
ಮುಂಬಯಿ : ತುಳು ಸಂಘ ಬೊರಿವಲಿ ಯ ವಿಹಾರ ಕೂಟವನ್ನು ಮಾ. 3ರಂದು ಮಲಾಡ್ ಪಶ್ಚಿಮ ಮಡ್ ಸಮೀಪ ರಾಹುತ್ ಕೋಟೇಜ್ ನಲ್ಲಿ ಏರ್ಪಡಿಸಲಾಯಿತು.
ಸಂಘದ ನೂರಾರು ಮಂದಿ ಸದಸ್ಯರು ಪರಿವಾರ ಸಮೇತ ಬಾಗವಹಿಸಿದ್ದು ಹಿರಿ ಕಿರಿಯರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ನೃತ್ಯ, ಗಾಯನ ಇತ್ಯಾದಿಗಳನ್ನು ಏರ್ಪಡಿಸಲಾಗಿದ್ದು ಎಲ್ಲರೂ ಆನಂದಿಸಿದರು.




ಸಂಘದ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರು ಸಂಘದ ಕಾರ್ಯಚಟುವಟಿಕೆಗಳ ಮಾಹಿತಿಯಿತ್ತರು. ಸದಸ್ಯರ ಸಕ್ರಿಯ ಭಾಗವಹಿಸುವಿಕೆ ಮತ್ತು ನಿರಂತರ ಬೆಂಬಲಕ್ಕಾಗಿ ಅಲ್ಲದೆ ಸಂಸ್ಥಾಪಕ ಅಧ್ಯಕ್ಷರಾದ ವಾಸು ಪುತ್ರನ್ ಮತ್ತು ಮಾಜಿ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪೇಟೆಮನೆ ಅವರ ನಿರಂತರ ಬೆಂಬಲ ಮತ್ತು ಮಾರ್ಗದರ್ಶನಕ್ಕಾಗಿ ಶ್ಲಾಘಿಸಿದರು. ವಿಹಾರ ಕೂಟದಲ್ಲಿ ಭಾಗವಹಿಸಿ ಯಶಸ್ಸಿಯಾಗಿ ನಡೆಸಿಕೊಟ್ಟ ಎಲ್ಲಾ ಸದಸ್ಯರಿಗೆ ಕೃತಜ್ನತೆಯನ್ನು ಸಲ್ಲಿಸಿದರು. ಅಲ್ಲದೆ ಎಲ್ಲಾ ಕಾರ್ಯಗಳನ್ನು ಯಶಸ್ಸಿಯಾಗಿ ನೆರವೇರಿಸಿದ ಸಂಘದ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಸಾಂಸ್ಕೃತಿಕ ಸಮಿತಿ ಹಾಗೂ ಮಹಿಳಾ ವಿಭಾಗದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.






ತುಳು ಸಂಘ ಬೊರಿವಲಿಯ ಕಾರ್ಯಾಕಾರಿ ಸಮಿತಿಯ ಸದಸ್ಯರಾದ ನ್ಯಾ. ರಾಘವ ಅವರು, ದಿನ ಪೂರ್ತಿ ನಡೆದ ವಿವಿಧ ಆಟೋಟ ಸ್ಪರ್ಧೆಯನ್ನು ನಡೆಸಿಕೊಟ್ಟರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಂಘದ ಸ್ಥಾಪಕ ಅಧ್ಯಕ್ಷರಾದ ವಾಸು ಪುತ್ರನ್ ಮಾತನಾಡಿ, ಸದಸ್ಯರ ಭಾಗವಹಿಸುವಿಕೆ ಮತ್ತು ಬೆಂಬಲಕ್ಕೆ ಸಂತೋಷ ವ್ಯಕ್ತಪಡಿಸಿದರು.
ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ, ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷೆ ಕುಸುಮಾ ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಕಸ್ತೂರಿ ಶೆಟ್ಟಿ, ಮಹಿಳಾ ವಿಭಾಗದ ಉಪಾಧ್ಯಕ್ಷೆ ಶೋಭ ಶೆಟ್ಟಿ, ಸರಸ್ವತಿ ರಾವ್, ಲಕ್ಷ್ಮೀ ದೇವಾಡಿಗ, ಜಯಂತಿ ಶೆಟ್ಟಿ ಮತ್ತಿತರ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.