
ಮುಂಬಯಿ : ಸುಮಾರು 50 ವರುಷಗಳ ಹಿಂದೆ ಮಲಾಡ್ ಪರಿಸರದಲ್ಲಿ ನೆಲೆಸಿರುವ ತುಳು ಕನ್ನಡಿಗರು ಮಲಾಡ್ ಪೂರ್ವ ಲಕ್ಷ್ಮಣ ನಗರ ಕುರಾರ್ ವಿಲೇಜ್ ನಲ್ಲಿ ಸ್ಥಾಪಿಸಿದ ಧಾರ್ಮಿಕ ಸಂಸ್ಥೆ ಶನಿಮಹಾತ್ಮ ಪೂಜಾ ಸಮಿತಿ ಗೆ ಇದೀಗ 50 ರ ಹೊಸ್ತಿಲಲ್ಲಿದ್ದು ಸಮಿತಿಯ ಆಡಳಿತದಲ್ಲಿರುವ ಶ್ರೀ ಶನಿಮಂದಿರದಲ್ಲಿ 50ನೇ ವಾರ್ಷಿಕ ಮಹಾಪೂಜೆಯು ಫೆ. 8 ರಿಂದ 10ರ ತನಕ ಶ್ರೀ ಮಹಾಗಣಪತಿ, ದುರ್ಗಾಪರಮೇಶ್ವರಿ, ಈಶ್ವರ ದೇವರಿಗೆ ಹಾಗೂ ಪ್ರಧಾನ ಶ್ರೀ ಶನೀಶ್ವರ ದೇವರ ವಾರ್ಷಿಕ ಕಲಶ ಪೂಜೆ, ಮಾದಿಗಳು ಮತ್ತು 50ನೇ ವಾರ್ಷಿಕ ಜಾತ್ರಾ ಮಹೋತ್ಸವ ಅಂಗವಾಗಿ ವಿವಿದ ಧಾರ್ಮಿಕ ಕಾರ್ಯಗಳ
ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಅಧ್ಯಕ್ಸರಾದ ಶ್ರೀನಿವಾಸ್ ಸಾಫಲ್ಯ ದಂಪತಿ ಯಜಮಾನಿಕೆಯಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ
ವೇದಮೂರ್ತಿ ಶ್ರೀ ರಾಘವೇಂದ್ರ ತುಂಗಾ ಭಟ್ ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರದಲ್ಲಿ ನಡೆಯಿತು,.
ಫೆ.8ರಂದು ಬೆಳಿಗ್ಗೆ 7ಕ್ಕೆ ನಿತ್ಯ ಪೂಜೆ , ಸಾಮೂಹಿಕ ಪ್ರಾರ್ಥನೆ ಹಾಗೂ ಮಹಾ ಸಂಕಲ್ಪ. ಸ್ವಸ್ತಿ ಪುಣ್ಯಾಹ ವಾಚನ, ಪಂಚಗವ್ಯ ಶುದ್ದಿ, ತೋರಣ ಮುಹೂರ್ತ, ಮಹಾಗಣಪತಿ ಹೋಮ, ನವಕ ಕಲಶ ಪೂಜೆ ಹಾಗೂ ನವಕಲಶ ಪ್ರಧಾನ ಹೋಮ, ಶನಿದೇವರ ಪಂಚ ವಿಂಶತಿ, ಕಲಶಾರಾಧನೆ ಹಾಗೂ ಹವನ. ಬೆಳಿಗ್ಗೆ 11.30ಕ್ಕೆ ಮಹಾಭಿಷೇಕ, ಮಧ್ಯಾಹ್ನ 12ಕ್ಕೆ ಪ್ರಸನ್ನ ಪೂಜೆ. ಸಂಜೆ 5ಕ್ಕೆ ವಾಸ್ತು ರಾಕ್ಷೋಘ್ನ ರಕ್ಷಾ ಹೋಮ, ವಾಸ್ತು ಪೂಜೆ, ಅಘೋರ ಹೋಮ, ಸಂಜೆ ಆರತಿ ಹಾಗೂ ಪ್ರಸಾದ. ನಡೆಯಿತು.
ಬೆಳಗ್ಗಿನ ಪೂಜಾ ಕಾರ್ಯಯು ಪೂಜೆಯು ಆನಂದ ಕೋಟ್ಯಾನ್ ಮತ್ತು ಶೀತಲ್ ಕೋಟ್ಯಾನ್ಪ ದಂಪತಿ , ನಾರಾಯಣ್ ಶೆಟ್ಟಿ ,ಸದಾನಂದ ಶೆಟ್ಟಿ. ಸಂಜೆಯ ಪೂಜಾ ಕಾರ್ಯಯು ಪ್ರಭಾಕರ್ ಶೆಟ್ಟಿ ಮತ್ತು ಅಮಿತಾ ಶೆಟ್ಟಿ ದಂಪತಿ . ರಮೇಶ್ ಪೂಜಾರಿ ಮತ್ತು ಶರ್ಮಿಳ ಪೂಜಾರಿ ದಂಪತಿ ಅವರ ಯಜಮಾನಿಕೆಯಲಿ ನಡೆಯಿತು.

ಈ ಸಂದರ್ಭದಲ್ಲಿ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಪರವಾಗಿ ಅಧ್ಯಕ್ಸರಾದ ಶ್ರೀನಿವಾಸ್ ಸಾಫಲ್ಯ, ಉಪಾಧ್ಯಕ್ಷರುಗಳಾದ ವಿಶ್ವನಾಥ್ ಶೆಟ್ಟಿ ಪೇತ್ರಿ ಮತ್ತು ರಮೇಶ್ ಆಚಾರ್ಯ, ಗೌ. ಪ್ರ. ಕಾರ್ಯದರ್ಶಿ ಸಂತೋಷ್ ಎಸ್. ಶೆಟ್ಟಿ, ಗೌ. ಕೋಶಾಧಿಕಾರಿ ಹರೀಶ್ ಜೆ. ಸಾಲಿಯಾನ್, ಜೊತೆ ಕಾರ್ಯದರ್ಶಿಗಳಾದ ನಿತ್ಯಾನಂದ ಎಲ್. ಕೋಟ್ಯಾನ್, ಶ್ರೀಮತಿ ಶಾಲಿನಿ ಶೆಟ್ಟಿ, ಜೊತೆ ಕೋಶಾಧಿಕಾರಿಗಳಾದ ಚಂದ್ರಕುಮಾರ್ ಶೆಟ್ಟಿ, ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶೀತಲ್ ಕೋಟ್ಯಾನ್, ಸಲಹೆಗಾರರಾದ ನಾರಾಯಣ ಶೆಟ್ಟಿ, , ಎ ಕೆ ದೇವಾಡಿಗ, , ಸಮಿತಿಯ ಸದಸ್ಯರಾದ ಶಿವಾನಂದ ದೇವಾಡಿಗ, ಪ್ರಭಾಕರ ಶೆಟ್ಟಿ, ಮಹೇಶ್ ಸಾಲ್ಯಾನ್, ಪ್ರಭಾಕರ ಬಿ ಶೆಟ್ಟಿ, ದಯಾನಂದ ಶೆಟ್ಟಿ, ಸದಾನಂದ ಶೆಟ್ಟಿ, ಅಶೋಕ್ ಸಾಲ್ಯಾನ್, ಜಯೇಶ್ ಸಾಲ್ಯಾನ್, ರಮೇಶ್ ಪೂಜಾರಿ ಸುರೇಶ್ ಸಾಲಿಯಾನ್ ಮಹಿಳಾ ವಿಭಾಗದ ಪರವಾಗಿ ಯಶೋಧ ರೈ, ಜಯಂತಿ ಸಾಲ್ಯಾನ್, ಭವಾನಿ ಕುಂದರ್, ರಾಜಶ್ರೀ ಪೂಜಾರಿ, ರೇಷ್ಮಾ ಶೆಟ್ಟಿ ರತಿಕಾ ಸಾಫಲ್ಯ, ಜಯಂತಿ ಶೆಟ್ಟಿ, ಜಯಲಕ್ಷ್ಮಿ ನಾಯಕ್, ಭಾಗೀರಥಿ, ಯಶೋದ ಕುಂಬ್ಳೆ, ಗಿರಿಜಾ ಮರಕಲ, ಲತಾ ಪೂಜಾರಿ, ಸುರೇಖಾ ಶೆಟ್ಟಿಯಾನ್, ಸ್ನೇಹಲತಾ ನಾಯಕ್, ಪೂರ್ಣಾ ಸಾಲ್ಯಾನ್, ಜಯಶ್ರೀ ಶೆಟ್ಟಿ, ವಿನೋದ ಕರ್ಕೇರ ಉಪಸ್ಥರಿದ್ದ.