
ಹಳದಿ ಕುಂಕುಮ ಕಾರ್ಯಕ್ರಮ ಸಂಘಟನೆಯನ್ನು ಒಳಗೊಳಿಸುತ್ತದೆ :ಕುಶಾಲ ಜಿ. ಬಂಗೇರ
ಕಲ್ಯಾಣ ಜ : ಕುಲಾಲ ಸಂಘ ಮುಂಬಯಿ,ಥಾಣ, ಕಸರಾ , ಕರ್ಜತ್ ಮತ್ತು ಭಿವಂಡಿ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ ಕಾರ್ಯಕ್ರಮವು ಜ 20 ಶನಿವಾರ ಕಲ್ಯಾಣದ ಜ್ಯೋತಿ ಕೋ. ಒಪ್. ಕ್ರೆಡಿಟ್ ಸೊಸೈಟಿ ಕಚೇರಿಯಲ್ಲಿ. ಕುಲಾಲ ಸಂಘದ ಗೌ. ಅಧ್ಯಕ್ಷರಾದ ದೇವದಾಸ್ ಕುಲಾಲ್ ಉಪಸ್ಥಿತಿಯಲ್ಲಿ ನಡೆಯಿತು.

ಪ್ರಾರಂಭದಲ್ಲಿ ಗುರುವಂದನಾ ಭಜನಾ ಮಂಡಳಿಯ ವತಿಯಿಂದ ಭಜನಾ ಸಂಕೀರ್ಥನೆ ಜಗಗಿತು ,
ಆನಂತರ ನೆರೆದ ಎಲ್ಲಾ ಸುಮಂಗಳೆಯರು ಹರಸಿನ ಕುಂಕುಮ ಹಾಗೂ ಬಳೆಯನ್ನು ಯುನಿಯೋಗಿಸಿಕೊಂಡರು ,
ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯದರ್ಶಿ ಗೀತಾ ಡಿ ಮೂಲ್ಯ ರವರು ಸರ್ವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಕುಶಾಲ. ಜಿ ಬಂಗೇರ ವಹಿಸಿ ಮಾತನಾಡಿತ ಪರಿಸರದ ಸಮಾಜದ ಮಹಿಳೆಯರೆಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದೀರಿ ಈ ಕಾರ್ಯಕ್ರಮದ ಮೂಲಕ ಸಂಘದ ಸೇವಾಕಾರಿಗಳು ಬಲಗೊಂಡಿದೆ. ಹಳದಿ ಕುಂಕುಮ ಮಹಿಳೆಯರಿಗೆ ಶೋಭೆ ತರುವುದು ಎಂದು ನುಡಿದರು.

ಸಂಘದ ಹಿರಿಯ ಸದಸ್ಯೆ ರಮಾವತಿ ವಿ. ಮೂಲ್ಯ,ಅಂಬರನಾತ್ ಇವರ ಹಸ್ತದಿಂದ ದೀಪ ಪ್ರಜ್ವಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
. ಸಂಘದ ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ಸುಚಿತ ಡಿ ಬಂಜನ್, ಸ್ಥಳೀಯ ಸಮಿತಿಯ ಕೋಶಾಧಿಕಾರಿ ಸುಗಂಧಿ ಎಸ್ ಮೂಲ್ಯ , ಜೊತೆ ಕಾರ್ಯದರ್ಶಿ ಕವಿತ.ಎಲ್ ಮೂಲ್ಯ, ಜೊತೆ ಕೋಶಾಧಿಕಾರಿ ಸುಂದರಿ ಎ ಬಂಗೇರ, ಸಂಘದ ಉಪಾಧ್ಯಕ್ಷರಾದ ಡಿ.ಐ ಮೂಲ್ಯ, ಸ್ಥಳೀಯ ಕಾರ್ಯಧ್ಯಕ್ಷ ಲಕ್ಷಣ ಸಿ ಮೂಲ್ಯ, ಕಾರ್ಯದರ್ಶಿ ಹರಿಯಪ್ಪ ಮೂಲ್ಯ, ಕೋಶಾಧಿಕಾರಿ ಸದಾನಂದ ಐ ಸಾಲಿಯಾನ್ ಮತ್ತು ಕೇಂದ್ರ ಮತ್ತು ಸ್ಥಳೀಯ ಸಮಿತಿಯ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದ ಎಲ್ಲಾ ಖರ್ಚನ್ನು ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಸದಸ್ಯರು ವಹಿಸಿಕೊಂಡರು