
ಬಿಲ್ಲವರ ಅಸೋಸಿಯೇಷನ್, ಮುಂಬೈ ಇದರ ದೊಂಬಿವಿಲಿ ಕಛೇರಿಯಲ್ಲಿ 75ನೇ ಪ್ರಜಾಪ್ರಭುತ್ವ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಪ್ರಥಮವಾಗಿ ಪುರೋಹಿತ ಐತಪ್ಪ ಸುವರ್ಣರು ಧಾರ್ಮಿಕ ವಿಧಿ ವಿಧಾನಗಳಿಂದ ಗುರುಪೂಜೆಯನ್ನು ನೆರವೇರಿಸಿದರು. ತದ ನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೆಸ್ಟರ್ನ್ ಇಂಡಿಯಾ ಶನೀಶ್ವರ ಸಮಿತಿಯ ಅಧ್ಯಕ್ಷರಾದ ರವಿ ಯೆಲ್ ಬಂಗೇರರವರ ದಿವ್ಯ ಹಸ್ತದಿಂದ ದ್ವಜರೋಹಣ ನೆರವೇರಿತು.
ತದನಂತರ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಸಂಜೀವ ಪಾಲನ್ ರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವೆಸ್ಟರ್ನ್ ಇಂಡಿಯಾ ಶನೀಶ್ವರ ಸಮಿತಿಯ ಅಧ್ಯಕ್ಷರಾದ ರವಿ ಎಲ್ ಬಂಗೇರ, ಗೌರವ ಕಾರ್ಯಾಧ್ಯಕ್ಷ ದೇವರಾಜ್ ಪೂಜಾರಿ, ಉಪ ಕಾರ್ಯಾಧ್ಯಕ್ಷರುಗಲಾದ ಶ್ರೀಧರ್ ಅಮೀನ್ ಮತ್ತು ಪುರಂದರ ಪೂಜಾರಿ ಹಾಗೂ ಉಪ ಕಾರ್ಯದರ್ಶಿ ಕೃಷ್ಣ ಎಲ್ ಪೂಜಾರಿಯವರು ಉಪಸ್ಥಿತರಿದ್ದರು. ಕೃಷ್ಣ ಎಲ್ ಪೂಜಾರಿಯವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಹಾಗೂ ಸಭಾಗ್ರಹದಲ್ಲಿ ನೆರೆದ ಸಮಾಜ ಬಾಂಧವರನ್ನು ಸ್ವಾಗತಿಸಿದರು. ಸಮಿತಿ ಸದಸ್ಯ ಜಗದೀಶ್ ಜೇ ಕೋಟ್ಯಾನ್ ರವರು ಪ್ರಾಸ್ತಾವಿಕವಾಗಿ ಮಾತಾಡಿ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ ಪುಷ್ಪ ಗುಚ್ಚ ಹಾಗೂ ಸ್ಮರಣ ಫಲಕ ನೀಡಿ ಗೌರವಿಸಿದರು.
ಶ್ರೀಮತಿ ಯಶೋದಾ ಕೇ. ಕರ್ಕೇರಾ, ಶ್ರೀ ಗಣೇಶ ಪೂಜಾರಿ, ಶ್ರೀ ಈಶ್ವರ ಕೋಟ್ಯಾನ್ ಹಾಗೂ ಕೃಷ್ಣ ಎಲ್ ಪೂಜಾರಿಯವರು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದರು . ಕುಮಾರಿ ಸಾನ್ವಿ ಕೋಟ್ಯಾನ್ ರವರು ಸುಶ್ರಾವ್ಯವಾಗಿ ದೇಶ ಭಕ್ತಿಗೀತೆ ಹಾಡಿದರು.



ಶ್ರೀ ದೇವರಾಜ್ ಪೂಜಾರಿಯವರು ನೆರದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರವೀ ಎಲ್ ಬಂಗೆರವರು ಮಾತನಾಡುತ್ತ 75 ವರ್ಷ ನಮ್ಮ ದೇಶ ಬಹಳ ಪ್ರಗತಿಯನ್ನು ಸಾಧಿಸಿದೆ , ನಾವು ಸಹ ದೇಶದ ಪ್ರಗತಿಗಾಗಿ ಶ್ರಮಿಸೋಣ ಎಂದು ಕರೆ ನೀಡಿದರು ಹಾಗೂ ತನ್ನನು ಮುಖ್ಯ ಅತಿಥಿಯಾಗಿ ಮಾಡಿ ದ್ವಜರೋಹಣ ಮಾಡಲಿಕ್ಕೆ ಅವಕಾಶ ಕಲ್ಪಿಸಿದಕ್ಕೆ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಶ್ರೀಯುತ ಚಂದ್ರಹಾಸ್ ಪಾಲನ್ ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮುಖ್ಯ ಅತಿಥಿಗಳ ಗುಣಗಾನ ಮಾಡುತ್ತ, ಬಿಲ್ಲವರ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಅಪ್ಪಣ್ಣರವರ ಮರಿ ಮೊಮ್ಮಗನಾಗಿದ್ದು ಇಂದು ಅತಿಥಿಯಾಗಿ ಬಂದದ್ದು ತುಂಬಾ ಸಂತೋಷವಾಗಿದೆ ಎಂದರು. ಸಭಾಗ್ರಹವನ್ನು ತುಂಬಾ ಚೆನ್ನಾಗಿ ಅಲಂಕಾರ ಮಾಡಿದ ಯೂತ್ ಸದಸ್ಯರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಹೃತ್ಪೂರ್ವಕ ಶುಭಾಶಯ ಕೋರಿದರು.
ಉಪ ಕಾರ್ಯದರ್ಶಿ ಕೃಷ್ಣ ಎಲ್ ಪೂಜಾರಿಯವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಮತ್ತು ಸಭೆಯ ಅಧ್ಯಕ್ಷತೆ ವಹಿಸಿದ್ದ ಚಂದ್ರಹಾಸ್ ಪಾಲನ್, ಮುಖ್ಯ ಅತಿಥಿ ರವಿ ಎಲ್ ಬಂಗೇರ, ಸಮಿತಿ ಸದಸ್ಯರಿಗೆ, ಮಹಿಳಾ ವಿಭಾಗ, ಯೂತ್ ಸದಸ್ಯರಿಗೆ ಹಾಗೂ ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಬಳಿಕ ಸಭೆ ಮುಕ್ತಾಯವಾಯಿತು. ಕೊನೆಯಲ್ಲಿ ಎಲ್ಲರಿಗೂ ಸಿಹಿ ತಿಂಡಿ ಹಾಗೂ ಲಘು ಉಪಹಾರ ನೀಡಲಾಯಿತು.