
ಬರಹ : ನೀತಾ ರಾಜೇಶ್ ಶೆಟ್ಟಿ.
ತುಳುನಾಡು ತುಳುವರ ಬೀಡು.ವಿವಿಧ ಕಲೆಗಳ ನೆಲೆವೀಡು. ಪಡುವಣ ಕಡಲು ಮೂಡಣದ ಘಟ್ಟ, ತೆಂಕಿನ ಚಂದ್ರಗಿರಿ, ಬಡಗಿನ ಕೇರಳದ ಕಾಸರಗೋಡಿನ ವರೆ ವಿಸ್ತಾರವಾಗಿರುವ ತುಳುನಾಡು.ಇಲ್ಲಿನ ತುಳುವರ ಆಚರಣೆ ಬೇಸಾಯ ಮಾಡುವ ಕಲೆ, ದೈವ ದೇವರು ನಾಗಾರಾಧನೆ, ಊಟ ತಿಂಡಿ ತಿನಸು, ಉಡುಗೆ ತೊಡುಗೆ, ಜನಪದ ಆಟ, ಹಬ್ಬ ಹರಿ ದಿನ ಎಲ್ಲವೂ ಸೇರಿ ಸಂಸ್ಕ್ರತಿ ಎಂದು ಕರೆಯಲ್ಪಡುತ್ತದೆ.ತುಳುನಾಡು ಮತ್ತು ಬಂಟರು ಒಂದೇ ನಾಣ್ಯದ ಎರಡು ಮುಖಗಳು ಅಂದರೆ ತಪ್ಪಾಗಲಿಕ್ಕಿಲ್ಲ. ತುಳುನಾಡಿನ ಸಾಮಾಜಿಕ, ಆರ್ಥಿಕ, ಸಾಂಸ್ಕ್ರತಿಕ ಮತ್ತು ಧಾರ್ಮಿಕ ರಂಗದಲ್ಲಿ ಬಂಟ ಸಮುದಾಯದ ಕೊಡುಗೆ ಅನನ್ಯವಾದುದು.ಪ್ರಸ್ತುತ ಆಧುನಿಕ ಕಾಲ ಸ್ಥಿತಿಯ ಬಿರುಗಾಳಿಗೆ ಸಿಕ್ಕಿ ಅವಿಭಕ್ತ ಕುಟುಂಬಗಳು ಒಡೆದು ಹೋಳಾಗಿವೆ. ಅಜ್ಜ ಅಜ್ಜಿ, ತಾತ ಮುತ್ತಾತ ಮಾವ, ಮಾಮಿ, ಅತ್ತಿಗೆ ನಾದಿನಿ, ಮಕ್ಕಳು ಮರಿಗಳಿಂದ ತುಂಬಿ ತುಳುಕುತ್ತಿದ್ದ ಮನೆಗಳು, ತಂದೆ ತಾಯಿ ಮಕ್ಕಳು ಎಂಬಷ್ಟರ ಮಟ್ಟಿಗೆ ಮುಟ್ಟಿವೆ. ಹೆಚ್ಚಿನ ಬಂಟರು ಬೆಂಗಳೂರು ಮುಂಬಯಿ, ವಿದೇಶಗಳಲ್ಲಿ ನೆಲೆಸಿದ್ದು ಅಲ್ಲಿನ ಸಂಸ್ಕ್ರತಿಗೆ ಹೊಂದಿಕೊಂಡಿದ್ದಾರೆ.
ಇಂದಿನ ಮಕ್ಕಳು ಮುಂದಿನ ಭವಿಷ್ಯ. ಸಂಸ್ಕ್ರತಿಯನ್ನು ಉಳಿಸಿ ಬೆಳೆಸಬೇಕಾದ ಅವರು ಸಂಸ್ಕ್ರತಿಯನ್ನು ಮರೆತು ಬಿಡುವ ಅಪಾಯವನ್ನರಿತ ಮುಂಬಯಿ ಬಂಟರ ಸಂಘದ ಸಿಟಿ ಪ್ರಾದೇಶಿಕ ಸಮಿತಿ ಆಯೋಜಿಸಿರುವ ಸತ್ಸಂಗ ಕಾರ್ಯಕ್ರಮ ನಿಜವಾಗಿಯೂ ಅತ್ಯುತ್ತಮ ಪ್ರಯತ್ನ. ಮತ್ತು ಸಕಾಲಿಕ ಕಾರ್ಯ.
ಇಲ್ಲಿ ಅತ್ಯಂತ ಕುಷಿ ಕೊಟ್ಟ ವಿಷಯವೆಂದರ 122 ಬಂಟ ಮಕ್ಕಳಿಂದ ಸನಾತನ ನಡತೆಯ ಸತ್ಸಂಗ ನಡೆಸಿರುವುದು. ಇದು ತುಂಬಾ ಅರ್ಥವತ್ತಾದ ಪ್ರಯತ್ನ. ಮಕ್ಕಳ ದೆಸೆಯಲ್ಲಿಯೇ ಅವರಿಗೆ ಇದರ ಪರಿಚಯ ಮಾಡಿಸಿದಾಗ ಹಸಿ ಗೋಡೆಗೆ ಎಸೆದ ಕಲ್ಲು ಕಚ್ಚಿ ನಿಲ್ಲುವಂತೆ ಮಕ್ಕಳ ಮನಸ್ಸಿನಲ್ಲಿ ಬೇರೂರಿ ನಿಲ್ಲುತ್ತದೆ. ಇದಕ್ಕಾಗಿ ಸಿಟಿ ಪ್ರಾದೇಶಿಕ ಸಮಿತಿಯ ಎಲ್ಲರೂ ಅಭಿನಂದನಾರ್ಹರು.

ಜನವರಿ 27ರ ಸಂಜೆ ಶ್ರೀಮಹಾವಿಷ್ಣು ದೇವಸ್ಥಾನದಲ್ಲಿ ಎಲ್ಲರೂ ಒಟ್ಟಾಗಿ ಮಾಡಿದ ಸಾಮೂಹಿಕ ಪ್ರಾರ್ಥನೆ. ಬಳಿಕ ಮಕ್ಕಳು ಮತ್ತು ಪೋಷಕರು ಹಾಗು ಸಿಟಿ ಪ್ರಾದೇಶಿಕ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಸೇರಿ ಅತ್ಯಂತ ಭಕ್ತಿಭಾವದಿಂದ ನಡೆದ ವೈಭವೋಪೇತ ಶ್ರೀ ಸರಸ್ವತೀ ದೇವಿಯ ಮೆರವಣಿಗೆ ಕಾರ್ಯಕ್ರಮಕ್ಕೆ ಧಾರ್ಮಿಕ ಸ್ಪರ್ಷ ಕೊಡುವಲ್ಲಿ ಯಶಸ್ವಿಯಾಗಿದೆ.ಬಂಟ ಭವಿಷ್ಯ ಹೆಸರಿನ ವಿಶೇಷ ಮತ್ತು ಅಪರೂಪದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳು ಹಣೆಗೆ ಚಂದನ, ಕುಂಕುಮದ ನಾಮ. ಬಲ ಬದಿಗೆ ಚಕ್ರ ಎಡ ಬದಿಗೆ ಶಂಖದ ಮುದ್ರೆಯೊಂದಿಗೆ ದೇವತಾ ಸ್ವರೂಪಿಗಳಾಗಿ ಕಂಗೊಳಿಸಿದ್ದು, ಇಡೀ ಕಾರ್ಯಕ್ರಮದಲ್ಲಿ ಸತ್ಸಂಗದ ಸನಾತನ ಸನ್ನಡತೆಯ ವಾತಾವರಣವನ್ನು ನಿರ್ಮಿಸುವುದರೊಂದಿಗೆ ಅಲೌಕಿಕ ಅನುಭವವನ್ನು ನೀಡಿತು.
ಕಾರ್ಯಕ್ರಮಕ್ಕೆ. ಆಗಮಿಸಿದ ಬಂಟ ಪರಿವಾರಕ್ಕೆ ಬಿಸಿ ಪಾನಕದೊಂದಿಗೆ ಸ್ವಾಗತವಿತ್ತು.ಉದ್ಘಾಟನೆಯ ಸಮಯ ಗಣ್ಯರ ಸಮಕ್ಷಮ, ಮಕ್ಕಳಿಂದಲೇ ತೆಂಗಿನ ಹೂ ಅರಳಿಸಿ, ದೀಪ ಬೆಳಗಿಸಿ ಚಾಲನೆ ನೀಡಿರುವುದು, ಗಣ್ಯರಿಗೆ ಹೂ ಹಾರ ಪೇಟದ ಬದಲಿಗೆ ಸಿರಿಧಾನ್ಯ ನೀಡಿ ಗೌರವಿಸಲಾಗಿತ್ತು ಇದು ಸತ್ಸಂಗಕ್ಕೆ ಒಂದು ವಿಶೇಷ ಮೆರುಗು ನೀಡಿತ್ತು, ಶ್ರೀ ಮಹಾವಿಷ್ಣು ಜಾತ್ರೆಯ ಸಮಯ ಪುಟಾಣಿಗಳ ಶ್ಲೋಕ ಪಠಣ, ಭಜನೆ ಮಾಡುವ ಕಾರ್ಯಕ್ರ್ಮ ನಡೆಸುವುದಾಗಿ ನಿರ್ಧಾರಿಸಲಾಯ್ತು. ಇವೆಲ್ಲದಕ್ಕೂ ಮಿಗಿಲಾಗಿ ಕಣ್ಣಿಗೆ ಕಾಣುವ ನಿಜ ದೇವರು ಮಾತಾ ಪಿತೃಗಳಿಗೆ ಮಕ್ಕಳಿಂದ ಪಾದ ಪೂಜೆ, ಪುಷ್ಪಾರ್ಚನೆ, ಆರತಿ ಬೆಳಗಿಸಿರುವುದು ಇದು ಇಡೀ ಕಾರ್ಯಕ್ರಮದ ಅತೀ ಮುಖ್ಯ ವಿಷಯವಾಯಿತು. ಮತ್ತು ಇದೇ ಸನಾತನ ಸನ್ನಡತೆ. ಇದೇ ಸತ್ಸಂಗ .ಎಲ್ಲಾ ಚಿಣ್ಣರು ಮನಸಾರೆ ಈ ಪಾದ ಪೂಜೆಯನ್ನು ಮಾಡಿದಾಗ ಪೋಷಕರ ಕಣ್ಣಲ್ಲಿ ಖುಷಿ ಎದ್ದು ಕಾಣುತಿತ್ತು. ಮಕ್ಕಳು ಆರತಿ ಮಾಡುವಾಗ ಅಂತು ಕೆಲವು ಪೊಷಕರ ಭಾವ ಉಕ್ಕಿ ಬಂತು ಇದುವೇ ಕಾರ್ಯಕ್ರಮದ ಯಶಸ್ಸಲ್ಲವೇ ? ಮಕ್ಕಳ ತಲೆಗೆ ಅಪ್ಪ ಅಮ್ಮ ಪೋಷಕರು ಆಯಸ್ಸು ವೃದ್ದಿಗಾಗಿ ಮಂತ್ರಾಕ್ಷತೆ ಹಾಕಿ ಆಶಿರ್ವಾದ ಮಾಡಿದರು . ಪಾದ ಪೂಜೆ ಮಾಡುವಾಗ ಮಂತ್ರಘೋಷ ಎಲ್ಲರನ್ನು ಇನ್ನಷ್ಟು ಭಕ್ತಿಭಾವ ಆಳಕ್ಕೆ ಒಯ್ಯಿತ್ತು .ಆ ನಂತರ ಪ್ರತಿಯೊಬ್ಬ ಮಕ್ಕಳಿಗು ಕಾಣಿಕೆ ಡಬ್ಬ ನೀಡಿ ಅವರ ಕೈಗೆ ಹಣವನ್ನು ಕೊಟ್ಟು ಆ ಕಾಣಿಕೆಯನ್ನು ಶ್ರೀ ಮಹಾವಿಷ್ಠು ದೇವರಿಗೆ ಅರ್ಪಿಸಲಾಯ್ತು . ಕಾಣಿಕೆ ಡಬ್ಬವನ್ನು ಮಕ್ಕಳಿಗೇ ನೀಡಲಾಯ್ತು ಅಲ್ಲದೆ ಮಕ್ಕಳಿಗೆ ಪಾದ ಪೂಜೆಗೆ ಪ್ಲೇಟನ್ನು ನೀಡಿ ಪಾದ ಪೊಜೆ ಆದ ನಂತರ ನೆನಪಿಗಾಗಿ ಆ ಪ್ಲೇಟನ್ನು ಮಕ್ಕಳಿಗೆ ನೀಡಲಾಯ್ತು ಜೊತೆಗೆ ಪ್ರತಿ ಮಗುವಿಗೂ ವಸ್ತ್ರದಾನ ಮಾಡಲಾಯ್ತು . ತದನಂತರ ಚಿಣ್ಣರಿಗೆ ಉಡುಗೊರೆ ಮತ್ತು ಚಾಕೋಲೇಟ್ ನೀಡಲಾಯಿತು.
ಗುರುಗಳಾದ ವಿಧ್ವಾನ್ ಅರವಿಂದ ಬನ್ನಿಂತಾಯರು ವೇದ ,ಶಾಸ್ತ್ರ ,ದಿನ ನಿತ್ಯ ಚಟುವಟಿಕೆಯಲ್ಲಿ ದೇವರನ್ನು ಪ್ರಾರ್ಥಿಸುವ ರೀತಿ ಬಗ್ಗೆ ಸುಧಿರ್ಘ ವಿವರಣೆ ನೀಡಿ. ಮುಂದಕ್ಕೆ ಆರಂಭಿಸುವ ಗುರುಕುಲದಂತಹ ಮಕ್ಕಳಿಗೆ ಸುವಿಸ್ತಾರವಾದ ಭೋದನೆ ಭೋದಿಸಲಾಗುವುದು ಎಂದು ಭರವಸೆ ಇತ್ತರು, ಜೊತೆಗೆ ವರ್ಷoಪ್ರತಿ ನಡೆಯುವ ಶ್ರೀ ಮಹಾವಿಷ್ಣು ಜಾತ್ರೆಯಲ್ಲಿ ಈ ಚಿಣ್ಣರ ಶ್ಲೋಕ ಪಠಣ ಭಜನೆಯೊಂದಿಗೆ ದೇವರ ಬಲಿಪೂಜೆ ನಡೆಸಲಾಗುವುದು ಎಂದು ತಿಳಿಸಿದರು. ಈ ಸತ್ಸಂಗದಲ್ಲಿ 122 ಮಕ್ಕಳು ಮತ್ತು ಅವರ ಪಾಲಕರು ಪೋಷಕರು ಪಾಲ್ಗೊಂಡಿದ್ದರು,ಮುಂಬಯಿಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅನ್ನುವಂತೆ ಸತ್ಸಂಗ ನೆರವೇರಿತು.
ಇಷ್ಟೇ ಅಲ್ಲ ಚಿಣ್ಣರಿಂದ ಕಾರ್ಯಕ್ರಮ ಉದ್ಘಾಟನೆ ಮಾಡುವಾಗ ಬಂಟ ಭವಿಷ್ಯ ಹಾಡು ಮೊಳಗಿತು . ಈ ಹಾಡನ್ನು ಈ ಕಾರ್ಯಕ್ರಮಕ್ಕೇಂದೇ ಐಲೇಸಾ ದಿ ವಾಯ್ಸ್ ಆಫ್ ಓಷನ್ [ರಿ]ಸಂಸ್ಥೆ ನಿರ್ಮಿಸಿತ್ತು . ಈ ಹಾಡಿಗೆ ಅಂದ್ರಪ್ರದೇಶದ ಯುವ ಕಂಪೋಸರ್ ಅಕ್ಷಯ್ ಮ್ಯೂಸಿಕ್ ನೀಡಿದರೆ ಶ್ರೀ ಅಶೋಕ್ ಪಕ್ಕಳವರು ಹಾಡು ಬರೆದಿದ್ದಾರೆ , ಈ ಹಾಡು ಬಂಟರ ಸಂಘದ ಶ್ರೀಮತಿ ಶೈಲಜಾ ಅಮರನಾಥ್ ಶೆಟ್ಟಿ , ಪ್ರಶಸ್ತಿ ವಿಜೇತೆ ಡಾ ಪಲ್ಲವಿ ಮತ್ತು ರಾಶಿ , ಮಾಸ್ಟರ್ ಸುವಿದ್ ಮಾರ್ನಾಡ್ , ಸ್ವರ ಮಾರ್ನಾಡ್ ಇವರ ಕಂಠದಲ್ಲಿ ರೇವತಿ ರಾಗದಲ್ಲಿ ಮೂಡಿ ಬಂದಿತ್ತು ಎಲ್ಲರನ್ನು ಈ ಹಾಡು ಮೋಡಿ ಮಾಡಿತ್ತು. ಬಂಟ ಭವಿಷ್ಯ ಸತ್ಸಂಗದಲ್ಲಿ ಶ್ರೀ ಮಹಾವಿಷ್ಣು ಪಾಠ ಶಾಲೆಯನ್ನು ಉದ್ಘಾಟಿಸಲಾಯ್ತು.ಇದರ ವರಷಪೂರ್ತಿಯ ಪ್ರಾಯೋಜಕತ್ವವನ್ನು ಡಾ. ಆರ್ ಕೆ ಶೆಟ್ಟಿಯರು ನೀಡುತ್ತೇನೆ ಎಂದು ವಿನಂತಿಸಿದರು. ಕಾರ್ಯಕ್ರಮವನ್ನು ಡಾ ಪೊರ್ಣಿಮಾ ಶೆಟ್ಟಿಯವರು ನಡೆಸಿಕೊಟ್ಟರು. ಈ ಅಭೂತಪೂರ್ವ ಕಾರ್ಯಕ್ಮಕ್ಕೆ ಅನುವು ಮಾಡಿಕೊಟ್ಟು ಮುಂಬಯಿ ಬಂಟರ ಸಂಘದ ಅಧ್ಯಕ್ಷರು ಶ್ರೀ ಪ್ರವೀಣ್ ಭೋಜ ಶೆಟ್ಟಿ ಮತ್ತು ತಂಡ, ಸಿಟಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ಪಕ್ಕಳ ಮತ್ತವರ ಸಿಟಿ ಪ್ರಾದೇಶಿಕ ಸಮಿತಿಯ ಸರ್ವ ಸದಸ್ಯರು ,ಮಹಿಳಾವಿಭಾಗ ,ಯೂಥ್ ವಿಂಗ್ ಸಹಕರಿಸಿದ ಸರ್ವರೂ ಅಭಿನಂದನಾರ್ಹರು. ಧನ್ಯತಾ ಭಾವ ಮೂಡಿಸಿದ ಸಾರ್ಥಕ ಕಾರ್ಯಕ್ರಮ. ಕಾರ್ಯಕ್ರಮದ ಕೊನೆಯಲ್ಲಿ ಊರಿನ ರುಚಿಶುಚಿಯಾದ ತಿಂಡಿಗಳು ಎಲ್ಲರ ಗಮನಸೆಳೆದವು .
ಈ ಕಾರ್ಯಕ್ರಮವನ್ನು ಆಯೋಜಿಸಿದ ಸಿಟಿಪ್ರಾದೇಶಿಕ ಸಮಿತಿಗೆ ಕೈ ಜೋಡಿಸಿದ ಎಲ್ಲರಿಗೂ ಮತ್ತೊಮ್ಮೆ ವಂದನೆಗಳು ಅಭಿನಂದನೆಗಳು .