
ವರದಿ: ಸೋಮನಾಥ ಎಸ್.ಕರ್ಕೇರ,
ಕಳೆದ ಅನೇಕ ದಶಕಗಳಿಂದ ಮುಂಬಯಿ ಮಹಾ ನಗರದಲ್ಲಿ ಸಾಮಾಜಿಕ, ಸಾಂಸ್ಕೃತಿಕ , ಶೈಕ್ಷಣಿಕ ಸೇವೆಯಲ್ಲಿ ತೊಡಗಿಕೊಂಡಿರುವ ಕಾಪು ಮೊಗವೀರ ಮಹಾ ಸಭಾ ಮುಂಬಯಿ ಇದರ ಪ್ರತ್ಯೇಕ ಮಹಿಳಾ ವಿಭಾಗವನ್ನು ತೆರೆಯಬೇಕೆಂಬ ಸದಸ್ಯೆಯರ ಬಹು ದಿನಗಳ ಬೇಡಿಕೆಯ ಬಗ್ಗೆ ಚರ್ಚಿಸುವ ಸಲುವಾಗಿ ಸಭಾದ ಸದಸ್ಯೆಯರು ಹಾಗೂ ಕಾರ್ಯಕರ್ತರ ಸಭೆಯನ್ನು ರವಿವಾರ ಎಪ್ರಿಲ್ 7 ರಂದು ಬೆಳಗ್ಗೆ 10 ಗಂಟೆಗೆ ಅಂಧೇರಿ ಪಶ್ಚಿಮದ ಮೊಗವೀರ ಭವನದಲ್ಲಿ ಜರಗಿಸಲಾಯ್ತು. ಶ್ರೀಮತಿ ತುಳಸಿ ಎಸ್ ಸಾಲ್ಯಾನ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದರು.



ದೀಪ ಪ್ರಜ್ವಲನೆ ಮಾಡುವ ಮೂಲಕ ಸಭೆಗೆ ಚಾಲನೆ ನೀಡಲಾಗಿ ಸಭಾದ ಅಧ್ಯಕ್ಷರಾದ ಸತೀಶ್‌ಕುಮಾರ್ ಎನ್ ಕರ್ಕೇರರು ಸಭೆ ಕರೆದ ಉದ್ದೇಶವನ್ನು ತಿಳಿಸಿ ಇದು ಮಹಿಳಾ ಮಂಡಳವನ್ನು ರಚಿಸುವ ಕುರಿತಾಗಿ ಕರೆಯಲಾದ ಪೂರ್ವಭಾವಿ ಸಭೆಯಾದ್ದು ಇದೇ ಬರುವ ಮೇ ತಿಂಗಳಲ್ಲಿ ಜರಗಲಿರುವ ಸಭಾದ ವಾರ್ಷಿಕ ಮಹಾಸಭೆಯಲ್ಲಿ ಈ ಕುರಿತು ಅಧಿಕೃತ ಘೋಷಣೆ ಮಾಡುಲಾಗುವುದು ಎಂದರು. ಬಳಿಕ ಡಿ.ಎಲ್.ಅಮಿಎನರು ಮಾತನಾಡುತ್ತಾ ಪ್ರತ್ರ್ಯೇಕ ಮಹಿಳಾ ಮಂಡಳವನ್ನು ರಚಿಸಬೇಕೆಂಬ ಸದಸ್ಯೆಯರ ಉತ್ಸಾಹವನ್ನು ಕಂಡು ಸಂತೋಷವಾಗುತ್ತಿದೆ ಆದರೆ ಇದನ್ನು ಬೆಳೆಸಿ ಮುಂದುವರಿಸಿಕಕೊಂಡು ಹೋಗವ ಮಹತ್ವದ ಜವಾಬ್ಧಾರಿ ತೆಗೆದುಕೊಳ್ಳಬೇಕೆಂದರು . ಬಳಿಕ ಮಾತನಾಡಿದ ಶ್ರಿಮತಿ ತುಳಸಿ ಸದಾನಂದ ಸಾಲ್ಯಾನ್‌ರು ಮಹಿಳಾ ಮಂಡಳಿಯ ರಚನೆಯ ಬಗ್ಗೆ ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಮಹಿಳ ಮಂಡಳದ ರಚನೆಯಿಂದ ಸದಸ್ಯೆಯರ ಒಗ್ಗಟ್ಟು ಇನ್ನಷ್ಟು ಶಕ್ತಿಶಾಲಿಯಾಗಲು ಸಾಧ್ಯ ಎಂದರು . ಇದೇ ಸಂದರ್ಭದಲ್ಲಿ ಶ್ರೀಮತಿ ಪ್ರತಿಮಾ ಭಾಸ್ಕರ್ ಮತ್ತು ಹೇಮಾ ಕೋಟ್ಯಾನರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು,
ಕಾಪು ಪಡುಗ್ರಾಮದಲ್ಲಿರುವ ನಮ್ಮ ಶಾಲೆಯು ಮುಂದಿನ ವರ್ಷದಲ್ಲಿ ನೂರು ವರ್ಷಗಳನ್ನು ಪೂರ್ಣಗೊಳಿಸುವುದರಿಂದ ಅದರ ಶತಮಾನೋತ್ಸವವನ್ನು ಯೋಗ್ಯ ರೀತಿಯಲ್ಲಿ ಆಚರಿಸಲು ಎಲ್ಲರೂ ತನು ಮನ ಧನಗಳಿಂದ ಸಹಕರಿಸಬೇಕೆಂದು ಸಭೆಯಲ್ಲಿ ನಿರ್ಧರಿಸಲಾಯ್ತು . ಮಹಿಳಾ ಮಂಡಳದ ರಚನೆಯ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲು ಈ ಕೆಳಗಿನವರನ್ನೊಳಗೊಂಡ ಒಂದು ತಾತ್ಕಾಲಿಕ ಸಮತಿಯನ್ನು ರಚಿಸಲಾಯ್ತು:
ಶ್ರೀಮತಿ ತುಳಸಿ ಎಸ್. ಸಾಲ್ಯಾನ್ -ಅಧ್ಯಕ್ಷೆ
ಶ್ರೀಮತಿ ರೋಹಿಣಿ ಕರುಣಾಕರ್ -ಉಪಾಧ್ಯಕ್ಷೆ
ಶ್ರೀಮತಿ ಹೇಮಾ ಕೊಟ್ಯಾನ್ -ಕಾರ್ಯದರ್ಶಿ
ಶ್ರೀಮತಿ ತಾರಾ ಮೆಂಡನ್-ಜೊತೆ ಕಾರ್ಯದರ್ಶಿ
ಶ್ರೀಮತಿ ಪ್ರತಿಮಾ ಭಾಸ್ಕರ್ -ಕೋಶಾಧಿಕಾರಿ
ಶ್ರೀಮತಿ ಭಾಮಿನಿ ಮೆಂಡನ್ ಜೊತೆ ಕೋಶಾಧಿಕಾರಿ.
ಬಳಿಕ ಸದಸ್ಯೆಯರು ಪರಸ್ಪರ ಕುಂಕುಮವನ್ನು ಹಚ್ಚಿಕೊಂಡು ಅಭಿನಂದಿಸುವ ಮೂಲಕ ಅರಸಿನ ಕುಂಕುಮ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭದಲ್ಲಿ ನಡೆದಸಲಾದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯ್ತು. ಹೇಮಾ ಕೋಟ್ಯಾನ್ ವಂದನಾರ್ಪಣೆಗೈದರು.