
ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ದಿ ಮಾಡುವ ಅಭ್ಯರ್ಥಿಗಳನ್ನು ಬೆಂಬಲಿಸೋಣ ; – ನಗರಸೇವಕ ಸಂತೋಷ್ ಜಿ ಶೆಟ್ಟಿ
ಚಿತ್ರ ವರದಿ : ದಿನೇಶ್ ಕುಲಾಲ್
ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾ.17ರಂದು ಮುಂಬಯಿಗಾಗಮಿಸಿದ್ದು ಈ ಸಂದರ್ಭದಲ್ಲಿ ಪನ್ವೆಲ್ ಮಹಾನಗರ ಪಾಲಿಕೆಯ ನಗರಸೇವಕ ಹಾಗೂ ಶ್ರೀ ಕ್ಷೇತ್ರ ನಂದಾವರ ಇದರ ಬ್ರಹ್ಮ ಕಲಶ ಸಮಿತಿಯ ಅಧ್ಯಕ್ಷರಾದ ಸಂತೋಷ್ ಜಿ ಶೆಟ್ಟಿ ದಲಂದಿಲ ಇವರ ನೇತೃತ್ವದಲ್ಲಿ ನವಿ ಮುಂಬಯಿಯ ನ್ಯೂ ಪನ್ವೆಲ್ ಪೂರ್ವ ದ ಭಗತ್ ವಾಡಿಯ ಹೋಟೆಲ್ “ಸ್ಪೈಸ್ ವಾಡಿ”ಇಲ್ಲಿ ಕ್ಯಾಪ್ಟನ್ ಬ್ರಿಜೇಶ್ ಚೌಟ ತುಳು ಕನ್ನಡಿಗ ಅಭಿಮಾನಿಗಳೊಂದಿಗೆ ಸಮಾಲೋಚನೆ ಸಭೆ ನಡೆಯಿತು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪನ್ವಲ್ ಪರಿಸರ ದಲ್ಲಿ ಹಾಗೂ ಮುಂಬಯಿಯ ವಿವಿಧ ಸಮುದಾಯದ ಅನೇಕ ಗಣ್ಯರು ಉಪಸ್ಥಿತರಿದ್ದು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಅಭಿನಂದನಾ ಪೂರ್ವಕವಾಗಿ ಸ್ವಾಗತಿಸಿದರು.

ಸ್ವಾಗತಿಸುತ್ತಾ ಪ್ರಾಥಮಿಕ ಮಾತುಗಳನ್ನು ನಾಡಿದ ನಗರಸೇವಕ ಸಂತೋಷ್ ಜಿ ಶೆಟ್ಟಿ ಅವರು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿ ಭರವಸೆಯ ವ್ಯಕ್ತಿಯೊಬ್ಬರು ಇಂದು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದುದು ನಮ್ಮೆಲ್ಲರ ಸೌಭಾಗ್ಯ. ಮಿಲಿಟರಿಯಲ್ಲಿ ದೇಶ ರಕ್ಷಣೆಯ ಸೇವೆ ಗೈದು ರಾಜಕೀಯದ ಮೂಲಕ ದೇಶಸ ಸೇವೆ ಮಾಡುತ್ತಿರುವ ಬ್ರಿಜೇಶ್ ಚೌಟರು, ನಮ್ಮ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಪರಿವರ್ತಿಸುವಲ್ಲಿ ಸಂದೇಹವಿಲ್ಲ. ನಾವೆಲ್ಲರೂ ಅವರ ಅಭಿಮಾನಿಗಳಾಗಿದ್ದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸರಿಯಾದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡಲಾಗಿದೆ. ಇಂದು ನಾವು ನಮ್ಮ ದೇಶಕ್ಕಾಗಿ ಒಟ್ಟಾಗಿದ್ದೇವೆ ನಮಗೆ ಜಾತಿ ಮುಖ್ಯವಲ್ಲ. ನಮ್ಮ ದೇಶ ಮುಖ್ಯ. ಇಲ್ಲಿರುವ ನಾವು ನಮ್ಮ ಊರಿನವರಿಗೆ ಹೇಳಿದ್ದಲ್ಲಿ ಅವರು ಖಂಡಿತವಾಗಿ ನಮ್ಮ ಮಾತನ್ನು ಕೇಳುತ್ತಾರೆ. ಆದುದರಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಇವರಿಗೆ ನಮ್ಮೆಲ್ಲರ ಪ್ರೋತ್ಸಾಹದ ಅತೀ ಅಗತ್ಯ ಎಂದರು.
ಅಪಾರ ಸಂಖ್ಯೆಯಲ್ಲಿ ಸೇರಿಕೊಂಡಿದ್ದ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮಾತನಾಡುತ್ತಾ ಸಂಸತ್ತಿನಲ್ಲಿ ನಮ್ಮ ಊರನ್ನು ಪ್ರತಿನಿಧೀಕರಿಸಲು ಒಂದು ಅವಕಾಶ ಸಿಕ್ಕಿದ ಈ ಸಂಭ್ರವನ್ನು ನೋಡುವುದೇ ಒಂದು ಖುಷಿ. ಒಂದು ಮಧ್ಯಮ ವರ್ಗದಿಂದ ಬಂದವ ನಾನು ದಕ್ಷಿಣ ಕನ್ನಡ ಜಿಲ್ಲೆಯ ಒಂದು ಪ್ರತಿಷ್ಠಿತ ಲೋಕಸಭಾ ಕ್ಷೇತ್ರದಿಂದ ತುಳುನಾಡನ್ನು ಪ್ರತಿನಿಧಿಕರಿಸುವ ಅವಕಾಶ ಸಿಕ್ಕಿದ್ದು ಅದು ತುಳುನಾಡಿನ ಧೈವ ದೇವರ ಆಶೀರ್ವಾದ. ಅದಕ್ಕಾಗಿ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಪಕ್ಷದ ಕಾರ್ಯಕರ್ತರ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ನಾವು ಒಂದಾಗಿ ಸಂಕಲ್ಪ ಮಾಡಿದರೆ ಅದು ಸಿದ್ಧಿಯಾಗುತ್ತದೆ. ಎಂಟು ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯ ಯುವ ಜನಾಂಗ ನಾಡನ್ನು ತೆರೆದು ದೇಶ ವಿದೇಶಗಳಿಗೆ ಉದ್ಯೋಗ ನಿಮಿತ್ತ ಹೋಗುತ್ತಿದ್ದು ಅವರ ಮನೆಗೆ ಹೋದಲ್ಲಿ ಪ್ರಾಯದವರು ಮಾತ್ರ ಇದ್ದಾರೆ. ಇದು ತುಂಬಾ ಆತಂಕಕಾರಿ ಬೆಳವಣಿಗೆ. ನಮ್ಮ ನಾಡಲ್ಲಿ ಹಿಂದುತ್ವ ಉಳಿಯದೆ ಇದ್ದಲ್ಲಿ ನಾಡಿನ ದೇವ ದೇವರು ಕಂಗಾಲಾಗುವ ಪರಿಸ್ಥಿತಿ ಬರಬಹುದು. ಪೂರ್ವ ಜನ್ಮದಲ್ಲಿ ಪುಣ್ಯ ಮಾಡಿದವರಿಗೆ ಮಾತ್ರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುನರ್ಜನ್ಮದ ಅವಕಾಶ ಸಿಗುತ್ತದೆ. ದಕ್ಷಿಣ ಕನ್ನಡ ನಿಜವಾಗಿಯೂ ದೇವರ ಭೂಮಿಯಾಗಿದೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೆ ವಿನಮ್ರವಾಗಿ ಒಂದು ಭರವಸೆಯನ್ನು ನೀಡುತ್ತಿದ್ದೇನೆ ನನಗೆ ಜವಾಬ್ದಾರಿ ಇರುವ ತನಕ ದಕ್ಷಿಣ ಕನ್ನಡ ಜಿಲ್ಲೆಯನ್ನು ರಾಷ್ಟ್ರದ ಒಂದು ಪ್ರಗತಿಶೀಲ ಜಿಲ್ಲೆಯಾಗಿ ಹಾಗೂ ಅಭಿವೃದ್ಧಿ ಶೀಲ ಜಿಲ್ಲೆಯಾಗಿ ಪರಿವರ್ತಿಸಬೇಕಾಗಿದೆ. ದಕ್ಷಿಣ ಕನ್ನಡ ಸಂಪತ್ಭರಿತವಾದ ಜಿಲ್ಲೆ. ನಮ್ಮ ಜಿಲ್ಲೆಯಲ್ಲಿ ಎಲ್ಲಾ ಸೌಲಭ್ಯ ಇದ್ದು, ಉದ್ಯೋಗ ಶೃಷ್ಟಿಸುವ ಉದ್ಯಮ ಮವನ್ನು ಬೆಳೆಸಿದಲ್ಲಿ ಯುವ ಜನಾಂಗವು ಉದ್ಯೋಗಕ್ಕಾರಿ ಹೊರಗೆ ಹೋಗಬೇಕಾಗಿಲ್ಲ. ನಾವೆಲ್ಲಾರೂ ಸೇರಿ ನಾವು ದಕ್ಷಿಣ ಕನ್ನಡ ಜಿಲ್ಲೆಯನ್ನು ಕಟ್ಟೋಣ ಎಂದರು.

ಕ್ಯಾಪ್ಟನ್ ಬ್ರಿಜೇಶ್ ಚೌಟ ರು ಪನ್ವೆಲ್ ನಾಗರಿಕರ ಹಾಗೂ ಮುಂಬಯಿಗರ ಪರವಾಗಿ ಸ್ವಾಗತಿಸಿದ ಸ್ಥಳೀಯ ಶಾಸಕ ಪ್ರಶಾಂತ್ ಠಾಕೂರು ಅವರು ಮಾತನಾಡುತ್ತಾ ಮುಂಬಯಿಯಲ್ಲಿನ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರೊಂದಿಗೆ ನಾವೆಲ್ಲರಿದ್ದು ಬ್ರಿಜೇಶ್ ಚೌಟ ರಿಗೆ ಬೆಂಬಲ ನೀಡೋಣ. ಇದರ ಮೂಲಕ ಸರಕಾರದ ಮುಂದಿನ ಎಲ್ಲಾ ಯೋಜನೆಗಳನ್ನು ಕಾರ್ಯರೂಪಕ್ಕೆ ತರೋಣ ಎನ್ನುತ್ತಾ ಶುಭ ಹಾರೈಸಿದರು.
ವೇದಿಕೆಯಲ್ಲಿ ವಿವಿಧ ಜಾತಿಯ ಸಂಘ-ಸಂಸ್ಥೆ ಪದಾಧಿಕಾರಿಗಳು ಸ್ಥಳಿಯ ಸಮಾಜ ಸೇವಕರು ನವಿ ಮುಂಬೈ ನೆರೂಲ್ ಮಾಜಿ ನಗರ ಸೇವಕಿ ಅನಿತಾ ಸಂತೋಷ್ ಶೆಟ್ಟಿ ಮತ್ತಿತರ ಮುಖಂಡರು ಉಪಸ್ಥರಿದ್ದರು,
ಕಾರ್ಯಕ್ರಮವನ್ನು ಅಶ್ವಿನಿ ಶೆಟ್ಟಿ ನಿರೂಪಿಸಿ ವಂದಿಸಿದರು,
ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡಿದ್ದರು ಕೊನೆಯಲ್ಲಿ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದ್ದು,
——-
ಬಿಜೆಪಿಯ ಸಿದ್ಧಾಂತನ ಒಪ್ಪಿಕೊಂಡ ನವಿ ಮುಂಬೈ ಅನಿತಾ ಸಂತೋಷ್ ಶೆಟ್ಟಿ, ವಿಶೇಷ ಗೌರವ,
ನವಿ ಮುಂಬೈಯ ನೆರೊಲ್ ನಲ್ಲಿ ಕಾಂಗ್ರೆಸ್ ಪಕ್ಷ ದಲ್ಲಿ ನಗರ ಸೇವಕಿಯಾಗಿ ಜನಸಾಮಾನ್ಯರ ಸೇವೆಯ ಮೂಲಕ ಗುರುತಿಸಿಕೊಂಡಿರುವವರು ಇವರು ಬಿಜೆಪಿ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಬಿಜೆಪಿಗೆ ಸೇರ್ಪಡೆಯಾಗಿದ್ದು ಇವರನ್ನು ಶಾಸಕ ಪ್ರಶಾಂತ್ ಠಾಕೂರು , ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂತೋಷ್ ಜಿ ಶೆಟ್ಟಿ ಅವರು ಉಪಸ್ಥಿತಿಯಲ್ಲಿ ಗೌರವಿಸಲಾಯಿತು,