
ಶ್ರೀ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಫೋರ್ಟ್, ಇವರಿಂದ ಶ್ರೀ ಶನಿ ಗ್ರಂಥ ಪಾರಾಯಣ.
ಚಿತ್ರ,ವರದಿ : ದಿನೇಶ್ ಕುಲಾಲ್
ಮುಂಬಯಿ ಜ 17. ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್, ಇದರ ಸುವರ್ಣ ಸಂಭ್ರಮದ ಪ್ರಯುಕ್ತ ವರ್ಷಾಂಪೂರ್ತಿ ನಡೆಯುವ ಸರಣಿ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಶನೀಶ್ವರ ದೇವರ ಕಥಾಶ್ರವಣ ಹಾಗು ಕಲ್ಪೋಕ್ಷ ಪೂಜೆ ತಾ13.1.24 ಶ್ರೀ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಫೋರ್ಟ್ ಇವರಿಂದ ನಡೆಯಿತು.
ಗ್ರಂಥವಾಚಕರಾಗಿ ಅಣ್ಣಪ್ಪ ಮೊಗವೀರ .ಸದಾನಂದ ಪೂಜಾರಿ. ಅರ್ಥದಾರಿಗಳಾಗಿ ವಿಶ್ವನಾಥ್ ಭಂಡಾರಿ. ವಾಸು ಸಾಲಿಯನ್. ಪ್ರವೀಣ್ ಪೂಜಾರಿ ಮತ್ತು ಜೆ.ಜೆ ಕೋಟ್ಯಾನ್ ಭಾಗವಹಿಸಿದರು.
ಬಳಿಕ ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ಅವರು ಮಹಾಪೂಜೆಯನ್ನು ನೆರವೇರಿಸಿದರು. ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಅವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿ ಶನಿ ಗ್ರಂಥ ಪಾರಾಯಣ ಮಾಡಿದ ತಂಡದ ಎಲ್ಲರಿಗೂ ಪ್ರಸಾದವನ್ನು ನೀಡಿದರು
ಈ ಸಂದರ್ಭದಲ್ಲಿ ಸಮಿತಿಯ ಗೌರವ ಕಾರ್ಯದರ್ಶಿ ಸಂತೋಷ್ ಶೆಟ್ಟಿ,ಕೋಶಧಿಕಾರಿ ಹರೀಶ್ ಸಾಲಿಯಾನ್, ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿ,ಮಹಿಳಾ ವಿಭಾಗದ ಕಾರ್ಯಧ್ಯಕ್ಷರಾದ ಶೀತಲ್ ಕೋಟ್ಯಾನ್ ಮತ್ತಿತರ ಸದಸ್ಯರು ಉಪಸ್ಥರಿದ್ದರು.