23.5 C
Karnataka
April 4, 2025
ಮುಂಬಯಿ

ಶ್ರೀ ಮಹಾ ವಿಷ್ಣು ಮಂದಿರ – ಡೊಂಬಿವಲಿ, ಮಹಿಳಾ ವಿಭಾಗದ ವತಿಯಿಂದ ಹರಶಿನ ಕುಂಕುಮ ಕಾರ್ಯಕ್ರಮ.



ಶ್ರೀ ಮಹಾವಿಷ್ಣು ಮಂದಿರ ಡೊಂಬಿವಲಿ ಇದರ ಮಹಿಳಾ ವಿಭಾಗದ ವತಿಯಿಂದ ಅರಸಿನ ಕುಂಕುಮ ಕಾರ್ಯಕ್ರಮ ಜನವರಿ 28 ರಂದು ಮಂದಿರದ ಸಭಾಗೃಹದಲ್ಲಿ ವಿಜೃಂಭಣೆಯಿಂದ ನೆರವೇರಿತು. ಪ್ರಾರಂಭದಲ್ಲಿ ಅರ್ಚಕರಾದ ಶ್ರೀ ಹರೀಶ್ ಪದ್ಮಶಾಲಿ ಅವರು ಶ್ರೀ ಮಹಾವಿಷ್ಣು ದೇವರಿಗೆ ಪೂಜೆ ಸಲ್ಲಿಸಿ ಮಹಿಳಾ ಸದಸ್ಯೆಯರಿಂದ ಭಜನೆ ಹಾಗೂ ಮಹಾಮಂಗಳಾರತಿ ನೆರವೇರಿತು ಹಾಗೂ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ವಲಯದ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕ್ರಿಷ್ಣಿ ಶೆಟ್ಟಿ ಅವರಿಗೆ ಪ್ರಸಾದ ನೀಡಲಾಯಿತು.
ಸಂಸ್ಥೆಯ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಅವರ ಅಧ್ಯಕ್ಷತೆಯಲ್ಲಿ ಮಹಿಳಾವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ ಸಾಲಿಯಾನ್ ಹಾಗೂ ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪುತ್ರನ್ ಹಾಗೂ ಮಾಜಿ ಅಧ್ಯಕ್ಷರಾದ ರತ್ನಾಕರ್ ಬಂಗೇರ ಇವರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಂಟರ ಸಂಘ ಡೊಂಬಿವಲಿ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೃಷ್ಣಿ ಕೆ ಶೆಟ್ಟಿ ದೀಪ ಪ್ರಜ್ವಲಿಸಿ ಚಾಲನೆ ನೀಡಿದರು. ಈ ಸಂದರ್ಭ ಮಹಿಳಾ ಸದಸ್ಯೆಯರಾದ ಶ್ರೀಮತಿ ಗೀತಾ ಪುತ್ರನ್, ಶ್ರೀಮತಿ ಸುಜಾತ ಶೆಟ್ಟಿ ಶ್ರೀಮತಿ ಸಪ್ನ.ಮರಾಕಲ್ . ಪ್ರಾರ್ಥನೆಯನ್ನು ಹಾಡಿದರು. ಶ್ರೀಮತಿ ಸುಜಾತ ಶೆಟ್ಟಿ ಯವರು ಅತಿಥಿಯಾ ಪರಿಚಯ ಓದಿ ಹೇಳಿದರು .ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರಶೇಖರ ಸಾಲಿಯಾನ್ ಅವರು ಪ್ರಾಸ್ತಾವಿಕವಾಗಿ ಮಾತಾನ್ನಾಡುತ್ತಾ ನೆರೆದ ಸರ್ವ ಮಹಿಳಾ ವೃಂದ ಹಾಗೂ ಕಾರ್ಯಕಾರಿ ಮಂಡಳಿಯ ಸರ್ವ ಪದಾಧಿಕಾರಿಗಳನ್ನು ಆದರದಿಂದ ಸ್ವಾಗತಿಸಿದರು. ಅಲ್ಲದೇ ಅರಸಿನ ಕುಂಕುಮ ಕಾರ್ಯಕ್ರಮದ ಮಹತ್ವ, ಅದರ ಐತಿಹಾಸಿಕ ಹಿನ್ನೆಲೆ, ಧಾರ್ಮಿಕ ಹಿನ್ನೆಲೆ ಹಾಗೂ ಅರಸಿನ ಮತ್ತು ಕುಂಕುಮ ಮಹಿಳೆಯರ ಬಾಳಿನಲ್ಲಿ ಯಾವ ರೀತಿ ಮಹತ್ವವನ್ನು ಹೊಂದಿದೆ ಎಂಬುದರ ಬಗ್ಗೆ ಸವಿಸ್ತಾರವಾಗಿ ಮನ ಮುಟ್ಟುವಂತೆ ಮಾತಾನ್ನಾಡಿ ನೆರೆದ ಮಹಿಳೆಯರನ್ನು ಮಂತ್ರ ಮುಗ್ಧರನ್ನಾಗಿಸಿದರು. ಮಹಿಳಾ ವಿಭಾಗದ ಸದಸ್ಯೆಯರಾದ.ಯಮುನಾ ಪಾಲನ್, ಶಶಿ ಶ್ರೀಯನ್, ಗೀತಾ ಪುತ್ರನ್, ಸುಜಾತಾ ಶೆಟ್ಟಿ ಜಾನಪದ ಗೀತೆಯನ್ನು ಪ್ರಸ್ತುತ ಪಡಿಸಿದರು

ಮತ್ತೋರ್ವ ಹಿರಿಯ ಮಹಿಳಾ ಸದಸ್ಯೆ ಶ್ರೀಮತಿ ಪ್ರೇಮ ಸುವರ್ಣ ಅವರು ಕನ್ನಡ ಭಾವ ಗೀತೆಯನ್ನು ಹಾಡಿದರು. ಶ್ರೀಮತಿ ಪ್ರಫುಲ್ಲ ದಿನೇಶ್ ಶೆಟ್ಟಿ ಅವರು ರಸ ಪ್ರಶ್ನೆಗಳೊಂದಿಗೆ ಸಭಿಕರನ್ನು ರಂಜಿಸಿದರು ಮುಖ್ಯ ಅತಿಥಿ ಶ್ರೀಮತಿ ಕೃಷ್ಣಿ ಶೆಟ್ಟಿಯವರು ಅರಸಿನ ಕುಂಕುಮ ಎಂದರೇನು ಇದನ್ನು ದೇಶದ ವಿವಿಧ ರಾಜ್ಯಗಳಲ್ಲಿ ಯಾವ ಯಾವ ಹೆಸರಿನಿಂದ ಆಚರಿಸಲಾಗುತ್ತದೆ ಹಾಗೂ ಯಾವ ದಿನದಲ್ಲಿ ಇದನ್ನು ಆಚರಿಸುತ್ತಾರೆ ಎಂಬುದನ್ನು ಮನದಟ್ಟಾಗುವಂತೆ ವಿವರಿಸಿದರಲ್ಲದೆ ಮಹಿಳಾ ವಿಭಾಗದ ವತಿಯಿಂದ ನಡೆದ ಅಚ್ಚು ಕಟ್ಟಾದ ಕಾರ್ಯಕ್ರಮದ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತ ಈ ಸಂಸ್ಥೆಯಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮಗಳು ನಡೆಯುವಲ್ಲಿ ಆರಾಧ್ಯ ದೇವರಾದ ಶ್ರೀ ಮಹಾವಿಷ್ಣು ಹರಸಲಿ ಎಂದು ಶುಭ ಹಾರೈಸಿದರಲ್ಲದೆ ಈ ಒಂದು ಪುಣ್ಯ ಸಂಸ್ಥೆ ನಮ್ಮ ಸಂಪ್ರದಾಯ ಆಚರಣೆಯ ಈ ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಅಹ್ವಾನಿಸಿ ಗೌರವಿಸಿದ ಸಂಸ್ಥೆಯ ಸರ್ವ ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ಅಧ್ಯಕ್ಷರಾದ ಶ್ರೀ ಇಂದುಶೇಖರ್ ಅವರು ಮಾತಾನ್ನಾಡುತ್ತಾ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸವಿತಾ ಸಾಲಿಯಾನ್ ಅವರ ನೇತೃತ್ವದಲ್ಲಿ ಪ್ರತಿಯೊಂದು ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ನೆರವೇರುತ್ತಿರುವುದು ಅತೀವ ಸಂತಸದ ವಿಷಯ. ಇಂದಿನ ಈ ಕಾರ್ಯಕ್ರಮ ಬಹಳ ಉತ್ತಮ ರೀತಿಯಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು ಅಲ್ಲದೇ ಸಂಸ್ಥೆಯಲ್ಲಿ ಮುಂಬರುವ ದಿನಗಳಲ್ಲಿ ನಡೆಯಲಿರುವ ಕಾರ್ಯಕ್ರಮಗಳ ವಿವರಣೆ ನೀಡಿದರು.
ರಸ ಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಿಗೆ ಮುಖ್ಯ ಅತಿಥಿ ಹಾಗೂ ವೇದಿಕೆಯಲ್ಲಿರುವ ಗಣ್ಯರಿಂದ ಆಕರ್ಷಕ ಬಹುಮಾನವನ್ನು ವಿತರಿಸಲಾಯಿತು
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಸಪ್ನ.ಮರಾಕಲ್ . ಅವರು ನಡೆಸಿಕೊಟ್ಟರು. ಕೊನೆಯಲ್ಲಿ ಈ ಕಾರ್ಯಕ್ರಮಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಶ್ರೀಮತಿ.ಶಶಿ ಶ್ರೀಯನ್ ವಂದನಾರ್ಪಣೆಯನ್ನು ಸಲ್ಲಿಸಿದರು. ತದನಂತರ ಮಹಿಳೆಯರು ಅರಸಿನ ಕುಂಕುಮವನ್ನು ಒಬ್ಬೊರಿಗೊಬ್ಬರು ಹಚ್ಚುತ ಸಂಭ್ರಮಿಸಿದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

Related posts

ಭಾರತ್ ಬ್ಯಾಂಕ್ ಭಾಯಂದರ್ ಶಾಖಾ ಅಧಿಕಾರಿ ವೀಣಾ ಆರ್. ಪೂಜಾರಿ ಸೇವಾ ನಿವೃತ್ತಿ.

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ ದ ಸಮಾಜ ಕಲ್ಯಾಣ ಸಹಾಯಹಸ್ತ

Mumbai News Desk

ಮಲಾಡ್ ಕನ್ನಡ ಸಂಘ ವಾರ್ಷಿಕ ಶ್ರೀ ಸತ್ಯ ನಾರಾಯಣ ಮಹಾಪೂಜೆ, ಭಜನೆ

Mumbai News Desk

ಶ್ರೇಯಸ್ ಶೆಟ್ಟಿ ಯವರು ,83 :60 ಅಂಕ 

Mumbai News Desk

ಆರೋಹಿ(ಖುಷಿ )ಶಿವ ಪ್ರಸಾದ ಪೂಜಾರಿಗೆ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ಶಿಪ್ ನಲ್ಲಿ ಬಂಗಾರದ ಪದಕ

Mumbai News Desk

ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ* ಶ್ರೀ ರಾಮ*  ಯಕ್ಷಗಾನ

Mumbai News Desk