
ಮುಂಬೈಯ ಪ್ರತಿಷ್ಠಿತ ಜಾತೀಯ ಸಂಘಟನೆಗಳಲ್ಲಿ ಒಂದಾದ ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ ಇದರ ಥಾಣೆ ಸ್ಥಳೀಯ ಸಮಿತಿಯ ವಿಶೇಷ ಸಭೆ ಇತ್ತೀಚಿಗೆ ಜರಗಿತು. ಸಭೆಯಲ್ಲಿ 2023-25ರ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಥಾಣೆ ಸ್ಥಳೀಯ ಸಮಿತಿಯ ಗೌರವ ಅಧ್ಯಕ್ಷರಾಗಿ ಗೋಪಾಲ ಮೊಗವೀರ ಬಗ್ವಾಡಿ, ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್, ಉಪಾಧ್ಯಕ್ಷರುಗಳಾಗಿ ಪಾಂಡುರಂಗ ನಾಯ್ಕ್, ಈಶ್ವರ್ ಮೊಗವೀರ, ಸಲಹೆಗಾರರಾಗಿ ಅರವಿಂದ ಪುತ್ರನ್, ಕೋಶಾಧಿಕಾರಿಯಾಗಿ ಶೇಖರ್ ನಾಯ್ಕ್, ಕಾರ್ಯದರ್ಶಿಯಾಗಿ ರಾಧಾ ಡಿ ಮೆಂಡನ್, ಸಾಂಸ್ಕೃತಿಕ ಸಮಿತಿಯ ಮುಖ್ಯಸ್ಥರಾಗಿ ಆನಂದ ಜಿ ಮೆಂಡನ್ ಆಯ್ಕೆಯಾಗಿರುವರು. ನಾಗೇಶ್ ನಾಯ್ಕ , ಕಾರ್ತಿಕ ಮೊಗವೀರ, ಪದ್ಮಾವತಿ ಮೊಗವೀರ, ಕಲ್ಪನಾ ನಾಯ್ಕ , ಅಶೋಕ್ ನಾಯ್ಕ, ರವಿ ಮೆಂಡನ್, ಬಾಬು ಟಿ ನಾಯ್ಕ , ಪ್ರಸಾದ್ ಚಂದನ್, ,ರಾಜು ತೋಳರ್ ,ಸೀನಾ ಚಂದನ್ ಸಮಿತಿಯ ಸದಸ್ಯರಾಗಿರುವರು.
ಥಾಣೆ ಸ್ಥಳೀಯ ಸಮಿತಿಗೆ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳನ್ನು, ಸದಸ್ಯರನ್ನು ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಮುಂಬೈ ಮುಖ್ಯ ಕಛೇರಿಯ ಅಧ್ಯಕ್ಷ ರಾಜು ಮೆಂಡನ್ ವಂಡ್ಸೆ, ಗೌರವ ಅಧ್ಯಕ್ಷರಾದ ಸುರೇಶ್ ಕಾಂಚನ್ , ಗೌರವ ಕಾರ್ಯದರ್ಶಿ ಗಣೇಶ್ ಜಿ ಮೆಂಡನ್ ಹಾಗೂ ಪದಾಧಿಕಾರಿಗಳು ಅಭಿನಂದಿಸಿ, ಶುಭ ಕೊರಿದ್ದಾರೆ.