
ಚಿತ್ರ,ವರದಿ -ಉಮೇಶ್ ಕೆ.ಅಂಚನ್.
ವೀರಕೇಸರಿ ಮೀರಾಭಾಯಂದರ್ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಸಂಸ್ಥೆಯು ವಯೋಮಿತಿಗನುಸಾರವಾಗಿ ಆಯೋಜಿಸಿದ್ದ ರಾಮಾಯಣ ಪರೀಕ್ಷೆಯಲ್ಲಿ ಉತ್ತೀರ್ಣರಾದ ಹಾಗೂ ಭಾಗವಹಿಸಿದವರಿಗೆ ಅಭಿನಂದನಾ ಪತ್ರ ಹಾಗೂ ಬಹುಮಾನ ನೀಡುವ ಸಮಾರಂಭವು ಮಾ.24ರಂದು ಕುಣಿತ ಭಜನಾ ಸ್ಪರ್ಧೆಯೊಂದಿಗೆ ಭಾಯಂದರ್ ಪೂರ್ವದ ಸೈಂಟ್ ಅಗ್ನಿಸ್ ಇಂಗ್ಲಿಷ್ ಶಾಲಾ ಸಭಾಗ್ರಹದಲ್ಲಿ ನಡೆಯಿತು.




ಅತಿಥಿಗಳಾಗಿ ವಿದ್ವಾನ್ ರಾಧಾಕೃಷ್ಣ ಭಟ್, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಮಹಾರಾಷ್ಟ್ರ ಹೋಟೆಲ್ ಫೆಡರೇಶನ್ ಇದರ ಅದ್ಯಕ್ಷ ವಿರಾರ್ ಶಂಕರ್ ಬಿ.ಶೆಟ್ಟಿ, ಮೀರಾ ಭಾಯಂದರ್ 145ನೇ ವಿಧಾನಸಭಾ ಅದ್ಯಕ್ಷ ನ್ಯಾಯವಾದಿ ರವಿ ವ್ಯಾಸ್, ರೈ ಸುಮತಿ ಎಜ್ಯುಕೇಶನ್ ಟ್ರಸ್ಟಿನ ಕಾರ್ಯಾಧ್ಯಕ್ಷ ಡಾ.ಅರುಣೋದಯ ಎಸ್.ರೈ,ಭಾರತೀಯ ರಕ್ಷಣಾ ಸಂಸ್ಥೆಯ ಸದಸ್ಯ ಡಾ.ಹರೀಶ್ ಶೆಟ್ಟಿ , ಬಿಜೆಪಿ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ನವತರುಣ ಮಿತ್ರ ಮಂಡಳಿಯ ಅಧ್ಯಕ್ಷ ಯೋಗೀಶ್ ಗಾಣಿಗ,ನಲಸೊಪರ ವಿರಾರ್ ಕನ್ನಡ ಸಂಘದ ಅಧ್ಯಕ್ಷ ಗುರುಸ್ವಾಮಿ ಸದಾಶಿವ ಕರ್ಕೇರ, ಶ್ರೀ ನಿತ್ಯಾನಂದ ಸೇವಾ ಸಮಿತಿ ಮೀರಾಭಾಯಂದರ್ ಇದರ ಅದ್ಯಕ್ಷ ಗೋಪಾಲಕೃಷ್ಣ ಗೋವಿಂದ ಗಾಣಿಗ, ಮೀರಾ ದಹಾಣು ಬಂಟ್ಸ್ ಇದರ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಮುಕೇಶ್ ಶೆಟ್ಟಿ ವಿರಾರ್, ಬಿಜೆಪಿ ಕಾರ್ಯಕರ್ತೆ ರಂಜನಾ ಕಟಾವಟೆ ಹಾಗೂ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್ .ಶೆಟ್ಟಿ ಆಗಮಿಸಿದ್ದರು.




ಈ ಸಂಧರ್ಭದಲ್ಲಿ ಸಮಾಜ ಸೇವಕಿಯರಾದ ಸುಜಾತಾ ಜಿ ಶೆಟ್ಟಿ ಮತ್ತು ರೇಖಾ ಆರ್ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ವಿಕಲಾಂಗ ಮಗು ಶೌರ್ಯ ಲೋಕೇಶ್ ಶೆಟ್ಟಿಗೆ ವೈದ್ಯಕೀಯ ನೆರವು ನೀಡಲಾಯಿತು.ಪರಿಸರದ ಸಂಘಸಂಸ್ಥೆಗಳ ಪದಾಧಿಕಾರಿಗಳನ್ನು , ಸಂಸ್ಥೆಗೆ ಸಹಕರಿಸಿದ್ದ ದಾನಿಗಳನ್ನು ಸತ್ಕರಿಸಲಾಯಿತು.




ವಿಜಯ ಶೆಟ್ಟಿ ಮೂಡುಬೆಳ್ಳೆ ಸಂಗಡಿಗರಿಂದ ಭಕ್ತಿಮಯ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಅಧ್ಯಕ್ಷ ಕುಂಬ್ಳೆ ಹರೀಶ್ ರೈ ಸಂಸ್ಥೆಯ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿ ಸ್ವಾಗತಿಸಿದರು. ರಂಗನಟ ಜಿ.ಕೆ ಕೆಂಚನಕೆರೆ ಕಾರ್ಯಕ್ರಮ ನಿರೂಪಿಸಿದರು.ಕುಣಿತ
ಭಜನಾ ಸ್ಪರ್ಧೆಯನ್ನು ವಿಜಯ್ ಶೆಟ್ಟಿ ಮೂಡುಬೆಳ್ಳೆ,ರಾಜೇಶ್ ಶೆಟ್ಟಿ ಕಾಪು ಹಾಗೂ ಜಗದೀಶ್ ಶೆಟ್ಟಿ ಪಂಜಿನಡ್ಕ ಅಚ್ಚುಕಟ್ಟಾಗಿ ನಿರ್ವಹಿಸಿದರು.
ವೀರಕೇಸರಿ ಮೀರಾ ಭಾಯಂದರಿನ ಸರ್ವ ಸದಸ್ಯರ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಿಂದ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮೂಡಿಬಂತು.