ಉಡುಪಿ, ಕಾಪು ತಾಲೂಕಿನ ಇನ್ನಂಜೆಯ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವಾದಿಗಳು ಸ್ವಸ್ತಿ ಶ್ರೀ ಶೋಭಕೃತು ನಾಮ ಸಂವತ್ಸರದ ಮೀನ ಮಾಸ ದಿನ 29 ಸಲುವ ಚೈತ್ರ ಶುದ್ಧ ಚತುರ್ಥಿ ದಿನಾಂಕ 12.04.2024 ನೇ ಶುಕ್ರವಾರ ಮೊದಲ್ಗೊಂಡು ದಿನಾಂಕ 16.04.2024ನೇ ಮಂಗಳವಾರ ಶ್ರೀಮನ್ಮಹಾರಥೋತ್ಸವ ದೊಂದಿಗೆ 18.04.2024 ನೇ ಗುರುವಾರ ಪರ್ಯಂತ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ
ವೇದಮೂರ್ತಿ ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ಅಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು. ತಾವೆಲ್ಲರೂ ಈ ಪುಣ್ಯ ಕಾರ್ಯಗಳಲ್ಲಿ ಭಾಗಿಗಳಾಗಿ ತನುಮನಧನಗಳೊಂದಿಗೆ ಸಹಕರಿಸಿ, ಶ್ರೀದೇವರ ಪ್ರಸಾದಗಳನ್ನು ಸ್ವೀಕರಿಸಿ, ಶ್ರೀ ಹರಿ-ಗುರುಗಳ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಅನುವಂಶಿಕ ಮೊತ್ತೇಸರರು ಶ್ರೀನೋದವಾದಿರಾಜ ಮಠ, ಉಡುಪಿ, ಹಾಗೂ ಊರ ಹತ್ತು ಸಮಸ್ತರು, ಅಪೇಕ್ಷಿಸಿದ್ದಾರೆ.
-: ಕಾರ್ಯಕ್ರಮಗಳ ವಿವರ :-
12-04-2024 ಶುಕ್ರವಾರ – ಚತುರ್ಥಿ,
ಸಾಯಂಕಾಲ 6.00ರಿಂದ: ಫಲನ್ಯಾಸಪೂರ್ವಕ ಮುಹೂರ್ತಬಲಿ, ಅಂಕುರಾರೋಪಣ ಸಂಜೆ: 6.30 ರಿಂದ 7.30 ಶ್ರೀ ವಿಷ್ಣು ಭಗಿನಿ ಭಜನಾ ಮಂಡಳಿ ಉಂಡಾರು ಹಾಗೂ 7.30 ರಿಂದ 8.30 ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಉಂಡಾರು, ಇವರಿಂದ ಭಜನೆ. ಸಂಜೆ – 730 ರಿಂದ ಇನ್ನಂಜೆ ಯುವತಿ ಮಂಡಳಿ(ರಿ.)ಯ 12ನೇ ವಾರ್ಷಿಕೋತ್ಸವ.
ಗೀತಾ ಸಾಹಿತ್ಯ ಸಂಭ್ರಮ ಶ್ರೀ ವಿಠಲ್ ನಾಯಕ್ ಕಲ್ಲಡ್ಕ ಇವರಿಂದ
13-04-2024 ಶನಿವಾರ – ಪಂಚಮಿ,
ಮೇಷ ಸಂಕ್ರಮಣ: ಪ್ರಾತಃ 8-೦೦ಕ್ಕೆ ಧ್ವಜಾರೋಹಣ. ಸಾಯಂಕಾಲ 7-30ಕ್ಕೆ ಬಲಿ. ರಾತ್ರಿ 9-00ಕ್ಕೆ ಮಹಾರಂಗಪೂಜೆ, ಭೂತಬಲಿ,
ಸಂಜೆ: 6.30 ರಿಂದ 7.30 “ಶ್ರೀವಿಷ್ಣುವಲ್ಲಭ” ವಿಶ್ವಹಿಂದೂ ಪರಿಷತ್ ಇನ್ನಂಜೆ ಘಟಕ ಹಾಗೂ 7.30 ರಿಂದ 8.30 ಶ್ರೀ ಧೂಮಾವತಿ ಭಜನಾ ಮಂಡಳಿ ಕಲ್ಯಾಲು, ಇವರಿಂದ ಭಜನೆ. ರಾತ್ರಿ 7-00ಕ್ಕೆ ಶ್ರೀ ವಿಷ್ಣುಮೂರ್ತಿ ಹಯವದನ ಸ್ವಾಮಿ ಸಮೂಹ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಕಾರ್ಯಕ್ರಮಗಳು,
ಬಳಿಕ ಶ್ರೀ ರಾಧಾಕೃಷ್ಣ ನೃತ್ಯ ಅಕಾಡಮಿ, ಮುಂಬೈ ಇದರ ಸದಸ್ಯರಿಂದ ನೃತ್ಯ ರೂಪಕ (ನಿರ್ದೆಶನ: ವಿದುಷಿ ಸುಕನ್ಯಾ ಸುಬ್ರಹ್ಮಣ್ಯ ಭಟ್, ಉಂಡಾರು)
14-04-2024 ಭಾನುವಾರ – ಸೌರಯುಗಾದಿ – ಷಷ್ಠಿ,
ಪ್ರಾತಃ 10-30ಕ್ಕೆ ಆಶ್ಲೇಷಾ ಬಲಿ ಇತ್ಯಾದಿ
ಸಾಯಂಕಾಲ: 7-30ಕ್ಕೆ ತಪ್ಪಂಗಾಯಿ ಬಲಿ, ಕಟ್ಟೆಪೂಜೆಗಳು
ಸಂಜೆ: 6.30 ರಿಂದ 7.30 ಶ್ರೀ ನಾರಾಯಣ ಗುರು ಭಜನಾ ಮಂಡಳಿ ಇನ್ನಂಜೆ ಹಾಗೂ 730 ರಿಂದ 8.30ಕ್ಕೆ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ, ಮಡುಂಬು ಇವರಿಂದ ಭಜನೆ ರಾತ್ರಿ 7-00ಕ್ಕೆ ಶ್ರೀ ರವಿಶಂಕರ ಗುರೂಜಿ ಯವರ ಶಿಷ್ಯರಾದ ಶ್ರೀಸೂರ್ಯಪಾದ ಸ್ವಾಮೀಜಿ ಯವರಿಂದ
“ಗಾನ-ಜ್ಞಾನ-ಧ್ಯಾನದ ಸತ್ತಂಗ“
(ಸಹಯೋಗ – ಜೀವನಕಲಾ ಸಂಘ, ಇನ್ನಂಜೆ)
15-04-2024 ಸೋಮವಾರ – ಸಪ್ತಮಿ,
ಸಾಯಂಕಾಲ 7-30ಕ್ಕೆ ಬಲಿ, ಕಟ್ಟೆಪೂಜೆಗಳು
ಸಂಜೆ: 6.30 ರಿಂದ 7.30ಕ್ಕೆ ಶ್ರೀ ಅಶ್ವತ್ಥನಾರಾಯಣ ಭಜನಾ ಮಂಡಳಿ, ಮಜಲು ಹಾಗೂ 730 ರಿಂದ 8.30ಕ್ಕೆ ಶ್ರೀದೇವಿ ಭಜನಾ ಮಂಡಳಿ ಮಂಡೇಡಿ, ಇವರಿಂದ ಭಜನೆ ರಾತ್ರಿ 8.00 ಕ್ಕೆ “ರಂಗತರಂಗ” ಕಲಾವಿದರು ಕಾಪು, ಇವರಿಂದ ಹಾಸ್ಯಮಯ ತುಳು ನಾಟಕ “ಒರಿಯೇ“
ತಾ. 16-04-2024 ಮಂಗಳವಾರ-ಅಷ್ಟಮಿ,
ಮುಂಜಾನೆ: 8.30ಕ್ಕೆ ಶ್ರೀ ಶ್ರೀ ಗಳವರಿಂದ ಸಂಸ್ಥಾನ ದೇವರಿಗೆ ಮಹಾಪೂಜೆ (ಉಂಡಾರು ಮಠದಲ್ಲಿ) ಮುಂಜಾನೆ : 10-30 ಕ್ಕೆ 108 ಕಾಯಿ ಗಣಯಾಗದ ಪೂರ್ಣಾಹುತಿ 10-00 ಕ್ಕೆ ಮಹಾಪೂಜೆ 11-30ಕ್ಕೆ ರಥಾರೋಹಣ ಮಧ್ಯಾಹ್ನ: 12-30ಕ್ಕೆ ಮಹಾ ಅನ್ನಸಂತರ್ಪಣೆ
ಸಂಜೆ 5.30ಕ್ಕೆ ಶ್ರೀಮತಿ ಅಕ್ಷತಾ ದೇವಾಡಿಗ ಇವರಿಂದ ಸ್ಯಾಕ್ಲೋಫೋನ್ ವಾದನ ಸಂಜೆ: 7-00ಕ್ಕೆ ಶ್ರೀ ಭೂತರಾಜರಿಗೆ ವಿಶೇಷ ಪೂಜೆ ರಾತ್ರಿ: 7-45ಕ್ಕೆ ಶ್ರೀಮನ್ಮಹಾರಥೋತ್ಸವ,
ಮಹಾಭೂತಬಲಿ, ಶಯನೋತ್ಸವ, ಕವಾಟಬಂಧನ
ತಾ. 17-04-2024 ಬುಧವಾರ-ನವಮಿ,
ಪ್ರಾತಃ 7-00ಕ್ಕೆ ಕವಾಟೋದ್ಘಾಟನೆ
ಸಾಯಂಕಾಲ: 6-30 ರಿಂದ – ಬಲಿ, ಓಕುಳಿ, ಅವಕೃತಸ್ನಾನ – ಧ್ವಜಾವರೋಹಣ ಪೂರ್ಣಾಹುತಿ – ಮಹಾಮಂತ್ರಾಕ್ಷತೆ
ಸಂಜೆ -6.30 ರಿಂದ 7.30 – ಇನ್ನಂಜೆ ಯುವತಿಮಂಡಳಿ ಇನ್ನಂಜೆ ಹಾಗೂ 7.30 ರಿಂದ 8.30 – ಶ್ರೀ ವಿಠೋಭ ಭಜನಾ ಮಂಡಳಿ, ಗೋಳಿಕಟ್ಟಿ, ಇವರಿಂದ ಭಜನೆ. ರಾತ್ರಿ 9-00 ಕ್ಕೆ ಇನ್ನಂಜೆ ಯುವಕ ಮಂಡಳಿಯ ಸದಸ್ಯರಿಂದ ಸಾಮಾಜಿಕ ಹಾಸ್ಯ ತುಳು ನಾಟಕ “ದಾಯೆ ಇಂಚ ಮಲ್ತ“
18.04.2024 – ಗುರುವಾರ – ದಶಮಿ
ಬೆಳಗ್ಗೆ 6-00ರಿಂದ ಗಣಯಾಗ, ಮಹಾಸಂಪ್ರೋಕ್ಷಣೆ,

