
ಸುಳ್ಯ ಜಿ : ಸುಳ್ಯ ಬಂಟರ ಭವನದಲ್ಲಿ ಬಂಟರ ಯಾನೆ ನಾಡವರ ಸಂಘ (ರಿ.)ಸುಳ್ಯ ಇದರ ವತಿಯಿಂದ ಆಯೋಜಿಸಲಾದ “ಬಂಟರ ಸಮಾವೇಶ” ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಉದ್ಘಾಟಿಸಿದರು.
ಶ್ರೀ ಗುರುದೇವದತ್ತ ಸಂಸ್ಥಾಪನಮ್ ಶ್ರೀ ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಒಕ್ಕೂಟದ ಪೋಷಕರು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ. ಎ ಸದಾನಂದ ಶೆಟ್ಟಿಯವರನ್ನು ಗೌರವಿಸಲಾಯಿತು. ಶಾಸಕಿ ಭಾಗಿರತಿ ಮುರುಲ್ಯ, ಪತ್ರಕರ್ತ ಪ್ರದೀಪ್ ಕುಮಾರ್ ರೈ ಐಕಳಬಾವ ಹಾಗೂ ಇತರ ಸಾಧಕ ಗಣ್ಯರಾದ ಧೀರಜ್ ರೈ, ಪ್ರಖ್ಯಾತ ಶೆಟ್ಟಿ,ದೇವಿಪ್ರಸಾದ್ ರೈ, ಸನತ್ ಕುಮಾರ್ ಆಳ್ವ, ಸಂದೇಶ್ ರೈ, ಹಾಗೂ ಕುಂಟುಪುಣಿ ಪ್ರಮೋದ್ ಶೆಟ್ಟಿ, ವಿಶ್ವನಾಥ್ ಶೆಟ್ಟಿ ಆರ್ಗುಂಡಿ, ರಾಮಕೃಷ್ಣ ರೈ ಮಾಳೆಂಗ್ರಿ, ರಾಮದಾಸ್ ರೈ ಮೊರಂಗಲ್ಲು, ಉದಯ ಕುಮಾರ್ ರೈ ಬಾಳಿಲ, ಸುವರ್ಣ ರೈ ಕೊಂಕಣಿ ಮೂಲೆ, ಗೀತಾ ಉದಯ್ ಕುಮಾರ್ ರೈ ಕುಕ್ಕುತಡಿ, ಸನ್ಮಾನಿಸಲಾಯಿತು.
ಸುಮಾರು 150ಕ್ಕೂ ಮಿಕ್ಕಿದ ವಿಧ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ನೀಡಿ ಮತ್ತು ಪುರಸ್ಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಸನ್ಮಾನ್ಯ ರಮಾನಾಥ್ ರೈ, ವಿದ್ಯಾ ರಶ್ಮಿ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಸವಣೂರು ಸೀತಾರಾಮ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುರಳೀಧರ್ ಹೆಗ್ಡೆ , ಗುರುಪ್ರಸಾದ್ ರೈ, ವಲಯ ಅರಣ್ಯ ಅಧಿಕಾರಿ ಶ್ರೀ ಪ್ರವೀಣ್ ರೈ, ಕೇನ್ಯ ರವೀಂದ್ರನಾಥ್ ಶೆಟ್ಟಿ,ಬಂಟರ ಯಾನೆ ನಾಡವರ ಸಂಘ (ರಿ.) ಸುಳ್ಯ ಇದರ ಅಧ್ಯಕ್ಷರಾದ ಜಯಪ್ರಕಾಶ್ ರೈ ಮತ್ತು ವಲಯ ಬಂಟರ ಸಂಘಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸದಸ್ಯರುಗಳು ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.