
ಚಿತ್ರ : ಭಾಸ್ಕರ್ ಕಾಂಚನ್
ಮುಂಬಯಿಯ ಪ್ರತಿಷ್ಠಿತ ಜಾತೀಯ ಸಂಘಟನೆ ಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಕುಂದರಂಜನಿ – 2024 ಕಾರ್ಯಕ್ರಮವು ಮಾರ್ಚ್ 3 ರ ರವಿವಾರ ಡೊಂಬಿವಲಿ ಪೂರ್ವದ ದತ್ತ ನಗರದ ಡಿ.ಎನ್.ಸಿ ರಸ್ತೆಯಲ್ಲಿರುವ ಲೇವಾ ಭವನದಲ್ಲಿ ಜರಗಿತು.




ಸಂಘದ ಅಧ್ಯಕ್ಷರಾದ ರಾಜು ಮೆಂಡನ್ ವಂಡ್ಸೆ ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಆರ್. ಕಾಂಚನ್ ವೇದಿಕೆಯ ಗಣ್ಯರೊಂದಿಗೆ ಸೇರಿ ದೀಪ ಪ್ರಜ್ವಲಿಸುವುದರೊಂದಿಗೆ, ಉದ್ಘಾಟಿಸಿ, ಮಾತನಾಡುತ್ತ ಮುಂಬಯಿಯಲ್ಲಿ ಸ್ವಂತ ಸಭಾಗ್ರಹದ ಅಗತ್ಯತೆಯ ಬಗ್ಗೆ ತಿಳಿಸಿದರು.
ಕಾರ್ಯಾದ್ಯಕ್ಷ ರಾಜು ಎ. ಮೊಗವೀರ ಸ್ವಾಗತಿಸಿದರೆ, ಗೌರವ ಕಾರ್ಯಧ್ಯಕ್ಷರಾದ ಭಾಸ್ಕರ್ ಕಂಚನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಗೈದ ಸದಸ್ಯರ ಮಕ್ಕಳನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಂಘದ ಮಾಜಿ ಅಧ್ಯಕ್ಷ ಮಹಾಬಲ ಎಮ್. ಕುಂದರ್ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಿ, ಮಾತನಾಡುತ್ತ ಸ್ವಂತ ಕಟ್ಟಡ ನಿರ್ಮಾಣಕ್ಕೆ ಎಲ್ಲರ ಸಹಕಾರ ಕೋರಿದರು.
ಚಿತ್ರಕಲಾ ಸ್ಪರ್ಧೆ ಹಾಗೂ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.






ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸಂಘ ಡೊಂಬಿವಲಿ ಇದರ ಅಧ್ಯಕ್ಷ ಬಂಟರ ಸಂಘ ಮುಂಬಯಿ ಇದರ ಪೂರ್ವ ವಲಯದ ಸಮನ್ವಯಕರಾದ ಸುಕುಮಾರ್ ಎನ್. ಶೆಟ್ಟಿ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಡಿ. ಶೆಟ್ಟಿ ಎಕ್ಕಾರ್ , ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಡೊಂಬಿವಲಿ ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಯಧುವೀರ್ ಪುತ್ರನ್, ಜಗಜ್ಯೋತಿ ಕಲಾವೃಂದ ಮುಂಬಯಿ ಇದರ ಅಧ್ಯಕ್ಷ ರಮೇಶ್ ಎ. ಶೆಟ್ಟಿ, ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಮಾಜಿ ಅಧ್ಯಕ್ಷ ರಮೇಶ ಬಂಗೇರ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು.
ಅಧ್ಯಕ್ಷ ರಾಜು ಮೆಂಡನ್ ಅಧ್ಯಕ್ಷೀಯ ನುಡಿ ಗಳನ್ನಡಿದರು.
ವೇದಿಕೆಯಲ್ಲಿ ಕೇಂದ್ರ ಸಮಿತಿಯ ಗೌ.ಪ್ರ.ಕಾರ್ಯದರ್ಶಿ ಗಣೇಶ್ ಮೆಂಡನ್, ಗೌ.ಪ್ರ ಕೋಶಾಧಿಕಾರಿ ಸತೀಶ್ ಶ್ರಿಯಾನ್, ಶ್ರೀಮತಿ ಸುಜಿತ ಮಹಾಬಲ್ ಕುಂದರ್, ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎನ್. ಕಾಂಚನ್, ಕಾರ್ಯಾದ್ಯಕ್ಷ ರಾಜು ಎ. ಮೊಗವೀರ, ಕಾರ್ಯದರ್ಶಿ ಸಂತೋಷ್ ಪುತ್ರನ್, ಶೇಖರ್ ಎಸ್.ನಾಯ್ಕ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶ್ರಿಯಾನ್ ಉಪಸ್ಥಿತರಿದ್ದರು.
ಸಂಘಟಕ, ಸಮಾಜ ಸೇವಕ ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರೆ, ವಸಂತಿ ಕುಂದರ್, ಸಂತೋಷ್ ಪುತ್ರನ್, ಚಂದ್ರ ನಾಯ್ಕ್, ಶೇಖರ್ ಮೊಗವೀರ , ನಿಶಾ ಪುತ್ರನ್, ಜಯಶ್ರೀ ನಾಯ್ಕ್ ಸಹಕರಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ಮುಂದುವರೆಯಿತು.






ವಿಶೇಷ ಅಕರ್ಷಣೆಯಾಗಿ ಕುಂದ ಕನ್ನಡದ ಕುಂದ ರಂಜನೀಯ ಹಾಸ್ಯ ರಸಾಯನ ನ್ಯೆಗಿ ನಾಗಣ್ಣ ಖ್ಯಾತಿಯ ನಾಗರಾಜ ಮೊಗವೀರ ತೆಕ್ಕಟ್ಟೆ ಸಾರಥ್ಯದ ಕಲಾಶಕ್ತಿ ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ಕೊಪ್ಪರಿಗೆ ಜರುಗಿತು.
ಹೆಚ್ಚಿನ ಸಂಖ್ಯೆಯ ಸಮಾಜ ಬಾಂಧವರು ಹಿತೈಷಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮ ಜನಮನ ಗೆದ್ದು, ಯಶಸ್ವಿಯಾಗಿ ಜರಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡೊಂಬಿವಲಿ ಸ್ಥಳೀಯ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಭಾಸ್ಕರ್ ಎನ್. ಕಾಂಚನ್, ಕಾರ್ಯಾದ್ಯಕ್ಷ ರಾಜು ಎ. ಮೊಗವೀರ, ಕಾರ್ಯದರ್ಶಿ ಸಂತೋಷ್ ಪುತ್ರನ್, ಶೇಖರ್ ಎಸ್.ನಾಯ್ಕ್, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ್ ಶ್ರಿಯಾನ್, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು, ಮತ್ತು ಮಹಿಳಾ ವಿಭಾಗದ ಸದಸ್ಯರು ಅಭಿನಂದನಾರ್ಹರು.
