
ಥಾಣೆ ಮಾ26. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಮುಂಬೈ ಮಹಾರಾಷ್ಟ್ರ ಘಟಕದ ಹಿರಿಯ ಸದಸ್ಯರೂ, ಹಲವಾರು ವರ್ಷಗಳಿಂದ ಗುರುಸೇವೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡ ಥಾಣೆ ಪಶ್ಚಿಮದ ಲೋಕಮಾನ್ಯ ನಗರ ರಸ್ತೆ ಯ ಪಂಕ್ತಿ ಕೋ-ಆಪ್ ಎಚ್‌ಎಸ್‌ಜಿ ಸೊಸೈಟಿ ನಿವಾಸಿ ಜಯರಾಮ ಸಾಂತ( 65) ಇವರು ಮಾ26 ರಂದು ನಿಧಾನವಾಗಿದ್ದಾರೆ.
ಮೂಲತ ಬಾಕ್ರಬೈಲ್ ಅರವರ ಮನೆಯವರು. ಮೃತರ ಪತ್ನಿ ಜ್ಯೋತಿ ಜೆ ಶೆಟ್ಟಿ ಮಗ ಚೇತನ್,ಮಗಳು ಚೈತ್ರಾ ಎಚ್ ಶೆಟ್ಟಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ,
ಜಯರಾಮ ಸಾಂತ ಇವರ ಅಕಾಲಿಕ ಅಗಲುವಿಕೆಗೆ ಪೂಜ್ಯ ಒಡಿಯೂರು ಶ್ರೀಗಳವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಮತ್ತು ಪತ್ನಿ, ಮಕ್ಕಳು ಹಾಗೂ ಕುಟುಂಬಿಕರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲೆಂದು ಆರಾಧ್ಯಮೂರ್ತಿ ಶ್ರೀ ದತ್ತಾಂಜನೇಯ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಗುರುದೇವ ಸೇವಾ ಬಳಗ ಮಹಾರಾಷ್ಟ್ರ ಘಟಕದ ಅಧ್ಯಕ್ಷ ದಾಮೋದರ್ ಶೆಟ್ಟಿ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ. ವಾಮಯ್ಯ ಶೆಟ್ಟಿ ಚೆಂಬೂರು, ಮೋಹನ್ ಹೆಗ್ಡೆ ಥಾಣೆ. ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಮುಂಬೈ ಘಟಕದ ಕಾರ್ಯ ಧ್ಯಕ್ಷೆ ಶ್ವೇತ ಸಿ ರೈ ಮಾಜಿ ಕಾರ್ಯಾಧ್ಯಕ್ಷೆ ರೇವತಿ ವಿ ಶೆಟ್ಟಿ, ಮತ್ತಿತರ ಪದಾಧಿಕಾರಿಗಳು, ಥಾಣೆಯ ಒಡಿಯೂರು ಬಳಗದ ಸದಸ್ಯರು ದುಃಖ ಸಂತಾಪ ಸೂಚಿಸಿರುವರು