
ಉಡುಪಿ :ದೊಡ್ಡನ ಗುಡ್ಡಯ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳಲಿರುವ ವೇದ ಮಾತೆ ಗಾಯತ್ರಿ ದೇವಿಯ ಶಿಲಾಮಯ ಗುಡಿಗೆ ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವವು ಕ್ಷೇತ್ರದ ಧರ್ಮದ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಭಕ್ತರ ಸಮಕ್ಷಮದಲ್ಲಿ ಋತ್ವಿಜರ ಸಹಕಾರದೊಂದಿಗೆ ಬಹು ಸಂಭ್ರಮದಿಂದ ಸಂಪನ್ನಗೊಂಡಿತು..
ಪ್ರಾತಃಕಾಲ ಸಗ್ರಿ ವೇದವ್ಯಾಸ ಐತಾಳ್ ಅವರು ರುದ್ರಯಾಗದ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸುವುದರೊಂದಿಗೆ ಯಾಗಕ್ಕೆ ಚಾಲನೆಯನ್ನು ನೀಡಿದರು.
ವೇದಮೂರ್ತಿ ಕೊಲಕಾಡಿ ವಾದಿರಾಜ ಉಪಾಧ್ಯಾಯ ಅವರು ರುದ್ರ ಯಾಗವನ್ನು ನೆರವೇರಿಸಿದರು.. ವೇದಮೂರ್ತಿ ಗಣೇಶ್ ಸರಾಳಯ ಅವರು ಸಾಂಕೇತಿಕ ವಾಸ್ತು ಪೂಜೆ ಸಹಿತ ನಿಧಿ ಕುಂಭ ಪ್ರತಿಷ್ಠಾಪನ ಪೂಜಾ ವಿಧಿ ವಿಧಾನ ನೆರವೇರಿಸಿದರು…
ಶ್ರೀ ರಮಾನಂದ ಗುರೂಜಿಯವರು ನಿಧಿ ಕುಂಭ ಪ್ರತಿಷ್ಠಾಪಿಸಿದರು..
ಕ್ಷೇತ್ರದ ಭಕ್ತರುಗಳು ಶಿಲಾ ಕುಂಬದಲ್ಲಿ ಚಿನ್ನ ಬೆಳ್ಳಿ ನವರತ್ನ ಪಂಚರತ್ನ ಹಾಗೂ ವಿವಿಧ ಆಭರಣಗಳನ್ನು ತಮ್ಮ ಕೈಯಿಂದಲೇ ಸಮರ್ಪಿಸಿದರು.
ವೇದ ಮಾತೆ ಗಾಯತ್ರಿ ದೇವಿಯ ಪ್ರತಿಷ್ಠಾಪನ ಪೂರ್ವ ಪ್ರಾಯಶ್ಚಿತ್ತವಾಗಿ ಸಂಪನ್ನಗೊಂಡ ರುದ್ರಯಾಗದಲ್ಲಿ ಕಳತ್ತೂರು ಅಶೋಕ್ ತಂತ್ರಿ, ಶ್ರೀವಸ್ತಾ, ರಿಷಿಕೇಶ್ಐತಾಳ ವರದರಾಜ ಐತಾಳ, ದೆಂದಡ್ಕ ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್ ಶೃಂಗೇರಿ, ಆದರ್ಶ ಸಾಮಗ, ಸ್ವಸ್ತಿಕ್ ಆಚಾರ್ಯ ಹಾಗೂ ನಾಗಶಯನ, ಅನಿಶಾಚಾರ್ಯ ಅವರು ಸಹಕರಿಸಿದರು.. ದೇವಿಯನ್ನು ವಿಶೇಷವಾಗಿ ಕ್ಷೇತ್ರದ ಆನಂದಬಾರಿ ಅವರು ಅಲಂಕರಿಸಿದ್ದರು. ಯಾಗದ ಪ್ರಯುಕ್ತ ಬ್ರಾಹ್ಮಣ ಸುವಾಸಿನಿ ಆರಾಧನೆ ಬ್ರಾಹ್ಮಣರಾಧನೆ ನೆರವೇರಿತು.. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನೆರವೇರಿತು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ