
ಗುತ್ತು ಗುತ್ತಿನಾರ್ ರವೀಂದ್ರ ಶೆಟ್ಟಿ ಕೊಟ್ರಪಾಡಿ ಗುತ್ತು , ಮತ್ತು ವಸಂತಿ ಶಿವ ಶೆಟ್ಟಿ ಯಕ್ಷ ರತ್ನ ಪ್ರಶಸ್ತಿ ಗೌರವ,
ಮೀರಾ ರೋಡ್ ಜ 25. ಯುವ ಯಕ್ಷಗಾನ ಕಲಾವಿದ ಸಂಘಟಕ ಯಕ್ಷಗಾನ ಆಸಕ್ತರಿಗೆ ಯಕ್ಷ ಗುರುವಾಗಿ ನಗರದಲ್ಲಿ ಗುರುತಿಸಿಕೊಂಡಿರುವ ನಾಗೇಶಶ್ ಪೂಳಲಿ ಸ್ಥಾಪಿಸಿರುವ ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ ಅಯೋಧ್ಯ ರಾಮ ಮಂದಿರ ಉದ್ಘಾಟನಾ ಪ್ರಯುಕ್ತ ಯಕ್ಷ ಪ್ರಿಯ ಬಳಗ ತಂಡದ ಕಲಾವಿದರಿಂದ ಶ್ರೀ ರಾಮ* ಎನ್ನುವ ಯಕ್ಷಗಾನ ಕಥಾ ಭಾಗವನ್ನು ಜ 22 ರಂದು ಬಾಲಾಜಿ ಇಂಟರ್ನ್ಯಾಷನಲ್ ಹಾಲ್ ಭಾರತಿ ಪಾರ್ಕ್ ಮೀರಾ ರೋಡ್ ಇಲ್ಲಿ ನಡೆಯಿತು..
ಯಕ್ಷಗಾನದ ಮಧ್ಯಾಂತರದಲ್ಲಿ ಬಿಜೆಪಿ ಪಕ್ಷದ ಮೀರಾ ಭಯಂದರ್ ನ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷ..ಮುಂಬೈ ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಬಲ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ದೇಜು ಶೆಟ್ಟಿ ಕೊಟ್ರಪಾಡಿ ಗುತ್ತು , ಮತ್ತು ಬಂಟರ ಸಂಘದ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆಯಾಗಿ ಆಯ್ಕೆಯಾದ ವಸಂತಿ ಶಿವ ಶೆಟ್ಟಿ ಇವರನ್ನು ಯಕ್ಷ ಪ್ರಿಯ ಬಳಗದವತಿಯಿಂದ ಯಕ್ಷ ರತ್ನ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ. ಯಕ್ಷಗಾನದ ಮಹಾಪೋಷಕರಾದ ರಾಜು ಶೆಟ್ಟಿ ಕೋಳ್ಯೂರು ,ವಿಠ್ಠಲ್ ಪ್ರಭು ಕುಕ್ಕೆಹಳ್ಳಿ,ಹರೀಶ್ ಡಿ ರೈ ಕುಂಬ್ಳೆ,ವಿಜಯ್ ಬಿ ರಾವ್ (MBR) ಸುಂದರ್ ಶೆಟ್ಟಿ (ಹೋಟೆಲ್ ಬಾಲಾಜಿ),ರಾಜೇಶ್ ಶೆಟ್ಟಿ ಕಾಪು ,ಜಗದೀಶ್ ಶೆಟ್ಟಿ ಪಂಜಿನಡ್ಕ,ಅರುಣ್ ಶೆಟ್ಟಿ ಪಣಿಯೂರ್,ಜಿ.ಕೆ. ಕೆಂಚನಕೆರೆ. ರವೀಂದ್ರ ಕರ್ಕೇರಾ. ಹಾಗೂ ನಾಗೇಶಶ್ ಪೂಳಲಿ ಪಾಲ್ಗೊಂಡಿದ್ದರು
ಜಿ.ಕೆ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು
ಯಕ್ಷಗಾನದಲ್ಲಿ ಹಿಮ್ಮೇಳದಲ್ಲಿ ಭಾಗವತರಾಗಿ ಸಾಯಿ ಎ ಶೆಟ್ಟಿ ಮುಂಡ್ಕೂರು,ಚೆಂಡೆ ಮದ್ದಳೆ ,ಸುಬ್ರಮಣ್ಯ ಶಾಸ್ತ್ರಿ ಮಣಿಮುಂಡ , ಶ್ರೀಧರ ಎಡಮಲೆ, ಚಕ್ರತಾಳ : ಪ್ರೀತೇಶ್ ಬಿ .ಮೂಲ್ಯ,
ಹಾಸ್ಯ : ಸುರೇಶ್ ಪೂಜಾರಿ ಕಿನ್ಯ
ತಂಡದ ಹೆಮ್ಮೆಯ ಬಾಲ ಕಲಾವಿದರು .ಕೀರ್ತಿಶ್ರಿ ಬಿ ಮೂಲ್ಯ ಕೃಷ ಎಂ ಪೂಜಾರಿ ,ಮನ್ವಿತ ಎಂ ಪೂಜಾರಿ , ಮಿತಾಲಿ ಎಂ ಪೂಜಾರಿ ,ನಾಗೇಶ್ ಶೆಟ್ಟಿ ತಾಲಿಪಡಿ ವಸಂತಿ ಶಿವ ಶೆಟ್ಟಿ,ಶುಭಲತ ವಿ ಶೆಟ್ಟಿ, ರೇಷ್ಮಾ ಎಸ್ ಶೆಟ್ಟಿ , ಐಶಾನಿ ಎಸ್ ಶೆಟ್ಟಿ ,ಸಾನ್ವಿ ಎನ್ ಶೆಟ್ಟಿ ,ತ್ರಿಷಾ ಡಿ ಶೆಟ್ಟಿ, ಆರಾಧ್ಯ ಸಿ ಕೋಟ್ಯಾನ್,ಗೀತ್ ಆರ್ ಶೆಟ್ಟಿ ,ಪ್ರೀತಮ್ ಪಿ ಹೆಗ್ಡೆ ,ಆರ್ಯ ಎಸ್ ಶೆಟ್ಟಿ,ಕೀಯನ್ ಪಿ ಅಮೀನ್, ಪ್ರಜ್ಞಾ. ಪಿ ಶೆಟ್ಟಿ,ಭಾನ್ವಿ ವಿ ಭಂಡಾರಿ ಅಭಿನಯಿಸಿದರು
ಅಯೋಧ್ಯೆಯಲ್ಲಿ ಶ್ರೀ ರಾಮನ ದೇವರು ಪ್ರತಿಷ್ಠೆಯಾಗುವ ಸುಸಂದರ್ಭವನ್ನು ಭಕ್ತಿ ಸಂಭ್ರಮದಲ್ಲಿ ಆಚರಿಸುವ ನಿಟ್ಟಿನಲ್ಲಿ ಯಕ್ಷಗಾನವನ್ನು ಆಯೋಜಿಸಲಾಗಿತ್ತು