
ಮಹಾವಿಷ್ಣು ಮಂದಿರ ಡೊಂಬಿವಲಿ, ಇದರ ವತಿಯಿಂದ ದ್ವೀತಿಯ ಬಾರಿಗೆ ನಡೆದ ರಕ್ತದಾನ ಶಿಬಿರದಲ್ಲಿ ದಾಖಲೆ ನಿರ್ಮಿಸಿದ ಕೀರ್ತಿ (113 UNIT)
ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಶ್ರೀ ಮುಂಬ್ರಾ ಮಿತ್ರ ಭಜನಾ ಮಂಡಳಿ ಇದರ ವತಿಯಿಂದ ರಕ್ತ ದಾನ ಹಾಗೂ ಉಚಿತ ಕೀಳು – ಮೂಳೆ ತಪಾಸಣೆ ಶಿಬಿರವು ರವಿವಾರ ದಿನಾಂಕ 04.02.2024 ರಂದು ಬೆಳಿಗ್ಗೆ ಗಂಟೆ 8 ರಿಂದ ಸಂಜೆ 3 ರ ಗಂಟೆಯ ತನಕ ನಡೆಯಿತು ಹಾಗು ದ್ವೀತಿಯ ಬಾರಿಗೆ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 113 ಕ್ಕಿಂತ ಹೆಚ್ಚಿನ ಜನರು ರಕ್ತದಾನ ಮಾಡಿ ದಾಖಲೆ ನಿರ್ಮಿಸಿದೆ. ಉಚಿತ ಕೀಳು – ಮೂಳೆ ತಪಾಸಣೆ ಶಿಬಿರ ದಲ್ಲಿ ಒಟ್ಟು ನೊರಕ್ಕ ಹೆಚ್ಚಿನ ಜನರು ತಪಾಸಣೆ ಗೈದರು.
ಈ ಸಂದರ್ಭದಲ್ಲಿ ದೀಪ ಪ್ರಜ್ವಲಿಸಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಾಯಿತು, ಮಂದಿರದ ಅಧ್ಯಕ್ಷರಾದ ಶ್ರೀ ಇಂದುಶೇಖರ್ ಸುವರ್ಣ , ಗೌರವ ಅಧ್ಯಕ್ಷರಾದ ಶ್ರೀ ನಿತಿನ್ ಪ್ರಕಾಶ್ ಪುತ್ರನ್ , ಅತಿಥಿ ಗಣ್ಯರಾಗಿ ಡಾ. ಸತ್ಯಪ್ರಕಾಶ್ ಶೆಟ್ಟಿ (ಶಿವಾನಿ ಹಾಸ್ಪಿಟಲ್) ಡಾ.ವಿಜಯ್ ಶೆಟ್ಟಿ (ಅಥೋಪೆಡಿಕ್ ಸರ್ಜನ್) ಶ್ರೀ ವಿನಯ್ ಶೆಟ್ಟಿ (ಥಿಂಕ್ ಫೌಂಡೇಶನ್) ಡಾ. ಸಂಗೀತ ಶೆಟ್ಟಿ (ಸ್ತ್ರೀರೋಗತಜ್ಞ), ಶ್ರೀ ದಿವಾಕರ್ ಶೆಟ್ಟಿ, ಇಂದ್ರಾಳಿ (ಕಾರ್ಯಾಧ್ಯಎಕ್ಷರು , ಕರ್ನಾಟಕ ಸಂಘ ಡೊಂಬಿವಲಿ ), ಶ್ರೀ ಆನಂದ್ ಶೆಟ್ಟಿ ( ಕಾರ್ಯಾಧ್ಯಎಕ್ಷರು , ಬಂಟರ ಸಂಘ ಮುಂಬೈ , ಡೊಂಬಿವಲಿ ಪ್ರಾದೇಶಿಕ ಸಮಿತಿ ) ಶ್ರೀ ಸುಕುಮಾರ್ ಶೆಟ್ಟಿ ( ಅಧ್ಯಕ್ಷರು , ಕರ್ನಾಟಕ ಸಂಘ , ಡೊಂಬಿವಲಿ ) ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಸವಿತಾ ಸಿ. ಸಾಲಿಯಾನ್. ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು.



ಡಾ. ಸತ್ಯಪ್ರಕಾಶ್ ಶೆಟ್ಟಿ ಮಾತನಾಡುತ್ತಾ ದಾನಗಳಲ್ಲಿ ಶ್ರೇಷ್ಟ್ರ ದಾನ ರಕ್ತ ದಾನ , ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ, ರಕ್ತದಾನದ ಬಗ್ಗೆ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಮೊದಲಿಗೆ ಆಗಬೇಕು ಹಾಗು ರಕ್ತ ದಾನ ಮಾಡುವುದರಿಂದ ಹಾಗುವ ಪ್ರಯೋಜನ ದ ಬಗ್ಗೆ ಸವಿಸ್ತಾರವಾಗಿ ವಿವರಣೆ ನೀಡಿದರು, ಡೊಂಬಿವಲಿ ಪರಿಸರದ ಖ್ಯಾತ ಅಥೋಪೆಡಿಕ್ ಸರ್ಜನ್ ಡಾಕ್ಟರ್ ವಿಜಯ್ ಶೆಟ್ಟಿ ಮಾತನಾಡುತ್ತ ದೇಹದಲ್ಲಿ ರಕ್ತವನ್ನು ಎಲುಬುಗಳು ಉತ್ಪಾದಿಸುತ್ತದೆ. ನಾವು ನಮ್ಮ ಎಲುಬುಗಳ ಬಗ್ಗೆ ನಿಗಾ ಇಡಬೇಕು.ಮಹಾವಿಷ್ಣು ಮಂದಿರದ ಸದಸ್ಯರು ಮಾಡುತ್ತಿರುವ ಜನಪರ ಕಾರ್ಯ ಪ್ರಶಂಸನೀಯ ಎಂದರು.ಇನ್ನೊರ್ವ ಅತಿಥಿ ಶ್ರೀ ವಿನಯ್ ಶೆಟ್ಟಿ ಮಾತನಾಡುತ್ತ ದಾನ ದಲ್ಲಿ ಶ್ರೇಷ್ಠ ದಾನ ರಕ್ತ ದಾನ ಅಲ್ಲದೆ ತಮ್ಮ ಥಿಂಕ್ ಫೌಂಡೇಶನ್ ನ ವತಿಯಿಂದ ತಮಗೆ ರಕ್ತದ ಅಗತ್ಯ ಬಿದ್ದಲ್ಲಿ ನನ್ನನು ಸಂಪರ್ಕಿಸಿದಲ್ಲಿ ತಾನು ರಕ್ತದ ವ್ಯವಸ್ಥೆ ಮಾಡಿ ಕೊಡುತ್ತೇನೆ ಎಂದು ಭರವಸೆಯ ಮಾತು ನೀಡಿದರು. ಶ್ರೀ ದಿವಾಕರ್ ಶೆಟ್ಟಿ, ಇಂದ್ರಾಳಿ ಮಾತನಾಡುತ್ತ ಡಾಕ್ಟರ್ ಸತ್ಯಪ್ರಕಾಶ್ ಶೆಟ್ಟಿ ಯವರು ವೈದ್ಯಕೀಯ ಕ್ಷೇತ್ರದೊಂದಿಗೆ ಬಹುದೊಡ್ಡ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ, ಯುವಕರ ತಂಡವನ್ನು ಹೊಂದಿದ ಮಹಾವಿಷ್ಣು ಮಂದಿರ ಇನ್ನಷ್ಟು ಸಮಾಜ ಪರ ಸೇವೆ ನೆರವೇರಲಿ ಎಂದರು. ರಕ್ತದಾನ ಅತ್ಯಂತ ಶ್ರೇಷ್ಠ ದಾನ, ರಕ್ತವನ್ನು ನೀಡುವುದರಿಂದ ಇನೊಬ್ಬರ ಜೀವವನ್ನು ಉಳಿಸಬಹುದು, ಆ ತೃಪ್ತಿಯು ನಮಗೆ ಸಿಗುತ್ತದೆ ಎಂದರು. ಕೊನೆಯಲ್ಲಿ ಅಧ್ಯಕ್ಷರು ಮಾತನಾಡುತ್ತಾ ನಮ್ಮ ಮಂದಿರ ದಾ ವತಿಯಿಂದ ಜರಗುವ ಪ್ರತಿಯೊಂದು ಕಾರ್ಯಕ್ರಮ ವು ವೇದಿಕೆಯಲ್ಲಿ ಇದ್ದ ಗಣ್ಯರು ಹಾಗು ಭಕ್ತರು ದಾನಿಗಳ ಸಹಕಾರದಿಂದ ನೆರವೇರುತ್ತಿದೆ ಎಂದರು. ಮಂದಿರ ದಾ ಗೌರವಧ್ಯಎಕ್ಷರಾದ ನಿತಿನ್ ಪ್ರಕಾಶ್ ಪುತ್ರನ್ ರವರ ಮುಂದಾಲೋಚನೆಯಿಂದ ದ್ವಿತೀಯ ವರ್ಷ ಈ ರಕ್ತ ದಾನ ಶಿಬಿರವು ನೆರವೇರುತ್ತಿದೆ ಎಂದರು ನಮ್ಮ ಸಂಸ್ಥೆಯು ನಿರಂತರ ಸಾಮಾಜಿಕ , ಧಾರ್ಮಿಕ , ವೈದ್ಯಕೀಯ ಚಟುವಟಿಕೆಯಲ್ಲಿ ತೊಡಗಿ ಕೊಂಡಿದೆ ಹಾಗು ಇಂತಹ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿರುವ ಪ್ರತ್ರಿ ಯೊಬ್ಬರಿಗೂ ವಂದಿಸಿದರು.
ಶ್ರೀಯುತ ಅರವಿಂದ್ ಪದ್ಮಶಾಲಿ ಯವರ ಪ್ರಾರ್ಥನೆಯೊಂದಿಗೆ ವೇದಿಕೆ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
