
ಚಿತ್ರ : ಧನಂಜಯ್ ಪೂಜಾರಿ.
ಭಾಂಡೂಪ್ ಪಶ್ಚಿಮದ ಬ್ಯಾಂಕ್ ಆಫ್ ಬರೋಡ ಕ್ವಾಟ್ರಸ್ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿ (ರಿ) ಯ ಶ್ರೀ ಪಿಂಪಲೇಶ್ವರ ಮಹಾದೇವ ಮಂದಿರ ಜೀರ್ಣೋದ್ಧಾರಗೊಂಡು, ಮಂದಿರದಲ್ಲಿ ಶನಿ ದೇವರ ಮೂರ್ತಿ ಪ್ರತಿಷ್ಠಾಪನೆ ನಡೆದು .ಫೆ.22 ರಂದು ಮಂದಿರದಲ್ಲಿ ಅಷ್ಟ ಬಂಧ ಬ್ರಹ್ಮಕಲಶೋತ್ಸವ ಕುಂಬಾಭಿಷೇಕ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠೆ ವಿಜೃಂಭಣೆಯಿಂದ ಜರಗಿತು.






ಫೆ.24 ರಂದು ಶನಿವಾರ ಬೆಳಿಗ್ಗೆ ಶ್ರೀ ಸತ್ಯನಾರಾಯಣ ಮಹಾಪೂಜೆ ತದನಂತರ ತೀರ್ಥ ಪ್ರಸಾದ ವಿತರಣೆ ಮಧ್ಯಾಹ್ನ 12 ರಿಂದ ಯಕ್ಷಗಾನ ತಾಳ ಮದ್ದಳೆ ರೂಪದಲ್ಲಿ ಶನಿ ಗ್ರಂಥ ಪಾರಾಯಣ ಹಾಗೂ ಶ್ರೀ ಶನೀಶ್ವರ ಮಹಾ ಪೂಜೆಯು ಶ್ರದ್ಧೆ ಭಕ್ತಿಯಿಂದ ವಿಜೃಂಭಣೆಯಾಗಿ ಜರಗಿತು. ನಗರದ ಪ್ರಖ್ಯಾತ ಶನಿಗ್ರಂಥ ವಾಚಕರು, ಹಿಮ್ಮೇಳ ಕಲಾವಿದರು ಹಾಗೂ ಅರ್ಥಧಾರಿಗಳು ಗ್ರಂಥ ಪ್ರಯಾಣದಲ್ಲಿ ಪಾಲ್ಗೊಂಡಿದ್ದರು. ಸಾವಿರಾರು ಮಂದಿ ಭಕ್ತರು, ಗಣ್ಯರು, ರಾಜಕೀಯ ಮುಖಂಡರು, ವಿವಿಧ ಧಾರ್ಮಿಕ ಸಾಮಾಜಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಪಾಲ್ಗೊಂಡಿದ್ದರು. ಮಹಾ ಪೂಜೆಯಲ್ಲಿ ಭಾಗಿಯಾದ ಸಂಸದ ಮನೋಜ್ ಕೋಟಕ್ ಅವರನ್ನು ಸಮಿತಿಯ ವತಿಯಿಂದ ಶಾಲು ಹೊದಿಸಿ, ಪ್ರಸಾದ ನೀಡಿ ಗೌರವಿಸಲಾಯಿತು.
ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ರಾದ ಸೂರ್ಯಕಾಂತ್ ಜೆ ಸುವರ್ಣ, ವ್ಯವಸ್ಥಾಪಕ ನಿರ್ದೇಶಕ ವಿದ್ಯಾನಂದ ಕರ್ಕೇರ, ಉಪ ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಸಾಲ್ಯಾನ್, ನಿರ್ದೇಶಕರುಗಳಾದ ಚಂದ್ರಶೇಖರ್ ಪೂಜಾರಿ, ಗಂಗಾಧರ್ ಪೂಜಾರಿ, ನಾರಾಯಣ್ ಸುವರ್ಣ, ನಿರಂಜನ್ ಪೂಜಾರಿ, ಸುರೇಶ್ ಸುವರ್ಣ, ಮೋಹನ್ ದಾಸ್ ಪೂಜಾರಿ, ಗಣೇಶ್ ಪೂಜಾರಿ, ಸಂತೋಷ್ ಪೂಜಾರಿ,, ಉದ್ಯಮಿಗಳು, ಸಮಾಜ ಸೇವಕರುಗಳಾದ ಸದಾಶಿವ ಕರ್ಕೇರ, ಸದಾನಂದ ಅಮೀನ್ ಭಟ್ಟಿಪಾಡ, ರವಿ ಸನಿಲ್, ಸೋಮನಾಥ್ ಪೂಜಾರಿ, ರಾಜೇಶ್ ಕೋಟ್ಯಾನ್, ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಮತ್ತಿತರ ಗಣ್ಯರು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.










ಆಡಳಿತ ಸಮಿತಿಯ ಕಾರ್ಯಾಧ್ಯಕ್ಷ ಶ್ಯಾಮ್ ಪ್ಯಾರೆ ಯಾದವ್, ಉಪ ಕಾರ್ಯಾಧ್ಯಕ್ಷೆ ಸ್ಮಿತಾ ಎಸ್ ಚೋಪಡೆಕರ್, ಅಧ್ಯಕ್ಷ ಕಿಶೋರ್ ಅರ್. ಸಾಲ್ಯಾನ್, ಉಪಾಧ್ಯಕ್ಷ ನಿತಿನ್ ಜಿ. ಸಾವಂತ್, ಪ್ರಧಾನ ಕಾರ್ಯದರ್ಶಿ ಜಯಕುಮಾರ್ ಕೆ. ಸಾಲ್ಯಾನ್,ಜೊತೆ ಕಾರ್ಯದರ್ಶಿ ಬಾಲಕೃಷ್ಣ ವಿ.ಕೋಟ್ಯಾನ್, ಸಂಘಟನಾ ಕಾರ್ಯದರ್ಶಿ ಶೈಲೇಶ್ ಕೆ. ಸುವರ್ಣ, ಕೋಶಾಧಿಕಾರಿ ಕಿಶೋರ್ ಎನ್. ಬಂಗೇರ, ಜೊತೆ ಕೋಶಾಧಿಕಾರಿ ದಿನೇಶ್ ಕೆ. ಸಾಲಿಯಾನ್, ಸಲಹೆಗಾರರಾದ ನಂದಿಲಾಲ್ ಶ್ರೀವಾಸ್ತವ್, ಸಿ. ಲಕ್ಷ್ಮಣ್, ಯಶೋಧಾ ಸಾಲಿಯಾನ್, ಕಮಲ ಶಂಕರ್ ಉಪಾಧ್ಯಾಯ, ನಾರಾಯಣ ಸುವರ್ಣ, ಅಜಿತ್ ಯಾದವ್ ವಿಜಯ್ ಶನ್ಮುಗಮ್, ಸದಾನಂದ್ ಬಂಗೇರ ಪುರುಷೋತ್ತಮ್ ಕರ್ಕೇರಾ, ಸಂಸ್ಥಾಪಕ ಗಂಗಾಧರ್ ಕರ್ಕೇರಾ, ಅರ್ಚಕರಾದ ಅರುಣ್ ಬಂಗೇರ, ಕಿಶೋರ್ ಸಾಲಿಯನ್, ಪ್ರಶಾಂತ್ ಡಿ. ಕುಂದರ್, ಶರತ್ ಸಾಲಿಯಾನ್, ಉದಯ್ ಸಾಲಿಯಾನ್, ಸಹಾಯಕ ಅರ್ಚಕರಾದ ಪುನೀತ್ ಸಾಲಿಯಾನ್, ಆರ್ ಜಿ ಶೆಟ್ಟಿಗಾರ್, ಬಾಬು ಸುವರ್ಣ, ಸಚಿನ್ ಕೋಟ್ಯಾನ್, ಬ್ರಿಜೇಶ್ ಗೋಸ್ವಾಮಿ, ದಿನೇಶ್ ಗೋಸ್ವಾಮಿ ಹಾಗೂ ಸರ್ವ ಸದಸ್ಯರು, ಮಹಿಳಾ ಸದಸ್ಯೆಯರು ಉಪಸ್ಥಿತರಿದ್ದು ಸಹಕರಿಸಿದರು.


