April 2, 2025
ಮುಂಬಯಿ

ತುಳು ಸಂಘ, ಬೋರಿವಲಿ, 13ನೇ ವಾರ್ಷಿಕೋತ್ಸವ,  ಸಾಂಸ್ಕೃತಿಕ ವೈಭವ, ಸನ್ಮಾನ

ವರದಿ : ಈಶ್ವರ ಎಂ. ಐಲ್ , ಚಿತ್ರ : ದಿನೇಶ್ ಕುಲಾಲ್

 ಮುಂಬಯಿ : ಮಹಾನಗರದಲ್ಲಿ ತುಳು ಸಂಘಟನೆಗಳು ಇನ್ನೂ ಇರಬಹುದು. ಹೊಸ ಸಂಘಟನೆಯು  ಹುಟ್ಟುವುದರಿಂದ ಯಾವುದೇ ಮಾರಕವಿಲ್ಲ. ಎಲ್ಲರಲ್ಲೂ ವಿವಿಧ ರೀತಿಯ ಪ್ರತಿಭೆಗಳಿದೆ. ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡಲು ಇಂತಹ ಸಂಘಟನೆಗಳು ಸಹಕಾರಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸುಮಾರು ಹದಿಮೂರು ವರ್ಷಗಳ ಹಿಂದೆ ಜಾತಿ ಬೇದವಿಲ್ಲದೆ ಬೋರಿವಲಿ ಪರಿಸರದಲ್ಲಿ ನೆಲೆಸಿದ ಕರಾವಳಿಯ ತುಳು ಕನ್ನಡಿಗರನ್ನು ಒಗ್ಗೂಡಿಸಿ ಸಾಂಸ್ಕೃತಿಕ ವೈಭವ ದಂತಹ ಕಾರ್ಯಕ್ರಮವನ್ನು ನಡೆಸಿ ನಾಡಿನ ಬಾಷೆ ಸಂಸ್ಕೃತಿಯನ್ನು ಉಳಿಸಲು ತುಳು ಸಂಘ, ಬೋರಿವಲಿಯ ಸ್ಥಾಪನೆಯಾಯಿತು ಎಂದು ತುಳು ಸಂಘ, ಬೋರಿವಲಿಯ ಗೌರವ ಅಧ್ಯಕ್ಷ ಡಾ. ವಿರಾರ್ ಶಂಕರ್ ಬಿ. ಶೆಟ್ಟಿ ತಿಳಿಸಿದರು.

 ತುಳು ಸಂಘ, ಬೊರಿವಲಿಯ 13ನೇ  ವಾರ್ಷಿಕೋತ್ಸವ  ಸಮಾರಂಭವು ಮಾ. 23 ರಂದು ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, ಬೋರಿವಲಿ (ಪ.) ಮುಂಬಯಿ ಇಲ್ಲಿ  ಜರಗಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ  ಅವರು ನಮ್ಮ ಸಂಸ್ಕೃತಿ ಉಳಿಯಲು ಇಂತಹ ಸಂಘ ಸಂಸ್ಥೆಗಳು ಕಾರಣ. ಸಂಘದ ಮಹಿಳಾ ಸದಸ್ಯರು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದು, ಮಹಿಳೆಯರು ಕ್ರೀಯಾಶೀಲವಾಗಿರುವ ಸಂಘಟನೆಗೆ ಉತ್ತಮ ಭವಿಷ್ಯವಿದೆ. ಸಂಘ ಸಂಸ್ಥೆಗಳು ಉತ್ತಮ ಕೆಲಸ ಮಾಡಿದಲ್ಲಿ ಅದಕ್ಕೆ ದಾನ ರೂಪದಲ್ಲಿ ಸಹಕರಿಸುವವರು ಅನೇಕರಿದ್ದಾರೆ. ಈ ಸಂಘವನ್ನು ನಾವೆಲ್ಲರೂ ಸೇರಿ ಇನ್ನೂ ಬೆಳೆಸೋಣ ಎಂದರು.

 ತುಳು ಸಂಘ, ಬೋರಿವಲಿಯ ಅಧ್ಯಕ್ಷರಾದ ಕರುಣಾಕರ ಎಂ. ಶೆಟ್ಟಿಯವರು ಅತಿಥಿಗಳನ್ನು ಹಾಗೂ ಸೇರಿದ ಎಲ್ಲಾ ತುಳು ಅಭಿಮಾನಿಗಳನ್ನು ಸ್ವಾಗತಿಸುತ್ತಾ ಸಂಘದ ಮಾಜಿ ಅಧ್ಯಕ್ಷರುಗಳಾದ ವಾಸು ಪುತ್ರನ್ ಮತ್ತು ಪ್ರಕಾಶ್ ಶೆಟ್ಟಿ ಪೇಟೆಮನೆ ಇವರ ನೇತೃತ್ವದಲ್ಲಿ ಹಿಂದೆಯೂ ತುಳು ಸಂಘವು ಪರಿಸರದ ವಿವಿಧ ಸಮುದಾಯದ ತುಳು ಕನ್ನಡ ಬಾಂಧವರನ್ನು ಸೇರಿಸಿ ತುಳು ಬಾಷೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಿದ್ದು ಇದನ್ನು ನಾವು ಮುಂದುವರಿಸುತ್ತಿದ್ದೇವೆ.  ವಿರಾರ್ ಶಂಕರ್ ಶೆಟ್ಟಿ, ಸಂಸದರಾದ ಗೋಪಾಲ್ ಶೆಟ್ಟಿ, ಪ್ರದೀಪ್ ಶೆಟ್ಟಿ ಮೊದಲಾದ ಗಣ್ಯರ ಮಾರ್ಗದರ್ಶನ ತುಳು ಸಂಘ, ಬೋರಿವಲಿ ಗೆ ನಿರಂತರವಾಗಿದೆ ಎಂದರು.

 ಗಣ್ಯರಿಂದ ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರಸ್ವತಿ ರಾವ್ ಪ್ರಾರ್ಥನೆ ಮಾಡಿದರು.

ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಯವರು ಮಾತನಾಡುತ್ತಾ ತುಳು ಸಂಘ, ಬೋರಿವಲಿ ಯ 13ನೇ ವಾರ್ಷಿಕೋತ್ಸವ ಸಮಾರಂಭಕ್ಕೆ ನನಗೆ ಮುಖ್ಯ ಅತಿಥಿಯ ಸ್ಥಾನ ನೀಡಿ ಗೌರವಿಸಿದ್ದಾರೆ. ತುಳುವತು  ದೊಡ್ಡ ಮನಸ್ಸನ್ನು ಹೊಂದಿದವರು. ಮಹಿಳೆಯರಿಗೆ ಎಲ್ಲಿ  ಸ್ಥಾನ ಮಾನ ನೀಡುತ್ತಾರೋ ಅಲ್ಲಿ ದೇವರು ನೆಲೆಸುತ್ತಾರಂತೆ. ಮಹಿಳೆಯರಿಗೆ ಯಾವಾಗಲೂ ಸ್ಥಾನ ಮಾನ ಇರಲಿ.  ಸಂಘದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿದೆ. ದಾನ ಮಾಡುವ ಕೈ ಶ್ರೇಷ್ಠ. ಜಾತಿ ಬೇದವಿಲ್ಲದೆ ನಿಸ್ವಾರ್ಥ ಸೇವೆ ಮಾಡುವುದೇ ದೇವರ ಕೆಲಸ. ಅದು ತುಳುವರ ಮನಸ್ಸು ಎಂದರು.  

ಗೌರವ ಅತಿಥಿ ಉದ್ಯಮಿ ಹಾಗೂ ಕನ್ನಡ ಸಂಘ ಸೂರತ್ ಇದರ ಮಾಜಿ ಅದ್ಯಕ್ಷ ರಾಧಾಕೃಷ್ಣ ಶೆಟ್ಟಿ,  ಯವರು ಮಾತನಾಡುತ್ತಾ ತುಳು ಬಾಷೆ  ಹಾಗು ತುಳು ಜನರು ಎಂದರೆ ನನಗೆ ಬಹಳ ಪ್ರೀತಿ. ತುಳು ಜನರನ್ನು ಎಷ್ಟೂ ಹೊಗಳಿದರೂ ಕಡೀಮೆ. ತುಳುವರು ಶ್ರಮ ಜೀವಿಗಳು. ಎಲ್ಲಾ ಕ್ಷೇತ್ರಗಳಲ್ಲಿ ನಾವಿದ್ದು ನಮ್ಮವರು ಸಾಧಕರು. ಪ್ರಯತ್ನ ಮಾಡಿದಲ್ಲಿ ಯಾವುದೂ ಅಸಾಧ್ಯವಲ್ಲ. ನಮ್ಮ ನಾಡು ಇಂದು ಬಹಳ ಅಭಿವೃದ್ದಿಯಾಗಿರುದಕ್ಕೆ ಶೈಕ್ಷಣಿಕ ವಾಗಿ ನಮ್ಮವರು ಶ್ರೀಮಂತರಾಗಿರುವುದೂ ಕಾರಣ. ತುಳು ನಾಡಿನ ಮಣ್ಣಿನಲ್ಲಿ ವಿಶೇಷತೆಯಿದೆ. ಪಾಲಕರು ಮಕ್ಕಳೊಂದಿಗೆ ಹೆಚ್ಚಿನ ಕಾಲ ಕಳೆಯುತ್ತಾ ನಮ್ಮ ಸಂಸ್ಕೃತಿಯನ್ನು ಅವರಿಗೂ ತಿಳಿಸುವಂತಾಗಬೇಕು ಎಂದರು.

ಇನ್ನೋರ್ವ ಗೌರವ ಅತಿಥಿ,  ಭಾರತ್ ಬ್ಯಾಂಕ್ ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಮಾತನಾಡುತ್ತಾ ಸಂಘಟನೆಯು ಸ್ಥಾಪನೆಯಾಗುವಾಗ ಕೆಲವು ಉದ್ದೇಶಗಳನ್ನು ಹೊಂದಿರುತ್ತದೆ. ತುಳು ನಾಡಿನ ಜನರು ಒಂದಾಗಿ ತುಳು ನಾಡಿನ ಸಂಸ್ಕಾರವನ್ನು ಉಳಿಸಿ ಬೆಳೆಸಲು ತುಳು ಸಂಘ ಸಂಸ್ಥೆಗಳ ಅಗತ್ಯವಿದೆ. ಹಿರಿಯರು ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಪಾಲ್ಗೊಳ್ಳು ವಂತೆ ಕಿರಿಯರನ್ನು ಇಂತಹ ಸಮಾರಂಭಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದಲ್ಲಿ ಮುಂದೆ ತುಳು ನಾಡಿನ ಸಂಸ್ಕೃತಿ ಸಂಸ್ಕಾರ ಖಂಡಿತವಾಗಿಯೂ ಉಳಿಯುತ್ತದೆ ಎಂದರು.

ಸಾಂಸ್ಕೃತಿಕ ಕಾರ್ಯಮದ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಾಸಕಿ ಮನೀಶಾ ಚೌದರಿ  ಸಮಾರಂಭಕ್ಕೆ ಶುಭ ಕೋರಿದರು.

ಬೋರಿವಲಿ ಪಶ್ಚಿಮ ಜಯರಾಜ್ ನಗರದ ಮಹಿಷ ಮರ್ಧಿನಿ ದೇವಸ್ಥಾನದ ಆಡಳಿತ ಟ್ರಷ್ಟಿ ಪ್ರದೀಪ್ ಸಿ. ಶೆಟ್ಟಿ ಮತ್ತು ತುಳು-ಕನ್ನಡ ಸಾಹಿತಿ, ಕವಿ ಸೀಮಂತೂರು ಚಂದ್ರಹಾಸ ಸುವರ್ಣ  ದಂಪತಿಯನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಅಲ್ಲದೆ ಕಳೆದ ಮೂರು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿ ಸೇವೆ ಮಾಡುತ್ತಿರುವ ಕರುಣಾಕರ ಎಂ. ಶೆಟ್ಟಿ ದಂಪತಿಯನ್ನು  ಗಣ್ಯರು ಗೌರವಿಸಿದರು. ಸನ್ಮಾನಿತರನ್ನು ಪ್ರವೀಣ್ ಅರ್. ಶೆಟ್ಟಿ ಮತ್ತು ಪೇಟೆಮನೆ ಪ್ರಕಾಶ್ ಶೆಟ್ಟಿ ಪರಿಚಯಿಸಿದ್ದು, ಅತಿಥಿಗಳನ್ನು ಲಕ್ಷ್ಮೀ ದೇವಾಡಿಗ, ನ್ಯಾ. ರಾಘವ ಎಂ., ಮತ್ತು ಕೃಷ್ಣರಾಜ್ ಸುವರ್ಣ ಪರಿಚಯಿಸಿದರು.

ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರೇಮನಾಥ ಶೆಟ್ಟಿ ಕೊಂಡಾಡಿ,  ಮಾಜಿ ಕಾರ್ಯಾಧ್ಯಕ್ಷ ನಿಟ್ಟೆ ಎಂ. ಜಿ. ಶೆಟ್ಟಿ, ಮಹಿಳಾ ವಿಭಾಗದ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಶೈಲಜಾ ಅಮರನಾಥ್ ಶೆಟ್ಟಿ, ಡಾ. ಪಿ. ವಿ. ಶೆಟ್ಟಿ, ಮುಂಡಪ್ಪ ಪಯ್ಯಡೆ,  ಉಷಾ ಗೋಪಾಲ್ ಶೆಟ್ಟಿ,  ರತಿ ಶಂಕರ್ ಶೆಟ್ಟಿ, ಡಾ. ಹರೀಶ್ ಶೆಟ್ಟಿ, ಡಾ. ಸತೀಶ್ ಶೆಟ್ಟಿ, ಭಾರತ್ ಭ್ಯಾಂಕಿನ ನಿರ್ದೇಶಕರಾದ ಭಾಸ್ಕರ ಸಾಲ್ಯಾನ್ , ಮಾಜಿ ನಿರ್ದೇಶಕ ಪ್ರೇಮನಾಥ ಕೋಟ್ಯಾನ್, ಹರೀಶ್ ಪೂಜಾರಿ, ಪ್ರಭಾಕರ ಶೆಟ್ಟಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 ಅಭಿನಯ ಮಂಟಪದ ಕಲಾವಿದರಿಂದ, ಕರುಣಾಕರ ಕೆ. ಕಾಪು ನಿರ್ದೇಶನದ “ಕಲ್ಕುಡ – ಕಲ್ಲುರ್ಟಿ”, ತುಳು ನಾಟಕ, ಕುಣಿತ ಭಜನೆ,  ಸಂಘದ ಸದಸ್ಯರಿಂದ,  ಮಕ್ಕಳಿಂದ ನೃತ್ಯ ಹಾಗೂ ರಜಿತ್ ಸುವರ್ಣ ಬಳಗದವರಿಂದ ಕವಾಲಿ ಕಾರ್ಯಕ್ರಮಗಳು ತುಳು ಕನ್ನಡಿಗರಿಂದ ತುಂಬಿದ ಸಭಾಂಗಣದಲ್ಲಿ ನಡೆಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಗೌರವ ಅತಿಥಿಗಳಾದ ಕನ್ನಡ ಸಂಘ ಸೂರತ್ ನ ಮಾಜಿ ಅದ್ಯಕ್ಷ, ಉದ್ಯಮಿ ರಾಧಾಕೃಷ್ಣ ಶೆಟ್ಟಿ, ಭಾರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ,  ತುಳು ಸಂಘ, ಬೋರಿವಲಿ ಯ ಉಪಾಧ್ಯಕ್ಷ ಹರೀಶ್ ಮೈಂದನ್, ಪ್ರಧಾನ ಕಾರ್ಯದರ್ಶಿ ರಜಿತ್ ಸುವರ್ಣ,  ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮ ವೈದ್ಯ, ಉಪ ಕಾರ್ಯಾಧ್ಯಕ್ಷೆ ಶೋಭಾ ಎಸ್. ಶೆಟ್ಟಿ,  ಕಾರ್ಯದರ್ಶಿ ಲಕ್ಷ್ಮಿ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷೆ, ಕುಸುಮ ಬಿ. ಶೆಟ್ಟಿ, ಉಪಕಾರ್ಯಾಧ್ಯಕ್ಷೆ ಕಸ್ತೂರಿ ಎಸ್. ಶೆಟ್ಟಿ, ಕಾರ್ಯದರ್ಶಿ ಸುನಂದ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ  ಪ್ರವೀಣ್ ಅರ್. ಶೆಟ್ಟಿ, ಸದಸ್ಯತನ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆ ಜಯಂತಿ ಶೆಟ್ಟಿ ಉಪಸ್ಥಿತರಿದ್ದರು.

 ಸಾಂಸ್ಕೃತಿಕ ಕಾರ್ಯಕ್ರಮವನ್ನು ನ್ಯಾ. ರಾಘವ ಎಂ., ನಿರೂಪಿಸಿದ್ದು, ಸಭಾ ಕಾರ್ಯಕ್ರಮವನ್ನು ಸಚಿನ್ ಪೂಜಾರಿ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ  ಪ್ರವೀಣ್ ಅರ್. ಶೆಟ್ಟಿ ನಿರ್ವಹಿಸಿದರು. 

 

Related posts

ಕುಮಾರಕ್ಷತ್ರಿಯ ಸಂಘ ವಾರ್ಷಿಕ ಸ್ನೇಹ ಸಮ್ಮಿಲನ, ಧಾರ್ಮಿಕ ಕಾರ್ಯಕ್ರಮ.

Mumbai News Desk

ಮಲಾಡ್ : ತಥಾಸ್ತು ಫೌಂಡೇಶನ್ ಅಯ್ಯಪ್ಪ ಭಕ್ತ ವೃಂದದ 20 ನೇ ವರ್ಷದ ವಾರ್ಷಿಕ ಅಯ್ಯಪ್ಪ

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) ಪಾಲ್ಘರ್ ಬೊಯಿಸರ್ ವಿಭಾಗದವರಿಂದ ಸ್ನೇಹ ಸಮ್ಮಿಲನ.

Mumbai News Desk

ಜಗಜ್ಯೋತಿ ಕಲಾವೃಂದ, ಮುಂಬಯಿ ಇದರ 38 ನೇ ವಾರ್ಷಿಕೋತ್ಸವ ಮತ್ತು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ

Mumbai News Desk

ಗೋವಂಡಿ ಬೈಂಗನ್‌ವಾಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರದ 46 ನೇ ವಾರ್ಷಿಕೋತ್ಸವ

Mumbai News Desk

ಟೆಂಡರ್ ಫ್ರೆಶ್ ಐಸ್ಕ್ರೀಂಮ್ ಗೆ ಟೈಮ್ಸ್ ಆಫ್ ಇಂಡಿಯಾ ಪ್ರಶಸ್ತಿ.

Mumbai News Desk