
ಲಕ್ನೋ, :. ಸಾಹಿತಿ ಚನ್ನವೀರ ಕಣವಿ ವೇದಿಕೆಯಲ್ಲಿ ಫೆಬ್ರವರಿ 25 , 2024ರಂದು 19ನೇ ರಾಷ್ಟ್ರೀಯ ಕನ್ನಡ
ಸಂಸ್ಕೃತಿ ಸಮ್ಮೇಳನವು ಉತ್ತರ ಪ್ರದೇಶ್ ಸಂಸ್ಕೃತ್ ಸಂಸ್ಥಾನ್ ಸಭಾಗಂಣದಲ್ಲಿ ಹೃದಯವಾಹಿನಿ ಕರ್ನಾಟಕ ಮಂಗಳೂರು ಮತ್ತು ಲಕ್ನೋ ಕನ್ನಡ ಅಸೋಸಿಯೇಷನ್. ಸಂಯುಕ್ತ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಕಾರದೊಂದಿಗೆ ಜರಗಿತು.
ಲಕ್ನೋ ಕನ್ನಡ ಅಸೋಸಿಯೇಷನ್ ಅಧ್ಯಕ್ಷ ಹಾಗು ರಿಸರ್ವ್ ಬ್ಯಾಂಕ್ ನ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಬಾಲು ಕೆಂಚಪ್ಪ ಅವರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಕನ್ನಡಿಗರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಲಕ್ನೋ ನಗರದಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆ ಇದ್ದರೂ 40 ವರ್ಷಗಳ ಹಿಂದೆ ಕರ್ನಾಟಕದಿಂದ ಇಲ್ಲಿಗೆ ಬಂದ ಬ್ಯಾಂಕ್ ಉದ್ಯೋಗಿಗಳು ಲಕ್ನೋದಲ್ಲಿ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿದ್ದಾರೆ. ನಾವು ವರ್ಷಂ ಪ್ರತಿ ಎರಡು ಮೂರು ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಇಂದಿನ ಸಮ್ಮೇಳನ ಲಕ್ನೋ ಕನ್ನಡಿಗರಿಗೆ ಹೊಸ ಹುಮ್ಮಸ್ಸು ನೀಡಿದೆ ಎಂದರು.
ಸಮ್ಮೇಳನಾಧ್ಯಕ್ಷರಾದ ಸಂಗಮೇಶ ಬಾದವಾಡಗಿ ಮಾತನಾಡಿ ಬೆಂಗಳೂರಿನಲ್ಲಿ ಕನ್ನಡಿಗರೇ ಕನ್ನಡೇತರರಿಗೆ ಕನ್ನಡ ಕಲಿಯುವ ಅವಕಾಶವನ್ನು ನೀಡುತ್ತಿಲ್ಲ. ಇವರೇ ಅವರ ಬಾಷೆಯಲ್ಲಿ ಮಾತನಾಡಲು ಮುಂದಾಗುತ್ತಾರೆ. ಹಾಗಾಗಿ ನಾವು ಕನ್ನಡೇತರರನ್ನು ದೂಷಿಸುವುದರಲ್ಲಿ ಅರ್ಥವಿಲ್ಲವೆಂದರು.

ಕನ್ನಡ ಆಸೋಶಿಯೇಶನ್ ಲಕ್ನೋ ಕಾರ್ಯದರ್ಶಿ ಸಂಜೀವ ನಾಯಕ ಅವರು ಸ್ವಾಗತ ಭಾಷಣ ಮಾಡಿ, ಕರ್ನಾಟಕದಿಂದ ಇಲ್ಲಿಗೆ 50ಕ್ಕೂ ಹೆಚ್ಚು ಜನ ಕಲಾವಿದರು ಆಗಮಿಸಿರುವುದು ಇದೇ ಮೊದಲು ಎಂದರು.
ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಇಂ. ಕೆ. ಪಿ. ಮಂಜುನಾಥ್ ಸಾಗರ್ ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಈ ವರಿಗೆ ಒಟ್ಟು 18 ಸಮ್ಮೇಳನಗಳನ್ನು ಆಯೋಜಿಸಿದ್ದೇವೆ. ಉತ್ತರ ಪ್ರದೇಶದಲ್ಲಿ ಇದು ಪ್ರಪ್ರಥಮ ಸಮ್ಮೇಳನವಾಗಿದೆ ಎಂದರು.
ಗೌರವ ಅತಿಥಿಗಳಾಗಿ, ನಿವೃತ್ತ ಮೈಸೂರು ಜಿಲ್ಲಾಧಿಕಾರಿ ಡಾ. ಡಿ. ಎಸ್. ವಿಶ್ವನಾಥ್ ಐಎಎಸ್., ಮುಂಬೈನ ಸಾಹಿತಿ ಮತ್ತು ಸಮಾಜ ಸೇವಕಿ ಶ್ರೀಮತಿ ಪ್ರಭಾ ಸುವರ್ಣ ಮತ್ತು ಸಾಹಿತಿ ಸಿದ್ದರಾಮಯ್ಯ ಹೊನ್ಕಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೀರೇಶ್ ಬಂಗಾರ ಶೆಟ್ಟಿ, ಬಿಂಡಿಗನವಿಲೆ ಭಗವಾನ್ ಮತ್ತು ಪ್ರಭಾ ಸುವರ್ಣ ಮುಂಬೈ ಇವರು ಸ್ವರಚಿತ ಕವನಗಳನ್ನು ಪ್ರಸ್ತುತಪಡಿಸಿದರು.,
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಂತರಾಷ್ಟ್ರೀಯ ಜಾನಪದ ಗಾಯಕ ಗೋನಾಸ್ವಾಮಿ, ಪುಷ್ಪ ಆರಾಧ್ಯ ಇವರಿಂದ ಜಾನಪದ ಗೀತೆಗಳು ಮತ್ತು ಭಕ್ತಿ ಮಂಜರಿ. ಹೊಂಗಿರಣ ಸೂತ್ರದಗೊಂಬೆ ಆಟ ಕಲಾತಂಡ ಹಳಿಯಾಳ ಉತ್ತರ ಕನ್ನಡ ಜಿಲ್ಲೆ ಇವರಿಂದ ರಾಮಾಯಣ ಪ್ರಸಂಗ : ಶ್ರೀ ರಾಮನ ಪಟ್ಟಾಭಿಷೇಕ, ನಿರ್ದೇಶನ: ಸಿದ್ದಪ್ಪ ಬಿರಾದಾರ, ಕಮಲಾಕ್ಷ ಪ್ರಭು ಸಂಚಾಲಕತ್ವದ ಬಾಲಮಿತ್ರ ಯಕ್ಷ ಶಿಕ್ಷಣ ಪ್ರತಿಷ್ಠಾನ ರಿ. ಸರಳೇಬೆಟ್ಟು, ಉಡುಪಿ ಇವರಿಂದ ಶರಸೇತು ಬಂಧನ, ರಾಮಕ್ಷತ್ರಿಯ ಕಲಾತಂಡ ಕೋಟೆಗಾರ್ ವಿದ್ಯಾವರ್ಧಕ ಸಂಘ ಹೊಸನಗರ ಇವರಿಂದ ಮಹಿಳಾ ಡೊಳ್ಳು ಕುಣಿತ, ಹನ್ಶಿತ್ ಆಳ್ವ, ಬಾಕ್ರಬೈಲ್ , ಕಾಸರಗೋಡು ಇನರಿಂದ ಭರತ ನಾಟ್ಯ, ನೃತ್ಯಾಂಜಲಿ ಕಲಾನಿಕೇತನ ಭರತನಾಟ್ಯ
ಶಿಕ್ಷಣ ಸಂಸ್ಥೆ ಚನ್ನರಾಯಪಟ್ಟಣ ಇವರಿಂದ ನೃತ್ಯರೂಪಕ ನಿರ್ದೇನ: ವಿದುಷಿ ಶೈಲಜಾ ಬಿ. ವಿ., ಮಂಜುನಾಥ್ ಮತ್ತು ತಂಡ ಕೋಲಾಟ ಕೋಲಾರ, ವಿಜಯ ಮತ್ತು ತಂಡ ಜಾನಪದ ನೃತ್ಯ ಬೆಂಗಳೂರು, ವರ್ಷಿತ ಮತ್ತು ತಂಡ ಸಮೂಹ ನೃತ್ಯ ಮಾಲೂರು, ವರುಣ್ ಮತ್ತು ತಂಡ ನೃತ್ಯ ರೂಪಕ ಬೆಂಗಳೂರು, ಶರತ್ ಮತ್ತು ತಂಡ ಜಾನಪದ ನೃತ್ಯ ಆನೇಕಲ್ ಕಲಾ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾದವು. ಅಭಿಷೇಕ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ವ್ಯವಸ್ಥಾಪನೆಗೆ ಪೂನಂ ನಾಯಕ ಮತ್ತು ತನಿಶಿ ನಾಯಕ ಯೋಗದಾನ ನೀಡಿದರು.