿ ಶಿವರಾಮಶೆಟ್ಟಿ ದಂಪತಿ ಹೋಟೆಲ್ ಸತ್ಕಾರ್ ರೆಸಿಡೆನ್ಸಿ ಥಾಣೆ ಹಾಗೂ ಇನ್ನೋರ್ವ ಸಮಾಜ ಸೇವಕ ಉದ್ಯಮಿ ಸತ್ಯಹಾಸ್ ಶೆಟ್ಟಿ ಕುತ್ಯಾರು ದಂಪತಿಯವರನ್ನು ಸಂಘದ ವತಿಯಿಂದ ಶಾಲು ಹೊದಿಸಿ ನೆನಪಿನ ಸ್ಮರಣೆಗೆ ಇತ್ತು ಹೃತ್ಪೂರ್ವಕವಾಗಿ ಗೌರವಿಸಲಾಯಿತು. ವಾಣಿಶ್ರೀ ಶೆಟ್ಟಿ ಮತ್ತು ಪ್ರೇಮಾ ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ಜತೆಗೆ ಸಂಘದ ಸ್ಥಾವಕರಾದ ಪ್ರಶಾಂತ್ ನಾಯಕ್, ನಿತ್ಯಾನಂದ ಬೆಳುವಾಯಿ ಮಾಜಿ ಅಧ್ಯಕ್ಷರುಗಳಾದ ವಿಕ್ರಂ ಶೆಟ್ಟಿ ಆನಂದ ಶೆಟ್ಟಿ ಮತ್ತು ಪ್ರಸಕ್ತ ಅಧ್ಯಕ್ಷರಾದ ಹರೀಶ್ ಡಿ ಸಾಲ್ಯಾನ್ ಉಪಾಧ್ಯಕ್ಷ ಲಕ್ಷಣ ಮಣಿಯಾಣಿ ಅವರನ್ನು ಮತ್ತು ಭಜನಾ ಮಂಡಳಿಯ ಮಹಿಳಾ ಸದಸ್ಯರನ್ನೂ ಈ ಸಂದರ್ಭದಲ್ಲಿ ದಶಮಾನೋತ್ಸವದ ಅಂಗವಾಗಿ ಗೌರವಿಸಲಾಯಿತು. ವಿವಿಧ ಸಂಘ ಸಂಸ್ಥೆಗಳಿಗೆ ಆಯೋಜಿಸಿದ ನೃತ್ಯ ಸ್ಪರ್ಧೆಯಲ್ಲಿ ಸ್ವಾವಲಂಬನೆ ಅಸೋಸಿಯೇಷನ್ ಡೊಂಬಿವಿಲಿ ಪ್ರಥಮ, ಪದ್ಮಶಾಲಿ ಸೇವಾ ಸಂಘ, ಘೋಡ್ಬಂದರ್ ರೋಡ್ ಥಾಣೆ ದ್ವಿತೀಯ ಮತ್ತು ಅಯ್ಯಪ್ಪ ಸೇವಾ ಸಮಿತಿ ಡೊಂಬಿವಿಲಿ ತೃತೀಯ ಬಹುಮಾನ ಪಡೆಯಿತು. ಸಂಘದ ಸದಸ್ಯ ನಟ ನಿರ್ದೇಶಕ ನಿತ್ಯಾನಂದ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.
ಹೇಮಾ ಶೆಟ್ಟಿ ವಂದಿಸಿದರು.