
ಮುಂಡ್ಕೂರು : ಉಡುಪಿಯ ಇತಿಹಾಸ ಪ್ರಸಿದ್ಧ ಕಾರ್ಕಳ ತಾಲೂಕಿನ ಮುಂಡ್ಕೂರು ಕಜೆ ಶ್ರೀ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮ ಕಳಶಾಭಿಷೇಕವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು. ಫೆ. 26ರಂದು ನಡೆಯಲಿರುವ ಬ್ರಹ್ಮಕಳಸಾಭಿಷೇಕ ದ ಅಂಗವಾಗಿ ಫೆ. 22 ರಿಂದ 28ರ ತನಕ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆ. 22 ರಂದು ಬೆಳಿಗ್ಗೆ 8.30 ರಿಂದ ಋತ್ವಿಜರ ಸ್ವಾಗತ, ಶಿಲ್ಪಿಗಳಿಂದ ಆಲಯ ಪರಿಗ್ರಹ, ಸಾಮೂಹಿಕ ಪ್ರಾರ್ಥನೆ. ಸ್ವಸ್ತಿವಾಚನ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಅಧ್ಯ ಗಣಪತಿ ಹೋಮ, ಕಂಕಣ ಬಂಧ. ಸಾಯಂಕಾಲ ಸಪ್ತಶುದ್ಧಿ, ಪ್ರಸಾದ ಶುದ್ದಿ, ರಾಕ್ಷೋಷ್ಟ ಹೋಮ, ವಾಸ್ತು ಪೂಜೆ, ವಾಸ್ತು ಬಲಿ ನಾಗಮಂಡಲ ಚಪ್ಪರದಲ್ಲಿ ವಾಸ್ತು ಪ್ರಕ್ರಿಯೆ ನಡೆಯಲಿದೆ
ಫೆ. 23ರಂದು ಸ್ವಸ್ತಿ ವಾಚನ, ನವಗ್ರಹ ಯಾಗ, ಮೃತ್ಯುಂಜಯ ಯಾಗ, ಮಂಟಪ ಸಂಸ್ಕಾರ ಬಿಂಬಶುದ್ಧಿ ಹೊರೆ ಕಾಣಿಕೆ ಮೆರವಣಿಗೆ, ಸಾಯಂಕಾಲ ಶಯ್ಯಾದಿವಾಸ, ಆದಿವಾಸ ಹೋಮ, ಧೈವಗಳ ಅಧಿವಾಸ, ಕಳಶಾದಿವಾಸ, ಸಚ್ಚರಿಪೇಟೆ ನವೀಕೃತ ದೇವಿಕಟ್ಟೆಯಲ್ಲಿ ವಾಸ್ತು ಹೋಮ, ಬಲಿ ಮತ್ತು ಇತರ ಧಾರ್ಮಿಕ ವಿಧಿಗಳು.
ಫೆ. 24ರಂದು ಸ್ವಸ್ತಿ ವಾಚನ, ಶಿಖರ ಪ್ರತಿಷ್ಠೆ, ಶ್ರೀ ಮಹಮ್ಮಾಯಿ ದೇವಿಯ ಬಿಂಬ ಗದ್ದಿಗೆ ಪ್ರತಿಷ್ಠೆ,
ನಿದ್ರಾ ಕುಂಭಾಭಿಷೇಕ, ಪ್ರಸನ್ನ ಪೂಜೆ, ನಾಗ ಸನ್ನಿಧಿಯಲ್ಲಿ ಪ್ರಾಯಶ್ಚಿತ ಹೋಮ, ಕಳಶಾಭಿಷೇಕ ಅಶ್ಲೇಷ ಬಲಿ, ವಟುವಾರಾಧನೆ, ಸಚ್ಚರಿಪೇಟೆ ನವೀಕೃತ ದೇವಿಕಟ್ಟೆಯಲ್ಲಿ ಪ್ರತಿಷ್ಠಾಪನ ಕಾರ್ಯಕ್ರಮ, ವಾಸ್ತು ಹೋಮ ವಾಸ್ತು ಬಲಿ ಮತ್ತು ಇತರ ಧಾರ್ಮಿಕ ವಿಧಿಗಳು.
ಫೆ. 25ರಂದು ಸ್ವಸ್ತಿ ವಾಚನ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಕಲಶ ಮಂಡಳ ರಚನೆ, ಮಹಾ ಚಂಡಿಕಾಯಾಗ, ದೇವಿ ದರ್ಶನ ಮಹಾ ಅನ್ನಸಂತರ್ಪಣೆ. ಸಾಯಂಕಾಲ ಬ್ರಹ್ಮ ಕಲಶಾದಿವಾಸ, ಅಧಿವಾಸ ಹೋಮ.
ಫೆ. 26ರಂದು ಸ್ವಸ್ತಿ ವಾಚನ, ಬ್ರಹ್ಮ ಕಲಶಾಭಿಷೇಕ ಆರಂಭ, ಬ್ರಹ್ಮ ಕುಂಭಾಭಿಷೇಕ, ಪ್ರಸನ್ನ ಪೂಜೆ, ದೇವಿ ದರ್ಶನ, ಪಲ್ಲಪೂಜೆ, ಮಹಾ ಅನ್ನ ಸಂತರ್ಪಣೆ ನಡೆಯಲಿದೆ.
ಫೆ. 27 ಮೆರವಣಿಗೆ, ಮುಡ್ಕೂರು ದೇವಳದಲ್ಲಿ ಶೃಂಗಾರಗೊಂಡ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಮಧ್ಯಾಹ್ನ 2.30 ಕ್ಕೆ ಮೆರವಣಿಗೆಯ ಮೂಲಕ ಜಾರಿಗೆ ಕಟ್ಟೆ -ಪೇರೂರು-ಸಚ್ಚರಿಪೇಟೆ ಕಟ್ಟೆಯಲ್ಲಿ ಪೂಜೆ, ರಾತ್ರಿ 9ಕ್ಕೆ ಮಾರಿಗುಡಿ ಗೆ ಹಿಂತಿರುಗಿದ ನಂತರ ದೇವಿ ದರ್ಶನ ರಾತ್ರಿ 10ರ ನಂತರ ಗುಳಿಗ ಪಂಜುರ್ಲಿ ದೈವಗಳ ನೇಮೋತ್ಸವ ಜರಗಲಿದೆ.
ಫೆ. 28 ವಾರ್ಷಿಕ ಮಾರಿ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ 12:30ಕ್ಕೆ ದೇವಿ ದರ್ಶನ ಅನುಗ್ರಹ ಪ್ರಸಾದ ವಿತರಣೆ,
ಪ್ರತಿದಿನ ಸಾಯಂಕಾಲ ಸಭಾ ಕಾರ್ಯಕ್ರಮದ ನಂತರ ಸಾಂಸ್ಕೃತಿಯ ಕಾರ್ಯಕ್ರಮಗಳು ನಡೆಯಲಿರುವುದು. ಪ್ರತಿದಿನ ಬೆಳಿಗ್ಗೆ 9ರಿಂದ ಸಂಜೆ 5 ತನಕ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಉಪಹಾರ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ. ಮುಂಡ್ಕೂರಿನಿಂದ ಜಾರಿಗೆ ಕಟ್ಟೆ ಸಂಕಲಕರಿಯ ಮತ್ತು ಸಚ್ಚರಿಪೇಟೆಯಾಗಿ ಶ್ರೀ ಕ್ಷೇತ್ರ ಕಜೆಗೆ ಉಚಿತ ಬಸ್ ಸೇವೆ ಇದೆ
ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಗೂ ಧಾರ್ಮಿಕ ಸವ ಕಾರ್ಯಕ್ರಮದಲ್ಲಿ ವಿವಿಧ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದು, ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಬೇಕಾಗಿ ಶ್ರೀ ಕ್ಷೇತ್ರದ ಪರವಾಗಿ ಪ್ರಧಾನ ಅರ್ಚಕರಾದ ಅನಂತ ಕೃಷ್ಣ ಆಚಾರ್ಯ ಮತ್ತು ಸಹೋದರರು, ಗೌರವಾಧ್ಯಕ್ಷರಾದ ಎಂ,ಜಿ. ಕರ್ಕೇರ, ಅಧ್ಯಕ್ಷರಾದ ಕಜೆ ಹೊಸ ಮನೆ ಸುಂದರ ಸಫಲಿಗ, ಉಪಾಧ್ಯಕ್ಷರಾದ ಹೆಗ್ಗಡ ಕಜೆ ಚನ್ನಪ್ಪ ಸಫಲಿಗ, ಪ್ರಧಾನ ಕಾರ್ಯದರ್ಶಿ ಕಜೆ ಪಡುಬೈಲು ಸುರೇಂದ್ರ ಸಾಲ್ಯಾನ್, ಜೊತೆ ಕಾರ್ಯದರ್ಶಿ ಕಜೆ ಮಂಗಿಲಮಾರ್ ನಾರಾಯಣ ಸಫಲಿಗ, ಕೋಶಾಧಿಕಾರಿ ಕಜೆ ಆಚೆ ಮನೆ ಉದಯಕುಮಾರ್, ಜೊತೆ ಕೋಶಾಧಿಕಾರಿ ಕಜೆಮನೆ ಭುಜಂಗ ಮೂಲ್ಯ , ಸದಸ್ಯರಾದ ಕಜೆ ಪಡುಬೈಲು ಜಯ ಸಾಲ್ಯಾನ್, ಕಜೆ ಆಚೆಮನೆ ಸಂಜೀವ ಸೇರಿಗಾರ್, ಕಜೆ ಹೊಸ ಮನೆ ಶೇಖರ್ ಮೆಂಡನ್, ಕಜೆ ಮನೆ ಸುರೇಶ್ ವಾಸು ಮೂಲ್ಯ, ಕಜೆ ಮಂಗ್ಲಿಮಾರ್ ದಯಾನಂದ ಸಫಲಿಗ, ಹೆಗ್ಗಡೆ ಕಎ ಸುಚಿತ್ ಕುಮಾರ್, ಮುಂಬೈ ಸಮಿತಿಯ ಅಧ್ಯಕ್ಷರಾದ ಸುಧಾಕರ್ ಎಂ ಶೆಟ್ಟಿ ಮುಲ್ಲಡ್ಕ, ಸ್ಥಳೀಯ ಸಮಿತಿಯ ಅಧ್ಯಕ್ಷರಾದ ವಿನಯ್ ಕುಮಾರ್ ಶೆಟ್ಟಿ ನಡಿಗುತ್ತು, ಸಲಹೆಗಾರರು, ಉಪಾಧ್ಯಕ್ಷರುಗಳು ವಿವಿಧ ಸಮಿತಿಯ ಸದಸ್ಯರು, ಇನ್ನ, ಮುಲ್ಲಡ್ಕ ,ಪೋಸ್ರಾಲ್, ಬೋಳ ,ಕಡಂದಲೆ, ಸಚ್ಚರಿಪೇಟೆ ಮತ್ತು ಗುಳೇಪಾಡಿ ಗ್ರಾಮದ ಎಲ್ಲಾ ಗ್ರಾಮಸ್ಥರು, ಬ್ರಹ್ಮಕಲಸೋತ್ಸವ ಸಮಿತಿ ಮತ್ತು ಅಭಿವೃದ್ದಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ವಿನಂತಿಸಿದ್ದಾರೆ.