July 23, 2026
Mumbai News Kannada
ಮುಂಬಯಿ

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 







   ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲನಿಯಲ್ಲಿರುವ ಉಡುಪಿ ಶ್ರೀ ಪೇಜಾವರ ಮಠದಲ್ಲಿ  ಮಧ್ವ ನವಮೀ ಆಚರಣೆಯನ್ನು ವೈಭವೋಪೇತವಾಗಿ ಆಚರಿಸಲಾಯಿತು. ಶ್ರೀಪೇಜಾವರ ಮಠದ ಮುಖ್ಯ ಪ್ರಬಂಧಕರಾದ ಡಾ! ರಾಮದಾಸ ಉಪಾಧ್ಯಾಯ ಇವರು ಪ್ರಸನ್ನ ಪೂಜೆ ಮಾಡಿ ಆಶೀರ್ವದಿಸಿದರು.  

ಬಳಿಕ ಅಮೇರಿಕಾ ರಾಷ್ಟ್ರದ ನ್ಯೂಯಾರ್ಕ್ ನಗರದಲ್ಲಿ, ಆಚಾರ್ಯ ಮಧ್ವರ ತತ್ವಜ್ಞಾನಪ್ರಸಾರಕಾರ್ಯ ನಡೆಸುತ್ತಿರುವ ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರೂ ಶ್ರೀ ಪೇಜಾವರ ಮಠಾಧೀಶರ ಶಿಷ್ಯರೂ ಆದ ವಿದ್ವಾನ್ ಶ್ರೀ ಶ್ರೀಧರ ಆಚಾರ್ಯರು ಉಪನ್ಯಾಸವನ್ನು ನಡೆಸಿಕೊಟ್ಟರು.

ಪರಮಪೂಜ್ಯ ಗುರುಗಳನ್ನು ಸ್ಮರಿಸುವುದರೊಂದಿಗೆ ಶ್ರೀಮಧ್ವಾಚಾರ್ಯರ ಅವತಾರ, ಅವರ ಮಹತ್ವ ಮತ್ತು ಅವರ ಲೀಲೆ.. ಲೋಕಕಲ್ಯಾಣಕ್ಕೆ ನಮ್ಮ ಕರ್ತವ್ಯ ಏನು? ಮುಂತಾದ ವಿಚಾರದಲ್ಲಿ ನೆರೆದ ಭಕ್ತರಿಗೆ ಮನಕ್ಕೆ ಮುದ ನೀಡುವಂತೆ ಸುಂದರವಾಗಿ ತಿಳಿಸಿದರು. 

ಪೇಜಾವರ ಮಠದ “ಮಧ್ವೇಶ ಭಜನಾ ಮಂಡಳಿ” ಯಿಂದ ಹರಿ ನಾಮ ಸಂಕೀರ್ತನೆ.. ನರ್ತನಸೇವೆಯೊಂದಿಗೆ ಕಾರ್ಯಕ್ರಮವು ವೈಭವೋಪೇತವಾಗಿ ಸಂಪನ್ನಗೊಂಡಿತು.

ಆರಂಭದಲ್ಲಿ ಪೇಜಾವರ ಮಠದಲ್ಲಿನ ಶಿಲಾಮಯಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀಕೃಷ್ಣನ ಸನ್ನಿಧಾನದಲ್ಲಿ ಅರ್ಚಕ ರಾಮಚಂಡ ಸಾಮಗ ಶಾಸಾನುಸಾರ ದೈನಂದಿನ ಪೂಜಾವಿಧಿಗಳನ್ನು ನೆರವೇರಿಸಿದರು. 

ಶ್ರೀ ಪೇಜಾವರ ಮಠದ ವಿದ್ವಾನ್ ಕೆರ್ವಾಶೆ ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗೈ ಸಹಕರಿಸಿದರು, ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಮಹಾಪ್ರಸಾದ ಸ್ವೀಕರಿಸಿದರು. 



Related posts

*“ಬಂಟ ಸಮಾಜ ಮಕ್ಕಳಿಗೆ ಶಿಕ್ಷಣದ ಜೊತೆ ಉತ್ತಮ ಸಂಸ್ಕಾರವನ್ನು ನೀಡಬೇಕು” -ಅಜಿತ್ ಕುಮಾರ್ ರೈ ಮಾಲಾಡಿ*

Mumbai News Desk

ತುಳು ಕನ್ನಡ ವೆಲ್ಫೇರ್ ಅಸೋಸಿಯೇಷನ್ ಮೀರಾ-ಭಾಯಂದರ್ ವತಿಯಿಂದ ಬಿ.ಎಸ್. ಕುರ್ಕಾಲ್ ದತ್ತಿನಿಧಿ ಪ್ರಶಸ್ತಿ ಪ್ರಧಾನ

Mumbai News Desk

ರಾವಲ್ಪಾಡ ಶ್ರೀ ದುರ್ಗಾಪರಮೇಶ್ವರೀ – ಶನೀಶ್ವರ ದೇವಸ್ಥಾನದ ವಾರ್ಷಿಕ  ಮಹಾಪೂಜೆ ,  ಧಾರ್ಮಿಕ ಸಭೆ, ಯಕ್ಷಗಾನ.

Mumbai News Desk

ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ,

Mumbai News Desk

ಮುಂಬೈ ಗಿರ್ ಗಾಂವ್ ನಲ್ಲಿ  “ಗುಡಿಪಾಡ್ವಾ”  ಹಿಂದೂ ನವ ವರ್ಷಾಚರಣೆಯ ಸಂಭ್ರಮ.

Mumbai News Desk

ಮುಂಬೈ : ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರಣವಿ ಸುಧೀರ್ ಅಮೀನ್ ಗೆ ಶೇ.94.60 ಅಂಕ.

Mumbai News Desk