ಮುಂಬಯಿ ಪೆ 20 . ಮಲಾಡ್ ಪೂರ್ವ ಕನ್ನಡಿಗರು ಸ್ಥಾಪಿಸಿರುವ ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಕಳೆದ 11 ವರ್ಷದಿಂದ ಶ್ರೀ ಚಾಮುಂಡೇಶ್ವರಿಯ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸನ್ಮಾನ ಕಾರ್ಯಕ್ರಮಗಳು ಆಯೋಜಿಸುತ್ತಾ ಬರುತ್ತಿದ್ದಾರೆ ಈ ವರ್ಷ12ನೇ ವಾರ್ಷಿಕ ಮಹಾಪೂಜೆಯ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಪೆ 23. ನೇ ಶುಕ್ರವಾರ ಸಂಜೆ 3.00ಕ್ಕೆ ಸರಿಯಾಗಿ ಶ್ರೀ ವೇದಮೂರ್ತಿ ಸತೀಶ್ ಭಟ್ ಇವರ ಪೌರೋಹಿತ್ಯದಲ್ಲಿ
ಶಿವಾಜಿ ಚೌಕ್, ದತ್ತರಿ ರೋಡ್, ಮಾಲಾಡ್ (ಪೂ.) ಇಲ್ಲಿ ನಡೆಯಲಿದೆ. ಅಂದುಸಂಜೆ3.00ರಿಂದಸಾರ್ವಜನಿಕ ಪ್ರಾರ್ಥನೆ, ಗಣಪತಿ ಪೂಜಾ, ನವಗ್ರಹ ಶಾಂತಿ , ಶನಿಶಾಂತಿ
5.30ರಿಂದ 6.00ರವರೆಗೆ : ಚಾಮುಂಡೇಶ್ವರಿ ಪ್ರಿತಾರ್ಥ ಚಂಡಿಕಾ ಹವಣ, ಕುಮಾರಿಕ ಪೂಜಾ6.00ರಿಂದ 6.30ರವರೆಗೆ ಅರಸಿನ ಕುಂಕುಮ ಕಾರ್ಯಕ್ರಮ ಚಾಮುಂಡೇಶ್ವರಿ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ,
ಆ ಪ್ರಯುಕ್ತ ತಾವೆಲ್ಲರೂ ಈ ಭಗವತ್ಕಾರ್ಯಕ್ಕೆ ಸಹಕುಟುಂಬ ಪರಿವಾರ ಸಮೇತರಾಗಿ ಸಕಾಲದಲ್ಲಿ ಆಗಮಿಸಿ, ಶ್ರೀ ಚಾಮುಂಡೇಶ್ವರಿ ದೇವಿಯ ಗಂಧ ಮತ್ತು ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ
ಶ್ರೀ ಚಾಮುಂಡೇಶ್ವರಿ ಸೇವಾ ಸಂಸ್ಥೆ ಯು ಅಧ್ಯಕ್ಷ ಕುಮಾರ್ ಗೌಡ, ಉಪಾಧ್ಯಕ್ಷ ಮಂಜುನಾಥ್ ಗೌಡ, ಕಾರ್ಯದರ್ಶಿ ನಾಗರಾಜ್ ಗೌಡ, ಕೋಶಧಿಕಾರಿ ನವೀನ್ ಕುಮಾರ್ ಗೌಡ, ಮತ್ತಿತರ ಸದಸ್ಯರು ವಿನಂತಿಸಿಕೊಂಡಿದ್ದಾರೆ