
ಮೀರಾ ರೋಡ್ ಪೂರ್ವ, ಮೀರಾ ಬಾಯಂದರ್ ರೋಡ್,ಸಿಲ್ವರ್ ಪಾರ್ಕ್ ಕಾಂಪ್ಲೆಕ್ಸ್ ನ ಶ್ರೀ ದುರ್ಗಾ ಭಜನಾ ಸೇವಾ ಮಂಡಳ ದ 21ನೇ ವಾರ್ಷಿಕ ಮಹಾಪೂಜೆ ಜ.21ರಂದು ಮೀರಾ ರೋಡ್ ಪೂರ್ವ ಭಾರತಿ ಪಾರ್ಕ್ ನ ಹೋಟೆಲ್ ಶ್ರೀ ಬಾಲಾಜಿ ಇಂಟರ್ನೆಷನಲ್ ನಲ್ಲಿ ನಡೆಯಲಿದೆ.
ಅಂದು ಬೆಳ್ಳಿಗ್ಗೆ 8.30 ರಿಂದ ಶ್ರೀ ಸತ್ಯನಾರಾಯಣ ಮಹಾಪೂಜಾ,10.30 ರಿಂದ 11.30ರ ತನಕ ಶ್ರೀ ಲಕ್ಷ್ಮಿ ದೇವಿ ಅಷ್ಟೋತ್ತರ ನಾಮಾವಳಿ ಹಾಗೂ ಕುಂಕುಮಾರ್ಚನೆ,12.05ರಿಂದ 12.15 ರ ವರೆಗೆ ಶನೀಶ್ವರ ದೇವ ಪ್ರತಿಷ್ಟಾಪನ.
12.15ಕ್ಕೆ ಶ್ರೀ ಶನೇಶ್ವರ ಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ(ಓಂಕಾರ ಭಜನಾ ಮಂಡಳಿ ಮೀರಾರೋಡ್ ಇವರ ಸಹಕಾರದಿಂದ )
ಮಧ್ಯಾಹ್ನ 3ರಿಂದ 6ರ ತನಕ ಮಹಿಳೆಯರಿಂದ ಹಳದಿ ಕುಂಕುಮ ಕಾರ್ಯಕ್ರಮ.
ಬಳಿಕ ಶ್ರೀ ದುರ್ಗಾ ಭಜನ ಮಂಡಳಿ ಮೀರಾ ರೋಡ್ ನ ಸದಸ್ಯರಿಂದ ಭಜನೆ, ಮಹಾ ಆರತಿ, ನಂತರ ತೀರ್ಥ-ಪ್ರಸಾದ ವಿತರಣೆ, ಕೊನೆಗೆ ಅನ್ನ ಸಂತರ್ಪಣೆ.
ವಾರ್ಷಿಕ ಮಹಾ ಪೂಜೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತ್ತೆ ಮಂಡಳದ ಗೌರವ ಅಧ್ಯಕ್ಷ ಸಂಜೀವ ಆರ್ ಪೂಜಾರಿ, ಅಧ್ಯಕ್ಷ ಶ್ಯಾಮ ಸಿ ಆಮೀನ್, ಕಾರ್ಯದರ್ಶಿ ಲೀಲಾ ಗಣೇಶ್ ಕಾರ್ಕಳ ಕೋಶಾಧಿಕಾರಿ ಸುಜಾತ ಜೆ ಕೋಟ್ಯಾನ್, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಜೊತೆ ಕಾರ್ಯದರ್ಶಿ ಸುಜಯ ಎ ಶೆಟ್ಟಿ, ಜೊತೆ ಕೋಶಾಧಿಕಾರಿ ಸುಶ್ಮಿತ ಸಿ ಶೆಟ್ಟಿ, ಅರ್ಚಕ ನಾರಾಯಣ ಅಂಚನ್, ಭುವಜಿ ಸುಧೀರ್ ಶೆಟ್ಟಿ, ಸಲಹೆಗಾರ ಕೆ ವಿ ಮಹಾಬಲ ಹಾಗೂ ಆಡಳಿತ ಸಮಿತಿಯ ಸದಸ್ಯರು, ಮಹಿಳಾ ವಿಭಾದವರು ವಿನಂತಿಸಿದ್ದಾರೆ.