
ಪನ್ವೇಲ್ ಜ20.ನವಿ ಮುಂಬಯಿ ಯ ನ್ಯೂ ಪನ್ವೇಲ್
ಶ್ರೀ ರಾಮ ಭಕ್ತ ಸಮಿತಿ, ” ಹಾಗೂ ಪನ್ವೇಲ್ ಪರಿಸರದ ಸಮಸ್ಥರು ಶ್ರೀ ರಾಮ ಭಕ್ತರ ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠಾ ಮಹೋಸ್ತವ ಅಂಗ ವಾಗಿ ನಾಳೆ ಜ22ನೇ ಸೋಮವಾರ ಅಯೋಧ್ಯೆಯಲ್ಲಿ ಶ್ರಿ ರಾಮ ಮಂದಿರದ ಭವ್ಯ ಉದ್ಘಾಟನಾ ಸಮಾರಂಭ ಸಮಯದಲ್ಲಿ ಶ್ರೀ ನ್ಯೂ ಪನ್ವೇಲ್ ನ ಶ್ರೀ ಜೈ ಅಂಬೇ ಮಾತಾ ಮಂದಿರ ಮೈದಾನ, ಸೆಕ್ಟರ್ 2, ಇಲ್ಲಿ ಶ್ರೀ ರಾಮ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮಗಳು ಬೆಳಿಗ್ಗೆ 8 ರಿಂದ 10.30 ರ ತನಕ
ಶ್ರೀ ರಾಮ ಮಂತ್ರ ಮತ್ತು ಹೋಮ.
(ಶ್ರೀ ಸುಬ್ರಹ್ಮಣ್ಯ ಮಠ , ಚೆಡ್ಡ ನಗರ, ಚೆoಬೂರ್ ಇವರಿಂದ)10.30ರಿಂದ 12ರ ತನಕ
ಭಕ್ತಿ ಸಂಗೀತ (ಮುಕೇಶ್ ಉಪಾಧ್ಯ ಪ್ರಸ್ತುತಿ ಮೇರೆ ಘರ್ ರಾಮ್ ಅಯ್ಯಾ ಹೈ)ಮಧ್ಯಾಹ್ನ 12ರಿಂದ 1.30 ರ ತನಕ
ಪ್ರಾಣ ಪ್ರತಿಷ್ಠಾ ,ಅಯೋಧ್ಯೆಯಿಂದ ನೇರ ಪ್ರಸಾರ
1.30 ರಿಂದ 4 ರ ತನಕ ಮಹಾಪ್ರಸಾದ
ಸಾಯಂಕಾಲ 7 ರಿಂದದೀಪೋತ್ಸವ ನಡೆಯಲಿದೆ,

ಈ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾಗಿರುವ ಪನ್ವೆಲ್ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ಈ ಬೃಹತ್ ಕಾರ್ಯಕ್ರಮದಲ್ಲಿ ಸಮಸ್ತ ತುಳು ಕನ್ನಡಿಗರು ಪಾಲ್ಗೊಂಡು ಭಾರತೀಯ ಸಂಸ್ಕೃತಿ ಮತ್ತು ಸನಾತನ ಧರ್ಮದ ಪ್ರತೀಕ ಶ್ರೀ ರಾಮ ಜನ್ಮಭೂಮಿಯಲ್ಲಿ ಶ್ರಿ ರಾಮನ ದೇಗುಲ ಆಗುತ್ತಿರುವುದು ನಮ್ಮ ಸೌಭಾಗ್ಯವೇ. ನಮ್ಮ ಪೂರ್ವಜರ ಮತ್ತು ಅದೆಷ್ಟೋ ರಾಮ ಭಕ್ತರ ಬಲಿದಾನದಿಂದ ಮತ್ತು ಹಿಂದೂ ಸಮಾಜದ ಸತತ ಸಂಘರ್ಷದಿಂದ ಐನೂರು ವರ್ಷಗಳ ನಂತರ ಪುನಃ ಅಯೋಧ್ಯೆಯಲ್ಲಿ ಶ್ರೀರಾಮ ಮತ್ತೆ ವಿರಾಜಮಾನ ಆಗಲಿದ್ದಾರೆ. ಇದಕ್ಕಿಂತ ದೊಡ್ಡ ಹಬ್ಬವೇ ಇಲ್ಲ. ಇದು ನಮಗೆಲ್ಲರಿಗೂ ಮಹಾದೀಪಾವಳಿ ವಾಗಿ ರಾಮ ಮಹೋತ್ಸವ ಆಚರಿಸೋಣ. ವೆಂದು ಸಂತೋಷ್ ಶೆಟ್ಟಿ ದಂಪತಿಗಳು ತಿಳಿಸಿದ್ದಾರೆ
ಸುದ್ದಿ: ದಿನೇಶ್ ಕುಲಾಲ್