
ಡೊಂಬಿವಲಿ ಪಶ್ಚಿಮದ ಗೋಪಿನಾಥ್ ಚೌಕ್ ಬಳಿಯ ಯಕ್ಷಕಲಾ ಸಂಸ್ಥೆ ಸಂಚಾಲಿತ ಶ್ರೀ ಜಗದಂಬಾ ಮಂದಿರದ ಶ್ರೀ ಜಗದಂಬಾ ದೇವಿ ಹಾಗೂ ಪರಿವಾರ ದೇವರ ವಾರ್ಷಿಕ ಮಹೋತ್ಸವವು ಇದೇ ಬರುವ ಸ್ವಸ್ತಿ ಶ್ರೀ ಶೋಭಕೃತ್‌ನಾಮ ಸಂವತ್ಸರದ ಕುಂಭ ಮಾಸ ದಿನ 25 ದಿ. 09.03.2024 ನೇ ಶನಿವಾರ ಮೊದಲ್ಗೊಂಡು ದಿ. 10.03.2024 ನೇ ಆದಿತ್ಯವಾರ ಪರ್ಯಂತ ಡೊಂಬಿವಲಿ ಜಗದಂಬಾ ದೇವಿ ಸನ್ನಿಧಿಯಲ್ಲಿ 9ನೇ ವಾರ್ಷಿಕೋತ್ಸವ ಹಾಗೂ ಪಲ್ಲಕ್ಕಿ ಉತ್ಸವವು ಮಂದಿರದ ಪ್ರಧಾನ ಅರ್ಚಕರಾದ ಶ್ರೀ ರಘುಪತಿ ಭಟ್ ಇವರ ನೇತೃತ್ವದಲ್ಲಿ ಜರಗಲಿರುವುದು.
ಕಾರ್ಯಕ್ರಮದ ವಿವರ
9.03.2024ನೇ ಶನಿವಾರ: ಬೆಳಿಗ್ಗೆ ಗಂಟೆ 8.00 ರಿಂದ ಸಾಮೂಹಿಕ ಪ್ರಾರ್ಥನೆ, ದೀಪ ಪ್ರಜ್ವಲನೆ, ಸ್ವಸ್ತಿ ಪುಣ್ಯಾಹವಾಚನ, ತೋರಣ ಮುಹೂರ್ತ 8.30 ರಿಂದ ಗಣಪತಿ ಹೋಮ ಹಾಗೂ ನವಗ್ರಹಯುಕ್ತ ಶನಿಶಾಂತಿ ಹಾಗೂ 10.30 ರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ 12.00 ಮಹಾಮಂಗಳಾರತಿ, 12.30 ರಿಂದ ಶನಿಪೂಜೆ ಹಾಗೂ ಶನಿಗ್ರಂಥ ಪಾರಾಯಣ ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಶ್ರೀ ಜಗದಂಬಾ ಮಂದಿರದ ಸದಸ್ಯರಿಂದ ನಡೆಯಲಿದೆ. ಮಂಡಲಿಯ ಸದಸ್ಯರಾದ ಶ್ರೀ ಸುರೇಶ ಟಿ, ಅಂಚನ್‌ರವರ ಹಸ್ತದಿಂದ ಕಲತ ಪ್ರತಿಷ್ಠಾಪನೆ ನೆರವೇರಲಿದೆ. ಮಧ್ಯಾಹ್ನ 1.00 ರಿಂದ ಪಲ್ಲಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5 ರಿಂದ ದುರ್ಗಾ ನಮಸ್ಕಾರ ಪೂಜೆ, ಲಲಿತ ಸಹಸ್ರನಾಮಾರ್ಚನೆ, ಕುಂಕುಮಾರ್ಚನೆ, 8.00 ಕ್ಕೆ ಮಹಾಮಂಗಳಾರತಿ ಹಾಗೂ ಅನ್ನ ಸಂತರ್ಪಣೆ.
10.03, 2024 ರವಿವಾರ : ಬೆಳಿಗ್ಗೆ 8.00 ರಿಂದ ಶ್ರೀದೇವಿ ಸನ್ನಿಧಿಯಲ್ಲಿ 25 ಕಲಶದ ಕಲಶಾರಾಧನೆ ಪ್ರಧಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪರಿವಾರ ದೇವರಿಗೆ ನವಕಕಲಶ ಹಾಗೂ ಕಲಶಾಭಿಷೇಕ ಹಾಗೂ 11.00 ಗಂಟೆಗೆ ಶ್ರೀ ಜಗದಂಬಾ ದೇವಿಗೆ ಮಹಾಮಂಗಳಾರತಿ ತದನಂತರ ಉತ್ಸವ ಬಲಿ ಕಟ್ಟೆಪೂಜೆ, ಶೋಭಾಯಾತ್ರೆ, ಪಲ್ಲಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1.00 ರಿಂದ ಅನ್ನ ಸಂತರ್ಪಣೆ ನಡೆಯುವುದು.
ಸಾಯಂಕಾಲ ಗಂಟೆ 5.00 ರಿಂದ ಕುಂಕುಮಾರ್ಚನೆ ಮಹಾಪೂಜೆ ಹಾಗೂ ರಾತ್ರಿ 7.00 ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ.
ಸಂಜೆ 5.00 ರಿಂದ “ಕೊರಬು ಬಾರಗ” ತುಳು ಯಕ್ಷಗಾನ ಬಯಲಾಟ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ, ಪುಣೆಯವರಿಂದ ನಡೆಯಲಿರುವುದು. ಯಕ್ಷಗಾನದ ಮಧ್ಯಂತರದಲ್ಲಿ ನಡೆಯಲಿರುವ ಕಿರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಯಕ್ಷಗಾನದ ಪ್ರಾಯೋಜಕರಾದ ಶ್ರೀ ಪ್ರವೀಣ ಶೆಟ್ಟಿ, ಪುಣೆ ಇವರನ್ನು ಅತಿಥಿ ಅಭ್ಯಗತರ ಸಮ್ಮುಖದಲ್ಲಿ ‘ಶ್ರೀ ಜಗದಂಬಾ’ ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
11.03.2024 ಸೋಮವಾರ : ಬೆಳಿಗ್ಗೆ 8.00 ಗಂಟೆಗೆ ಸಂಪ್ರೋಕ್ಷಣೆ ನವಕ ಕಲಶಾಭಿಷೇಕ ನಡೆಯಲಿರುವುದು.
08.03.2024 ಶುಕ್ರವಾರ ಮಹಾ ಶಿವರಾತ್ರಿ ಮಹೋತ್ಸವವು ಜರಗಲಿರುವುದು ಈ ದಿನ ಬೆಳಿಗ್ಗೆ 7.30 ರಿಂದ ರುದ್ರಾಭಿಷೇಕ ಹಾಗೂ ಬೆಳಿಗ್ಗೆ 8.00 ರಿಂದ ಸಾಯಂಕಾಲ 8.00 ಗಂಟೆಯವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಭಜನೆ ಹಾಗೂ ರಾತ್ರಿ 8.30ಕ್ಕೆ ಮಹಾಮಂಗಳಾರತಿ ನಡೆಯುವುದು ನಂತರ ತೀರ್ಥ ಪ್ರಸಾದ ವಿತರಣೆ ನಡೆಯಲಿದೆ.
ಸಾಮೂಹಿಕ ಶನಿಪೂಜೆ ಮಾಡುವ ಭಕ್ತರು ರೂ. 301/- ಪಾವತಿ ಮಾಡತಕ್ಕದು.
ಆ ಪ್ರಯುಕ್ತ ತಾವೆಲ್ಲರೂ ತನು-ಮನ-ಧನಗಳಿಂದ ಸಹಕರಿಸಿ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾನಿಧ್ಯ ದೇವರುಗಳ ಶ್ರೀಗಂಧ ತೀರ್ಥ ಪ್ರಸಾದವನ್ನು ಸ್ವೀಕರಿಸಿ, ಪ್ರದಾನ ದೇವರಾದ ಜಗದಂಬಾ ದೇವಿ ಹಾಗೂ ಕಲಿಯುಗ ಒಡೆಯ ಶ್ರೀ ಶನೀಶ್ವರ, ಮಹಾಗಣಪತಿ, ನಾಗದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಮಂದಿರದ ಪರವಾಗಿ ಗೌರವಾಧ್ಯಕ್ಷರಾದ ಹರೀಶ್ ಡಿ. ಶೆಟ್ಟಿ, ಅಧ್ಯಕ್ಷರಾದ ದಿವಾಕರ ಜಿ. ರೈ, ಉಪಾಧ್ಯಕ್ಷರಾದ ರವೀಂದ್ರ ವೈ ಶೆಟ್ಟಿ,
ಗೌ.ಪ್ರ. ಕಾರ್ಯದರ್ಶಿ ರಾಜೇಶ ಸಿ. ಕೋಟ್ಯಾನ್, ಜೊತೆ ಕಾರ್ಯದರ್ಶಿ ಸಚೀನ ಎಸ್. ಪೂಜಾರಿ, ಕೋಶಾಧಿಕಾರಿ ರವಿ ಎಸ್. ಶೆಟ್ಟಿ, ಜೊತೆ ಕೋಶಾಧಿಕಾರಿ ಸಂತೋಷ ಎಮ್. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಕಾರ್ಯಾಧ್ಯಕ್ಷರಾದ ವಿಜಯ್ ಶೆಟ್ಟಿ ಸಜಿಪ ಗುತ್ತು ಹಾಗೂ ಕಾರ್ಯಕಾರಿ ಸಮಿತಿ, ಶನಿಪೂಜೆ ಸಮಿತಿ, ಮಹಿಳಾ ಸದಸ್ಯರು ಹಾಗೂ ಯುವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.