April 1, 2025
ಕರಾವಳಿ

 ಕಾಪು ಲೀಲಾಧರ ಶೆಟ್ಟಿ ಸ್ಮರಣಾರ್ಥ ರಕ್ತದಾನ ಶಿಬಿರ,

   ಶಿರ್ವ  ಮಾ 15.   ಕಾಪು ಪರಿಸರದ ಜನಪ್ರಿಯ ಸಂಘಟಕ   ಸಮಾಜ ರತ್ನ ಲೀಲಾಧರ ಶೆಟ್ಟಿ ಸ್ಮರಣಾರ್ಥ ಅವರ ಅಭಿಮಾನಿ ಬಳಗದ ವತಿಯಿಂದ ಸಮಾಜಸೇವಕ ಸೂರಿ ಶೆಟ್ಟಿ ಕಾಪು ಅವರ ನೇತೃತ್ವದಲ್ಲಿ ಅಜ್ಜರಕಾಡಿನ ಸರಕಾರಿ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ  ಶಿರ್ವ ಕೊಲ್ಲಬೆಟ್ಟು ಸಂಘಮಿತ್ರ ಆವರಣದಲ್ಲಿ ನಡೆಯಿತು.

ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಶಾಸಕ ಲಾಲಾಜಿ ಮೆಂಡನ್, ಮುಂಬಯಿ ಉದ್ಯಮಿ ತುಳು ಕೂಟ ಫೌಂಡೇಶನ್ ನಾಲಸಪುರ ಈ ಅಧ್ಯಕ್ಷ ಶಶಿಧರ ಕೆ ಶೆಟ್ಟಿ ಇನ್ನಂಜೆ, ಜಿಲ್ಲಾ ಸರಕಾರಿ ಆಸ್ಪತ್ರೆಯ ಸರ್ಜನ್ ಡಾ| ವೀಣಾ,ಡಾ। ಮಂಜುಶ್ರೀ ಪೈ, ಮಜೂರು ಗ್ರಾ.ಪಂ. ಅಧ್ಯಕ್ಷ ಪ್ರಸಾದ್ ಶೆಟ್ಟಿ ವಳದೂರು, ಕುತ್ಯಾರು ಕೇಂಜ ಸಾಯಿನಾಥ ಶೆಟ್ಟಿ, ಕರಂದಾಡಿ ಪ್ರೇಮನಾಥ ಶೆಟ್ಟಿ ಕರಂದಾಡಿ ಕುಟಚಾದ್ರಿ,

ಮೋಹನ ಶೆಟ್ಟಿ, ಶಿರ್ವ ಬಂಟರ ಸಂಘದ ಅಧ್ಯಕ್ಷ ವೀರೇಂದ್ರ ಶೆಟ್ಟಿ ಪಂಜಿಮಾರು, ಕರಂದಾಡಿ ಶ್ರೀ ಬ್ರಹ್ಮಲಿಂಗೇಶ್ವರ ಭಜನ ಮಂಡಳಿಯ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್, ಕುತ್ಯಾರು ಯುವಕ ಮಂಡಲದ ಅಧ್ಯಕ್ಷ ಸುಶಾಂತ್ ಶೆಟ್ಟಿ ಶಿರ್ವ ಮಹಾಲಸಾ ನಾರಾಯಣೀ ಭಜನ ಮಂಡಳಿಯ ಅಧ್ಯಕ್ಷ ಜಿ. ಶ್ರೀನಿವಾಸ ಶೆಣೈ, ಜತ್ರಬೆಟ್ಟು ಶ್ರೀ ಸತ್ಯನಾಥ ಭಜನ ಮಂಡಳಿಯ ಅಧ್ಯಕ್ಷ ಸೂರಜ್ ಸುಳ್ಳೇದು, ಶಿರ್ವ ಮಹಿಳಾ ಮಂಡಲದ ಅಧ್ಯಕ್ಷೆ ಡಾ| ಸ್ಫೂರ್ತಿ ಪಿ. ಶೆಟ್ಟಿ ,ಶಿರ್ವ ವಿಶ್ವ ಬ್ರಾಹ್ಮಣ ಯುವ ಸಂಗಮದ ಅಧ್ಯಕ್ಷ ಉಮೇಶ್ ಆಚಾರ್ಯ, ಕಾಪು

ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಶಿರ್ವ ಅಟ್ಟಿಂಜೆ ಹೇಮಲತಾ ಶಂಭು ಶೆಟ್ಟಿ ,ಉದ್ಯಮಿ ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಸುಕನ್ಯಾ ಶೆಟ್ಟಿ, ಭಾಸ್ಕರ ಶೆಟ್ಟಿ ,ವಾಸುದೇವ ಶೆಟ್ಟಿ,ಹಿರಿಯರಾದ ಜಿ. ವಸಂತ ಶೆಣೈ, ಪರಿಸರದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸದಸ್ಯರು, ರಕ್ತದಾನಿಗಳು, ಲೀಲಾಧರ ಶೆಟ್ಟಿ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು. ರಕ್ತದಾನಿಗಳಿಂದ ಒಟ್ಟು 136 ಯೂನಿಟ್ ರಕ್ತ ಸಂಗ್ರಹವಾಯಿತು. ಉದ್ಯಾವರ ಶೈಲೇಶ್ ಮತ್ತು ಬಳಗದಿಂದ ಭಜನೆ ನಡೆಯಿತು

Related posts

ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಂಕರಪುರ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಆಹ್ವಾನ.

Mumbai News Desk

ಬೊಂಡಾಲದಲ್ಲಿ ಬಯಲಾಟ ಸುವರ್ಣ ಸಂಭ್ರಮ – ಸಾಧಕರ ಸಮ್ಮಾನ *ಯಕ್ಷಗಾನದಿಂದ ಸಂಸ್ಕೃತಿಯ ಪುನರುತ್ಥಾನ: ಪ್ರವೀಣ ಭೋಜ ಶೆಟ್ಟಿ 

Mumbai News Desk

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ – ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿದ ಶಾಲಾ ವಿದ್ಯಾರ್ಥಿಗಳ ಮತ್ತು ಹಳೆ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಸಮಾರಂಭ

Mumbai News Desk

 ಜ7 : ಅತ್ತೂರು, ಗುಂಡ್ಯಡ್ಕ ಸಾರ್ವಜನಿಕ ಶ್ರೀ ಧರ್ಮಶಾಸ್ತ್ರ ಅಯ್ಯಪ್ಪ ಭಕ್ತ ಸಮಿತಿ, 46ನೇ ವಾರ್ಷಿಕ ಶ್ರೀ ಅಯ್ಯಪ್ಪ ಸ್ವಾಮಿ ಮಹಾಪೂಜೆ

Mumbai News Desk

ಜೆ ಸಿ ಐ ಶಂಕರಪುರ ಇದರ 2024 ರ ಸಾಲಿನ ಅಧ್ಯಕ್ಷರಾಗಿ ಇನ್ನಂಜೆ ಹರೀಶ್ ಪೂಜಾರಿ ಆಯ್ಕೆ.

Mumbai News Desk

ಕಾಪು ಮಾರಿಗುಡಿ ದೇವಸ್ಥಾನ ನಿರ್ಮಾಣಕ್ಕೆ ಉಪ್ಪಳದಿಂದ ಶಿರೂರು ಭಾಗದ ಎಲ್ಲಾ ಮೊಗವೀರ ಭಾಂದವರು ಸಹಕಾರ ನೀಡುತ್ತೇವೆ : ದ.ಕ. ಮೊಗವೀರ ಮಹಾಜನ ಸಂಘ

Mumbai News Desk