
ಜಯ ಎನ್ ಶೆಟ್ಟಿಯವರು ಸೇವಾ ಕಾರ್ಯಗಳು ಸಮಾಜದಲ್ಲಿ ಅಜರಾಮ: ಸಿಎ ಸುರೇಂದ್ರ ಕೆ ಶೆಟ್ಟಿ,
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ ಜ 20 . ನಗರದ ಪ್ರತಿಷ್ಠಿತ ಜಾತಿಯ ಸಂಘಟನೆ ಬೋಂಬೆ ಬಂಟ್ಸ್ ಎಸೋಸಿಯೇಶನ್ ಮಾಜಿ ಅಧ್ಯಕ್ಷರಾದ ಜಯ ಎನ್ ಶೆಟ್ಟಿ ಅವರಿಗೆ ಬೋಂಬೆ ಬಂಟ್ಸ್ ಎಸೋಸಿಯೇಶಶನ್ ವತಿಯಿಂದ ಶ್ರದ್ಧಾಂಜಲಿ ಸಭೆಯು ಜ 20ರಂದು ಶನಿವಾರ ಸಯನ್ ನಿತ್ಯಾನಂದ ಸಭಾ ಗೃಹದಲ್ಲಿ ನಡೆಯಿತು.
ಬೋಂಬೆ ಬಂಟ್ಸ್ ಎಸೋಸಿಯೇಶನ್ ಅಧ್ಯಕ್ಷ ಸಿಎ ಸುರೇಂದ್ರ ಕೆ ಶೆಟ್ಟಿ, ಅಧ್ಯಕ್ಷತೆಯಲ್ಲಿ ನಡೆಯದ ಶ್ರದ್ಧಾಂಜಲಿ ಜಯ ಎನ್ ಶೆಟ್ಟಿ ಅವರಿಗೆ ನುಡಿ ನಮನ ಸಲ್ಲಿಸುತ್ತಾ ಸಮಾಜವನ್ನು ಕುಟುಂಬವನ್ನು ಸನ್ನಡತೆಯಲ್ಲಿ ಬೆಳೆಸಿದ್ದಾರೆ, ಎಲ್ಲರೊಂದಿಗೆ ಅನನ್ಯ ಸಂಬಂಧವನ್ನು ಬೆಳೆಸಿಕೊಂಡು ಸದಾ ನಗುಮುಖದೊಂದಿಗೆ ಸಮಾಜದ ಸೇವೆ ಮಾಡಿದ್ದಾರೆ ಅವರ ಸೇವಾ ಕಾರ್ಯಗಳು ಸಮಾಜದಲ್ಲಿ ಅಜರಾಮವಾಗಿ ಉಳಿಯುತ್ತದೆ ಎಂದು ನುಡಿದರು.
ಅಸೋಸಿಯೇಷನ್ನ ಮಾಜಿ ಅಧ್ಯಕ್ಷ ಟ್ರಸ್ಟಿ ಎನ್ ಸಿ ಶೆಟ್ಟಿ ಮಾತನಾಡುತ್ತಾ ಮಧ್ಯ ಗುತ್ತು ನವರು ಕುಟುಂಬ ಎಸೋಸಿಯೇಷನ್ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಜಯ ಶೆಟ್ಟಿ ಅವರು ಸದಾ ನಕ್ಕು ಮುಖದೊಂದಿಗೆ ಸಮಾಜವನ್ನು ಬಲಿಷ್ಠ ಗೊಳಿಸಿದ್ದಾರೆ. ಅವರ ಅಗಲಿಕೆ ಅಸೋಸಿಯೇಷನ್ಗೆ ದೊಡ್ಡ ನಷ್ಟವನ್ನು ನೀಡಿದೆ ಎಂದು ನುಡಿದರು..

ಎಸೋಸಿಯೇಷನ್ ಮಾಜಿ ಅಧ್ಯಕ್ಷ. ನ್ಯಾಯವಾದಿ ರತ್ನಾಕರ್ ಶೆಟ್ಟಿ ನುಡಿ ನಮನ ಸಲ್ಲಿಸುತ್ತಾ ಸಮಾಜ ಸೇವೆ ಯಾವ ರೀತಿ ಮಾಡಬಹುದು ಎನ್ನುವುದನ್ನು ಜಯ ಶೆಟ್ಟಿ ಅವರಿಂದ ಕಲಿಯಬಹುದು. ಸಂಘಟನಾ ಸಾಮರ್ಥ್ಯ ಶಿಸ್ತುಬದ್ಧ ಬದುಕು ತಮಗೆ ಪಾಠವಾಗಿದೆ ಎಂದು ನುಡಿದರು..
ಎಸೋಸಿಯೇಷನ್ ಮಾಜಿ ಅಧ್ಯಕ್ಷ ನ್ಯಾಯವಾಗಿ ಸುಭಾಷ್ ಶೆಟ್ಟಿ ನುಡಿ ನಮನ ಸಲ್ಲಿಸುತ್ತಾ ನಗುವಿನಿಂದಲೇ ಸಮಾಜದ ಬಾಂಧವರು ಮನಸನ್ನು ಗೆದ್ದವರು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ನುಡಿದರು.
ಎಸೋಸಿಯೇಷನ್ ಮಾಜಿ ಅಧ್ಯಕ್ಷ ನ್ಯಾಯವಾದಿ ಅಶೋಕ್ ಶೆಟ್ಟಿ ಮಾತನಾಡುತ್ತಾ ಅಸೋಸಿಯೇಷನ್ ಅಧ್ಯಕ್ಷ ರಾಗಿ ಸಮಾಜವನ್ನು ಅಸೋಸಿಯೇಷನ್ ಯನ್ನು ಬಲಿಷ್ಠ ಗೊಳಿಸಿದ್ದಾರೆ ಅವರ ಅಗಲಿಕೆ ಕುಟುಂಬಕ್ಕೆ ಸಮಾಜಕ್ಕೆ ದುಃಖ ನೀಡಿದೆ ಎಂದು ನುಡಿದರು.
ಸಭೆಯಲ್ಲಿ ಪಾಲ್ಗೊಂಡಿದ್ದ ಜಯ ಎನ್ ಶೆಟ್ಟಿ ಅವರ ಅಭಿಮಾನಿಗಳು,
ಬೋಂಬೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ನ್ಯಾ. ಡಿ ಕೆ ಶೆಟ್ಟಿ, ಗೌ ಪ್ರಧಾನ ಕಾರ್ಯದರ್ಶಿ ಐಕಳ ಕಿಶೋರ್ ಶೆಟ್ಟಿ, , ಡಿಕೆ ಶೆಟ್ಟಿ., ನ್ಯಾಯವಾಗಿ ರತ್ನಾಕರ್ ಶೆಟ್ಟಿ ಮೊರ್ಲಾ,. ದಯಸಾಗರ್ ಚೌಟ, ಪೇಟೆ ಮನೆ ಪ್ರಕಾಶ್ ಶೆಟ್ಟಿ, ಮತಿತರು ನುಡಿ ನಮನ ಸಲ್ಲಿಸಿದರು,
ಈ ಸಂದರ್ಭದಲ್ಲಿ ಅಸೋಸಿಯೇಶನ್ ಕೋಶಾಧಿಕಾರಿ ಸಿಎ ವಿಶ್ವನಾಥ್ ಶೆಟ್ಟಿ, ಜೊತೆ ಕಾರ್ಯದರ್ಶಿ ಎಡ್ವಕೇಟ್ ಗುಣಾಕರ್ ಶೆಟ್ಟಿ, ಜೊತೆ ಕೋಶಾಧಿಕಾ ಸಿಎ ದಿವಾಕರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷ ತೇಜಾಕ್ಷಿ ಎಸ್ ಶೆಟ್ಟಿ,
ಹಾಗೂ ಸಮಿತಿ ಸದಸ್ಯರು ಮಾಜಿ ಅಧ್ಯಕ್ಷರುಗಳು ಟ್ರಸ್ಟ್ ಗಳು . ಜಯ ಎನ್ ಶೆಟ್ಟಿಯವರು ಕುಟುಂಬ ಸಂಬಂಧಿಕರಾಗಿದ್ದಾರು ಉಪಸ್ಥಿರಿದ್ದರು,