
ಮುಂಬಯಿ ಜ. 10: ಉಪನಗರ ಸಾಂತಾಕ್ರೂಜ್ ಪೂರ್ವದ ಮಧ್ವ ಭವನದ ಪೇಜಾವರ ಮಠದ ಶ್ರೀ ಕೃಷ್ಣ ಸಾನಿಧ್ಯದಲ್ಲಿ ಶುಕ್ರವಾರ ಕೃಷ್ಣ ನವಮಿ ಪ್ರತಿಷ್ಠಾ ವರ್ಧಂತಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಕೃಷ್ಣ ಮಂತ್ರಯಾಗ, ಕಲಶಾರಾಧನೆ, ಕಲಶಾಭಿಷೇಕ, ಪ್ರಸನ್ನ ಪೂಜೆ ಯ ಧಾರ್ಮಿಕ ಪೂಜಾ ವಿಧಿಗಳು ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವಿದ್ವಾನ್ ಡಾ ರಾಮದಾಸ ಉಪಾಧ್ಯಾಯ ರೆಂಜಾಳ ಅವರು ಪೂಜಾಧಿಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಅಧ್ಯಕ್ಷ ಡಾ| ಎ. ಎಸ್. ರಾವ್, ವಿಶ್ವಸ್ಥ ಮಂಡಳಿಯ ಸದಸ್ಯರಾದ ಅವಿ ನಾಶ್ ಶಾಸ್ತ್ರಿ .ಪೇಜಾವರ ಮಠದ ಪ್ರಕಾಶ್ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ ಸೇರಿದಂತೆ , ಅಪಾರ ಭಕ್ತಾದಿಗಳು ಉಪಸ್ಥಿತ ರಿದ್ದರು. ಮದ್ದೇಶ ಭಜನ ಮಂಡಳಿ ಯಿಂದ ಭಜನೆ ನೇರವೇರಿತು.
.
.
.
.
.
.
.
.