April 1, 2025
ಕ್ರೀಡೆ

ಬಹುಮುಖ ಪ್ರತಿಭೆಯ ಬಾಲ ಪ್ರತಿಭೆ ಬೆಳ್ತಂಗಂಡಿಯ ಶ್ರೇಯಸ್ ಯೋಗೇಶ್ ಪೂಜಾರಿ.

ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದ ನಿವಾಸಿಯಾಗಿರುವ ಯೋಗಿಶ್ ಪೂಜಾರಿ ಮತ್ತು ಶ್ರೀಮತಿ ಶಕುಂತಲಾ ದಂಪತಿಗಳ ಸುಪುತ್ರರಾಗಿ ಸಪ್ಟೆಂಬರ್ 5 2010 ರಂದು ಜನಿಸಿದ ತಾವು ತಮ್ಮ ಶಿಕ್ಷಣವನ್ನು ಒಂದನೇ ತರಗತಿಯಿಂದ ಐದನೇ ತರಗತಿಯವರೆಗೆ ಕೆಪಿಎಸ್ ಪುಂಜಾಲ್ಕಟ್ಟೆ ಶಾಲೆಯಲ್ಲಿ ಮಾಡಿದ್ದೀರಿ ಪ್ರಸ್ತುತ ಮಚ್ಚಿನ ಮೊರಾರ್ಜಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದು ತನ್ನ ಎಳೆಯ ವಯಸ್ಸಿನಲ್ಲಿ ಕರಾಟೆ ಅಭ್ಯಾಸವನ್ನು ಮುಖ್ಯ ಶಿಕ್ಷಕ ಶಿಹಾನ್ ವಸಂತ ಕೆ ಬಂಗೇರರ ಬಳಿ ಪಡೆಯುತ್ತಿದ್ದು ತನ್ನ ಹೆಸರಿನಂತೆಯೇ ಎಳೆಯ ಪ್ರಾಯದಲ್ಲಿ ತಾವು ಕರಾಟೆಯಲ್ಲಿ ಮಾಡಿದ ಸಾಧನೆಗೆ ಅಭಿನಂದನೆಗಳು. ಪಠ್ಯ ಹಾಗೂ ಪಠ್ಯತರ ಚಟುವಟಿಕೆಗಳಲ್ಲಿ ಚುರುಕಾಗಿರುವ ಶ್ರೇಯಸ್ ಪೂಜಾರಿ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಇವರು ಈವರೆಗೆ ಭಾಗವಹಿಸಿದ ಎಲ್ಲಾ ಕರಾಟೆ ಕೂಟಗಳಲ್ಲೂ ಸೇರಿದಂತೆ 10 ಚಿನ್ನದ ಪದಕ 9 ಬೆಳ್ಳಿಯ ಪದಕ ಎಂಟು ಕಂಚಿನ ಪದಕ ಹೀಗೆ ಒಂದಲ್ಲ ಒಂದು ಪದಕ ನಿರೀಕ್ಷೆ ಮಾಡುವಂತ ಗ್ರಾಮೀಣ ಪ್ರತಿಭೆ ಎಳೆಯ ಬಾಲಕ ಶ್ರೇಯಸ್ ಪೂಜಾರಿ

ಕರಾಟೆ ಮಾತ್ರವಲ್ಲದೆ ಕಬಡ್ಡಿ,ಕೋಕೋ, ಕ್ರಿಕೆಟ್,ಭಕ್ತಿಗೀತೆ ಸ್ಪರ್ಧೆ,ಪ್ರತಿಭಾ ಕಾರಂಜಿ, ಚದ್ಮವೇಷ ಇಂಥ ಹಲವಾರು ವಿಷಯಗಳಲ್ಲಿ ಪ್ರತಿಭಾವಂತರಾಗಿರುವ ಶ್ರೇಯಸ್ ಪೂಜಾರಿ ಈವರೆಗೆ ನಡೆದ ಸ್ಪರ್ಧೆಯಲ್ಲಿ 2018 ರಲ್ಲಿ ಸ್ಟೇಟ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ಒಂದು ಬೆಳ್ಳಿಯ ಪದಕ ಮತ್ತು 2018ರಲ್ಲಿ ನ್ಯಾಷನಲ್ ಲೆವೆಲ್ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ 2019-20 ರಲ್ಲಿ ಸಿಹಾನ್ ಕೌಶಕು ಯಕೋತ ಚೀಪ್ ಡೈರೆಕ್ಟರ್ ಜಪಾನ್ ಅವರಿಂದ ಕೇರಳದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ ಹಾಗೂ 2019ರ ನೇ ಕಿನ್ನಿಗೋಳಿಯಲ್ಲಿ ನಡೆದಂತ ಸ್ಟೇಟ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ಹಾಗೂ 2019 ಸ್ಟೇಟ್ ಲೆವೆಲ್ ಓಪನ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಕಂಚಿನ ಪದಕವನ್ನು ಪಡೆದಿರುತ್ತಾರೆ ಹಾಗೂ 2019ರ ನಡೆದಂತ ಸ್ಟೇಟ್ ಲೆವೆಲ್ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಪ್ರಥಮ ಸ್ಥಾನ 2ಚಿನ್ನದ ಪದಕ ಪಡೆದಿರುತ್ತಾರೆ ಹಾಗೂ 12ನೇ ನ್ಯಾಷನಲ್ ಲೆವೆಲ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಇನ್ನೊಂದು ಕಂಚಿನ ಪದಕವನ್ನು ಪಡೆದಿರುತ್ತಾರೆ 2020ರಲ್ಲಿ ನಡೆದಂತಹ ಅಂಬಲಪಾಡಿ ಟ್ರೋಪಿಯಲ್ಲಿ ಭಾಗವಹಿಸಿ ಎರಡು ಕಂಚಿನ ಪದಕವನ್ನು ಪಡೆದಿರುತ್ತಾರೆ ಒಂದನೇ ಕರ್ನಾಟಕ ರಾಜ್ಯಮಟ್ಟದ ಹಪಿಕಿಡೋ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆದಿರುತ್ತಾರೆ 2022 ರಲ್ಲಿ ನಡೆದ ಮೂರನೇ ಅಂತರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ ಹಾಗೂ 2023ರಲ್ಲಿ ನಡೆದ ಫಸ್ಟ್ ಇಂಟರ್ನ್ಯಾಷನಲ್ ಲೆವೆಲ್ ಕರಾಟೆ ಓಪನ್ ಚಾಂಪಿಯನ್ ಶಿಪ್ ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಪಡೆದಿರುತ್ತಾರೆ ಹಾಗೂ 2023ರಲ್ಲಿ ನಡೆದ ಮೈಸೂರು ಓಪನ್ ನ್ಯಾಷನಲ್ ಲೆವೆಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಒಂದು ಚಿನ್ನದ ಪದಕ ಮತ್ತು ಒಂದು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ ಹಾಗೂ 4 2.2023 ರಲ್ಲ ಮುದಾ ಸ್ಪೋರ್ಟ್ಸ್ ಗ್ರೌಂಡ್ ಮೈಸೂರಿನಲ್ಲಿ ನಡೆದ ನೊಬೆಲ್ ವರ್ಲ್ಡ್ ರೆಕಾರ್ಡ್ ಭಾಗವಹಿಸಿ ತಮ್ಮ ಹೆಸರನ್ನು ವರ್ಲ್ಡ್ ರೆಕಾರ್ಡ್ ಬುಕ್ಕಲ್ಲಿ ಹೆಸರಿನ ಚಾಪನ್ನು ಮೂಡಿಸಿದ್ದಾರೆ ತಮ್ಮ ಸಾಧನೆಯಿಂದ ಹಿಂದೆ ನಿಂತ ಪೋಷಕರು ಮತ್ತು ಗುರುಗಳ ಅತ್ಯುತ್ತಮ ಮಾರ್ಗದರ್ಶನದಿಂದ ತನ್ನೂರಿಗೆ ತಮ್ಮ ತಾಲೂಕಿಗೆ ತನ್ನ ಶಾಲೆಗೆ ಮತ್ತು ಹೆತ್ತವರಿಗೆ ಹೆಸರನ್ನು ತಂದು ಕೊಟ್ಟಿದ್ದಾರೆ ಒಲಿದು ಬಂದಂತ ಪ್ರಶಸ್ತಿಗಳು 75 ನೆಯ ಅಮೃತ ಸ್ವತಂತ್ರ ಮಹೋತ್ಸವ ಪ್ರಶಸ್ತಿ ಗುರುದೇವ ಪ್ರತಿಭಾ ಪುರಸ್ಕಾರ ಜೆ ಸಿ ಐ ಪ್ರತಿಭಾ ಪುರಸ್ಕಾರ v4 ಬೆಸ್ಟ್ ಪ್ರತಿಭಾ ಪುರಸ್ಕಾರ ನಮ್ಮ ನೆಚ್ಚಿನ ಶಾಸಕರಾದ ಹರೀಶ್ ಪೂಂಜಾ ಅವರಿಂದ ಪ್ರತಿಭಾ ಪುರಸ್ಕಾರ ಹಾಗೂ ಇನ್ನು ಮುಂದಿನ ಭವಿಷ್ಯ ಉಜ್ಜಲವಾಗಿರಲಿ ತಮ್ಮ ಹೆಸರಿನಂತೆ ಶ್ರೇಯಸು ಲಭಿಸಲಿ ಎಂದು ಆಶಿಸುತ್ತೇವೆ.

Related posts

ಡಬ್ಲ್ಯೂ ಐ ಎಫ್ ಎ ಅಂತರ್ ಜಿಲ್ಲಾ ಸಬ್ ಜ್ಯೂನಿಯರ್ ಫುಟ್ಬಾಲ್ ಪಂದ್ಯಾಟ, ಸಮರ್ಥ್ ರೈ ಅವರ ಅದ್ಬುತ ಆಟದಿಂದ ಮುಂಬಯಿ ತಂಡಕ್ಕೆ ಜಯ.

Mumbai News Desk

ವಿಶ್ವ ಬಂಟರ  ಕ್ರೀಡಾಕೂಟದಲ್ಲಿ ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಗೆ ಸಮಗ್ರ ಚಾಂಪಿಯನ್

Mumbai News Desk

ಆಸ್ಟ್ರೇಲಿಯಾದಲ್ಲಿ ಟೀಮ್ ಇಂಡಿಯಾಗೆ ಮಹಾಮೋಸ – ಅನ್ಯಾಯದ ತೀರ್ಪಿಗೆ ಯಶಸ್ವಿ ಜೈಸ್ವಾಲ್ ಬಲಿ.

Mumbai News Desk

ಬಿ ಎಸ್ ಕೆ ಬಿ ಎಸ್ಸೋಸಿಯೇಷನ್ ಮುಂಬಯಿ; ಗೋಕುಲ ಶತಮಾನೋತ್ಸವ ಆಚರಣೆಯ ನಿಮಿತ್ತ ತುಳು ಕನ್ನಡಿಗ ಗೇಮ್ಸ್ 2025,

Mumbai News Desk

ಸುರತ್ಕಲ್ :  ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, 

Mumbai News Desk

ಏಷ್ಯನ್ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ಕಮಿಟಿ (AMW);    ಅಂತರಾಷ್ಟ್ರೀಯ ವೇಟ್ ಲಿಫ್ಟರ್ ಉದಯ  ಶೆಟ್ಟಿ  ಆಯ್ಕೆ

Mumbai News Desk