
ಕಲ್ಯಾಣ್ ಎ. 6: ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇದರ 62 ನೇ ವಾರ್ಷಿಕ ಮಹೋತ್ಸವವು ಹಾಗೂ 9 ನೇ ಪ್ರತಿಷ್ಠಾ ವರ್ಧಂತಿ ಉತ್ಸವವು ಏಪ್ರಿಲ್12 -04-2024ರ ಶುಕ್ರವಾರದಿಂದ ಏಪ್ರಿಲ್ 21- 04-2024ರ ರವಿವಾರದ ತನಕ ಡೊಂಬಿವಲಿಯ ಶಂಕರ ನಾರಾಯಣ ತಂತ್ರಿ ಇವರ ಮುಂದಾಳತ್ವದಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಚಂದ್ರಕಾಂತ ಎಸ್. ಶೆಟ್ಟಿ ಮತ್ತು ಅಧ್ಯಕ್ಷರಾದ ರಾಜೇಶ್ ಜೆ. ಶೆಟ್ಟಿಯವರ ಹಾಗೂ ಕಾರ್ಯಾಕಾರಿ ಸಮಿತಿ ಮತ್ತು ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಜರಗಲಿದೆ.
ಪ್ರತಿದಿನ ನಿತ್ಯ ಪೂಜೆಗಳು ಬೆಳಿಗ್ಗೆ 8.00 ರಿಂದ, ಸಂಜೆ 6.00 ರಿಂದ ಕುಂಕುಮಾರ್ಚನೆ , ಮಹಾಪೂಜೆ 6.30 ರಿಂದ 8.30 ಭಜನಾ ಕಾರ್ಯಕ್ರಮ
12.-4-24 ಶುಕ್ರವಾರ 8.00 ಸಾಮೂಹಿಕ ಪ್ರಾರ್ಥನೆ, ಸ್ವಸ್ತಿ, ಪುಣ್ಯವಾಚನ, ಮಹಾಸಂಕಲ್ಪ, ಭದ್ರ ದೀಪ ಪ್ರಜ್ವಲನೆ,ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಹಾ ಗಣಪತಿ ಹೋಮ, ಮಹಾಪೂಜೆ, ಸಂಜೆ ಸಾಯಿ ನಿತ್ಯಾನಂದ ಭಜನಾ ಮಂಡಳಿ ಭಿವಂಡಿ, ದೇವಾನಂದ ಕೋಟ್ಯಾನ್ ಬಳಗ, ಶ್ರೀ ನಿತ್ಯಾನಂದ ಭಜನಾ ಮಂಡಳಿ ಕಲ್ಯಾಣ್ ಇವರಿಂದ ಭಜನೆ,
13-4-24 ಶನುವಾರ ಸಂಜೆ 6.30 ರಿಂದ ಕುಲಾಲ ಸಂಘ ಮುಂಬಯಿ, ಗುರು ವಂದನಾ ಭಜನಾ ಮಂಡಳಿ ಪ್ರಾದೇಶಿಕ ಸಮಿತಿ, ಥಾಣೆ, ಕಸಾರ,ಕರ್ಜತ್, ಇವರಿಂದ ಭಜನೆ,
14-4-24 ರವಿವಾರ ಸಂಜೆ 6.30 ರಿಂದ ಸ್ವರ ಕಲಾ ವೇದಿಕೆ ಕರ್ನಾಟಕ ಸಂಘ ಕಲ್ಯಾಣ್ ಇವರಿಂದ ಭಜನೆ,
15-4-24 ಸೋಮವಾರ ಸಂಜೆ 6.30 ರಿಂದ ವರದ ಸಿದ್ಧಿ ವಿನಾಯಕ ಭಜನಾ ಮಂಡಳಿ ಡೊಂಬಿವಲಿ ಇವರಿಂದ ಭಜನೆ,
16-4-24 ರ ಮಂಗಳವಾರ ಸಂಜೆ 6.30 ರಿಂದ ಗುರು ನಾರಾಯಣ ಭಜನಾ ಮಂಡಳಿ ಬಿಲ್ಲವರ ಎಸೋಸಿಯೇಷನ್ ಸ್ಥಳೀಯ ಕಚೇರಿ ಕಲ್ಯಾಣ್ ಇವರಿಂದ ಭಜನೆ,
17-4-24 ರ ಬುಧವಾರ ಶ್ರೀ ರಾಮ ನವಮಿ ನಿಮಿತ್ತ ಬೆಳಿಗ್ಗೆ 8.30 ರಿಂದ ರಾತ್ರಿ 8.30 ರ ತನಕ 12 ಗಂಟೆಗಳ ಭಜನಾ ಸೇವೆ, ಬೆಳಿಗ್ಗೆ 9.00 ಗಂಟೆಯಿಂದ ಶ್ರೀ ವಿಷ್ಣು ಸಹಸ್ರನಾಮ ಅರ್ಚನೆ, ಹೋಮ ಪಂಚಕಲಾಶ ಅಭಿಷೇಕ ಪೂಜೆ, ಶ್ರೀ ಗುರು ಪಾದುಕಾ ಪೂಹೆ, ಬಂಟರ ಸಂಘ ಭಿವಂಡಿ – ಬದ್ಲಾಪುರ ಪ್ರಾದೇಶಿಕ ಸಮಿತಿಯಿಂದ ಭಜನಾ ಸೇವೆ,
18-4&24 ರ ಗುರುವಾರ ಬೆಳಿಗ್ಗೆ 8.00 ಗಂಟೆಗೆ ಕುಮನಡ ಸಂಸ್ಕಾರ, ಆಗ್ನು, ಜನನ, ಸಂಸ್ಕಾರ, ಮಹಾಗಣಪತಿ ಹೋಮ ಪೂಜೆ, ನವಗ್ರಹಶಾಂತಿ ಸಂಜೆ 5.00 ರಿಂದ ರಾಕ್ಷೋಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ದಿಕ್ಪಾಲ ಬಲಿ, ಸಂಜೆ 6.30 ಕ್ಜೆ ಓಂ ಶಕ್ತಿ ಮಹಿಳಾ ಸಂಸ್ಥಾ ಕಲ್ಯಾಣ್ ಇವರಿಂದ ಭಜನೆ,
19-4-24 ಶುಕ್ರವಾರ ಬೆಳಿಗ್ಗೆ 9.00 ಗಂಟೆಗೆ ಮೂಕಾಂಬಿಕಾ ದೇವಿ ಸನ್ನಿದ್ಧಿಯಲ್ಲಿ ಪಂಚಾಮೃತಾಭಿಷೇಕ, 108 ಸೀಯಾಳಭಿಷೇಕ, ಮಂಜುನಾಥ ಶೆಟ್ಟಿ ಮತ್ತು ಕುಟುಂಬಸ್ಥರು ಸಾಯಿ ಶ್ರದ್ಧಾ ಕಲ್ಯಾಣ್ ಇವರಿಂದ ತುಲಭಾರ ಸೇವೆ, ನವಗ್ರಹಶಾಂತಿ, ಪಂಚವಿಶಂತಿ ಕಖಶರಾಧನೆ, ಪ್ರಧಾನ ಹೋಮ, ಶ್ರೀ ಪ್ರಸನ್ನ ಗಣಪತಿ ದೇವರಿಗೆ ನವಕಲಶರಾಧಬೆ, ಅನ್ನಸಂತರ್ಪಣೆ, ಸಂಜೆ 5.00 ಗಂಟೆಗೆ 25 ಕಲಶಾಭಿಷೇಕ ಪ್ರಧಾನ ಹೋಮ, ಅವಸ್ರುತ ಬಲಿ, ಮಹಾಪೂಜೆ, ಪಲ್ಲ ಪೂಜೆ, ಅನ್ನ ಪ್ರಸದಾ ವಿತರಣೆ ರಥಕಲಶರಾಧನೆ, ಪ್ರಧಾನ ಹೋಮ, ರಥೋತ್ಸವ ಉತ್ಸವ ಬಲಿ ರಥೋತ್ಸವ ಸೇವೆ ಕುಶಾಲ ಪಿ. ಶೆಟ್ಟಿ ಮತ್ತು ಕುಟುಂಬಸ್ಥರು ಉಲ್ಲಾಸನಗರ, ಸಾಮೂಹಿಕ ರಂಗ ಪೂಜೆ, ಮಹಾಪೂಜೆ,
20-4-24 ರ ಶನಿವಾರ ಬೆಳಿಗ್ಗೆ 6.09 ಗಂಟೆಗೆ ಸಾಮೂಹಿಕ ಚಂಡಿಕಾಯಾಗ , ಬ್ರಾಹ್ಮಣ ಸುವಾಸಿನಿ ಆರಾಧನೆ ದಂಪತಿ ಪೂಜೆ, ಮಹಾಪೂಜೆ, ಪಲ್ಲಪೂಜೆ, ಬೆಳಿಗ್ಗೆ 11.30 ಕ್ಕೆ ಧಾರ್ಮಿಕ ಸಭಾಗ್ರಹ ಕಾರ್ಯಕ್ರಮ ಮುಖ್ಯ ಅತಿಥಿಯಾಗಿ ಕಲ್ಯಾಣ್ ಲೋಕಸಭಾ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂದೆ ಉಪಸ್ಥಿತಿತರಿರುವರು ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ, ಉಲ್ಲಾಸ ನಗರ ಶಾಸಕ ಕುಮಾರ ಐಲಾನಿ, ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ, ಉಲ್ಲಾಸನಗರ ಬಿಜೆಪಿ ಅಧ್ಯಕ್ಷ ಜಮುನು ಪುರುಸ್ವಾನಿ, ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಸುರ್ಯಕಾಂತ್ ಜೆ. ಸುವರ್ಣ, ಉಪ ಶಹರ್ ಪ್ರಮುಖ ದಿಲೀಪ್ ಗಾಯಕ್ವಾಡ್, ಬಂಟರ ಸಂಘ ಭಿವಂಡಿ- ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಭೋದ್ ಭಂಡಾರಿ ಉಪಸ್ಥಿತರಿರುವರು ಇದೇ ಸಂದರ್ಭದಲ್ಲಿ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನದ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ ಮಾಜಿ ಕಾರ್ಯಾಧ್ಯಕ್ಷೆ ಪ್ರವೀಣಾ ಪಿ. ಶೆಟ್ಟಿ, ಭಜನಾ ಶಿಕ್ಷಕಿ ಅಶಾ ನಾಯ್ಕ್ ಇವರನ್ನು ಸನ್ಮಾನಿಸಲಾಗುವುದು ಮಧ್ಯಾಹ್ನ 1.00 ಅನ್ನಸಂತರ್ಪಣೆ ಪ್ರಾಯೋಜಕರು ಸ್ವಾತಿ ಮತ್ತು ವಿಶಾಲ್ ಸಾಂತ ಕುಟುಂಬಸ್ಥರು ವಡೋದರ, ಸಂಜೆ 4.00 ಗಂಟೆಗೆ ಶೋಭಾಯಾತ್ರೆ, ಅಷ್ಟಾವಧಾನ ಸೇವೆ, ಕಟ್ಟೆ ಪೂಜೆ, ಪ್ರಸಾದ ವಿತರಣೆ ರಾತ್ರಿ ಅನ್ನಸಂತರ್ಪಣೆ ಸಂತೋಷ ಎಚ್.ಶೆಟ್ಟಿ ಕುಟುಂಬಸ್ಥರು ಹೋಟೆಲ್ ಲೀಲಾ ಕಲ್ಯಾಣ್, 8.00 ಗಂಟೆಗೆ ಶ್ರೀ ಗೀತಾಂಬಿಕಾ ಕೃಪಾಪೋ಼ಷೀತ ಯಕ್ಷಗಾನ ಮಂಡಳಿ ಅಸಲ್ಪ ಘಾಟ್ಕೋಪರ್ ಮುಂಬಯಿ ಇವರಿಂದ ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ನಡೆಯಲಿದೆ. ಯಕ್ಷಗಾನದ ಪ್ರಯೋಜಕರು ಪ್ರಸನ್ನ ಶೆಟ್ಟಿ, ಅನಿಲ್ ಶೆಟ್ಟಿ ವಕ್ಕೇರಿ, ಪ್ರಶಾಂತ ಶೆಟ್ಟಿ ಮತ್ತು ಕುಟುಂಬಸ್ಥರು ಇವರಿಂದ
ದಿ.21-4-24 ರ ರವಿವಾರ ಸಂಪ್ರೋಕ್ಷಣೆ, ಮಹಾಪೂಜೆ ನಡೆಯಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತಿತರಿದ್ದು ಪ್ರಸಾದ ಸ್ವೀಕರಿಸಿ ಪುನೀತರಾಗ ಬೇಕೆಂದು ಶ್ರೀ ನಿತ್ಯಾನಂದ ಮಿತ್ರ ಭಜನಾ ಮಂಡಳಿ ಸಂಚಾಲಿತ ಶ್ರೀ ಮೂಕಾಂಬಿಕಾ ದೇವಿ ದೇವಸ್ಥಾನ ಬಿರ್ಲಾ ಗೇಟ್ ಶಹಾಡ್ ಇದರ ಕಾರ್ಯಾಧ್ಯಕ್ಷರಾದ ಚಂದ್ರಕಾಂತ ಎಸ್ ಶೆಟ್ಟಿ, ಅಧ್ಯಕ್ಷ ರಾಜೇಶ್ ಜೆ. ಶೆಟ್ಟಿ, ಸಂಚಾಲಕ ಕರುಣಾಕರ ಜೆ. ಶೆಟ್ಟಿ, ಉಪಾಧ್ಯಕ್ಷ ಯುವರಾಜ ಕೆ. ಪೂಜಾರಿ, ಕಾರ್ಯದರ್ಶಿ ಜಗದೀಶ್ ಎಮ್. ಶೆಟ್ಟಿ ಬೆಳಂಜೆ, ಕೋಶಾಧಿಕಾರಿ ಸಂತೋಷ ಎಚ್. ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಪ್ರೇಮ್ ಕುಮಾರ್ ರೈ, ಗಣೇಶ್ ಶೆಟ್ಟಿ ನಂದ್ರೋಳಿ, ಜೊತೆ ಕೋಶಾಧಿಕಾರಿ ಗಳಾದ ಸದಾನಂದ ಐ. ಸಾಲ್ಯಾನ್, ವಸಂತ ಶೆಟ್ಟಿ ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು, ಯುವ ವಿಭಾಗದ ಕಾರ್ಯಾಧ್ಯಕ್ಷ ದೀಪಕ್ ಬಂಗೇರ ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರು ವಿವಿಧ ಉಪ ಸಮಿತಿಯ ಪದಾಧಿಕಾರಿಗಳು, ಅರ್ಚಕರು ಮತ್ತು ಸರ್ವ ಸದಸ್ಯರು ವಿನಂತಿಸಿದ್ದಾರೆ.