
ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡಿದ್ದು ಮಹಾನ್ ಸಂತ ಪೇಜಾವರ ಶ್ರೀ,: ಡಾ। ರಾಮದಾಸ ಉಪಾಧ್ಯಾಯ ರೆಂಜಾಳ
ಚಿತ್ರ ವರದಿ ದಿನೇಶ್ ಕುಲಾಲ್.
ಮುಂಬಯಿ : ಉಡುಪಿಯ ಅಷ್ಟಮಠಗಳಲ್ಲಿ ಒಂದಾಗಿರುವ ಪೇಜಾವರ ಮಠದ ಜಗದ್ಗುರು ಪರಮ ಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ 4ಯ ಆರಾಧನ ಮಹೋತ್ಸವವು ಜ. 14ರಂದು ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ಪರಮಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಮಾರ್ಗದರ್ಶನದಂತೆ ಬೆಳಗ್ಗಿನಿಂದ ಧಾರ್ಮಿಕ ಕಾರ್ಯಗಳು ನಡೆದವು.
ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ। ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ ಮತ್ತು ವಿಪ್ರ ವೃಂದದ ಬಂದದವರ ಸಾಯೋಗದಿಂದ ವಿಷ್ಣುಸಾಯುಜ್ಯ ಪೂಜೆ ನಡೆಯಿತು.
ಬಳಿಕ ಮದ್ದೇಶ ಭಜನಾ ಮಂಡಳಿ ಪೇಜಾವರ ಮಠದಯವರಿಂದ ಭಜನೆ ನಡೆಯಿತು.
ಈ ಸಂಧರ್ಭದಲ್ಲಿ ಡಾ। ರಾಮದಾಸ ಉಪಾಧ್ಯಾಯ ರೆಂಜಾಳ್ ಅವರು ಗುರುಗಳ ಸಂಸ್ಮರಣೆ ಉಪ ನ್ಯಾಸ ನೀಡುತ್ತಾ ಹಿಂದೂ ಧರ್ಮದ ಧಾರ್ಮಿಕ ಗುರುಗಳು ಅಲ್ಲಲ್ಲಿ ಮಠಗಳನ್ನು ಕಟ್ಟಿರಬಹುದು. ಆದರೆ ಸಮರ್ಥ ರೀತಿಯಲ್ಲಿ ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದರೊಂದಿಗೆ ದೊಡ್ಡ ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾ ಅದರಲ್ಲಿ ಧಾರ್ಮಿಕ ವಿಧಿಗಳನ್ನು ನಡೆಸುವ ಅವಕಾಶವನ್ನು ನೀಡಿ ಗುರುಗಳೆಂದರೆ ಅದು ಪೇಜಾವರ ಶ್ರೀಗಳು, ದೇಶದಎಲ್ಲಾ ಕಡೆ ದೀಪದ ಜ್ಞಾನವನ್ನು ಅರಡಿಸಿದ ಅವರು ನಿಜಕ್ಕೂ ದೇವರಿಗೆ ಸಮಾನರಾದವರು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ನಾಲ್ಕನೆಯ ಆರಾಧನಾ ಮಹೋತ್ಸವ ಸಾಧನ ಸಂತಾನ ಸ್ಮರಣೆಯಾಗಿದೆ. 60 ವರ್ಷಗಳ ಕಾಲ ನಮ್ಮ ಭಾರತ ದೇಶದಲ್ಲಿ ಪೇಜಾವರ ಸ್ವಾಮಿಗಳ ಎದುರು ನಿಂತು ವಾದ ಮಾಡುವ ವ್ಯಕ್ತಿಗಳು ಇರಲಿಲ್ಲ. ವಾದ ಮಾಡುವ ಧೈರ್ರ್ಯವೂ ಯಾರಿಗೂ ಇರಲಿಲ್ಲ. ಸ್ವಾಮೀಜಿಯವರು ವಿದ್ಯಾಪೀಠ ವನ್ನು ಕಟ್ಟಿದ್ದು ದೊಡ್ಡ ವಿಷಯ ಅಲ್ಲ. ಈಗ ಯಾರೆಲ್ಲ ಉಡುಪಿಯಲ್ಲಿ ಸ್ವಾಮೀಜಿಗಳಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವವರೆಲ್ಲ ಇದ್ದಾರೆ ಇವರೆಲ್ಲ ಪೇಜಾವರ ಸ್ವಾಮಿಗಳ ಶಿಷ್ಯರು. ಅವರು ನಮ್ಮ ಪರಂಪರೆಯನ್ನು ಉಳಿಸುವ ಕೆಲಸವನ್ನು ಮಾಡಿದ್ದು ಮಾತ್ರವಲ್ಲದೆ ನಮ್ಮ ಸಮಾಜದ ಪರಂಪರೆಯನ್ನು ಉಳಿಸುವ ಹೊಣೆಗಾರಿಕೆಯ ನಮ್ಮ ಮೇಲಿನ ಅದನ್ನು ಅವರು ನೆರವೇರಿಸಿದ್ದೇನೆ ಇದು ನಮ್ಮ ಪರಂಪರೆಗೆ ಕೊಟ್ಟ ಒಂದು ಕೊಡುಗೆ ಎನ್ನುತ್ತಾ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ 4 ಯ ಆರಾಧನ ಮಹೋತ್ಸವ ಕ್ಕೆ ಸಹಕರಿಸಿದ ಎಲ್ಲರನ್ನು ಅಭಿನಂದನೆಗಳು.
ಮಧ್ಯಾಹ್ನ ಮಹಾಪೂಜೆ ಬಳಿಕ ತೀರ್ಥ ಪ್ರಸಾದ ವಿತರಣೆ ನಡೆಯಿತು. ಈ ಪುಣ್ಯ ಕಾರ್ಯದಲ್ಲಿ . ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಗೆ . ಪೂರ್ಣ ಪ್ರಜ್ಞ ವಿದ್ಯಾಪೀಠ ಮುಂಬೈ ಡಾಕ್ಟರ್ ಎ ಎಸ್ ರಾವ್.ಕಾರ್ಯದರ್ಶಿ ಬಿ ಆರ್ ಗುರು ಮೂರ್ತಿ. ಕೋಶಧಿಕಾರಿ ಅವಿನಾಶ್ ಶಾಸ್ತ್ರಿ. ಹಾಗೂ ಅಪಾರ ಸಂಖ್ಯೆಯಲ್ಲಿ ಗುರುಭಕ್ತರು ಪಾಲ್ಗೊಂಡು ಪ್ರಸಾದವನ್ನು ಸ್ವೀಕರಿಸಿದರು.