
ಪೊಲಿಪು ಹೊನ್ನಯ್ಯ ಎಂ. ಕರ್ಕೇರ ನಿಧನ
ಉಡುಪಿ. ಮಾ.8. ಕಾಪು ಉಳಿಯಾರಗೋಳಿ ನಿವಾಸಿ ಹೊನ್ನಯ್ಯ ಕರ್ಕೇರ (83) ಅವರು ಇಂದು ತನ್ನ ಸ್ವಗ್ರಹ ಹರ್ಷ ದಲ್ಲಿ (ಮಾ.8)ದೈವಧೀನಾರಾಗಿದ್ದಾರೆ.
ಪೊಲಿಪು ಮೊಗವೀರ ಮಹಾಸಭಾ, ಪೊಲಿಪು ಶಾಲಾ ಹಳೇ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಅವರು ಮೀನುಗಾರ ಸಹಕಾರಿ ಸಂಘ ಪೊಲಿಪು ಇದರ ನಿರ್ದೇಶಕರಾಗಿಯೂ ಸೇವೆಗೈದಿರುವರು. ಮೃತರು ಮೂವರು ಪುತ್ರಿಯರನ್ನು ಹಾಗೂ ಬಂಧು-ಬಳಗ, ಅಭಿಮಾನಿಗಳನ್ನು ಅಗಲಿರುವರು.
ಇವರ ನಿಧನಕ್ಕೆ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಮಾಜಿ ಶಾಸಕ ಲಾಲಾಜಿ ಮೆಂಡನ್, ಪೊಲಿಪು ಮೊಗವೀರ ಮಹಾಸಭಾ ದ ಅಧ್ಯಕ್ಷ ಶ್ರೀಧರ್ ಕಾಂಚನ್ ಮಾಜಿ ಅಧ್ಯಕ್ಷ ವಿಜಯ್ ಕರ್ಕೇರ ಶೋಕ ವ್ಯಕ್ತ ಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ನಾಳೆ ತಾರೀಕು 9.3.24 ರಂದು ಬೆಳ್ಳಿಗ್ಗೆ 9.30 ಗಂಟೆಗೆ, ಅವರ ಸ್ವಗ್ರಹ ಹರ್ಷ ಕಾಮತ್ ತೋಟ ಕಾಪು ಇಲ್ಲಿ ನಡೆಸಲಾಗುವುದು