
ನೆರೂಲ್, ಫೆ.15- ನವಿಮುಂಬಯಿಯ ನೆರೂಲ್‌ನ ಪ್ಲಾಟ್‌ನಂ-2, ಸೆಕ್ಟರ್ ನಂ. 22 ರಲ್ಲಿ ತಿರುಮಲ ತಿರುಪತಿಯ ಶ್ರೀ ಬಾಲಾಜಿ ಮಂದಿರದಂತೆ ಸಾವಿರಾರು ಭಕ್ತರ ಭಕ್ತಿಯ ಕೇಂದ್ರವಾಗಿ ಕಂಗೊಳಿಸುತ್ತಿರುವ ಲಕ್ಷ್ಮೀ ನರಸಿಂಹ ಸಭಾದ ಆಡಳಿತದಲ್ಲಿರುವ ನೆರೂಲ್ ಬಾಲಾಜಿ ಮಂದಿರದಲ್ಲಿ ಪ್ರತಿ ವರ್ಷದಂತೆ ಬ್ರಹ್ಮ ರಥೋತ್ಸವ ಫೆ. 4 ರಿಂದ ಫೆ.9ರ ತನಕ ವಿಜೃಂಭಣೆಯಿಂದ ನಡೆಯಿತು,
ಅಂದು ಫೆ.4 ರಂದು ರವಿವಾರ ಸಂಜೆ ಪಂದಾಲ್ ಕಾಲ್ ಮುಹೂರ್ತದ ಬಳಿಕ ಶ್ರೀ ವಿಶ್ವಕ್ಷೇನಾರ್ ಸವಾರಿ, 6ಕ್ಕೆ ಭಾಗವತ್ ಅನುಸ್ನಾಯಿ, ಶ್ರೀ ವಿಶ್ವಕ್ಷೇನಾರ್ ಆರಾಧನಂ, ಪುಣ್ಯಹವಾಚನಂ, ರಕ್ಷಾ ಬಂಧನಂ, ವೇದ ದಿವ್ಯ ಪ್ರಬಂಧ ಪ್ರಾರಂಭನಂ, ಮೃತ್‌ಸಂಗ್ರಹಣಂ, ಅಂಕುರಾರ್ಪಣ ಹೋಮ, ಪೂರ್ಣಾಹುತಿ -ಸತ್ಯುಮುರಾಯ್ ಗೋಷ್ಠಿ ನಡೆಯಿತು,

. ಫೆ.5 ರಂದು 6.30ರಿಂದ 11.30ರ ತನಕ ಗರುಡ ಪ್ರತಿಷ್ಠಾಯಿ- ಗರುಡ ತಥ್ಯವಾನ್ಯಾಸ ಹೋಮ, ಪೂರ್ಣಾಹುತಿ – ಸವಾರಿ, ಸಂಜೆ ಗಂಟೆ ಭೇರಿ ತಾಡನಂ, ರಾತ್ರಿ ಮಹಾಪೂಜೆ ನಡೆಯಿತು,
.
ಫೆ.6 ರಂದು ಬೆಳಿಗ್ಗೆ ನಿಂದು ಯೋಗ ಯೋಗಸಾಲ ಪೂಜೆ, ಸಂಜೆ ಗರುಡ ವಾಹನಂ ಪೂಜೆ, ರಾತ್ರಿ ಮಹಾಪೂಜೆ ನೆರವೇರಿತು,. ಫೆ.7 ರಂದು ಬೆಳಿಗ್ಗೆ ನಿಂದು ಯೋಗಾಶಾಲಾ ಪೂಜೆ, ಮಧ್ಯಾಹ್ನ ಕಲ್ಯಾಣೋತ್ಸವಂ, ರಾತ್ರಿ ಮಹಾಪೂಜೆ ನಡೆಯಿತು,. ಫೆ.8 ರಂದು ಬೆಳಿಗ್ಗೆ ನಿಂದು ರಥೋತ್ಸವಂ, ರಾತ್ರಿ ಮಹಾಪೂಜೆ ನೆರವೇರಿತು,. ಫೆ. 9 ರಂದು ಬೆಳಿಗ್ಗೆ ಗಂಟೆ 6 ನಿಂದು ವಿವಿಧ ಪೂಜಾ ಕಾರ್ಯಗಳು ನಡೆಯಿತು,, ಸಂಜೆ 4 ಗಂಟೆಗೆ ಪುಷ್ಪಾಯಾಗ, ಸಂಜೆ ಮಹಾಪೂಜೆ, ಮಹಾಪ್ರಸಾದ ವಿತರಣೆ .

ಪುಷ್ಪಯಾಗಂ – ಬ್ರಹ್ಮೋತ್ಸವಂಯಲ್ಲಿ ಸುಧೀರ್ ಶೆಟ್ಟಿ- ಕರಿಷ್ಮಾ ಬಿಲ್ಡರ್, ಬಂಟರ ಸಂಘದ ನವಿ ಮುಂಬೈ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಶೆಟ್ಟಿ ,- ಮೂಕಾಂಬಿಕಾ ದೇವಸ್ಥಾನ, ಘನ್ಸೋಲಿ ಧರ್ಮದರ್ಶಿ ಅನ್ನಿ ಸಿ ಶೆಟ್ಟಿ ,ಸಿಎ ಕರುಣಾಕರ ಶೆಟ್ಟಿ ,ಮುಲುಂಡ್ ಬಂಟ್ಸ್. ಭಾಸ್ಕರ್ ಶೆಟ್ಟಿ,- ಥಾಣೆ ಬಂಟ್ಸ್ವ ವಿಠ್ಠಲ್ ಶೆಟ್ಟಿ , ಪ್ರಸಿದ್ಧ ಉದ್ಯಮಿ ಮುರಳಿ ಶೆಟ್ಟಿ -,,( ಮಾಜಿ ಅಧ್ಯಕ್ಷರು, ಬಾಂಬೆ ಬಂಟ್ಸ್ ಅಸೋಸಿಯೇಷನ್). ಎನ್.ಡಿ.ಶೆಣೈ(, ಟ್ರಸ್ಟಿ- ಶನಿ ಮಂದಿರ, ನೆರೂಲ್) ಗೀತಾ ಶೆಟ್ಟಿ – ,(, ಕಾರ್ಯಾಧ್ಯಕ್ಷ – ಮಹಿಳಾ ವಿಭಾಗ, ನವಿ ಮುಂಬೈ ಪ್ರದೇಶ, ಬಂಟ್ಸ್ ಸಂಘ ) ಮತ್ತಿತರ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು,
ಪುಷ್ಪಯಾಗದಲ್ಲಿ 4 ಲಕ್ಷ ಮೌಲ್ಯದ ಹೂವುಗಳನ್ನು ಬಾಲಾಜಿ ದೇವರಿಗೆ ಅರ್ಪಿಸಲಾಯಿತು* ತಿರುಮಲ ತಿರುಪತಿ ದೇವಸ್ತಾನಕ್ಕೆ ಸೇರಿದ ಪುರೋಹಿತರಿಂದ ಪುಷ್ಪಯಾಗ ನಡೆಯಿತು