
ಮುಂಬಯಿ ಜ 17. ಮಹತೋಭಾರ ಶನೀಶ್ವರ ದೇವಸ್ಥಾನ ಮಲಾಡ್ ಪೂರ್ವ ಕುರಾರ್ ವಿಲೇಜ್, ಇದರ ಸುವರ್ಣ ಸಂಭ್ರಮದ ಪ್ರಯುಕ್ತ ವರ್ಷಾಂಪೂರ್ತಿ ನಡೆಯುವ ಸರಣಿ ಕಾರ್ಯಕ್ರಮಗಳ ಅಂಗವಾಗಿ ದೇವಸ್ಥಾನದಲ್ಲಿ ಶನೀಶ್ವರ ದೇವರ ಕಥಾಶ್ರವಣ ಹಾಗು ಕಲ್ಪೋಕ್ಷ ಪೂಜೆ ತಾ ೨೦.೧.೨೦೨೪ ಶನಿವಾರ, ಶ್ರೀ ಶನೀಶ್ವರ ದೇವಸ್ಥಾನ ನೆರೂಲ್, ಇವರಿಂದ ನಡೆಸಯಿತು. ವಾಚಕರಾಗಿ ರವಿಶಂಕರ್ ಆಚಾರ್ಯ, ಸತೀಶ್ ಪೂಜಾರಿ ,ಮದ್ದಳೆಯಲ್ಲಿ ಮಧುಸೂದನ್ ಪಾಲನ್, ಚೆಂಡೆಸುರೇಶ್ ಶೆಟ್ಟಿ ಕಣಂಜಾರ್ ಸಹಕರಿಸಿದರೆ
ಅರ್ಥದಾರಿಗಳಾಗಿ ಅನಿಲ್. ಕೆ. ಹೆಗ್ಡೆ, ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ, ಜಯರಾಮ್ ಪೂಜಾರಿ, ಸುನೀತಾ ಪೂಜಾರಿ ಸಹಕರಿಸಿದರು,
ಜ ೨೭. ಶನಿವಾರ ಶ್ರೀ ರಾಧಾಕೃಷ್ಣ ಶನೀಶ್ವರ ದೇವಸ್ಥಾನ, ಡೊಂಬವಲಿಯ ಸದಸ್ಯರು ಶನಿಗ್ರಂಥ ಪಾರಾಯಣ ನಡೆಸಿಕೊಟ್ಟರು.

ಬಳಿಕ ದೇವಸ್ಥಾನದ ಪ್ರಧಾನ ಅರ್ಚಕರಾದ ತುಂಗಾ ರಾಘವೇಂದ್ರ ಭಟ್ ಅವರು ಮಹಾಪೂಜೆಯನ್ನು ನಡೆಸಿದರು. ದೇವಸ್ಥಾನದ ಪೂಜಾ ಸಮಿತಿಯ ಅಧ್ಯಕ್ಷರಾದ ಶ್ರೀನಿವಾಸ ಸಾಪಲ್ಯ ಅವರು ವಿಶೇಷ ಪ್ರಾರ್ಥನೆಯನ್ನು ನಡೆಸಿ ಶನಿ ಗ್ರಂಥ ಪಾರಾಯಣ ಮಾಡಿದ ತಂಡದ ಎಲ್ಲರಿಗೂ ಪ್ರಸಾದವನ್ನು ನೀಡಿದರು
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರುಗಳಾದ ರಮೇಶ್ ಆಚಾರ್ಯ, ಗೌ, ಕಾರ್ಯದರ್ಶಿ ಸಂತೋಷ್ ಶೆಟ್ಟಿ ,ಕೋಶಧಿಕಾರಿ ಹರೀಶ್ ಸಾಲಿಯಾನ್ ಹಿರಿಯ ಸದಸ್ಯರಾದ ನಾರಾಯಣ ಶೆಟ್ಟಿ ,ಮಹಿಳಾ ವಿಭಾಗದ ಕಾರ್ಯಧ್ಯಕ್ಷೆರದ ಶೀತಲ್ ಕೋಟ್ಯಾನ್ ಮತ್ತಿತರ ಸದಸ್ಯರು ಉಪಸ್ಥರಿದ್ದರು.