
ಮುಂಬಯಿ, ಮಾ 19- ಅರಸಿನ ಕುಂಕುಮಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಹಿಂದೂ ಧರ್ಮದಲ್ಲಿ ಸ್ತ್ರೀ ಗೆ ಇರುವ ಸ್ಥಾನ ಮಾನದ ಹೆಗ್ಗುರುತು ಹಾಗೂ ಅದನ್ನು ಬಿಂಬಿಸುವ ಉತ್ತಮ ಉದಾಹರಣೆ ಈ ಅರಸಿನ ಕುಂಕುಮ ಕಾರ್ಯಕ್ರಮ. ನಮ್ಮ ಧರ್ಮ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ನಿಮ್ಮೆಲ್ಲರ ಕಾಣಿಕೆ ಅತ್ಯಮೂಲ್ಯ. ನಮ್ಮ ಸಂಸ್ಕಾರ ಸಂಸ್ಕೃತಿಗಳು ಯುವ ಪೀಳಿಗೆಗೆ ಪರಿಚಯಿಸುವ ಮಹತ್ತರವಾದ ಹೊಣೆ ನಮ್ಮ ಮೇಲಿದೆ ಹಾಗೇಯೇ ಇಂದು ನಮ್ಮ ಸಂಘದ ಕಿರು ಸಭಾಗೃಹದಲ್ಲಿ ಕಾರ್ಯಕ್ರಮ ನೆಡೆಯುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಈ ಮೊದಲು ನಾವು ಪ್ರತಿಯೊಂದು ಕಾರ್ಯಕ್ರಮಕ್ಕೂ ಬೇರೆ ಸಭಾಗೃಹವನ್ನೆ ಅವಲಂಭಿಸಿತ್ತು ಆದರೆ ಆಡಳಿತ ಮಂಡಳಿಯವರ ಪರಿಶ್ರಮ ದೇಣಿಗೆದಾರರ ಸಹಕಾರದಿಂದ ಇಂದು ನಾವು ನಮ್ಮ ಕಿರು ಸಭಾಗೃಹದಲ್ಲಿ ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಯಿತು ಈ ನಿವೇಶನ ಖರೀದಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. ನಮ್ಮ ಸಂಘ ಇನ್ನಷ್ಟು ಬೆಳೆಯಬೇಕು ಇನ್ನು ಹೆಚ್ಚಿನ ಕಾರ್ಯ ಚಟುವಟಿಕೆಗಳು ಕಾರ್ಯಗತಗೊಂಡು ಸದಸ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸಂಘಟನೆಯ ಅಭಿವೃದ್ಧಿಗಾಗಿ ದುಡಿದರೆ ಆಗ ನಮ್ಮದು ಕೂಡ ಒಂದು ಬಲಿಷ್ಠ ಸಂಘಟನೆಯಾಗುತ್ತದೆ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಸಮಾಜಸೇವಕಿ ಯಶೋದಾ ಎನ್. ಪೂಜಾರಿ ನುಡಿದರು. ಅವರು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ ಮಾರ್ಚ್ 17 ರಂದು ಥಾಣೆ ಪಶ್ಚಿಮದಲ್ಲಿರುವ ಸಂಘದ ಕಿರು ಸಭಾಗೃಹದಲ್ಲಿ ಜರಗಿದ ಮಹಿಳಾ ದಿನಾಚರಣೆ, ಅರಸಿನ ಕುಂಕುಮ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿ ಶುಭ ಹಾರೈಸಿದರು

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಬಿಲ್ಲವರ ಅಸೋಸಿಯೇಶನ್ ಮಹಿಳಾ ಸಮಿತಿಯ ಉಪ ಕಾರ್ಯಾಧ್ಯಕ್ಷೆ ಗಿರಿಜಾ ಚಂದ್ರಶೇಖರ ಪೂಜಾರಿ ಮಾತನಾಡುತ್ತಾ ಹಳದಿ-ಕುಂಕುಮ ಅದು ನಮ್ಮ ಸೌಭಾಗ್ಯ ಮಹಿಳೆಯರು ಸದಾ ಪಾಲನೆ ಮಾಡಬೇಕು ಹಣೆಗೆ ಸ್ಟಿಕ್ಕರ್ ಹಚ್ಚುವ ಬದಲು ಕುಂಕುಮದ ಬೊಟ್ಟು ಇಡಬೇಕು ಆಧುನಿಕತೆಯ ಭರಾಟೆಯಲ್ಲಿ ನಮ್ಮ ಸಂಸ್ಕಾರ ಸಂಪ್ರದಾಯಗಳು ಮರೆಯಾಗಬಾರದು ಸ್ಟಿಕ್ಕರ್ ಹಚ್ಚುವ ಬದಲು ಕುಂಕುಮದ ಬೊಟ್ಟು ಇಟ್ಟುಕೊಂಡರೆ ಅದರ ಸೌಂದರ್ಯವೇ ಬೇರೆ ಇದು ನಾನೇಕೆ ನಿಮಗೆಲ್ಲ ಹೇಳುತ್ತಿದ್ದೇನೆಂದರೆ ನಾನು ಹಣೆಗೆ ಸದಾ ಕುಂಕುಮದ ಬೊಟ್ಟನ್ನೆ ಇಟ್ಟುಕೊಳ್ಳುವುದು ಉಪದೇಶ ಮಾಡುವ ಮೊದಲು ನಾವು ನುಡಿದಂತೆ ನೆಡೆಯಬೇಕಂತೆ ನಾನು ಪಾಲಿಸಿಕೊಂಡು ಬಂದಿರುವ ವಿಚಾರಗಳನ್ನು ನಿಮ್ಮ ಮುಂದಿಟ್ಟಿದ್ದೇನೆ. ನಾವೆಲ್ಲ ಮಾತೃ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಷ್ಟು ಭಾಷೆ ಬೇಕಾದರೂ ಕಲಿಯಿರಿ ತೊಂದರೆ ಇಲ್ಲ ಆದರೆ ಮಾತೃ ಭಾಷೆ ಮರೆಯದೆ ಅದಕ್ಕೆ ಮೊದಲ ಆದ್ಯತೆ ನೀಡಬೇಕು. ಈ ಕಾರ್ಯಕ್ರಮದ ನಿಮಿತ್ತ ನಿಮ್ಮ ಜೊತೆ ಸೇರಲು ಸಾಧ್ಯವಾಯಿತು ನಾರಾಯಣಗುರುಗಳ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಸಂಘ ಇನ್ನಷ್ಟು ಅಭಿವೃದ್ಧಿಯಾಗಲಿ ನಿಮ್ಮ ಈ ನೂತನ ಕಿರು ಸಭಾಗೃಹದಲ್ಲಿ ಕುಳಿತರೆ ಮನಸ್ಸಿಗೆ ಆಹ್ಲಾದವಾಗುತ್ತದೆ ಮಹಿಳೆಯರು ಕೂಡ ಸಂಘಟನೆ ಬಪಡಿಸಲು ಶ್ರಮಿಸಬೇಕು ಒಟ್ಟಿನಲ್ಲಿ ಇದೊಂದು ಮಾದರಿ ಸಂಸ್ಥೆಯಾಗಿ ಬೆಳೆಯಲಿ ಎನ್ನುವುದೇ ನನ್ನ ಆಶಯ ಎಂದು ನುಡಿದರು. ಕಾರ್ಯಕ್ರಮ ಉದ್ಘಾಟಿಸಿದ ಸಮಾಜಸೇವಕಿ ಮುಂಬಯಿ ಉಚ್ಚ ನ್ಯಾಯಾಲಯದ ನ್ಯಾಯವಾದಿ ಶಕುಂತಲಾ ಆನಂದ ಪೂಜಾರಿ ಮಾತನಾಡುತ್ತಾ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಪ್ರದಾಯ,ಸAಸ್ಕಾರ,ಆಚಾರ-ವಿಚಾರಗಳನ್ನು ತಿಳಿಸಿ ಹೇಳಬೇಕು ಒಟ್ಟಿನಲ್ಲಿ ನಮ್ಮ ಸಮುದಾಯ ಬಾಂಧವರು ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುವಂತಾಗಬೇಕು ಹಾಗೇಯೇ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ತಾವೆಲ್ಲರು ಕೈ ಜೋಡಿಸಬೇಕು ಎಂದು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಮಾತನಾಡುತ್ತಾ ಇಂದು ಕಾರ್ಯಕ್ರಮಕ್ಕೆ ದೂರ ದೂರದ ಪ್ರದೇಶಗಳಿಂದ ತಾವೆಲ್ಲರೂ ಆಗಮಿಸಿದ್ದೀರಿ ನಿಮಗೆ ಈ ಸಂಘದ ಮೇಲೆ ಇರುವ ಅಭಿಮಾನ ನೋಡಿ ಸಂತೋಷವಾಯಿತು ಸದಸ್ಯರೆಲ್ಲರು ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರೋತ್ಸಾಹ ನೀಡುವುದರೊಂದಿಗೆ ನಮ್ಮ ಹಲವಾರು ಯೋಜನೆ ಮತ್ತು ಯೋಚನೆಗಳ ಕನಸು ನನಸಾಗಲು ತಾವೆಲ್ಲರು ಸಹಕಾರ ನೀಡಬೇಕು. ಮಹಿಳೆಯರು ಸಕ್ರಿಯವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮಗೆ ಪರಿಚಯ ಇರುವ ಕುಂದಾಪುರ ಬಿಲ್ಲವ ಮಹಿಳೆಯರನ್ನು ಸಂಘಕ್ಕೆ ಪರಿಚಯಿಸುವುದರೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸು ವಂತೆ ಅವರಿಗೆ ಮನವರಿಕೆ ಮಾಡಬೇಕು ಇಂದು ಸಾಧನಶೀಲ ಮಹಿಳೆಯರ ಸಾಧನೆಗಳನ್ನು ಮೆಲಕು ಹಾಕಿ ಮಹಿಳಾ ದಿನಾಚರಣೆ ಆಚರಿಸುವುದರೊಂದಿಗೆ ಅವರ ಸಾಧನೆಗಳು ನಿಮಗೆಲ್ಲ ಸ್ಫೂರ್ತಿ ಆಗಲಿ ಎಂದು ನುಡಿದರು.

ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಮಹಿಳಾ ಸಮಿತಿಯ ಮಲ್ಲಿಕಾ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ ಮತ್ತು ನಾಗರತ್ನ ಎನ್. ಪೂಜಾರಿ ಪ್ರಾರ್ಥಿಸಿದರು
ವೇದಿಕೆಯಲ್ಲಿ ಸಭಾಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಉದ್ಘಾಟಕರಾದ ಶಕುಂತಲಾ ಎ. ಪೂಜಾರಿ, ಮುಖ್ಯ ಅತಿಥಿಗಳಾದ ಯಶೋದಾ ಎನ್. ಪೂಜಾರಿ, ಗಿರಿಜಾ ಚಂದ್ರಶೇಖರ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಧ್ಯಕ್ಷ ಶ್ರೀಧರ ವಿ. ಪೂಜಾರಿ ಉಪಸ್ಥಿತರಿದ್ದರು.

ಸಂಘದ ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರೆ ಮಹಿಳಾ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ವೇದಿಕೆಯ ಗಣ್ಯರಿಗೆ ಪುಷ್ಪಗುಚ್ಛ ನೀಡಿ ಗೌರವಿಸಿದರು. ಮಹಿಳಾ ಸಮಿತಿಯ ಕಾರ್ಯದರ್ಶಿ ಗಿರಿಜಾ ಬಿ.. ಪೂಜಾರಿ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರೆ ಯುವ ಅಭ್ಯುದಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷೆ ಜಯಶ್ರೀ ಎ. ಕೋಡಿ ವಿಜೇತರ ಯಾದಿ ವಾಚಿಸಿದರು ಮಹಿಳಾ ಸಮಿತಿಯ ಜತೆ ಕಾರ್ಯದರ್ಶಿ ಶಾರದಾ ಬಿ. ಪೂಜಾರಿ ವಂದಿಸಿದರು. ಉಪಕಾರ್ಯಾಧ್ಯಕ್ಷೆಯರಾದ ಯಶೋದಾ ಎಸ್. ಪೂಜಾರಿ, ರೇಖಾ ಎನ್. ಬಿಲ್ಲವ, ಜೊತೆ ಕಾರ್ಯದರ್ಶಿಗಳಾದ ಕುಸುಮ ಎ. ಪೂಜಾರಿ, ಶಾರದಾ ಬಿ. ಪೂಜಾರಿ, ಮಾಜಿ ಕಾರ್ಯಾಧ್ಯಕ್ಷೆ ಬೇಬಿ ಆರ್. ಪೂಜಾರಿ, ಸದಸ್ಯರಾದ ಸುಮತಿ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ, ಸುಶೀಲ ಎಸ್. ಪೂಜಾರಿ, ಗಿರಿಜಾ ಕೆ. ಹೊಕ್ಕೋಳಿ, ವಿಜಯಾ ಎಮ್. ಚಂದನ್, ಕಮಲ ಎಮ್. ಪೂಜಾರಿ ಮತ್ತು ನಾಗರತ್ನ ಎನ್. ಪೂಜಾರಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದರು. ಯುವ ಅಭ್ಯುದಯ ಸಮಿತಿಯ ಆಯೋಜನೆಯಲ್ಲಿ ಸೂಪರ್ ಮಿನಿಟ್ ಗೇಮ್ಸ್ ಆಯೋಜಿಸಿದ್ದು ವಿಜೇತರಿಗೆ ಬಹುಮಾನ ವಿತರಿಸಲಾಯಿತು