April 2, 2025
ಮುಂಬಯಿ

ಜೀರ್ಣೋದ್ಧಾರಗೊಂಡ ಭಾಂಡೂಪ್ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರದಲ್ಲಿ ವಿಜೃಂಭಣೆಯಿಂದ ಸಂಪನ್ನಗೊಂಡ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಭಾಭಿಷೇಕ.

ಚಿತ್ರ : ಧನಂಜಯ್ ಪೂಜಾರಿ.

ಭಾಂಡೂಪ್ ಪಶ್ಚಿಮದ ಬ್ಯಾಂಕ್ ಆಫ್ ಬರೋಡ ಕ್ವಾಟ್ರಸ್ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿ (ರಿ) ಇಲ್ಲಿನ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರ ಸಂಪೂರ್ಣ ಜೀರ್ಣೋದ್ಧಾರಗೊಂಡು ಅಷ್ಟ ಬಂಧ ಬ್ರಹ್ಮಕಲಶೋತ್ಸವವು ಫೆ.22 ರಂದು ಗುರುವಾರ ವಿಜೃಂಭಣೆಯಿಂದ ಜರಗಿತು. ಬ್ರಹ್ಮಕಲಶೋತ್ಸವ ನಿಮಿತ್ತ ಮಂದಿರದಲ್ಲಿ ಫೆ.19 ರಿಂದ ಡೊಂಬಿವಲಿ ಶ್ರೀ ರಮಣಿ ಮತ್ತು ಶ್ರೀರಾಮ ಶರ್ಮಾ ಅವರ ಮುಂದಾಳತ್ವದಲ್ಲಿ ಫೆ. 19 ರಂದು ಸೋಮವಾರ ಮಧ್ಯಾಹ್ನ ಗಣಪತಿ ಪೂಜೆ, ವಾಸ್ತು ಪೂಜೆ, ತೋರಣ ಪ್ರತಿಷ್ಠೆ, ಉಗ್ರಾಣ ಪೂಜೆ, ಹೋಮ, ಶ್ರೀ ಕೃಷ್ಣ ಪ್ರಸಾದಿತ ಭಜನಾ ಮಂಡಳಿ, ಶ್ರೀ ನಿತ್ಯಾನಂದ ಮಂದಿರ, ಭಾಂಡುಪ್ ಇವರಿಂದ ಭಜನೆ ನಡೆದು. ಫೆ.20 ಮಂಗಳವಾರ ಬೆಳಿಗ್ಗೆ ಗಣಪತಿ ಪೂಜೆ, ಹೋಮ, ಗಂಗಾ ಪೂಜೆ, ಕಲಶ ಸ್ಥಾಪನೆ, 1 ನೇ ಕಾಳ ಪೂಜೆ, ಹೋಮ ಪೂಜೆ, ಆರತಿ, ಸಾಯಂಕಾಲ ಧನ್ಯಾದಿ ವಾಸಂ, ಜಲಾದಿ ವಾಸಂ, ಶಯನಾದಿ ವಾಸಂ, ಪುಷ್ಪಾದಿ ವಾಸಂ, ಕನಕಾದಿ ವಾಸಂ, ಅಭಿಷೇಕ, 2 ನೇ ಕಾಳ ಪೂಜೆ, ಹೋಮ ಪೂಜೆ,ರಾತ್ರಿ ಭಜನೆ, ರಾಜೀವಿ ಶ್ರೀಧರ ಹಳೆಯಂಗಡಿ ಇವರ ಸೌಜನ್ಯದಿಂದ ಹರಿ ಕಿರ್ತನೆಯು ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ (ವಿಶ್ವೇಸ ದಾಸ) ಇವರಿಂದ ನಡೆಯಿತು. ಹಾರ್ಮೋನಿಯಮ್ ದಲ್ಲಿ ಶೇಖರ್ ಸಸಿಹಿತ್ಲು ಸಹಕರಿಸಿದರು.

.ಫೆ.21 ನೇ ಬುಧವಾರ ಬೆಳಿಗ್ಗೆ 3 ನೇ ಕಾಳ ಪೂಜೆ, ಹೋಮ ಪೂಜೆ, ಆರತಿ,ಮಧ್ಯಾಹ್ನ ಗಂಟೆ 5 ರಿಂದ 4ನೇ ಕಾಳ ಪೂಜೆ, ಹೋಮ ಪೂಜೆ, ಆರತಿ, ಫೆ.22‌ರಂದು ಗುರುವಾರ ಬೆಳಿಗ್ಗೆ 5 ನೇ ಕಾಳ ಪೂಜೆ, ಹೋಮ, ಪೂರ್ಣಾಹುತಿ, ಪುನರ್‌ ಪೂಜೆ, ಸ್ಪರ್ಶಾಹುತಿ, ನದಿ ಸಂದಾನಂ, ನೇತ್ರ ಉನ್ಮೀಲನಂ, ಮಹಾ ಪೂರ್ಣಾಹುತಿ, ಕಲಷ ಯಾತ್ರಾ ಧನಂ, ವಿಮಾನ ಆಭಿಷೇಕ, ಎಲ್ಲಾ ದೇವರಿಗೆ ಕುಂಬಾಭಿಷೇಕ ಹಾಗೂ ಅಲಂಕಾರ, ನೈವೆದ್ಯ, ದೀಪಾರಾಧನೆಯು ವಿಜೃಂಭಣೆಯಿಂದ ಜರಗಿದೆ. ಪೂಜಾ ವೃತವನ್ನು ಆಡಳಿತ ಸಮಿತಿಯ ಕೋಶಾಧಿಕಾರಿ ಕಿಶೋರ್ ಎನ್. ಬಂಗೇರ ಮತ್ತು ಶಶಿಕಲಾ ಕೆ. ಬಂಗೇರ ದಂಪತಿ ಕೈಗೊಂಡರು. ಮಧ್ಯಾಹ್ನ ಅನ್ನ ಸಂತರ್ಪಣೆಯು ಗಂಗಾಧರ ಕರ್ಕೇರ ಹಾಗೂ ಪರಿವಾರದವರಿಂದ (ಬ್ಯಾಂಕ್ ಆಫ್ ಬರೊಡಾ ನಿವೃತ್ತರು) ಜರಗಿತು.

ಈ ಸಂದರ್ಭದಲ್ಲಿ ಕಾರ್ಕಳದ ಶಿಲ್ಪಿ ದಾಮೋದರ್ ಆಚಾರ್ಯರವರನ್ನು ಸನ್ಮಾನಿಸಲಾಯಿತು. ಅಲ್ಲದೆ ಜಿಎಸ್ ಶೆಟ್ಟಿ ಇಂಟರ್ ನ್ಯಾಷನಲ್ ಸ್ಕೂಲ್ ಭಾಂಡೂಪ್ ಶಂಕರ್ ಶೆಟ್ಟಿ,ಥಾಣೆ ಘೋಡ್ ಬಂದರ್ ಕನ್ನಡ ಅಸೋಸಿಯೇಷನ್ ಉಪಾಧ್ಯಕ್ಷ ಲಕ್ಷ್ಮಣ್ ಮಣಿಯಾಣಿ ದಂಪತಿ, ದಾನಿಗಳಾದ ಚಂದ್ರಕಾಂತ್ ಕೋಟ್ಯಾನ್ ಮತ್ತು ಪ್ರಮೀಳಾ ಕೋಟ್ಯಾನ್ ದಂಪತಿ ಮಸ್ಕತ್, ವೆಸ್ಟರ್ನ್ ಇಂಡಿಯಾ ಶ್ರೀ ಶನಿ ಮಹಾತ್ಮ ಸೇವಾ ಸಮಿತಿ ಧಾರ್ಮಿಕ ಸಲಹೆಗಾರರಾದ ಜಗದೀಶ್ ಜೆ. ಕೋಟ್ಯಾನ್, ಅರ್ಚಕ ಸತೀಶ್ ಎನ್. ಕೋಟ್ಯಾನ್, ಭಾಂಡೂಪ್ ಭಟ್ಟಿಪಾಡಾ ಶ್ರೀ ಶನೀಶ್ವರ ಮಂದಿರದ ಗೌರವ ಕಾರ್ಯದರ್ಶಿ ಸದಾನಂದ ಅಮೀನ್, ವಿಶೇಷ ಸಹಕಾರವನ್ನು ನೀಡಿದ ನಯನ ಕವತ್ರ, ಚಂದ್ರಕಾಂತ್ ನಾಯಕ್ ದಂಪತಿ ಅಲ್ಲದೆ ಅನೇಕ ದಾನಿಗಳನ್ನು ಗೌರವಿಸಲಾಯಿತು. ಮಂದಿರದಲ್ಲಿ ರಾತ್ರಿ ಸಾಯಿಬಾಬಾ ಗುರುಪೂಜೆ, ಮಂಡಳಿಯವರಿಂದ ಭಜನೆ ನಡೆಯಿತು. ಸಾವಿರಾರು ಮಂದಿ ಭಕ್ತರು ,ವಿವಿಧ ಸಾಮಾಜಿಕ, ಧಾರ್ಮಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು , ಸದಸ್ಯರು, ಶನಿ ಪೂಜಾ ಸಮಿತಿಯವರು ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಂಡಿದ್ದರು.ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಶ್ಯಾಮ್ ಪ್ಯಾರೆ ಯಾದವ್, ಉಪಕಾರ್ಯ್ಯಾಧ್ಯಕ್ಷ ಸ್ಮಿತಾ ಎಸ್ ಚೋಪಡೆಕರ್, ಅಧ್ಯಕ್ಷ ಕಿಶೋರ್ ಅರ್ ಸಾಲ್ಯಾನ್, ಉಪಾಧ್ಯಕ್ಷ ನಿತಿನ್ ಜಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕೆ. ಸಾಲ್ಯಾನ್,ಜೊತೆ ಕಾರ್ಯದರ್ಶಿ ಬಾಲಕೃಷ್ಣ ವಿ‌.ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಶೈಲೇಶ್ ಕೆ. ಸುವರ್ಣ, ಕೋಶಾಧಿಕಾರಿ ಕಿಶೋರ್ ಎನ್. ಬಂಗೇರ, ಜೊತೆ ಕೋಶಾಧಿಕಾರಿ ದಿನೇಶ್ ಕೆ. ಸಾಲಿಯಾನ್, ಸಲಹೆಗಾರರಾದ ನಂದಿಲಾಲ್ ಶ್ರೀವಾಸ್ತವ್, ಸಿ. ಲಕ್ಷ್ಮಣ್, ಯಶೋಧಾ ಸಾಲಿಯಾನ್, ಕಮಲ ಶಂಕರ್ ಉಪಾಧ್ಯಾಯ, ನಾರಾಯಣ ಸುವರ್ಣ, ಅಜಿತ್ ಯಾದವ್ ವಿಜಯ್ ಶನ್ಮುಗಮ್, ಸದಾನಂದ್ ಬಂಗೇರ ಪುರುಷೋತ್ತಮ್ ಕರ್ಕೇರಾ, ಸಂಸ್ಥಾಪಕ ಗಂಗಾಧರ್ ಕರ್ಕೇರಾ, ಅರ್ಚಕರಾದ ಅರುಣ್ ಬಂಗೇರ, ಕಿಶೋರ್ ಸಾಲಿಯನ್, ಪ್ರಶಾಂತ್ ಡಿ. ಕುಂದರ್, ಶರತ್ ಸಾಲಿಯಾನ್, ಉದಯ್ ಸಾಲಿಯಾನ್, ಸಹಾಯಕ ಅರ್ಚಕರಾದ ಪುನೀತ್ ಸಾಲಿಯಾನ್, ಆರ್ ಜಿ ಶೆಟ್ಟಿಗಾರ್, ಬಾಬು ಸುವರ್ಣ,ಸಚಿನ್ ಕೋಟ್ಯಾನ್, ಬ್ರಿಜೇಶ್ ಗೋಸ್ವಾಮಿ, ದಿನೇಶ್ ಗೋಸ್ವಾಮಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

Related posts

ಚಿಣ್ಣರಬಿಂಬ ವಿಕ್ರೋಲಿ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆ

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಜಯರಾಜ್ ನಗರ ಬೊರಿವಿಲಿ ವಾರ್ಷಿಕ ಸಾರ್ವಜನಿಕ ಶನೀಶ್ವರ ಮಹಾಪೂಜೆ.

Mumbai News Desk

ಪಾಲ್ಗರ್ ಜಿಲ್ಲಾ ಬಿಲ್ಲವರಿಂದ ವಿಹಾರ ಕೂಟ : ಮುಂಬೈ ಬಿಲ್ಲವರ   ಒಗ್ಗಟ್ಟು ಬಲಿಷ್ಠ ಗೊಳಿಸಲು ಚಂದ್ರಶೇಖರ್ ಪೂಜಾರಿ ಕರೆ

Mumbai News Desk

ಸಾಂತಾಕ್ರೂಜ್ ಪೇಜಾವರ ಮಠದಲ್ಲಿ ಶ್ರೀ ಮಧ್ವ ನವಮೀ ಆಚರಣೆ 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರತ್ರೋತ್ಸವ ಮಂಡಳಿಯ ವಜ್ರ ಮಹೋತ್ಸವ ಸಂಭ್ರಮದ ನಾಲ್ಕನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಅಂಕಿತಾ ಭಾಸ್ಕರ್ ಭಂಡಾರಿ ಗೆ ಶೇ 82.60 ಅಂಕ.

Mumbai News Desk