
*ತಾಯಿಯ ಪ್ರೀತಿಗೆ ಮಿಗಿಲಾದ ಪ್ರೀತಿಯಿಲ್ಲ- ಶ್ರೀನಿವಾಸ್ ಸಫಲ್ಯ.*
ಮುಂಬಯಿ ಮಾ 14. ತನ್ನ ಸಮಾಜ ಬಾಂಧವರ ಏಳಿಗೆಗಾಗಿ ಅವಿರತ ಶ್ರಮಿಸುತ್ತಿರುವ ಸಾಫಲ್ಯ ಸೇವಾ ಸಂಘ ಮುಂಬೈ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ.ಪರಿವಾರದ ಶಾಂತಿಯನ್ನು ಕಾಪಾಡುವುದು, ಮುನ್ನಡೆಸಿಕೊಂಡು ಹೋಗುವುದು ಮನೆಯೊಡತಿಯ ಕರ್ತವ್ಯ ತಾಯಿಯ ಪ್ರೀತಿಗೆ ಮಿಗಿಲಾದ ಪ್ರೀತಿಯಿಲ್ಲ ಎಂದು ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ್ ಸಫಲ್ಯ ನುಡಿದರು. ಅವರು ಸಂಘದ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾರ್ಚ್ 9 ರಂದು ಬಂಟರ ಭವನದ ಆನೆಕ್ಸ್ ಹಾಲ್ ನಲ್ಲಿ ನಡೆದ ‘ಸಾಫಲ್ಯ ಸ್ತ್ರೀ ಶಕ್ತಿ ‘ ಎಂಬ ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು,

ನಾಟ್ಯಗುರು ಲತಿಕಾ ಶ್ರೀಯಾನ್ ಮಾತನಾಡುತ್ತಾ ಪರಿವಾರದ, ಸಮಾಜದ ಪ್ರೋತ್ಸಾಹವಿದ್ದರೆ ಹೆಣ್ಣೊಬ್ಬಳು ತಾನು ಯಾವುದೇ ಮಟ್ಟದಲ್ಲಿಯೂ ಸಾಧನೆ ಮಾಡಲು ಸಾಧ್ಯ ಎಂದರು ,
ತನ್ನ ನಿರ್ದಿಷ್ಟ ಗಳಿಕೆಯಲ್ಲಿಯೂ ಕೂಡಿಡುವಂತಹ ಒಂದು ಸಾಮರ್ಥ್ಯ ಹೆಣ್ಣೊಬ್ಬಳಿಗಿದೆ ಎಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯನ್ನು ಸೂಚಿಸುತ್ತಾ ಇನ್ನೋರ್ವ ಅತಿಥಿ ಲೇಖಕಿ, ರಜಕ ಸಮಾಜದ ಸುಮಿತ್ರ ಬಿ ಗುಜರನ್ ನುಡಿದರು.

ಅತಿಥಿ, ಸಮಾಜ ಸೇವಕಿ ಶಕುಂತಲಾ ಪುತ್ರನ್ ಮಾತನಾಡುತ್ತ ಮಹಿಳೆಯರು ಅಬಲೆಯರಲ್ಲ ಸಬಲೆಯರು ಎನ್ನುತ್ತಾ ಕಾರ್ಯಕ್ರಮಕ್ಕೆ ಮೆಚ್ಚುಗೆ ಸೂಚಿಸಿದರು.
ಸಾಫಲ್ಯ ಪತ್ರಿಕೆಯ ಸಂಪಾದಕಿ, ಲೇಖಕಿ ಡಾ. ಜಿ ಪಿ ಕುಸುಮಾ ಮಾತನಾಡುತ್ತಾ ಪರಿವಾರದಲ್ಲಿ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವುದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು ಎಂದು ನುಡಿದರು.
ಸಮಾಜ ಸೇವಕಿ, ಗಿರಿಜಾ ವೇಲ್ಫೇರ್ ನ ಸುಮಿತ್ರ ವಿ ಕುಂಜರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀ ಲಲಿತಾ ಸಹಸ್ರನಾಮದಿಂದ ಪ್ರಾರಂಭವಾದ ಈ ಕಾರ್ಯಕ್ರಮವನ್ನು ಕಾರ್ಯಧ್ಯಕ್ಷ ಶ್ರೀನಿವಾಸ ಸಪಲ್ಯ, ಮಾಜಿ ಕಾರ್ಯಧ್ಯಕ್ಷ ಒಂಪ್ರಕಾಶ್ ರಾವ್,ಮಹಿಳಾವಿಭಾಗದ ಕಾರ್ಯಧ್ಯಕ್ಷೆ ಲಕ್ಷ್ಮಿ ಮೆಂಡನ್ ಹಾಗೂ ದಿ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕಿ ಕುಸುಮ ಪ್ರಮೋದ್ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಸಾಫಲ್ಯ ಸಮಾಜದ ಯಶಸ್ವಿ ಮಹಿಳೆಯರಾದ ರತ್ನಾ ಕುಂದರ್, ಸುನೀತಾ ಬಂಗೇರ, ಉಷಾ ವಿ. ಸಪಳಿಗ ಹಾಗೂ ದೀಪಾ ಸುವರ್ಣ ಇವರುಗಳಿಗೆ ಗೌರವಾರ್ಪಣೆ ನಡೆಯಿತು.
ಲಲಿತಾ ಸಹಸ್ರನಾಮ ಸುಸೂತ್ರ ವಾಗಿ ನಡೆಸಿಕೊಟ್ಟ ಕುಸುಮ ಪ್ರಮೋದ್ ಇವರು ದಿ ಆರ್ಟ್ ಆಫ್ ಲೀವಿಂಗ್ನ ಮಾಹಿತಿಯನ್ನು ನೀಡಿದರು.
ಮಹಿಳೆಯರಿಗೆ ಹಳದಿ ಕುಂಕುಮ ಕಾರ್ಯಕ್ರಮ ನಡೆಯಿತು. .ಸಭಾ ಕಾರ್ಯಕ್ರಮದ ಕೊನೆಯಲ್ಲಿ ಏರ್ಪಡಿಸಿದ್ದ ಗೇಮ್ಸ್ ಎಲ್ಲರನ್ನು ಮನೋರಂಜಿಸಿತು ವಿಶೇಷ ಬಹುಮಾನಗಳನ್ನು ನೀಡಲಾಯಿತು.
ವೇದಿಕೆಯಲ್ಲಿ ಯುವ ವಿಭಾಗದ ಕಾರ್ಯಧ್ಯಕ್ಷೆ ಸಂಧ್ಯಾ ಪುತ್ರನ್ ಉಪಸ್ಥಿತರಿದ್ದರು.ಅನುಸೂಯ ಸೋಮೇಶ್ವರ್ ಲಲಿತ ಸಹಸ್ರನಾಮದ ಮಾಹಿತಿ ನೀಡಿದರೆ, ವಾಣಿ ರಘುನಾಥ್ ಮಹಿಳಾ ದಿನಾಚರಣೆಯ ಮಹತ್ವವನ್ನು ತಿಳಿಸಿದರು.ರತಿಕ ಸಪಲ್ಯ ಪ್ರಾಸ್ತವಿಕ ನುಡಿದರು. ಕಲಾವತಿ ಪುತ್ರನ್, ಪ್ರಮೀಳಾ ಶೇರಿಗಾರ್, ಸುಲೋಚನಾ ಸಪಳಿಗ, ಕಲಾ ಬಂಗೇರ, ಶಾಂತ ಸುವರ್ಣ ಹಾಗೂ ಲೋಲಾಕ್ಷಿ ಬಂಗೇರ ಅತಿಥಿಗಳನ್ನು ಪರಿಚಯಿಸಿದರು.
ಉಷಾ ಸಪಲಿಗ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ವಿಮಲಾ ಬಂಗೇರ ವಂದನಾರ್ಪಣೆಗೈದರು. ಪ್ರೀತಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಎಲ್ಲಾ ಸದಸ್ಯರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.