
ಚಿತ್ರ ವರದಿ : ದಿನೇಶ್ ಕುಲಾಲ್
ವಸಾಯಿ. ಜ 31.ವಸಾಯಿ ಕರ್ನಾಟಕ ಸಂಘದ ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಆಚರಿಸ ಬರುತ್ತಿದ್ದು ಜನವರಿ 26ರಂದು ಸಂಘದ ಅಧ್ಯಕ್ಷ ದೇವೇಂದ್ರ ಬಿ. ಬುನ್ನನ್ ಅವರು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ ಸಂಘದ ಆವರಣದಲ್ಲಿ ಧ್ವಜಹಾರಣ, ರಾಷ್ಟ್ರಗೀತೆ ಯೆನ್ನಾಡಿ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು, ಬಳಿಕ ವಾರ್ಷಿಕ ಮಹಾಸಭೆ ನಡೆಯಿತು, ಸಂಘದ ಉಪಾಧ್ಯಕ್ಷ ಶಂಕರ್ ಕೆ ಆಳ್ವ ಸ್ವಾಗತಿಸಿದರು
ಕಾರ್ಯದರ್ಶಿ ರವೀಂದ್ರ ಕೆ ಶೆಟ್ಟಿ, ಗತ ವರ್ಷದ ಟಿಪ್ಪಣಿಗಳನ್ನು ಓದಿದರು,ಸಲಹಾ ಸಮಿತಿ ಉಪ ಕಾರ್ಯಾಧ್ಯಕ್ಷ ಒ. ಪಿ ಪೂಜಾರಿ ವರದಿಯನ್ನು ಯ ಮಂಡಿಸಿದರು,ಗೌರವ ಕೋಶಾಧಿಕಾರಿ ವಿಜಯ್ ಎಂ. ಶೆಟ್ಟಿ, ವರು ಲೆಕ್ಕಪತ್ರವನ್ನು ಸಭೆಗೆ ತಿಳಿಸಿದರು, ಸಭೆಯ ಸದಸ್ಯರು ಅನುಮೋದಿಸಿದರು,
ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ, ಸಲಹೆ ಸಮಿತಿ ಕಾರ್ಯಾಧ್ಯಕ್ಷ ಪಾಂಡು ಎಲ್ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಒ. ಪಿ ಪೂಜಾರಿ,ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮಿಳಾ ಎನ್. ಅಮೀನ್, ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ,ಉಪಸ್ಥರಿದ್ದರು,




ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ದೇವೇಂದ್ರ ಬಿ. ಬುನ್ನನ್ ಈ ಪರಿಸರದ ಎಲ್ಲಾ ಸಂಘಟನೆಗಳಿಗೆ ಮಾತೃ ಸಂಘವಾಗಿ ಬೆಳೆದಿದೆ. ಸಂಘ ನಿರಂತರವಾಗಿ ಕನ್ನಡದ ಸೇವೆಯನ್ನು ಮಾಡುತ್ತಾ ಬಂದಿದೆ ಪದಾಧಿಕಾರಿಗಳು ಮಹಿಳಾ ವಿಭಾಗ ಯುವ ವಿಭಾಗ ಸಲಿಯ ಸಂಘ-ಸಂಸ್ಥೆಗಳು ವಿಶೇಷ ಸಹಕಾರವನ್ನು ಸಂಘಕ್ಕೆ ನೀಡುತ್ತಾ ಬಂದಿದ್ದಾರೆ, ಗಣರಾಜ್ಯೋತ್ಸವ ಆಚರಣೆಯನ್ನು ಅರ್ಥಪೂರ್ಣವಾಗಿ ಪ್ರತಿ ವರ್ಷ ಆಚರಿಸುವುದಕ್ಕೆ ಸದಸ್ಯರು ವಿಶೇಷವಾದ ಸಹಕಾರವನ್ನು ನೀಡುತ್ತಾರೆ, ಮುಂದಿನ ದಿನಗಳಲ್ಲೂ ಕೂಡ ಸದಸ್ಯರೆಲ್ಲರೂ ಸಂಘದ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿ ಕೊಳ್ಳಬೇಕು ಎಂದು ನುಡಿದರು,
ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ . ಮತ್ತು ಪಾಂಡು ಎಲ್ ಶೆಟ್ಟಿ, ಶಂಕರ್ ಕೆ ಆಳ್ವ , ಓ ಪಿ ಪೂಜಾರಿ ಮತ್ತಿತರರು ಸಲಹೆ ಸೂಚನೆಗಳನ್ನು ನೀಡಿದರು
ಸಂಘದ ಗೌರವ ಪ್ರಧಾನ ಕಾರ್ಯದರ್ಶಿ, ರವೀಂದ್ರ ಕೆ ಶೆಟ್ಟಿ, ಧನ್ಯವಾದ ನೀಡಿದರು, ಮಹಿಳಾ ವಿಭಾಗದ ಸದಸ್ಯ ಮೋಹಿನಿ ಮಲ್ಪೆ ಪ್ರಾರ್ಥನೆ ಮಾಡಿದರು,






ಈಸಂದರ್ಭದಲ್ಲಿ ಸಂಘದ, ಜತೆ ಕಾರ್ಯದರ್ಶಿ ಸಿಎ ವಿಜಯ ಕುಂದರ್, ಜತೆ ಕೋಶಾಧಿಕಾರಿ ಹರಿ ಯಶೋಧರ ಪ್ರಸಾದ್ ಶೆಟ್ಟಿ, ಕಾರ್ಯಕ್ರಮ ಸಮಿತಿ ಕಾರ್ಯಾಧ್ಯಕ್ಷ ಯಶೋಧರ ವಿ. ಕೋಟ್ಯಾನ್, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ವಿಟ್ಟಲ್ ರೈ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಮಂಜುನಾಥ್ ಶೆಟ್ಟಿ ಕೊಡ್ಲಾಡಿ, ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ವಿ ರೈ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮಿಳಾ ಎನ್. ಅಮೀನ್, ಕಾರ್ಯದರ್ಶಿ ಶಕುಂತಲಾ ಎಸ್. ಪೂಜಾರಿ, ಕೋಶಾಧಿಕಾರಿ ಭಾರತಿ ಎಚ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ, ಕಾರ್ಯದರ್ಶಿ ರಿತಿನ್ ಶೆಟ್ಟಿ, ಕೋಶಾಧಿಕಾರಿ ಶರಣ್ಯ ಪೂಜಾರಿ, ಹಾಗೂ ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು, ಮಹಿಳಾ ವಿಭಾಗದವರು ಸದಸ್ಯರು ಪಾಲ್ಗೊಂಡಿದ್ದರು,
ಇಕ ವಾರ್ಷಿಕ ಮಹಾಸಭೆ ಬಳಿಕ ಸತ್ಯನಾರಾಯಣ ಮಹಾಪೂಜೆವು ಆಶಿಷ್ ಆರ್ ಶೆಟ್ಟಿ ದಂಪತಿಗಳ ಯಜಮಾನಿಕೆಯಲ್ಲಿ ಇತ್ತು ನಡೆಯಿತು ಅನಂತರಾ ಮಹಿಳಾ ವಿಭಾಗದ ಕಾರ್ಯ ಧ್ಯಕ್ಷೆ ಪ್ರಮೀಳಾ ಎನ್ ಅಮೀನ್ ಅವರ ನೇತೃತ್ವದಲ್ಲಿ ಹಳದಿ ಕುಂಕುಮ ಕಾರ್ಯಕ್ರಮ ಆಚರಿಸಲಾಯಿತು