
ಬೊಯಿಸರ್ ಮಾ 4. ಬೊಯಿಸರ್ ಪೂರ್ವದಮಹಾದೇವ ನಗರ, ಖೈರಪಾಡ ಬೊಯಿಸರ್ (ಪೂರ್ವ ) ಇಲ್ಲಿ ಯ ಶ್ರೀ ಸೋಮೇಶ್ವರ ಮಂದಿರದ
15ನೇ ವಾರ್ಷಿಕ ಪೂಜೆ ಮಹೋತ್ಸವ ಮಾ. 03.ನೇ ರವಿವಾರ ರಂದು ಪ್ರಸಿದ್ಧ ಪುರೋಹಿತರಾದ ಡಾ. ಎಮ್.ಜೆ. ಪ್ರವೀಣ್ ಭಟ್ ರವರು ಪೌರೋಹಿತ್ವದಲ್ಲಿ , ದೇವಸ್ಥಾನದ ಆಡಳಿತ ಮೊಕ್ತೇಸರ ವಿಜಯ್ ಶೆಟ್ಟಿ, ಮತ್ತು ಸೌಧಮಿನಿ ವಿಜಯ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ಭಕ್ತಿ ಸಂಭ್ರಮದೊಂದಿಗೆ ಸಂಪನ್ನಗೊಂಡಿದೆ,

ಬೆಳಿಗ್ಗೆ ತೋರಣಹೂಹೂರ್ತ , ಗಣ ಹೋಮ. ನವಕಾಲಸಭಿಷೇಕ ನಾಗಪೂಜೆ. ಸತ್ಯನಾರಾಯಣ ಪೂಜೆ, ಅನಂತನ ಭಜನೆ ನಡೆಯಿತು,, ಇದೇ ಸಂದರ್ಭದಲ್ಲಿ ವಿಜಯಶೆಟ್ಟಿ ದಂಪತಿಗಳಿಂದ ಶಿವಲಿಂಗಕ್ಕೆ ಪಂಚಲೋಹದ ನಾಗ ಕವಚವನ್ನು ಸಮರ್ಪಿಸಲಾಯಿತು,
ಮಧ್ಯಾಹ್ನ ಮಹಾಪೂಜೆ ಬಳಿಕ ಮಹಾಪ್ರಸಾದ ಅನ್ನ ಸಂತರ್ಪಣೆ ನಡೆಯಿತು
ಮಹಾಪೂಜೆಯಲ್ಲಿ ಬೊಯಿಸರ್, ದಹಣೂ ಮತ್ತಿತರ ಉಪನಗರದ ಸಾವಿರಾರು ಭಕ್ತರು, ಹೋಟೆಲ್ ಉದ್ಯಮಿಗಳು ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡುದರು,