
ಭಾಷೆಗೆ ಜಾತಿ ಮತ ಭೇದವಿಲ್ಲದೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ-ಡಾ. ಸತ್ಯಪ್ರಕಾಶ್ ಶೆಟ್ಟಿ
ಚಿತ್ರ, ವರದಿ : ಉಮೇಶ್ ಕೆ. ಅಂಚನ್
ತುಳುನಾಡಿನಿಂದ ಉದರ ಪೋಷಣೆಗಾಗಿ ಬಂದು ನಾವು ಮರಾಠಿ ಮಣ್ಣಿನಲ್ಲೂ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಿದ್ದೇವೆ. ತುಳು ನಾಡಿನ ಗ್ರಾಮೀಣ ಕ್ರೀಡೆಗಳು, ಅಂಕ ಆಯನ, ನೇಮ ಕೋಲ,ಬಂಡಿ ತೇರು ಇತ್ಯಾದಿ ವಿಶ್ವದ ಬೇರೆಲ್ಲೂ ಕಾಣ ಸಿಗದು.ತುಳು ಭಾಷೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ತುಳು ಭಾಷೆಗೆ ಜಾತಿಮತ ಬೇಧವಿಲ್ಲದೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ.ಕಾಂತಾರ ಸಿನಿಮಾದಿಂದ ಹೆಚ್ಚಿನವರಿಗೆ ದೈವ ದೇವರ ದರ್ಶನ ಆಗಿದೆ.ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಲು ನಾವೆಲ್ಲ ಒಟ್ಟಾಗಿ ಹೋರಾಟ ಮಾಡಬೇಕು.ಮಹಿಳೆಯರು ಇಂದು ಅಬಲೆಯರಲ್ಲ.ಭೂತಾಳಪಾಂಡ್ಯನ ಕಾಲದಿಂದಲೂ ಮಹಿಳೆಯರಿಗೆ ಪ್ರಾಮುಖ್ಯತೆ ದೊರಕಿರಿರುವುದಲ್ಲದೆ ಸದ್ಯದ ಸ್ಥಿತಿಯಲ್ಲಿಯೂ ಮಹಿಳೆಯರಿಗೆ ಸರಕಾರ 33% ಅರಕ್ಷತೆಯಿಂದ ಉದ್ಯೋಗಾವಕಾಶ ನೀಡಿ ಸ್ವಾವಲಂಬಿಯಾಗಲು ಅವಕಾಶ ನೀಡಿದೆ. ಪರಿಸರದಲ್ಲಿ ಸ್ವಚ್ಛತೆ ಹಾಗೂ ಮನಸ್ಸಿನಲ್ಲಿ ಉತ್ತಮ ವಿಚಾರಗಳಿಂದ ಆರೋಗ್ಯವನ್ನು ಸ್ಥಿರವಾಗಿ ಇಟ್ಟುಕೊಳ್ಳಬೇಕು. ಮಕ್ಕಳು ಹಾಗೂ ವೃದ್ಧರು ಮೊಬೈಲ್ ನಿಂದು ದೂರವಿದ್ದಷ್ಟು ಒಳ್ಳೆಯದು ಎಂದು ಮುಲುಂಡ್ ಮದರ್ ಎಂಡ್ ಚೈಲ್ಡ್ ಕ್ಯಾರ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಸತ್ಯಪ್ರಕಾಶ್ ಶೆಟ್ಟಿ ಹೇಳಿದರು. ಅವರು ಮಾ.10 ರಂದು ಮೀರಾ ರೋಡ್ ಪೂರ್ವದ ಪೂನಂಸಾಗರ್ ರಾಧಾಕೃಷ್ಣ ಸಭಾಗ್ರಹದಲ್ಲಿ ತುಳು ನಾಡ ಸೇವಾ ಸಮಾಜ ಮೀರಾಭಾಯಂದರ್ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ,ಹಳದಿ ಕುಂಕುಮ ಮತ್ತು ಸಂಸ್ಥಾಪಕ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ತುಂಗಾ ಆಸ್ಪತ್ರೆಯ ಮುಖ್ಯ ಆಡಳಿತ ನಿರ್ದೇಶಕ ಡಾ. ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ ಸಂಪಾದನೆಗಿಂತಲೂ ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯ ನೀಡಬೇಕು.ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಮಾನಸಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ.ಮಾನಸಿಕವಾಗಿ ಸ್ಥಿತಪ್ರಜ್ಞವಾಗಿರಲು ವೇದ, ಉಪನಿಷತ್ ಹಾಗೂ ಭಗವದ್ಗೀತೆಯ ವಾಚನೆ ಅಗತ್ಯ .ಇದರಿಂದ ರೋಗರುಜಿನಗಳಿಂದ ದೂರವಿರಬಹುದು ಎಂದು ಹೇಳಿದರು.
ಐಸಿಐಸಿಐ ಬ್ಯಾಂಕಿನ ಮುಖ್ಯ ಪ್ರಭಂಧಕಿ ಸುನಿತಾ ಪಿ. ಶೆಟ್ಟಿ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಮಕ್ಕಳ ಮಹಿಳೆಯರ ಏಳಿಗೆಗೆ ಪ್ರೇರಣೆ ಆಗುವಂತಹ ಕಾರ್ಯಕ್ರಮ ಸದಾ ನಡೆಯುತ್ತಿರಲಿ ಎಂದು ಶುಭಕೋರಿದರು.ಮೀರಾಭಾಯಂದರ್ ಮಹಾನಗರಪಾಲಿಕೆಯ ಮಾಜಿ ನಗರಸೇವಕ ಅರವಿಂದ್ ಎ ಶೆಟ್ಟಿ, ವಿರಾರ್ ನಾಲಸೋಪರ ಕರ್ನಾಟಕ ಸಂಘದ ಅಧ್ಯಕ್ಷ ಸದಾಶಿವ ಎಂ.ಕರ್ಕೇರ ಸಂಸ್ಥೆಗೆ ಶುಭ ಹಾರೈಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಮೀರಾ ರೋಡ್ ಶಾರದಾ ಕ್ಲಾಸಸ್ ನ ಭಾಸ್ಕರ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಶೋಭಾ ವಿ. ಉಡುಪ ದಂಪತಿ ಮತ್ತು ಸಿ.ಎ. ಶರಣ್ಯ ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸನ್ಮಾನಿಸಿದರು.ಭಜನಾ ಗುರು ಭಾರತಿ ಉಡುಪರಿಗೆ ಗುರುವಂದನೆ ಗೈದು ಗೌರವಿಸಲಾಯಿತು.ಉಪಸ್ತಿತರಿದ್ದ ಪರಿಸರದ ಸಂಘ ಸಂಸ್ಥೆಗಳ ಪ್ರತಿನಿಧಿಗಳನ್ನು ಸತ್ಕರಿಸಲಾಯಿತು. ಸನ್ಮಾನ ಪತ್ರವನ್ನು ಸೇವಾ ಸಮಾಜದ ಉಪಾಧ್ಯಕ್ಷೆ ವಸಂತಿ ಶೆಟ್ಟಿ, ಸದಸ್ಯೆರಾದ ರೇಖಾ ಪೂಜಾರಿ, ಶಾಂತಾ ಆಚಾರ್ಯ, ಮತ್ತು ಜಯಲಕ್ಷ್ಮೀ ಸುವರ್ಣ ವಾಚಿಸಿದರು
ವೇದಿಕೆಯಲ್ಲಿ ಮೀರಾರೋಡು ಬಿಲ್ಲವರ ಎಸೋಸಿಯೋಶನ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಭಾಶ್ಚಂದ್ರ ಕರ್ಕೇರ, ಜಯಂತಿ ಗಾಣಿಗ, ಗೌರವ ಅಧ್ಯಕ್ಷ ಶಂಭು ಕೆ. ಶೆಟ್ಟಿ, ಉಪಾಧ್ಯಕ್ಷ ನಾರಾಯಣ ಪುತ್ತಿಗೆ , ಕೋಶಾಧಿಕಾರಿ ರವೀಂದ್ರ ಶೆಟ್ಟಿ ಸೂಡ, ಸಂಚಾಲಕ ಜಯಪ್ರಕಾಶ ಪೂಜಾರಿ, ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಅಮಿತಾ ಕೆ. ಶೆಟ್ಟಿ, ಸಂಚಾಲಕಿ ಕುಶಲಾ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿ ಸದಸ್ಯರು ಮಹಿಳಾ ವಿಭಾಗದವರು ಸಹಕರಿಸಿದರು. ಸದಸ್ಯೆಯರಿಂದ ಭಜನೆ, ಸಂಸ್ಥೆಯ ಹಾಗೂ ಪರಿಸರದ ಸಂಘಸಂಸ್ಥೆಗಳ ಸದಸ್ಯೆಯರಿಂದ, ಮಕ್ಕಳಿಂದ ಜನಪದ ನೃತ್ಯ, ಹರೀಶ್ ಶೆಟ್ಟಿ ಎರ್ಮಾಳ್ ತಂಡದವರಿಂದ ಸಂಗೀತ ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮದ
ಅಂಗವಾಗಿ ಮೀರಾ ರೋಡ್ ಚಿಣ್ಣರ ಬಿಂಬದ ಬಾಲ ಪ್ರತಿಭೆಗಳಿಂದ ಅಶೋಕ್ ವಳದೂರುರವರ ನಿರ್ದೇಶನದಲ್ಲಿ ಊರುಗೋಲು ಕಿರುನಾಟಕ , ಸಂಘದ ಸದಸ್ಯೆ ಯರಿಂದ ನಾಟಕ ಚಟಾಕಿ ಅತ್ತೆ-ಪಟಾಕಿ ಸೊಸೆ ಪ್ರದರ್ಶನ ಗೊಂಡಿತು.
ಆರಂಭದಲ್ಲಿ ಪದಾಧಿಕಾರಿಗಳು, ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಭಾರತಿ ಉಡುಪ ವೀಣಾ ಉಡುಪ ಪ್ರಾರ್ಥನೆ ಗೈದರು. ಸಂಸ್ಥೆಯ ಅಧ್ಯಕ್ಷ ರವಿರಾಜ್ ಎಮ್.ಸುವರ್ಣ ಪ್ರಾಸ್ತಾವಿಕವಾಗಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ ಸ್ವಾಗತಿಸಿದರು.ರಂಗನಟ,ಕಲಾವಿದ ಜಿ.ಕೆ.ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.