24.7 C
Karnataka
April 3, 2025
ಕ್ರೀಡೆ

ಕರ್ನಾಟಕ ಸಂಘ ಪನ್ವೆಲ್ ನ 32ನೇ ವರುಷದ ವಾರ್ಷಿಕ ಕ್ರೀಡಾ ಕೂಟ.



 

ಕ್ರೀಡೆಯು ಮನಸ್ಸಿನ ವಿಕಾಸಕ್ಕೆ ಹಾಗೂ ಸಮಾಜದ ಒಗ್ಗಟ್ಟಿಗೆ ಪ್ರೇರಣೆ– ಜಯ. ಎ ಶೆಟ್ಟಿ

  ಪನ್ವೆಲ್ ಜ 13.ಕರ್ನಾಟಕ ಸಂಘದ 32 ನೇ ವರುಷದ ಕ್ರೀಡಾ ಉತ್ಸವ ಸಮಾರಂಭವು  ಜ  ಆದಿತ್ಯವಾರ ಸಂಘದ ಮೈದಾನದಲ್ಲಿ ನಡೆಯಿತು 

   ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಿವ ಛತ್ರಪತಿ ಪ್ರಶಸ್ತಿ ವಿಜೇತ  ಕಬ್ಬಡಿ  ಕ್ರೀಡಾಪಟು  ಜಯ  ಎ ಶೆಟ್ಟಿ  ಮಾತನಾಡುತ್ತಾ ಕ್ರೀಡೆಯು ಮನಸ್ಸಿನ ವಿಕಾಸಕ್ಕೆ ಹಾಗೂ ಸಮಾಜದ ಒಗ್ಗಟ್ಟಿಗೆ ಪ್ರೇರಣಾ ಶಕ್ತಿ . ನನ್ನ ಕುಟುಂಬವು ಕಬಡ್ಡಿ ಆಟದಿಂದಲೇ ಸಮಾಜದಲ್ಲಿ ಗುರುತಿಸಲ್ಪಟ್ಟು, ಕ್ರೀಡೆಯೇ ನಮ್ಮ ಆಸ್ತಿಯಾಗಿದೆ ಎಂದು ಹೇಳುತ್ತಾ ಪನ್ವೇಲ್ ಪರಿಸರದಲ್ಲಿ ಒಂದು ಕಬಡ್ಡಿ ಪಂದ್ಯಾಟವನ್ನು ಆಯೋಜಿಸುವಂತೆ ಕರ್ನಾಟಕ ಸಂಘದ ಪದಾಧಿಕಾರಿಗಳಲ್ಲಿ ವಿನಂತಿಸಿದರು .

ಬೆಳಿಗ್ಗೆ ನಡೆದ ಕ್ರೀಡಾಕೂಟದ ಉದ್ಘಾಟನಾ ಸಭೆಯಲ್ಲಿ ಸಂಘದ ಕಾರ್ಯಧ್ಯಕ್ಷರಾದ ನಗರ ಸೇವಕ ಸಂತೋಷ್ ಜಿ ಶೆಟ್ಟಿ ಯವರು, ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಪದ್ಮ , ಸಂಘದ ಉಪಾಧ್ಯಕ್ಷ ಗುರು ಶೆಟ್ಟಿ ಕಾಪು,  ಗೌರವ ಪ್ರಧಾನ ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ತ್ಯಾರು , ಜೊತೆ ಕಾರ್ಯದರ್ಶಿ ಕಾಂತಿ ಶೆಟ್ಟಿ ,  ಕೋಶಾಧಿಕಾರಿ ಸುಧಾರಾವ್ ರವರು ಉದ್ಘಾಟಿಸಿದರು .

 ಸಂಘದ ಸದಸ್ಯರಿಂದ ಪಥ ಸಂಚಲನ ಹಾಗೂ ಕ್ರೀಡಾ ಜ್ಯೋತಿಯನ್ನು ಬೆಳಗಿಸುವುದರ  ಮೂಲಕ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದ ನಿರೂಪಣೆಯನ್ನು ಕುಮಾರಿ ಶ್ಲೋಕ ಸಂತೋಷ್  ಶೆಟ್ಟಿ ಹಾಗೂ ವಂದನಾರ್ಪಣೆಯನ್ನು ಕುಮಾರಿ ಶಬರಿ ಶಿವಾಜಿ ಶೆಟ್ಟಿಯವರು ಮಾಡಿದರು.

 ಬೆಳಿಗ್ಗೆ  ಪ್ರಾರಂಭವಾದ ಕ್ರೀಡಾ ಸ್ಪರ್ಧೆಯು ಸಂಜೆ   ತನಕ ಬಹಳ ಶಿಸ್ತು ಬದ್ಧವಾಗಿ ಮೂಡಿಬಂದಿತ್ತು. ಐದು ವರ್ಷದ ಮೇಲ್ಪಟ್ಟ ಮಕ್ಕಳಿಂದ ಹಿಡಿದು 60 ವರ್ಷ ವಯಸ್ಸಿನ ಸದಸ್ಯರು ಕೂಡ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಿ ಕ್ರೀಡೋತ್ಸವದ ಅನುಭವವನ್ನು ಪಡೆದರು. ಮಕ್ಕಳಿಗೆ ಯುವಕರಿಗೆ ಮಹಿಳೆಯರಿಗೆ ಹಾಗೂ ವಯಸ್ಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು .

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ  ಕ್ರೀಡಾಪಟು ವೈಟ್ ಲಿಫ್ಟರ್  ಅರುಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. 

ಕಾರ್ಯದರ್ಶಿ ಸತೀಶ್ ಶೆಟ್ಟಿ ಕುತ್ಯಾರು ವಿಜೇತ ಸ್ಪರ್ಧಾಳುಗಳನ್ನು ಅಭಿನಂದಿಸಿ ಕಾರ್ಯಕ್ರಮದ ಸಂಪೂರ್ಣ ಸಂಯೋಜನೆಯು ಶಿಸ್ತುಭದ್ಧವಾಗಿ ಮೂಡಿಬಂದು ಸದಸ್ಯರೆಲ್ಲರ ಒಮ್ಮತದ ಸಹಕಾರ ಮುಂದೆಯೂ ಇದೇ ರೀತಿ ನಿರಂತರವಾಗಿರಲಿ .ಸಣ್ಣಪುಟ್ಟ ತಪ್ಪುಗಳಾಗಿದ್ದರೆ ಮನಸ್ಸಿಗೆ ಹಚ್ಚುಕೊಳ್ಳದೆ ಈ ಕ್ರೀಡೋತ್ಸವ ಎಲ್ಲಾ ಸದಸ್ಯರ ಪರಿವಾರದ ಸ್ನೇಹ ಸಮ್ಮೇಳನ ಸಮಾರಂಭದ ಪ್ರೀತಿಯ ಜ್ಯೋತಕವಾಗಿ ಸಾಕಾರಗೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಪ್ರಶಂಶಿಸಿದರು.

 ಉಪಾಧ್ಯಕ್ಷ ಗುರುಶೆಟ್ಟಿಯವರು ಮಾತನಾಡುತ್ತಾ ಸುಮಾರು ಏಳು ವರ್ಷಗಳ ಅಂತರದ ನಂತರ ಪುನಃ ಪ್ರಾರಂಭಿಸಿದ ಈ ಕ್ರೀಡೋತ್ಸವ ಮುಂದಿನ ವರುಷದ ಕ್ರೀಡೋತ್ಸವಕ್ಕೆ ಸ್ಪೂರ್ತಿದಾಯಕ ಹಾಗೂ ಪ್ರೇರಣಾ ಶಕ್ತಿ ಆಗಿರಲಿದೆ ಎಂದರು .ಅದೇ ರೀತಿ ಪ್ರತಿಯೊಬ್ಬರೂ ನೀಡಿದ ಪ್ರತ್ಯಕ್ಷ ಪರೋಕ್ಷ ಸಹಕಾರವನ್ನು ನೆನಪಿಸಿದರು.

ಮಹಿಳಾ ವಿಭಾಗದ ಅಧ್ಯಕ್ಷೆ  ಶಶಿಕಲ ದಾಬ್ಕೆ ಯವರು ವೇದಿಕೆಯಲ್ಲಿ  ಉಪಸ್ಥಿತರಿದ್ದರು.

 ಪರಿಸರದ ಉದ್ಯಮಿಗಳ, ಹೋಟೆಲ್ ಮಾಲೀಕರ, ದಾನಿಗಳ  ಆಡಳಿತ ಮಂಡಳಿಯವರ ಹಾಗೂ ಉಪಸಮಿತಿಯ ಮಹಿಳಾ ವಿಭಾಗದ ಪದಾಧಿಕಾರಿಗಳ ಹಾಗೂ ಸದಸ್ಯರ ಸಂಪೂರ್ಣ ತನುಮನ ಧನದ ಸಹಕಾರದಿಂದ ಕ್ರೀಡೋತ್ಸವದ ಸಮಾರಂಭವು ಉತ್ಕೃಷ್ಟ ರೀತಿಯಲ್ಲಿ ಸಂಪನ್ನಗೊಂಡಿತು. ಪನ್ವೇಲ್ ನ ಹೋಟೆಲ್   ಸ್ವೈಸ್ವವಾಡಿ, ಲೇಕ್ ಸೈಟ್ ಇನ್ ,ಕೊಂಕಣ್ ದೀಪ್ ಹೋಟೆಲ್, ಹೋಟೆಲ್ ಪದ್ಮ, ಸ್ಪೇಸ್ ಇಂಡಿಯಾ ಲಿಮಿಟೆಡ್ ನವರ ಪ್ರಾಯೋಜಕತ್ವದಲ್ಲಿ ಹಾಗೂ ವಿಶೇಷ ಸಹಕಾರದಿಂದಾಗಿ ಕ್ರೀಡೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ಕುಮಾರಿ ಸ್ಪರ್ಶ ಶಶಿ ಶೆಟ್ಟಿ ಅವರು ನಿರೂಪಿಸಿ ವಂದಿಸಿದರು. ಎಲ್ಲರಿಗೂ ಬೆಳಗಿನ ಉಪಹಾರ ಮಧ್ಯಾಹ್ನದ ಊಟ ಹಣ್ಣು ಹಂಪಲು ಸಂಜೆ ಚಹಾ ತಿಂಡಿ ಹಾಗೂ ರಾತ್ರಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

———-*———————

ಪನ್ವೆಲ್ ಪರಿಸರದ ತುಳು ಕನ್ನಡಿಗರ ಒಗ್ಗಟ್ಟು ಸಂಘದ ಉದ್ದೇಶ,!,ಭಾಸ್ಕರ್ ಶೆಟ್ಟಿ .ಪದ್ಮ 

    ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಸಂಘ ಪನ್ವೆಲ್ ಅಧ್ಯಕ್ಷರಾದ ಭಾಸ್ಕರ್ ಶೆಟ್ಟಿ ಪದ್ಮ ಅವರು ಮಾತನಾಡಿ ಸಂಘದ ಈ ರೀತಿಯ ಅಭಿವೃದ್ಧಿಗೆ  ದಾನಿಗಳ ಪ್ರೋತ್ಸಾಹ ,ಸಹಕಾರವೇ ಕಾರಣ.  ಸದಸ್ಯರ ಮಕ್ಕಳು ಹೆಚ್ಚು ಹೆಚ್ಚು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಬೇಕು . ಈ ನಿಟ್ಟಿನಲ್ಲಿ ಹೆತ್ತವರು ಕಾಳಜಿ ವಹಿಸಿ ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾಗ.ಪನ್ವೆಲ್ ಪರಿಸರದ ತುಳು ಕನ್ನಡಿಗರ     ಒಗ್ಗಟ್ಟಾಗಿ ಇರಬೇಕು ಎನ್ನುವುದೇ ಸಂಘದ ಉದ್ದೇಶವಾಗಿದೆ ಎಂದು ತಿಳಿಸಿದರು .

Related posts

ತುಳು ಸಂಘ ಬೊರಿವಲಿ ಯುವ ವಿಭಾಗದಿಂದ ಕ್ರಿಕೆಟ್ ಪಂದ್ಯಾಟ, – ಕ್ರೀಡೆಗಳು ಸಂಘದ ಅಭಿವೃದ್ದಿಗೆ ಪೂರಕವಾಗಲಿ – ಹರೀಶ್ ಮೈಂದನ್

Mumbai News Desk

*ಸರ್ವ ಬಂಟರ ಕ್ರೀಡಾ ಕೂಟದ *ವಾರ್ಷಿಕ ಕ್ರಿಕೆಟ್ ಬಂಟ್ಸ್ ಕಪ್,*ಸತತ ಎರಡನೆಯ ಬಾರಿ  ” ಜಲದುರ್ಗಾ “ತಂಡಕ್ಕೆ ಟ್ರೋಫ಼ಿ

Mumbai News Desk

ರಾಷ್ಟ್ರೀಯ ಮಟ್ಟದ ಕರಾಟೆ ಕ್ಷೇತ್ರದಲ್ಲಿ ಗುರುತಿಸಿಕೊಂಡ ಹರ್ಷಿತಾ ಪೂಜಾರಿ   ಇನ್ನಂಜೆ

Mumbai News Desk

ಸುರತ್ಕಲ್ ಬಂಟರ ಸಂಘದ ವಾರ್ಷಿಕ ಕ್ರೀಡಾಕೂಟ

Mumbai News Desk

ಬೊಯಿಸರ್ ನಲ್ಲಿ ತುಂಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಮೆಂಟ್ ಸಮಾರೋಪ ಸಮಾರಂಭ

Mumbai News Desk

ನೇಪಾಳದಲ್ಲಿ ಜರಗಿದ ಏಷಿಯನ್ ಥಾಯ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಜಾನ್ವಿ ಮನೋಜ್ ಕೋಟ್ಯಾನ್

Mumbai News Desk