
ಮುಂಬಯಿ: ಮುಂಬಯಿ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಿಲ್ಲವರ ಅಸೋಷಿಯೇಶನ್ ಇದರ ಸಂಚಾಲಿತ ಗುರು ನಾರಾಯಣ ರಾತ್ರಿ ಪ್ರೌಢ ಶಾಲೆಯ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ದಿನಾಂಕ 04/02/2024 ರಂದು ಆಯೋಜನೆ ಮಾಡಲಾಗಿತ್ತು.
ಬಿಲ್ಲವರ ಅಸೋಷಿಯೇಶನ್ ಇದರ ಪದಾಧಿಕಾರಿಗಳ ಮತ್ತು ಶಿಕ್ಷಣ ಸಮಿತಿಯ ಪದಾಧಿಕಾರಿಗಳ ಸಲಹೆ ಮಾರ್ಗದರ್ಶನದ ಮೇರೆಗೆ ಈ ವರ್ಷ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋಗಲು ಭಯಂದರ್ ಪರಿಸರದಲ್ಲಿರುವ ಪಾಲಿ ಬೀಚ್ ರಿಸೋರ್ಟ್ ಮತ್ತು ವಾಟರ್ ಪಾರ್ಕ್ ಈ ಸ್ಥಳಕ್ಕೆ ಹೋಗಲು ನಿರ್ಧರಿಸಲಾಗಿತ್ತು.ಈ ನಮ್ಮ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಪ್ರಕಾಶ ಶೆಟ್ಟಿ ಸಿಎ ಅವರ ಪ್ರಾಯೋಜಿಕತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ
ನಮ್ಮ ರಾತ್ರಿ ಪ್ರೌಢ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ದಿನಾಂಕ 04/02/2024 ರಂದು ಹೊರಡುವ ಬೆಳಗ್ಗೆ 6.30ರ ವೇಳೆಗೆ ಬಿಲ್ಲವರ ಭವನದಲ್ಲಿರುವ ನಾರಾಯಣ ಗುರುಗಳ ಸನ್ನಿಧಿಯಲ್ಲಿ ಅರ್ಚಕರಿಂದ ಪೂಜೆ ಸಲ್ಲಿಸಿ ಮಕ್ಕಳಿಂದ ಪ್ರಾರ್ಥನೆ ಮಾಡಿಸಲಾಯಿತು. ಈ ಪ್ರಾರ್ಥನೆಯಲ್ಲಿ ಶಾಲಾ ಸಮಿತಿಯ ಪದಾಧಿಕಾರಿಗಳಾದ, ಚಂದ್ರಹಾಸ ಕೋಟ್ಯಾನ್, ಸುಷ್ಮಾ ಪೂಜಾರಿ, ಮಾರ್ಗದರ್ಶಿ ಸಲಹೆಗಾರ ಬಿ ರವೀಂದ್ರ ಅಮೀನ,ಮುಖ್ಯಾಧ್ಯಾಪಕ ಎಂ. ಐ. ಬಡಿಗೇರ ಮತ್ತು ಶಿಕ್ಷಕ-ಶಿಕ್ಷಕೇತರರು ಮತ್ತು ಶಾಲಾ ಮಕ್ಕಳು ಹಳೆ ವಿದ್ಯಾರ್ಥಿಗಳು ಸಹಭಾಗ ನೀಡಿ ಸಹಕರಿಸಿದರು.
ಶಾಲಾ ಸಮಿತಿಯ ಸಲಹೆಗಾರ ಬನ್ನಂಜೆ ರವೀಂದ್ರ ಅಮೀನ ಅವರು ಪ್ರವಾಸವೆಂಬುದು ಶಿಕ್ಷಣದ ಭಾಗವಿದ್ದಂತೆ.ಪ್ರವಾಸದಿಂದ ಅನುಭವವು ಶ್ರೀಮಂತವಾಗುತ್ತದೆ. ವ್ಯಕ್ತಿಯ ದೃಷ್ಟಿಯು ವಿಶಾಲವಾಗುತ್ತದೆ.
ಎಂಬ ಪ್ರವಾಸದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ಹೇಳಿದರು.ಅಲ್ಲಿಂದ ಪ್ರವಾಸ ಸಾಗಿ ಬಾಯಿಯಂದರ್ ಪರಿಸರದಲ್ಲಿರುವ ಪಾಲಿ ರಿಸೋರ್ಟ್ ವಾಟರ್ ಪಾರ್ಕ್ ಸ್ಥಳಕ್ಕೆ ತಲುಪಿದೆವು. ಅಲ್ಲಿರುವ ವಾಟರ್ ಪಾರ್ಕನಲ್ಲಿ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶಿಕ್ಷಕ-ಶಿಕ್ಷಕೇತರರೆಲ್ಲರೂ ಹಳೆ ವಿದ್ಯಾರ್ಥಿಗಳೆಲ್ಲರೂ ಸಂತಸದ ಸವಿಯನ್ನು ಹಂಚಿಕೊಂಡರು.ಅಷ್ಟೇ ಅಲ್ಲದೇ ಸಮುದ್ರದ ಅಲೆಗಳು ಜೋರಾಗಿ ಬಂದು ದಂಡೆಗೆ ನೀರು ಚೆಲ್ಲುವುದನ್ನು ಕಂಡ ವಿದ್ಯಾರ್ಥಿಗಳು ಮನೋಲ್ಲಾಸ ಪಡೆದರು.ನಂತರ ಕೊನೆಗೆ ರಿಸೋರ್ಟ ಅಲ್ಲಿಂದ ಸಂಜೆ 4.20 ಸುಮಾರಿಗೆ ತೊರೆದು ಸಂಜೆ 6.30 ರ ಸುಮಾರಿಗೆ ಮರಳಿ ಬಿಲ್ಲವರ ಭವನಕ್ಕೆ ತಲುಪಿ ಪ್ರವಾಸದ ಪ್ರಯಾಣ ಮುಗಿಸಿ ಬಂದಂತಾಯಿತು.




ಶಾಲೆಯ ಶೈಕ್ಷಣಿಕ ಪ್ರವಾಸವು ಯಶಸ್ವಿಯಾಗಲು ಶಿಕ್ಷಣ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ಚಂದ್ರಹಾಸ ಕೋಟ್ಯಾನ್,ಇನ್ನೊರ್ವ ಸದಸ್ಯೆ ಸುಷ್ಮಾ ಪೂಜಾರಿ ಶಿಕ್ಷಕರಾದ ಸಿದ್ದರಾಮ ದಸಮಾನೆ, ಸುನೀಲ ಕಾಂಬಳೆ, ಆನಂದ ಭಾವಿಕಟ್ಟಿ,ಶಿಕ್ಷಕಿಯರಾದ ಹೇಮಾ ಗೌಡ, ವಿಮಲಾ ಪೂಜಾರಿ,ಮೋಹಿನಿ ಪೂಜಾರಿ,ಶಿಕ್ಷಕೇತರರಾದ ನಮಿತಾ ಸುವರ್ಣ, ಲಕ್ಷ್ಮಣ ಪೂಜಾರಿ ಮತ್ತು ಹಳೆ ವಿದ್ಯಾರ್ಥಿಗಳಾದ ಗುರು ಪ್ರಸಾದ,ರಶ್ಮಿ ಸ್ವಾಮಿ,ದಿವ್ಯ ಚವಾನ, ಪೃಥ್ವಿರಾಜ ಮೊಗವೀರ ಸಹಕರಿಸಿದರು.
ಶೈಕ್ಷಣಿಕ ಪ್ರವಾಸದ ಯಶಸ್ವಿಗೆ ಕಾರಣೀ ಕರ್ತರಾದ ಬಿಲ್ಲವರ ಅಸೋಶಿಯೇಶನ್ ಇದರ ಅಧ್ಯಕ್ಷರು,
ಗೌರವ ಪ್ರದಾನ ಕಾರ್ಯದರ್ಶಿ ಹರೀಶ ಜಿ ಸಾಲಿಯಾನ್ ಶಾಲಾ ಸಮಿತಿಯ ಕಾರ್ಯಾಧ್ಯಕ್ಷ ಜಯ ವಿ.ಪೂಜಾರಿ ಶಾಲಾ ಸಮಿತಿಯ ಸಲಹೆಗಾರ ಮಾರ್ಗದರ್ಶಿ ಬಿ ರವೀಂದ್ರ ಅಮೀನ್,ಸಹಕಾರ ನೀಡಿದ ಪ್ರಕಾಶ ಶೆಟ್ಟಿ ಮತ್ತು ಪಾಲಕರೆಲ್ಲರಿಗೂ ಶಾಲಾ ವತಿಯಿಂದ ಮುಖ್ಯಾಧ್ಯಾಪಕ ಎಂ.ಐ. ಬಡಿಗೇರ,ಶಿಕ್ಷಕರು ಕೃತಜ್ಞತೆ ಸಲ್ಲಿಸಿದ್ದಾರೆ.