
ಮುಂಬಯಿ ಜ 28. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ಸಮಾಜ ಕಲ್ಯಾಣ ಸೇವಾಕಾರಿಗಳ ಗುರುತಿಸಿ , ಮತ್ತವರ ವಿಶೇಷ ಮನವಿಗೆ ಸ್ಪಂದಿಸಿ ಮೀರಾ ಭಾಯಂದರ್ ಮಹಾ ನಗರ ಪಾಲಿಕೆ ಯ ಮಾಜಿ ನಗರಸೇವಕ್, ಅಲಯನ್ಸ್ ಇನ್ಫ್ರಾಸ್ಟ್ರಕ್ಚರ್ & ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಅರವಿಂದ್ ಆನಂದ್ ಶೆಟ್ಟಿ ಯವರು ಒಕ್ಕೂಟದ ಮಹಾ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ,
ನೂತನ ಮಹಾ ನಿರ್ದೇಶಕರ ಅರವಿಂದ್ ಶೆಟ್ಟಿ , ಪಲ್ಲವಿ ಅರವಿಂದ್ ಶೆಟ್ಟಿ ಮತ್ತು ಮಕ್ಕಳನ್ನು ಐಕಳ ಹರೀಶ್ ಶೆಟ್ಟಿ ಪುಷ್ಪಗುಚ್ಛ ನೀಡಿ ಗೌರವಿಸಿದರು, ಈಗಾಗಲೇ ಒಕ್ಕೂಟದ ನಿರ್ದೇಶಕರಾಗಿ ಕಾರ್ಯ ಸೇವೆಗಳನ್ನು ಮಾಡುತ್ತಿರುವ ಅರವಿಂದ್ ಆನಂದ್ ಶೆಟ್ಟಿ ಮುಂದೆ ಒಕ್ಕೂಟದ ಮಹಾ ನಿರ್ದೇಶಕರಾಗಿ ಬ0ಟ ಸಮಾಜದ. ಕಡು ಬಡತನದ ಕುಟುಂಬಗಳ ಸೇವಾ ಕಾರ್ಯಗಳನ್ನು ಮಾಡಲಿದ್ದಾರೆ
ಅವರಿಗೆ ಒಕ್ಕೂಟದ ಮಹಾದಾನಿ, ಮಹಾ ನಿರ್ದೇಶಕರು, ನಿರ್ದೇಶಕರು, ಆಡಳಿತ ಪದಾಧಿಕಾರಿಗಳು ,ಮಹಾ-ಪೋಷಕರು, ಪೋಷಕರು, ದಾನಿಗಳು,ಕಾರ್ಯಕಾರಿ ಸಮಿತಿ ಸದಸ್ಯರು ಸರ್ವ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ