
ನಕುಲ್ ನಿವಾಸ್ ಮತ್ತು ದ್ವಾರಕನಾಥ್ ನಿವಾಸ್ ಪೂಜಾ ಸಮಿತಿ, ಆಯಿರೆ ಗಾಂವ್, ಡೊಂಬಿವಲಿ ಪೂರ್ವ ಇದರ
ಪೂಜಾ ಸಮಿತಿಯ 29 ನೇ ವಾರ್ಷಿಕ ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ಶನೀಶ್ವರ ಗ್ರಂಥ ಪಾರಾಯಣ, ಭಜನೆ ಹಾಗೂ ಇನ್ನಿತರ ಭಕ್ತಿದಾಯಕ ಕಾರ್ಯಕ್ರಮಗಳು ದಿನಾಂಕ 18.02.2024 ನೇ ಭಾನುವಾರ ನಡೆಯಲಿದೆ.
ಬೆಳಿಗ್ಗೆ 7.00 ಗಂಟೆಗೆ ಗಣಹೋಮ.
9.00 ಗಂಟೆಗೆ ಸತ್ಯನಾರಾಯಣ ಮಹಾಪೂಜೆ
11.00 ಗಂಟೆಗೆ ಭಜನೆ
1.00 ಗಂಟೆಗೆ ಅನ್ನಸಂತರ್ಪಣೆ
2.00 ಗಂಟೆಗೆ ಶ್ರೀ ಶನೀಶ್ವರ ಕಳಸ ಪ್ರತಿಷ್ಟಾಪನೆ
7.00 ಗಂಟೆಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಆ ಪ್ರಯುಕ್ತ ತಾವೆಲ್ಲರೂ ತಮ್ಮ ಪರಿವಾರ ಬಂಧು- ಮಿತ್ರ ರೊಂದಿಗೆ ಆಗಮಿಸಿ ಶ್ರೀ ಸತ್ಯನಾರಾಯಣ ದೇವರ ಮತ್ತು ಶ್ರೀ ಶನಿದೇವರ ಪುಣ್ಯಮಯ ಪೂಜೆಯಲ್ಲಿ ಪಾಲ್ಗೊಂಡು ಶ್ರೀ ಗಂಧ, ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಸಮಿತಿಯ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ,