
ಸರಕಾರಿ ಶಾಲಾ ಮಕ್ಕಳು ಕೂಡ ಅತ್ಯುತ್ತಮ ಶಿಕ್ಷಣದ ವಂಚಿತರಾಗಬಾರದು ಅನ್ನುವ ಉದ್ದೇಶದಿಂದ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಸಾಲು ಸಾಲಾಗಿ ಸ್ಮಾರ್ಟ್ ಕ್ಲಾಸ್ ಮತ್ತು ಇತರೆ ಕೊಡುಗೆ ನೀಡುತ್ತಾ ಬರುತ್ತಿದ್ದೇವೆ. ಅದರಂತೆ ಕೊಡೇರಿ ಸರ್ಕಾರಿ ಶಾಲೆಗೆ ಉನ್ನತ ಮಟ್ಟದ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿರುತ್ತೇವೆ
ಸ್ಮಾರ್ಟ್ ಕ್ಲಾಸ್ ಸದುಪಯೋಗಪಡಿಸಿಕೊಂಡು ಪ್ರತಿಯೊಬ್ಬ ವಿದ್ಯಾರ್ಥಿಗಳು ದೇಶದ ಹೆಮ್ಮೆಯ ಪ್ರಜೆಗಳಾಗಿ ಹೊರಬರಲಿ ಎಂದು ನನ್ನ ಹಾರೈಕೆ ಶಿಕ್ಷಕ ವೃಂದ, SDMC ಹಾಗೂ ಹಳೆ ವಿದ್ಯಾರ್ಥಿಗಳು ಮೂರು ಮೂರ್ತಿಗಳ ಹಾಗೆ ಸೇರಿ ಕಾರ್ಯ ನಿರ್ವಹಿಸಿದರೆ ಶಾಲಾ ಅಭಿವೃದ್ಧಿ ಕಾರ್ಯ ನೆರವೇರಿಸಲು ಸಾಧ್ಯ ನಾನು ಕಲಿತ ಬಿಜೂರು ಶಾಲೆಯನ್ನು ಅಭಿವೃದ್ಧಿ ಮಾಡಲು ದತ್ತು ಪಡೆದಿದ್ದೇನೆ ಎಂದು ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಿದ ಗೋವಿಂದ ಬಾಬು ಪೂಜಾರಿಯವರು ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಕಂಬದಕೋಣೆ ಸಂದೀಪನ್ ಆಂಗ್ಲ ಮಧ್ಯಮ ಶಾಲೆಯ ಮುಖ್ಯೋಪಾಧ್ಯಾಯರಾದ ವಿಶ್ವೇಶ್ವರ ಅಡಿಗ ಮಾತನಾಡುತ್ತ
ಶ್ರೀಮಂತರು ತುಂಬಾ ಜನರಿರಬಹುದು ಆದರೆ ದಾನ ಮಾಡುವ ಬುದ್ಧಿ ಕೆಲವರಿಗೆ ಮಾತ್ರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಸಾಕಷ್ಟು ಸಹಾಯ ಮಾಡಿದ ಗೋವಿಂದ ಪೂಜಾರಿಯವರ ಕಾರ್ಯ ಶ್ಲಾಘನಿಯ, ಸ್ಮಾರ್ಟ್ ಕ್ಲಾಸ್ ನ ಸದುಪಯೋಗ ಆಗಲಿ, ಹಾಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು, ಸಮರ್ಥ ಶಿಕ್ಷಕರ ವೃಂದ ಇದೆ, ಆಂಗ್ಲ ಮಧ್ಯಮದ ಶಿಕ್ಷಣ ಎಲ್ಲಾ ಕ್ಲಾಸ್ ಗೂ ವಿಸ್ತರಿಸಿ ಎಂದು ಸಲಹೆ ನೀಡಿದರು. ಮುಖ್ಯೋಪಾಧ್ಯಾಯರಾದ ಶ್ರೀಮತಿ ಶ್ಯಾಮಲಾ ರಾವ್ ಶಾಲಾ ಸ್ಥಿತಿ ಗತಿಯ ಬಗ್ಗೆ ವಿವರಿಸಿದರೆ, SDMC ಅಧ್ಯಕ್ಷ ಸುರೇಶ ಖಾರ್ವಿ ಸ್ವಾಗತಿಸಿದರು.



ಶಾಲಾ ಹಳೆ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ ಸಂಘದ ಮತ್ತು ದಾನಿಗಳ ಮತ್ತು ಪೋಷಕರ ನೆರವಿನಿಂದ ಈಗಾಗಲೇ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್, ಆಂಗ್ಲ ಮಧ್ಯಮದ ಟೆಕ್ಸ್ಟ್ ಬುಕ್,ID ಕಾರ್ಡ್ ವಿತರಣೆ, ವಿದ್ಯಾರ್ಥಿಗಳಿಗೆ ಉಚಿತ ವಾಹನ ವ್ಯವಸ್ಥೆ,4ಜನ ಗೌರವ ಶಿಕ್ಷಕರ ನೇಮಕ, ಆಯಾ ನೇಮಕ, CC ಟಿವಿ ಅಳವಡಿಕೆ,ಕಂಪ್ಯೂಟರ್ ಕ್ಲಾಸ್, ಇದೀಗ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಿದ್ದು ಮುಂದಿನ ದಿನ ಸುಸಜ್ಜಿತ ವಾಚನಾಲಾಯ, ಪ್ರಯೋಗಾಲಯ, ರಚನೆ ನಮ್ಮ ಮುಂದಿದ್ದು ಅದನ್ನು ಕೂಡ ನಿರ್ಮಿಸುವ ಜವಾಬ್ದಾರಿ ಇದೆ. ಎಂದು ಕಾರ್ಯಕ್ರಮ ನಿರ್ವಹಿಸಿ ಪ್ರಸ್ತಾವನೆ ಮಾಡಿದ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಆನಂದ ಪೂಜಾರಿಯವರು ಹೇಳಿದರು. ಸಮಾರಂಭದಲ್ಲಿ ಕೊಡೇರಿ ಶಾಲೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ ಹಿರಿಯ ವಿದ್ಯಾರ್ಥಿಗಳಾದ ವೆಂಕಪ್ಪಯ್ಯ ಕಾರಂತ್ ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಖಾರ್ವಿ, ಹರಿದಾಸ್ ಪ್ರಭು, ಪತ್ರಕರ್ತ ರಾಜು ಕೊಡೇರಿ, ಯವರು ಉಪಸ್ಥಿತರಿದ್ದರು. ದೇವರಾಜ್ ಅಳೊಳ್ಳಿ
ರಾಮ ಪೂಜಾರಿ, ಮಂಜುನಾಥ್ ಖಾರ್ವಿ, ಚಂದ್ರ ಪೂಜಾರಿ, ಸುಧೀರ್ ಕಾಡ್ಕೇರಿ , SDMC ಸದಸ್ಯರು, ಶಿಕ್ಷಕರು ಸಹಕರಿಸಿದರು.