April 1, 2025
ಕರಾವಳಿ

ಅಯೋಧ್ಯೆಯಿಂದ ಬಂದು ಕಾಪು ಹೊಸ ಮಾರಿಗುಡಿ ದೇವಳದಲ್ಲಿ : 9 ದೀಪ ಬೆಳಗಿದ ಪೇಜಾವರ ಶ್ರೀಗಳು

ಪೇಜಾವರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಯೋಧ್ಯೆ ಶ್ರೀ ರಾಮ ದೇವರ ಪ್ರಾಣಪ್ರತಿಷ್ಠೆ ಮತ್ತು 48 ದಿನಗಳ ಮಂಡಲೋತ್ಸವವನ್ನು ಮುಗಿಸಿ 17/03/2024ರ ಭಾನುವಾರ ಇಳಕಲ್ಲ್ ಶಿಲೆಯಿಂದ ಶಿಲಾಮಯವಾಗಿ ನಿರ್ಮಾಣಗೊಳ್ಳುತ್ತಿರುವ ಇತಿಹಾಸ ಪ್ರಸಿದ್ಧ ಕಾಪು ಹೊಸ ಮಾರಿಗುಡಿ ದೇವಸ್ಥಾನದ ಮಾರಿಯಮ್ಮನ ಸನ್ನಿದಾನಕ್ಕೆ ಆಗಮಿಸಿ ಶ್ರೀದೇವಿಯ ದರುಶನ ಪಡೆದರು, ಈ ಸಂದರ್ಭ ಮಾರಿಯಮ್ಮನ ಸನ್ನಿದಾನದಲ್ಲಿ 9 ದೀಪಗಳನ್ನು ಬೆಳಗಿಸಿ ನಂತರ ದೇವಳದ ನವದುರ್ಗಾ ಮಂಟಪದಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.

ಉಡುಪಿಗೆ ತೆರಳುತ್ತಿರುವ ಸಂದರ್ಭ ಕಾಪು ಮಾರಿಯಮ್ಮನ ದರುಶನ
ಮಾಡಿದೆವು, ಜೀರ್ಣೋದ್ಧಾರ ಕೆಲಸಗಳು ಕಾಲಕ್ಕೆ ಅನುಗುಣವಾಗಿ ಆ ಮಹಾತಾಯಿ ಮತ್ತು ಪ್ರಭು ಶ್ರೀ ರಾಮ ಚಂದ್ರ ಹಾಗೂ ಉಡುಪಿ ಶ್ರೀ ಕೃಷ್ಣನ ದಯೆಯಿಂದ ನಿರ್ವಿಘ್ನವಾಗಿ ಮತ್ತು ಸಾಂಗವಾಗಿ ನೆರವೇರಬೇಕು, ತಾಯಿಯ ಅನುಗ್ರಹ ಲೋಕದ ಸಮಸ್ತ ಜನರ ಮೇಲಿರಲಿ ಎಂದು ಹೇಳಿದರು.
ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೆ.ವಾಸುದೇವ ಶೆಟ್ಟಿ, ಕಾರ್ಯಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಗೌರವಾದ್ಯಕ್ಷರಾದ ಲಾಲಾಜಿ ಆರ್. ಮೆಂಡನ್, ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯಾ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಮುಂಬೈ ಸಮಿತಿಯ ಉಪಾಧ್ಯಕ್ಷರಾದ ಕೃಷ್ಣ ಶೆಟ್ಟಿ “ಕೃಷ್ಣ ಪ್ಯಾಲೇಸ್”, ಕಟ್ಟಡ ಸಮಿತಿಯ ಪ್ರಧಾನ ಸಂಚಾಲಕರಾದ ಭಗವಾನ್ ದಾಸ್ ಶೆಟ್ಟಿಗಾರ್, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರಮೇಶ್ ಶೆಟ್ಟಿ ಕಾಪು ಕೊಲ್ಯ, ದಾನಿಗಳಾದ ಉದ್ಯಮಿ ಪುರುಷೋತ್ತಮ್ ಶೆಟ್ಟಿ, ಉಮಾ ಕೃಷ್ಣ ಶೆಟ್ಟಿ, ವ್ಯವಸ್ಥಾಪನ ಸಮಿತಿಯ ಸಂಚಾಲಕರುಗಳಾದ ಶ್ರೀ ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಮ್, ಬಾಬು ಮಲ್ಲಾರ್, ಕಾಪು ಜಿ. ಎಸ್. ಬಿ ಸಮಾಜ ಭಾಂದವರು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಗ್ರಾಮ ಸಮಿತಿಯ ಮಹಿಳಾ ಮುಖ್ಯ ಸಂಚಾಲಕರಾದ ಶಿಲ್ಪಾ ಜಿ. ಸುವರ್ಣ,ಪ್ರಚಾರ ಸಮಿತಿಯ ಮಹಿಳಾ ಸಮಿತಿಯ ಮುಖ್ಯ ಸಂಚಾಲಕರಾದ ಸಾವಿತ್ರಿ ಗಣೇಶ್, ಆರ್ಥಿಕ ಸಮಿತಿಯ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ವಿದ್ಯಾಧರ ಪುರಾಣಿಕ್, ಮನೋಹರ್ ರಾವ್ ಕಲ್ಯಾ, ಲಕ್ಷ್ಮೀಶ ತಂತ್ರಿ, ರವಿ ಭಟ್ ಮಂದಾರ, ಲಕ್ಷ್ಮೀ ನಾರಾಯಣ ತಂತ್ರಿ, ಸಿದ್ದಿಧಾತ್ರಿ ತಂಡದ ಸಂಚಾಲಕರುಗಳಾದ ಶ್ರೀಧರ ಕಾಂಚನ್, ಸುಲೋಚನ ಕೆ. ಸುವರ್ಣ, ಜಗದೀಶ್ ಮೆಂಡನ್, ಮಮತಾ ಕುಶ ಸಾಲ್ಯಾನ್, ಕಲಾವತಿ ಪುತ್ರನ್,ಗೀತಾರಾಜ್, ಉಷಾ ಕೆ. ಪುತ್ರನ್,ದಿವಾಕರ ಶೆಟ್ಟಿ ಮಲ್ಲಾರ್, ದೇವಳದ ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ಸಿಬ್ಬಂದಿಗಳು ಮತ್ತು ವಿವಿಧ ಸಂಘ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು.

Related posts

ಶ್ರೀ ಮಣಿಕಂಠನ ಸನ್ನಿಧಾನಕ್ಕೆ ಉಪೇಂದ್ರ ಸ್ವಾಮಿಯರ 24ನೇ ವರ್ಷದ ಪಾದಯಾತ್ರೆ.

Mumbai News Desk

ಶಿಲಾಮಯಗೊಳ್ಳುತ್ತಿರುವ ಕಾಪು ಮಾರಿಯಮ್ಮನ ದೇಗುಲ ಕಾಮಗಾರಿ ವೀಕ್ಷಣೆ : ಆದ್ಯಾತ್ಮ ಗುರು ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ

Mumbai News Desk

ಮುಂಡ್ಕೂರು ಕಜೆ ಮಾರಿಗುಡಿಯ ಗರ್ಭಗುಡಿಗೆ ಶಿಲಾನ್ಯಾಸ ಹಾಗ ನಿಧಿ ಕಳಶ ಸ್ಥಾಪನಾ ಕಾರ್ಯಕ್ರಮ.

Mumbai News Desk

ಅಯೋಧ್ಯೆ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ಶಂಕರಪುರ ಶ್ರೀ ಸಾಯಿ ಈಶ್ವರ್ ಗುರೂಜಿಗೆ ಆಹ್ವಾನ.

Mumbai News Desk

ಮೂಲ್ಕಿ ರಾಷ್ಟ್ರೀಯ  ಹೆದ್ದಾರಿ    ಡೇಂಜರ್  ಜೋನ್ ಗಳ ಸಮಸ್ಯೆ ವಿವರಣೆಗೆ ಮನವಿ

Mumbai News Desk

ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಾಪು ಹೊಸಮಾರಿಗುಡಿ ಗೆ ಭೇಟಿ

Mumbai News Desk